ವಿದ್ಯಾರ್ಥಿಗಳಿಗೆ 10+2 ಅಲ್ಲ ಇನ್ಮುಂದೆ 5+3+3+4 ಕಲಿಕೆ ವ್ಯವಸ್ಥೆ-ಬಯಸಿದ ಕೋರ್ಸ್ ಓದಲು ವಿಪುಲ ಅವಕಾಶ-ಮಾತೃಭಾಷಾ ಶಿಕ್ಷಣಕ್ಕೆ ಆಧ್ಯತೆ-ವಯಸ್ಕರಿಗೆ ಆನ್ ಲೈನ್ ಶಿಕ್ಷಣ-ಎಂಫಿಎಲ್ ರದ್ದು

0

ನವದೆಹಲಿ/ಬೆಂಳೂರು:34 ವರ್ಷಗಳ ಶೈಕ್ಷಣಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೂಲಾಗ್ರ ಎನ್ನುವಂಥ ಬದಲಾವಣೆಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದೆ.ಕಂಡು ಕೇಳರಿಯದ ರೀತಿಯ ಸಾಕಷ್ಟು ಬದಲಾವಣೆ ಹಾಗು ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ಮಾಡಿದೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಶಿಕ್ಷಣ ತಜ್ಞರ ಜೊತೆ ಸೇರಿ ಸಾಕಷ್ಟು ಬದಲಾವಣೆ ಹಾಗೂ ಸುಧಾರಣೆಯನ್ನು ಜಾರಿಗೊಳಿಸಿದ್ದು ಸಹಜವಾಗೇ ಇದರ ಬಗ್ಗೆ ಪರ ಹಾಗೂ ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಈಗ ಈ ಹೊಸ ಎನ್‌ಇಪಿಗೆ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟು ವರ್ಷ   ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವಾಗಿ ಕೆಲಸ ಮಾಡಿದ್ದ ಸಂಸ್ಥೆಯನ್ನು ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣಗೊಳಿಸಲಾಗಿದೆ.

ಹೊಸ ಶಿಕ್ಷಣ ನೀತಿ ಅನ್ವಯ  10+2 ಅಲ್ಲ ಇರುವ ಶಿಕ್ಷಣ ವ್ಯವಸ್ಥೆ ಪ್ರಸಕ್ತ ವರ್ಷದಿಂದ್ಲೇ  5+3+3+4 ಶಿಕ್ಷಣ ವ್ಯವಸ್ಥೆಯಾಗಿ ಪರಿವರ್ತನೆಯಾಗಲಿದೆ. .ಹೊಸ ರಾಷ್ಟ್ರೀಯ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ 6ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೋಡಿಂಗ್‌ ವ್ಯವಸ್ಥೆ ಜಾರಿಯಾಗಲಿದೆ.

2015ರಿಂದ ಎನ್‌ಇಪಿ ಜಾರಿ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಹೊಸ ನೀತಿ ಜಾರಿಯಾಗಿದೆ. 34 ವರ್ಷದ ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಿತ್ತು. ಆದಾದ ಬಳಿಕ ಈಗ ಬದಲಾವಣೆ ಆಗುತ್ತಿದೆ.ಇನ್ನು ಮುಂದೆ 10+2 ಶಿಕ್ಷಣ ವ್ಯವಸ್ಥೆ ಇರುವುದಿಲ್ಲ. ಇದನ್ನು 5+3+3+4 ರಂತೆ ವಿಂಗಡನೆ ಮಾಡಲಾಗಿದೆ. ಇದರರ್ಥ ಶಾಲೆಯ ಮೊದಲ ಐದು ವರ್ಷಗಳು ಅಡಿಪಾಯ ಹಂತ, 3 ರಿಂದ 5 ನೇ ತರಗತಿಯವರೆಗಿನ ಮೂರು ವರ್ಷಗಳನ್ನು ಪೂರ್ವಸಿದ್ಧತಾ ಹಂತವಾಗಿ ವಿಂಗಡಿಸಲಾಗಿದೆ. ನಂತರ ಮೂರು ವರ್ಷಗಳು ಮಧ್ಯಮ ಹಂತವಾಗಿ ವಿಂಗಡಿಸಲಾಗಿದೆ. ನಂತರದ ನಾಲ್ಕು ವರ್ಷವನ್ನು ದ್ವಿತೀಯ ಹಂತವನ್ನಾಗಿ ವಿಂಗಡಿಸಲಾಗಿದೆ. ಶಾಲೆಗಳು ಶಾಲೆಗಳು ಕಲೆ, ವಾಣಿಜ್ಯ, ವಿಜ್ಞಾನದ ಹೊಳೆಗಳ ಯಾವುದೇ ಕಟ್ಟುನಿಟ್ಟಿನ ರಚನೆಯನ್ನು ಹೊಂದಿರುವುದಿಲ್ಲ, ವಿದ್ಯಾರ್ಥಿಗಳು ತಾವು ಬಯಸುವ ಯಾವುದೇ ಕೋರ್ಸ್‌ಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.

