ಧನದಾಹಕ್ಕೆ 4 ವರ್ಷದ ಮಗುವಿಗೆ ಕೊರೊನಾ ತರಿಸಿದ ಸುಗುಣ ಆಸ್ಪತ್ರೆ-ಅಕ್ರಮದ ವಿರುದ್ಧ ಕ್ರಮ ಕೈಗೊಳ್ತೀನೆಂದಿದ್ದ ನಿಮ್ಮ ಆ “ಪೌರುಷ” ಎಲ್ಲೋಯ್ತು ಸಚಿವ್ರೇ..

0

ಬೆಂಗಳೂರು:ಬೆತ್ತಲ ಪ್ರಪಂಚದಲ್ಲಿ ಬಟ್ಟೆ ಉಟ್ಟೋನೇ ಜಾಣ ಎನ್ನುವಂತೆ ಕೊರೊನಾ ಟೈಮ್ ನಲ್ಲಿ ದುಡ್ಡು ಮಾಡದ ಆಸ್ಪತ್ರೆಗಳೇ ಮೂರ್ಖರೆನಿಸ್ತಿದೆ.ಸೋಂಕಿಗೆ ಒಳಗಾದವ್ರ ಪ್ರಾಣಕ್ಕಿಂತ ಅವರ ಪ್ರಾಣಗಳ ಜೊತೆಯಲ್ಲಿ ಆಟವಾಡ್ತಾ ಅದರಲ್ಲೇ ದುಡ್ಡು ಮಾಡುವಂಥ ಹೀನಾತೀಹೀನ ಪ್ರವೃತ್ತಿಗೆ ಇಳಿದುಬಿಟ್ಟಿವೆ ಬಹುತೇಕ ಆಸ್ಪತ್ರೆಗಳು.ಹಣಕ್ಕಾಗಿ ಕೆಲವು ಆಸ್ಪತ್ರೆಗಳು ನೈತಿಕತೆ ಹಾಗೂ ವೈದ್ಯಕೀಯ ವೃತ್ತಿಯ ಪಾವಿತ್ರ್ಯತೆಯನ್ನೇ ಧಿಕ್ಕರಿಸಿ ಸೋಂಕಿತರ ಲೆಕ್ಕ ತೋರಿಸಿ ವಂಚಿಸುತ್ತಿರುವ ಅಘಾತಕಾರಿ ಸಂಗತಿ ಹೊರಬಿದ್ದಿದೆ.ಅಂತದ್ದೇ ಒಂದು ಆರೋಪಕ್ಕೆ ತುತ್ತಾಗಿದೆ ರಾಜಧಾನಿ ಬೆಂಗಳೂರಿನ ಪ್ರತಿಷ್ಟಿತ ಸುಗುಣ ಆಸ್ಪತ್ರೆ.

ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಸುಗುಣ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಕರ್ಮಕಾಂಡ ಎಂಥವರನ್ನೂ ಬೆಚ್ಚಿಬೀಳಿಸುತ್ತದೆ.ಇಂಥ ಅಕ್ರಮಗಳನ್ನು ಮತ್ತಷ್ಟು ಆಸ್ಪತ್ರೆಗಳು ನಡೆಸುತ್ತಿರುವ ಅನುಮಾನವನ್ನೂ ಬಲಗೊಳಿಸುತ್ವೆ.ಅಂದ್ಹಾಗೆ ಕೊರೊನಾ ಸೋಂಕಿತರ ರಿಪೋರ್ಟ್ ನೀಡುವುದರಲ್ಲೇ ಅಕ್ರಮ ಎಸಗಿರುವ ಆರೋಪ ಸುಗುಣ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕೇಳಿಬಂದಿದೆ.ಇದಕ್ಕೆ ಸಂಬಂಧಿಸಿದ ಸಾಕ್ಯಾಧಾರಗಳ ಸಮೇತ ಕನ್ನಡ ಫ್ಲಾಶ್ ನ್ಯೂಸ್ ಸುಗುಣ ಆಸ್ಪತ್ರೆಯಕರ್ಮಕಾಂಡವನ್ನು ಎಕ್ಸ್ ಪೋಸ್ ಮಾಡುತ್ತಿದೆ.

