ರಾಜಧಾನಿ ಬೆಂಗಳೂರಿಗೆ ಕೊರೊನಾ ಅಪ್ಪಳಿಸಿ ಇಂದಿಗೆ”150 ದಿನ” 918 ಬಲಿ-46,923 ಸೋಂಕು-ಐಸಿಯುನಲ್ಲಿ 353 ಸೋಂಕಿತರು…

0

ಬೆಂಗಳೂರು:ಕೆಲವೊಂದಕ್ಕೆ ಅದರದೇ ಆದ ಮಹತ್ವವಿರುತ್ತೆ.100..150..175…200 ಹೀಗೆ ಈ ದಿನಗಳಿಗೆ ಅದರದೇ ಆದ ಮಹತ್ವವಿರುತ್ತೆ..ದುರ್ಘಟನೆಗಳ ಪ್ರಸ್ತಾಪ ಬಂದಾಗ್ಲೂ ಸಂಖ್ಯೆಯನ್ನು ಗಂಭೀರವಾಗಿಯೇ ಪರಿಗಣಿಸಲಾಗುತ್ತದೆ.ಕೊರೊನಾ ವಿಷಯದಲ್ಲಿ ಆಗಿರುವುದೂ ಇದೇ..ಕೊರೊನಾ ರಾಜಧಾನಿ ಬೆಂಗಳೂರಿಗೆ ವಕ್ಕರಿಸಿ ಇವತ್ತಿಗೆ 150 ದಿನ ತುಂಬಿದೆ.ಮಾರ್ಚ್ 8 ರಂದು ಅಪ್ಪಳಿಸಿದ ಕೊರೊನಾಕ್ಕೆ ಇವತ್ತಿಗೆ 150 ದಿನಗಳು ತುಂಬಿವೆ.

ಹೌದು..ಇಡೀ ವಿಶ್ವವನ್ನೇ ತಲ್ಲಣಿಸಿದ ಯಾವುದಾದ್ರೂ ಮಹಾಮಾರಿ ಇದ್ರೆ ಅದು ನಿರ್ವಿವಾದವಾಗಿ ಕೊರೊನಾ.ಅಂದ್ಹಾಗೆ  ಈ ಮಹಾಮಾರಿ ರಾಜಧಾನಿ ಬೆಂಗಳೂರಿಗೆ ಕಾಲಿಟ್ಟು ನಿನ್ನೆಗೆ 150 ದಿನ.ಈ 150 ದಿನಗಳಲ್ಲಿ ಅದು ಬಲಿ ಪಡೆದದ್ದು ಬರೋಬ್ಬರಿ 918 ಜನರ ಪ್ರಾಣಗಳನ್ನು..ಹಾಗೆಯೇ ಈ ಸೋಂಕಿಗೆ ತುತ್ತಾದವ್ರು 46,923 ಮಂದಿ.

ಬೆಂಗಳೂರಿನಲ್ಲಿ ಕೊರೊನಾ  ಕಾಲಿಟ್ಟು ತನ್ನ ವಿದ್ವಂಸಕತೆ ಮೆರೆಯಲು ಪ್ರಾರಂಭಿಸಿ ನಿನ್ನೆಗೆ 150 ದಿನ.ಈ ಅವಧಿಯಲ್ಲಿ ಅದು ಸೃಷ್ಟಿಸಿದ ಆವಾಂತರ-ಜೀವಗಳ ಜೊತೆ ಚೆಲ್ಲಾಟವಾಡಿದ ರೀತಿ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದೋಗಲಿದೆ.ಏಕೆಂದ್ರೆ ಅದು ಬರೋಬ್ಬರಿ 918 ಜೀವಗಳನ್ನು ಆಪೋಷನ ತೆಗೆದುಕೊಂಡುಬಿಟ್ಟಿದೆ.

ಅಂದ್ಹಾಗೆ  ರಾಜಧಾನಿ ಬೆಂಗಳೂರಿನ ಮಟ್ಟಿಗೆ  ಕೊರೊನಾ ಮಹಾಮಾರಿ ವಕ್ಕರಿಸಿದ್ದು  ಮಾರ್ಚ್ 8ಕ್ಕೆ.ಕೊರೊನಾ ಮೊದಲ ಪ್ರಕರಣ ದಾಖಲಾದ ದಿನ ಅದು.ಈ 150 ದಿನಗಳಲ್ಲಿ 46,913 ಜನರು ಇದರ ಸೋಂಕಿಗೆ ತುತ್ತಾಗಿ ಜೀವನ್ಮರಣಗಳ ನಡುವೆ ಹೋರಾಡಬೇಕಾಯ್ತು.

ಮಾನಸಿಕ ಹಾಗೂ ದೈಹಿಕ ಹೋರಾಟದ ತುಮುಲದಲ್ಲಿ ಅಪಾಯದಿಂದ ಪಾರಾದವ್ರೇ ಹೆಚ್ಚು.ಅಂದ್ಹಾಗೆ  12,189 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಸದ್ಯ 33,816 ಸಕ್ರೀಯ ಪ್ರಕರಣಗಳಿದ್ದು, 353 ಮಂದಿ ಇನ್ನೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರ ಜೀವಗಳ ಬಗ್ಗೆ ವೈದ್ಯರು ಯಾವುದೇ ಗ್ಯಾರಂಟಿ ಕೊಡುತ್ತಿಲ್ಲ. ಹಾಗೆಯೇ152 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ,170 ಮಂದಿ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ,828 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ,1412 ಮಂದಿ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಚಕಿತ್ಸೆ ಪಡೆಯುತ್ತಿದ್ದಾರೆ.

ಅಷ್ಟೇ ಅಲ್ಲ, 2529 ಮಂದಿ ಬಿಬಿಎಂಪಿ ಕರೋನಾ ಆರೈಕೆ ಕೇಂದ್ರದಲ್ಲಿ, 492 ಮಂದಿ ಖಾಸಗಿ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನು 10 ಸಾವಿರಕ್ಕೂ ಅಧಿಕ ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ.ಆದ್ರೆ ದುರಂತ ಎಂದ್ರೆ 3388 ಸೋಂಕಿತರ ಸುಳಿವೇ ಇಲ್ಲದಂತಾಗಿದೆ.

ಕೊರೊನಾ ಸೋಂಕಿನ ಪ್ರಕರಣಗಳು ಜುಲೈನಲ್ಲಿ ವ್ಯಾಪಕವಾಗುತ್ತಿರುವುದು ಸರ್ಕಾರ-ಬಿಬಿಎಂಪಿಯನ್ನೇ ಬೆಚ್ಚಿಬೀಳಿಸಿದೆ.ಆರೋಗ್ಯ ಇಲಾಖೆ ಹಾಗೂ ಟಾಸ್ಕ್ ಪೋರ್ಸ್ ತಜ್ಞರ ಹೇಳಿಕೆ ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.ಆಗಸ್ಟ್ ನಲ್ಲಿ ಕೊರೊನಾ ಸೋಂಕು ಆತಂಕದ ಸ್ವರೂಪದಲ್ಲಿ ಹೆಚ್ಚುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದೆ.ಇದು ಬೆಂಗಳೂರಿಗರನ್ನು ಮತ್ತಷ್ಟು ವಿಚಲಿತಗೊಳಿಸಿದೆ. 

Spread the love
Leave A Reply

Your email address will not be published.

Flash News