ಅರ್ಹತೆ-ಸಾಮರ್ಥ್ಯವಿದ್ದಾಗ್ಯೂ ಅಧಿಕಾರ ವಂಚಿತರಾಗಿಯೇ ನಿವೃತ್ತಿಯಾಗಲಿದ್ದಾರಾ ಹಿರಿಯ ಖಡಕ್ IPS ಗಳು..

0
ನಿವೃತ್ತಿ ಅಂಚಿನಲ್ಲಿರುವ ಹಿರಿಯ ಐಪಿಎಸ್ ಅಧಿಕಾರಿ ಸುನೀಲ್ ಕುಮಾರ್
ನಿವೃತ್ತಿ ಅಂಚಿನಲ್ಲಿರುವ ಹಿರಿಯ ಖಡಕ್   ಐಪಿಎಸ್ ಅಧಿಕಾರಿ ಸುನೀಲ್ ಕುಮಾರ್..

ಬೆಂಗಳೂರು:ವಿಪರ್ಯಾಸ ಎಂದ್ರೆ ಇದೇ ನೋಡಿ..ಕೆಲವರಿಗೆ ಅರ್ಹತೆನೂ ಇರೊಲ್ಲ..ಸಾಮರ್ಥ್ಯನೂ ಸಿದ್ಧಿಸಿರೊಲ್ಲ..ಆದ್ರೂ ಯಾರದೋ ಕೃಪಕಟಾಕ್ಷ-ಆಶೀರ್ವಾದ-ಶಿಫಾರಸ್ಸಿನಿಂದ ಅಧಿಕಾರ-ಸ್ಥಾನಮಾನ ಎಲ್ಲವ ನ್ನೂ ಪಡೆದುಕೊಳ್ತಾರೆ.. ಆದ್ರೆ ಇನ್ನಲವರಿಗೆ ಎಲ್ಲಾ ಮಾನದಂಡಗಳಿದ್ದಾಗ್ಯೂ ಅಧಿಕಾರವಂಚಿತರಾಗಿಯೇ ನಿವೃತ್ತವಾಗ್ಬೇಕಾದ ಅನಿವಾರ್ಯತೆ..ಅನ್ಯಾಯವಾಗ್ತಿದೆ ಎಂದು ಮನಸಿನಲ್ಲೇ ಕೊರಗಿಕೊಳ್ಳೋದನ್ನು-ಕೈ ಕೈ ಹಿಸುಕಿಕೊಳ್ಳೋದನ್ನು-ಆಡಳಿತ ವ್ಯವಸ್ಥೆಯ ತಾರತಮ್ಯದ ಬಗ್ಗೆ ಕೆಂಡದಂಥ ಆಕ್ರೋಶವಿದ್ರೂ ಅದನ್ನು ಅದುಮಿಡಿಯೋದನ್ನು ಬಿಟ್ರೆ ಅವರಿಗೆಲ್ಲಾ ಅನ್ಯ ಮಾರ್ಗಗಳೇ ಇರೊಲ್ಲ..ಇದೆನ್ನೆಲ್ಲಾ ಹೇಳೊಕ್ಕೆ ಕಾರಣ  ನಿವೃತ್ತಿ ಅಂಚಿನಲ್ಲಿರುವ ಕೆಲವು ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಅವರಿಗೆ ಆಗುತ್ತಿರುವ ಅನ್ಯಾಯ..ಕನ್ನಡ ಫ್ಲಾಶ್ ನ್ಯೂಸ್ ಸರ್ಕಾರದ ಇಂತದ್ದೊಂದು ತಾರತಮ್ಯ-ಸ್ವಜನಪಕ್ಷಪಾತ ಧೋರಣೆ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡುತ್ತಿದೆ.

ರಾಷ್ಟ್ರ ಮತ್ತು ರಾಜ್ಯಮಟ್ಟದ ಆಡಳಿತ ವಿಕೇಂದ್ರೀಕರಣದಲ್ಲಿ ಅಧಿಕಾರಶಾಹಿಯ ಪ್ರಸ್ತಾಪವಾದ್ರೆ ಮೊದಲು ನೆನಪಾಗೋದೇ  ಸಾಂವಿಧಾನಿಕ ಮಹತ್ವದ ಹುದ್ದೆಗಳಲ್ಲಿರುವ ಐಎಎಸ್ ಹಾಗು ಐಪಿಎಸ್.ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಅತ್ಯುನ್ನತ ರ್ಯಾಂಕ್ ಪಡೆದು ಕೇಂದ್ರ-ರಾಜ್ಯ ಸೇವೆಗೆ ಆಯ್ಕೆಯಾಗುವವು ಅವರ ಅಂಕ-ಶ್ರೇಣಿ ಆಧರಿಸಿ  ಐಎಎಸ್-ಐಪಿಎಸ್-ಐಎಫ್ಎಸ್-ಐಆರ್ ಎಸ್,..ಹೀಗೆ ಹುದ್ದೆಗಳನ್ನು ಅಲಂಕರಿಸುತ್ತಾರೆ.ಜೇಷ್ಠ್ಯತೆಯ ಮೇಲೆ ಕೇಂದ್ರ ಹಾಗೂ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಾರೆ.