ಹಣಕ್ಕಾಗಿ ಸುಗುಣ ಆಸ್ಪತ್ರೆಯ ಧನದಾಹಿ ವೈಧ್ಯರು ಎಂಥಾ ಕೆಲಸ ಮಾಡಿದ್ದಾರೆ ಗೊತ್ತಾ..ಕೇಳುದ್ರೆ ಇನ್ಮುಂದೆ ಈ ಆಸ್ಪತ್ರೆಗೆ ಯಾವ್ದೇ ಆರೋಗ್ಯ ಸಮಸ್ಯೆ ಇಟ್ಕೊಂಡು ಹೋಗೊಕ್ಕೂ ಹೆದರದೇ ಇರೊಲ್ಲ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನಾಲ್ಕು ವರ್ಷದ ಶಿಶಿರ್ ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.ಉಸಿರಾಟ ಹಾಗೂ ಹೃದಯ ಬಡಿತ ಸಮಸ್ಯೆಯಿಂದಾಗಿ ಕೊರೊನಾ ಇರಬಹುದೆನ್ನುವುದು ಪೋಷಕರ ಆತಂಕವಾಗಿತ್ತು. ವೈದ್ಯರು ಮಗುವಿನ ಜತೆ ಪೋಷಕರ ಸ್ವಾಬ್ ಟೆಸ್ಟ್ ಮಾಡಿಸಿದಾಗ ಮಗುವಿಗೆ  ಆಸ್ಪತ್ರೆಯವರು ಕೊರೊನಾ ಪಾಸಿಟಿವ್ ಇದೆ ಎಂದು ಮೆಡಿಕಲ್ ರಿಪೋರ್ಟ್ ಕೊಟ್ಟಿದ್ದಾರೆ.

ಆತಂಕದ ಜತೆಗೆ ಸ್ವಲ್ಪ ಅನುಮಾನದೊಂದಿಗೆ ಸೆಕೆಂಡ್ ಒಪಿನಿಯನ್ ಗಾಗಿ ಬೇರೊಂದು  ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿದಾಗ ಅಚ್ಚರಿಯೊಂದಿಗೆ ಅಘಾತವೂ ಕಾದಿತ್ತು.ಸುಗುಣ ಆಸ್ಪತ್ರೆಯಲ್ಲಿ ಮಗುವಿಗೆ ಕೊರೊನಾ ಪಾಸಿಟಿವ್ ಎಂದು ನೀಡಲಾಗಿದ್ದ ರಿಪೋರ್ಟ್ ಗೆ ವ್ಯತಿರಿಕ್ತವಾಗಿ ಲ್ಯಾಬ್ ನಲ್ಲಿನ ರಿಪೋರ್ಟ್ ಕೊರೊನಾ ನೆಗೆಟಿವ್ ಎಂಬುದಾಗಿ ಹೊರಬಿದ್ದಿತ್ತು.ಇದರಿಂದ ಕೆಂಡಮಂಡಲವಾದ ಪೋಷಕರು ಸುಗುಣ ಆಸ್ಪತ್ರೆ ಆಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಹಣ ಮಾಡುವ ಏಕೈಕ ಉದ್ದೇಶಕ್ಕೆ ಆಸ್ಪತ್ರೆಗೆ ಅಡ್ಮಿಟ್ ಆಗೋರಿಗೆಲ್ಲಾ ಕೊರೊನಾ ಪಾಸಿಟಿವ್ ರಿಪೋರ್ಟ್ ನೀಡ್ತೀರಾ ಎಂದು ಹರಿಹಾಯ್ದಿದ್ದಾರೆ.

ಪೋಷಕರ ಆಕ್ರೋಶವನ್ನು ಎದುರಿಸಲಾಗದ ಸ್ಥಿತಿಯಲ್ಲಿ ಇಲ್ಲದ ಸುಗುಣ ಆಸ್ಪತ್ರೆ ಮಂಡಳಿ ತನ್ನಿಂದಾದ ತಪ್ಪಿಗೆ ಕ್ಷಮೆ ಕೋರಿದೆ ಎನ್ನಲಾಗಿದೆ.ಆದ್ರೆ ವೈದ್ಯರನ್ನೇ ನಂಬಿಕೊಂಡು ಆಸ್ಪತ್ರೆಗೆ ಅಡ್ಮಿಟ್ ಆಗುವ ಜನರಿಗೆ ಹಣ ದೋಚುವ ದುರುದ್ದೇಶಕ್ಕೆ ಸುಳ್ಳು ರಿಪೋರ್ಟ್ ನೀಡೋದು ಮೆಡಿಕಲ್ ಎಥಿಕ್ಸ್ ಗೆ ತದ್ವಿರುದ್ಧವಲ್ಲವೇ..ಸುಗುಣ ಆಸ್ಪತ್ರೆ ಸಣ್ಣ ಮಗುವಿನ ವಿಷಯದಲ್ಲಿ ತೋರಿರುವಂಥ ಇಂಥಾ ನಿರ್ಲಕ್ಷ್ಯವನ್ನು ಇನ್ನೂ ಅನೇಕ ಅಮಾಯಕರ ಜೀವಗಳ ಜೊತೆಯಲ್ಲೂ ತೋರಿರುವ ಆತಂಕವಿದೆ.ಕೇವಲ ಸುಗುಣ ಆಸ್ಪತ್ರೆಯಲ್ಲಷ್ಟೇ ಇಂಥ ಅಕ್ರಮ ನಡೆಯುತ್ತಿರುವುದು ನಗರದ ಬಹುತೇಕ ಆಸ್ಪತ್ರೆಗಳು ಕೂಡ ಹಣ ಮಾಡುವ ಹೀನಕೃತ್ಯಕ್ಕೆ ಅಮಾಯಕರ ಜೀವ ಹಾಗೂ ಹಣ ಎರಡನ್ನೂ ಸುಲಿಗೆ ಮಾಡುತ್ತಿರುವ ಆತಂಕವೂ ಸುಗುಣ ಆಸ್ಪತ್ರೆಯಲ್ಲಿ ವರದಿಯಾದ ಈ ಘಟನೆಯ ಹಿನ್ನಲೆಯಲ್ಲಿ ವ್ಯಕ್ತವಾಗಿದೆ.