ಹಾಗೆಯೇ 5ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು.6ನೇ ತರಗತಿಯಿಂದಲೇ ಕೋಡಿಂಗ್‌ ಪಾಠ ಹೇಳಿಕೊಡಬೇಕು.  ಸಂಶೋಧನೆ ಸಂಬಂಧ ಇನ್ನು ಮುಂದೆ ಯಾವುದೇ ಎಂಪಿಎಲ್‌ ಇರುವುದಿಲ್ಲ.   ಬೋರ್ಡ್ ಪರೀಕ್ಷೆಗಳ ಮಹತ್ವ ಕಡಿಮೆ ಮಾಡುವುದು, ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದು.ಮಾರ್ಕ್ಸ್ ಕಾರ್ಡ್‌ಗಳು ಕೇವಲ ಅಂಕಗಳು ಮತ್ತು ಹೇಳಿಕೆಗಳಿಗೆ ಬದಲಾಗಿ ಕೌಶಲ್ಯ ಮತ್ತು ಸಾಮರ್ಥ್ಯಗಳ ಕುರಿತು ಸಮಗ್ರ ವರದಿ ನೀಡುವುದು ಹಾಗೆಯೇ ಪ್ರತಿ ವಿದ್ಯಾರ್ಥಿ ಒಂದು ಕೌಶಲ್ಯವನ್ನು ಕಲಿಯಲೇಬೇಕಾಗಿರುತ್ತೆ.

ವಯಸ್ಕರಿಗೆ ಆ್ಯಪ್ ,ಆನ್ ಲೈನ್, ಟಿವಿ , ಆನ್ ಲೈನ್ ಬುಕ್ ಗಳ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಲಾಗ್ತಿದೆ. ಪ್ರಾದೇಶಿಕ ಭಾಷೆಗಳಲ್ಲಿ ಇ- ಕಂಟೆಂಟ್ ಪೂರೈಕೆ ಜೊತೆಗೆ ಮಧ್ಯದಲ್ಲಿ ಕೋರ್ಸ್ ಬಿಡಲು ಬಯಸುವರಿಗೆ ಪ್ರವೇಶ ಮತ್ತು ನಿರ್ಗಮನ ಆಯ್ಕೆ ಗೆ ಅವಕಾಶ ನೀಡಲಾಗಿದೆ. ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಏಕರೂಪದ ಪರೀಕ್ಷೆ ನಡೆಸಲಾಗುವುದು.  ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಸರ್ಕಾರದಿಂದಲೇ ಶುಲ್ಕ ನಿಗದಿ ಮಾಡಲಾಗುತ್ತೆ ಎಂದು ಸಚಿವ ಪ್ರಕಾಶ್ ಜಾವ್ಢೇಕರ್ ತಿಳಿಸಿದ್ದಾರೆ.

ಇನ್ನು ಉನ್ನತ ಶಿಕ್ಷಣದ ನೀಡುವ ಕಾಲೇಜುಗಳಲ್ಲಿ ಸಾಹಿತ್ಯ, ಸಂಗೀತ, ತತ್ವಶಾಸ್ತ್ರ, ಕಲೆ, ನೃತ್ಯ, ರಂಗಭೂಮಿ, ಶಿಕ್ಷಣ, ಗಣಿತ, ಅಂಕಿಅಂಶ, ಶುದ್ಧ ಮತ್ತು ಅನ್ವಯಿಕ ವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಕ್ರೀಡೆ, ಅನುವಾದ ಮತ್ತು ವ್ಯಾಖ್ಯಾನ ಇತ್ಯಾದಿ ವಿಭಾಗಗಳು ಕಡ್ಡಾಯ ಮಾಡಲಾಗಿದೆ.  ಉನ್ನತ ಶಿಕ್ಷಣದಲ್ಲೂ ಮೂರು ರೀತಿಯ ಭಾಷೆ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.ಆರ್ ಟಿಇ ಯನ್ನು ವಿಸ್ತರಣೆ ಮಾಡಲಾಗಿದೆ.

Spread the love
Leave A Reply

Your email address will not be published.

Flash News