ಅದರಲ್ಲೂ ದೇಶದ ಸಾಂವಿಧಾನಿಕ ಹುದ್ದೆಗಳ ಜವಾಬ್ದಾರಿ ಹೊರುವ  ಐಎಎಸ್ ಮತ್ತು ಐಪಿಎಸ್ ಗಳು  ಆಡಳಿತಕ್ಕೂ ಸೈ..ರಕ್ಷಣೆಗೂ ಜೈ ಎನ್ನುವುದನ್ನೇ ಮೂಲಮಂತ್ರವನ್ನಾಗಿಸಿಕೊಂಡು ಸೇವೆ ಸಲ್ಲಿಸುತ್ತಿರುತ್ತಾರೆ. ಆದ್ರೆ ನೆನಪಿರಲಿ,ಇಂತಹ ಉನ್ನತ ಹುದ್ದೆಯಲ್ಲಿ ರಾಜ್ಯಭಾರ ಮಾಡುವ ಐಎಎಸ್ ಹಾಗೂ ಐಪಿಎಸ್ ನಲ್ಲೂ ಮಲತಾಯಿ ಧೋರಣೆಯಿದೆ…ಅಧಿಕಾರಿಗಳಲ ನಡುವೆಯೇ ಶೀತಲಸಮರವಿದೆ ಎಂದ್ರೆ ನಂಬ್ತೀರಾ..ನಂಬಲೇಬೇಕು..ಏಕೆಂದ್ರೆ ಪ್ರಸ್ತುತ ನಡೆಯುತ್ತಿರುವ ತಿಕ್ಕಾಟ-ಸಂಘರ್ಷವೇ ಅದು.

ಅರ್ಹತೆ-ಸಾಮರ್ಥ್ಯವಿದ್ದ ಹೊರತಾಗ್ಯೂ ಹಿರಿಯ ಹುದ್ದೆಯಿಂದ ವಂಚಿತವಾಗಿರುವ ಮತ್ತೋರ್ವ ಐಪಿಎಸ್ ಅಧಿಕಾರಿ ಅಲೋಕ್ ಮೋಹನ್
ಅರ್ಹತೆ-ಸಾಮರ್ಥ್ಯವಿದ್ದ ಹೊರತಾಗ್ಯೂ ಹಿರಿಯ ಹುದ್ದೆಯಿಂದ ವಂಚಿತವಾಗಿರುವ ಮತ್ತೋರ್ವ ಐಪಿಎಸ್ ಅಧಿಕಾರಿ ಅಲೋಕ್ ಮೋಹನ್

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷದ  ವಿಚಾರಕ್ಕೇನೆ ಬರೋಣ.ಎಲ್ಲರಿಗೂ ಗೊತ್ತಿರುವಂತೆ ಹೆಚ್ಚಿನ ರ್ಯಾಂಕ್ ಪಡೆದವ್ರು  ಐಎಎಸ್ ಹಾಗೂ ನಂತರದ ರ್ಯಾಂಕ್ ಪಡೆದವರು ಐಪಿಎಸ್ ಆಯ್ಕೆ ಮಾಡಿಕೊಳ್ಳುತ್ತಾರೆ.ಐಎಎಸ್ ಆದವ್ರು ಜಿಲ್ಲಾಧಿಕಾರಿ(ಡಿಸಿ)ಗಳಾಗ್ತಾರೆ..ಐಪಿಎಸ್ ಮಾಡ್ಕಂಡವ್ರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಗಳಾಗಿ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಾರೆ.ನೋಡೋರಿಗೆ ಐಎಎಸ್ ಉನ್ನತ ಹುದ್ದೆ ಎನಿಸಿದ್ರೂ ಐಪಿಎಸ್ ಹಾಗೂ ಅದರ ನಡುವೆ ಹೇಳಿಕೊಳ್ಳುವಂಥ ಘನಗಂಭೀರ ವ್ಯತ್ಯಾಸಗಳಿಲ್ಲ.