ಹಾಗೆಂದು ಸುದ್ದಿ ಮಾಡಿ ಕೈ ತೊಳೆದುಕೊಳ್ಳುವ ಮಟ್ಟಕ್ಕೆ ಮಾದ್ಯಮಗಳು ಸೀಮಿತವಾಗುತ್ತಿರುವುದು ದುರಂತ.ಸುಗುಣದಂಥ ಆಸ್ಪತ್ರೆಗಳ ಕರ್ಮಕಾಂಡದ ವಿರುದ್ಧ ಸಮರ ಸಾರುವಂಥ,ಅದಕ್ಕೊಂದು ತಾರ್ಕಿಕ ಹಾಗೂ ತಾತ್ವಿಕ ಅಂತ್ಯ ಕೊಡಿಸುವಂಥ ಕೆಲಸ ಮಾದ್ಯಮಗಳಿಂದ ಆಗ್ಬೇಕಿದೆ.ಆದ್ರೆ ಅದು ಆಗುತ್ತಿಲ್ಲ ಎನ್ನೋದು ವಿಪರ್ಯಾಸಕರ ಹಾಗೂ ನಾಚಿಕೆಗೇಡಿನ ವಿಷಯ.ಇದಕ್ಕೆ ಆಸ್ಪತ್ರೆಗಳು ಕೆಲ  ಮಾದ್ಯಮಗಳ ಮ್ಯಾನೇಜ್ಮೆಂಟ್ ಗಳಿಗೆ ಒಡ್ಡುವ ಹಣದ ಆಮಿಷ(ಜಾಹೀರಾತು ರೂಪದ ಲಂಚದ ಪ್ಯಾಕೇಜ್)ವೂ ಕಾರಣವಾಗಿರಬಹುದು.ಹಾಗಾದ್ರೆ ಅವುಗಳ ಹೊಣೆಗಾರಿಕೆಯಾದ್ರೂ ಏನ್ ಬಂತು..

ಸುಗುಣ ಆಸ್ಪತ್ರೆ ನಡೆಸಿರುವ ಕರ್ಮಕಾಂಡಕ್ಕೆ ಸರ್ಕಾರ ಶಿಕ್ಷೆ ವಿಧಿಸುತ್ತಾ..ಖಾಸಗಿ ಆಸ್ಪತ್ರೆಗಳ ಅಕ್ರಮದ ವಿರುದ್ಧ ಸಮರ ಸಾರುವ ಮಾತನ್ನಾಡುವ ಮಂತ್ರಿಗಳಿಗೆ ಸುಗುಣ ಆಸ್ಪತ್ರೆಯ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ತಾಕತ್ತಿದೆಯಾ..ಕೊರೊನಾ ಟೈಮಲ್ಲಿ ಹಣ ಲೂಟಿ ಮಾಡುತ್ತಿರುವ,ಸೋಂಕಿತರ ಸಾವಿಗೆ ಕಾರಣವಾಗಿರುವ  ಒಂದೇ ಒಂದು ಖಾಸಗಿ ಆಸ್ಪತ್ರೆಗೆ ಬೀಗ ಹಾಕೊಕ್ಕೆ ತಾಕತ್ತಿಲ್ಲದ ಈ ನಿರ್ವೀರ್ಯ ಸರ್ಕಾರದಿಂದ-ನಿರ್ಲಜ್ಜ ಸಚಿವರಿಂದ ಇದನ್ನು ನಿರೀಕ್ಷಿಸುವುದು ನಮ್ಮ ತಪ್ಪು ಹಾಗೂ ಮೂರ್ಖತನವಾದೀತು ಬಿಡಿ..    

 

Spread the love
Leave A Reply

Your email address will not be published.

Flash News