ಐಎಎಸ್ ಆದವ್ರು ಮೊದಲು ಸಿಇಓ ಆಗಿ ಜಿಲ್ಲಾ ಪಂಚಾಯತ್ ಗಳಲ್ಲಿ  ನಂತರ ಡಿಸಿಯಾಗಿ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಾರೆ.ಅನುಭವ ಆದಂತೆಲ್ಲಾ ರಾಜ್ಯದ ಶಕ್ತಿಕೇಂದ್ರಗಳಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳಾಗಿ ಕೊನೆಗೆ  ಮುಖ್ಯ ಕಾರ್ಯದರ್ಶಿಗಳ ಹಂತಕ್ಕೇರುತ್ತಾರೆ. ಹಾಗೆಯೇ ಐಪಿಎಸ್ ಆದವ್ರು ಮೊದಲು ಅಡಿಷನಲ್ ಎಸ್ಪಿ..ನಂತರ ಜಿಲ್ಲಾ ಎಸ್ಪಿ…ತದನಂತರ ಡಿಐಜಿ/ಎಡಿಜಿಪಿಯಾಗಿ ಭಡ್ತಿ ಪಡೆದು  ಕೊನೆಗೆ ಡಿಜಿಯಾಗಿ ನಿವೃತ್ತಿಯಾಗ್ತಾರೆ.ಆದ್ರೆ ನೆನಪಿರಲಿ ಐಎಎಸ್ ಮಾಡಿಕೊಂಡವರೆಲ್ಲಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತವಾಗೊಲ್ಲ..ಹಾಗೆಯೇ ಐಪಿಎಸ್ ಮಾಡಿಕೊಂಡವರೆಲ್ಲಾ ಡಿಜಿಗಳಾಗಿಯೇ ಭಡ್ತಿ ಪಡೆದು ರಿಟೈರ್ ಆಗೋದಿಲ್ಲ..ಏಕೆಂದ್ರೆ ಈ ಅವಕಾಶ ನಾನಾ ಕಾರಣಗಳ ಚೌಕಟ್ಟಿನಲ್ಲಿ ನಿರ್ಧರಿಸಲ್ಪಡುತ್ತೆ..ನೈಜವಾಗಿ ನೋಡುವುದಾದ್ರೆ ಅರ್ಹರಿಗೆ-ಸಾಮರ್ಥ್ಯ ಇರುವವರಿಗೆ ಅನ್ಯಾಯವಾಗುತ್ತಿರುವುದೇ ಅಲ್ಲಿ.

ಡಿಜಿ ಹುದ್ದೆಯನ್ನು ಅಲಂಕರಿಸುವ ಅರ್ಹತೆ ಇದ್ದಾಗ್ಯೂ ಎಡಿಜಿಪಿಯಾಗಿಯೇ ನಿವೃತ್ತಿಯಾಗುತ್ತಾರಾ ಅಮಿತ್ ಗರ್ಗ್
ಡಿಜಿ ಹುದ್ದೆಯನ್ನು ಅಲಂಕರಿಸುವ ಅರ್ಹತೆ ಇದ್ದಾಗ್ಯೂ ಎಡಿಜಿಪಿಯಾಗಿಯೇ ನಿವೃತ್ತಿಯಾಗುತ್ತಾರಾ ಅಮಿತ್ ಗರ್ಗ್..

ಮೊದಲೇ ಹೇಳಿದಂತೆ  ಐಎಎಸ್ ಹಾಗೂ ಐಪಿಎಸ್ ಗಳ  ಕಾರ್ಯವ್ಯಾಪ್ತಿ, ಸಂಬಳ-ಭತ್ಯೆ ವಗೈರೆಗಳಲ್ಲಿ ಹೇಳಿಕೊಳ್ಳುವಂಥ ದೊಡ್ಡ  ವ್ಯತ್ಯಾಸಗಳೇನಿಲ್ಲ.ಸಂವಿಧಾನಬದ್ಧ ಪದನಿಮಿತ್ತ ಅಧಿಕಾರಿಗಳಾಗಿ ಇಬ್ಬರೂ ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಾರೆ.ಆದರೆ ಅಧಿಕಾರ ನಿಯೋಜನೆಯ ವಿಷಯ ಬಂದ್ರೆ   ಐಎಎಸ್ ಗೆ ರತ್ನಗಂಬಳಿಯಾದ್ರೆ  ಐಪಿಎಸ್ ಗೆ  ಮಲತಾಯಿ ಧೋರಣೆಯಾಗುತ್ತಿರುವುದು ಮಾತ್ರ ಸತ್ಯ.  ಪ್ರತಿ ಐಎಎಸ್,ಐಪಿಎಸ್ ನಲ್ಲಿ ಪ್ರತಿ ಐದು ವರ್ಷಕ್ಕೆ ಒಂದು ಸಾಮಾನ್ಯ ಭಡ್ತಿ ಇದೆ.ಜತೆಗೆ ಮೀಸಲಾತಿಯಿದ್ರೆ ವಿಶೇಷ ಭಡ್ತಿಯಿದೆ.ಅದು ಇಬ್ಬರಿಗೂ ಅನ್ವಯಿಸುತ್ತೆ.ಕೆಲವೊಮ್ಮೆ ಜಾತಿ/ಮಂತ್ರಿ ಮುಖ್ಯಮಂತ್ರಿಗಳ ಕೃಪೆ/ಮಠಾಧಿಪತಿಗಳ ಕರುಣೆ ಕೂಡ ಆಯಕಟ್ಟಿನ ಜಾಗದಲ್ಲಿ ಕೂರಿಸುತ್ತೆ.ಸಧ್ಯ ಐಪಿಎಸ್ ಗಳ ವಿಷಯದಲ್ಲಿ ಆಗ್ತಿರುವ ಘನಘೋರ ಅನ್ಯಾಯವೂ ಇದೇ.

ಹಿರಿತನವನ್ನೇ ಲೆಕ್ಕಕ್ಕಿಟ್ಟು ನೋಡಿದ್ರೆ   ಐಪಿಎಸ್ ಗಳಿಗೆ ಸರಾಸರಿ 3 ಡಿಜಿ RANK,3 ಹೆಚ್ಚುವರಿ ಡಿಜಿ RANK ಸೃಷ್ಟಿಸಿ ನಿಯೋಜಿಸಲು ಅವಕಾಶವಿದೆ.ಹಾಗೆಯೇ ಐಎಎಸ್ ಗೂ ಅದೇ ಶ್ರೇಣಿ.ಆದ್ರೆ ಸಧ್ಯ ನಮ್ಮ ರಾಜ್ಯದಲ್ಲಿ 20ಕ್ಕೂ ಹೆಚ್ಚು ಐಎಎಸ್ ಗಳು ಎಸಿಎಸ್ ಆಗಿ ಅಂದ್ರೆ ಮುಂದಿನ ಸಿಎಸ್(ಮುಖ್ಯ ಕಾರ್ಯದರ್ಶಿ) ಹುದ್ದೆಗೆ ಕ್ಯೂನಲ್ಲಿದ್ದಾರೆ.ಇದರ ಜತೆ ಜತೆಗೆ 8 ಮಂದಿ ಹೊರರಾಜ್ಯಗಳಲ್ಲಿ ಕೇಂದ್ರ ಸೇವೆಯಲ್ಲಿದ್ದಾರೆ.ಒಟ್ಟಾರೆ 28 ಮಂದಿ ರಾಜ್ಯ ಹಾಗು ಕೇಂದ್ರದ ಆಯಕಟ್ಟಿನ ಜಾಗಗಳನ್ನು ಸೃಷ್ಟಿಸಿ ಕೇಂದ್ರ ಮತ್ತು ರಾಜ್ಯದ ಪ್ರಭಾವ ಬಳಸಿ ತಮ್ಮ ವೈಟ್ ಕಾಲರ್ ಬಲ ಪ್ರದರ್ಶಿಸುತ್ತಿದ್ದಾರೆ.ಇದು ಆಡಳಿತಶಾಹಿಯ ತಾಕತ್ತಿಗೆ ಸಾಕ್ಷಿಯಾಗಿದೆ.

ಆದರೆ ಶಕ್ತಿ ಕೇಂದ್ರದ ಒಳಗಿನ ಐಎಎಸ್ ಗಳು ಶಕ್ತಿ ಕೇಂದ್ರದ ರಕ್ಷಕರಾದ ಐಪಿಎಸ್ ಗಳಿಗೆ ಮಾತ್ರ ಅಂಥಾ ಅವಕಾಶ ಸಿಗದಂತೆ ಮಾಡುತ್ತಿರುವ ಬಗ್ಗೆ ವ್ಯಾಪಕ ಆರೋಪಗಳು ಕೇಳಿಬಂದಿವೆ. ಕೆಲವರ ಷಡ್ಯಂತ್ರದಿಂದಾಗಿ ಡಿಜಿಯಾಗುವ ಎಲ್ಲಾ ಅರ್ಹತೆಗಳಿದ್ದಾಗ್ಯೂ ಹಿರಿಯ ಖಡಕ್ ಪೊಲೀಸ್ ಅಧಿಕಾರಿಗಳು ಯಾರ ನಾಮಬಲ-ಶಿಫಾರಸ್ಸಿನ ಬಲವಿಲ್ಲದೆ ಎಡಿಜಿಪಿಯಾಗಿಯೇ ನಿವೃತ್ತಿಯಾಗುವ ಸ್ಥಿತಿಯಲ್ಲಿದ್ದಾರೆ. ಅಮಿತ್  ಗರ್ಗ್,ಸುನೀಲ್ ಕುಮಾರ್,ಅಲೋಕ್ ಮೋಹನ್ ಅವರಂಥ ಹಿರಿಯ ಅಧಿಕಾರಿಗಳು ಡಿಜಿಯಾಗುವ ಅವಕಾಶವಿದ್ದರೂ ತಮ್ಮ ಅಂತಿಮ ಸೇವಾವಧಿಯಲ್ಲಿ ಎಡಿಜಿಪಿಯಾಗಿಯೇ ನಿವೃತ್ತಿ ಹೊಂದುತ್ತಿದ್ದಾರೆ ಎಂಬುದು ದುರಂತ.

ಡಿಜಿಯಾಗೊಕ್ಕೆ ಎಲ್ಲಾ ರೀತಿಯ ಅರ್ಹತೆ-ಸಾಮರ್ಥ್ಯಗಳಿದ್ದಾಗ್ಯೂ ಇವರಿಗೆ ಅದನ್ನು ವಂಚಿಸುತ್ತಿರುವ ಆಡಳಿತ ವ್ಯವಸ್ಥೆ ಬಗ್ಗೆ ಇವರಿಗೆ ಬೇಸರ-ಆಕ್ರೋಶವಿದೆ.ದಕ್ಷತೆ-ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದಕ್ಕೆ ದೊರೆಯುತ್ತಿರುವ ಇಂಥಾ ಕೊಡುಗೆಗಳ ಬಗ್ಗೆ ಅಪಾರ ಬೇಸರವಿದೆ.ಆದ್ರೆ ಅದ್ಯಾವುದನ್ನೂ ಬಹಿರಂಗವಾಗಿ  ತೋರ್ಪಡಿಸೊಕ್ಕೆ ಆಗುತ್ತಿಲ್ಲ.ತಮಗಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಲಾಗುತ್ತಿಲ್ಲ .ಶಕ್ತಿಕೇಂದ್ರವನ್ನು ಪ್ರಶ್ನಿಸಲಾಗುತ್ತಿಲ್ಲ.ರಾಜ್ಯ ಹಾಗೂ ಕೇಂದ್ರದ ವಿರುದ್ದ ಸೊಲ್ಲೆತ್ತಲಾಗುತ್ತಿಲ್ಲ..ಹೇಗಿದೆ ನೋಡಿ…ಸಮಾಜವನ್ನು ರಕ್ಷಿಸಿ ಶಾಂತಿ ಸುವ್ಯವಸ್ಥೆ ಕಾಯುವಂಥ ಕೆಲಸ ಮಾಡುವವರಿಗೇನೆ  ತಮ್ಮ ಹಕ್ಕನ್ನು ಕೇಳೊಕ್ಕೆ ಅವಕಾಶವಿಲ್ಲದಂತಾಗಿದೆ. ಸರ್ಕಾರಿ ಸೇವೆಯುದ್ದಕ್ಕೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಐಪಿಎಸ್ ಗಳಿಗೇನೆ ಇಂಥ ಅನ್ಯಾಯವಾದ್ರೆ ಅವರ ಕೆಳ ಹಂತದಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಅಧಿಕಾರಿಗಳಿಗೆ ಅನ್ಯಾಯವಾಗದೆ ಇರುತ್ತಾ. ಈ ಕೆಟ್ಟ  .ವ್ಯವಸ್ಥೆ ಬದಲಾಗುವುದಾದ್ರೂ ಎಂದು..ನಿರೀಕ್ಷಿಸೋದು ತಪ್ಪಾ..

Spread the love
Leave A Reply

Your email address will not be published.

Flash News