ಪತ್ರಕರ್ತರನ್ನು ಮನೆಗೆ ಕಳುಹಿಸಿಕೊಡೊಕ್ಕೆ ನ್ಯೂಸ್ ಚಾನೆಲ್-ಪತ್ರಿಕೆಗಳ ನಡುವೆ ಇಷ್ಟೊಂದಾ ಪೈಪೋಟಿ ?!?!..ಪಿಂಕ್ ಸ್ಲಿಪ್ ಪಡೆಯಲು ಕ್ಯೂನಲ್ಲಿರುವ ಪತ್ರಕರ್ತರೆಷ್ಟು ಗೊತ್ತಾ..?!?!

0

ಬೆಂಗಳೂರು:ದೀಪದ ಕೆಳಗೆ ಕತ್ತಲು ಎನ್ನುವಂಗಿದೆ ಪತ್ರಕರ್ತರ ಸ್ಥಿತಿ. ಕೊರೊನಾ ಟೈಮಲ್ಲಿ ಅಲ್ಲಿಷ್ಟು ಕೆಲಸ ಕಳೆದುಕೊಂಡ್ರು..ಇಲ್ಲಿಷ್ಟು ಬೀದಿಗೆ ಬಿದ್ದರು..ಇದೆಂಥಾ ಘೋರ ಅನ್ಯಾಯ..ಆಡಳಿತ ಮಂಡಳಿಗಳು ಮಾಡ್ತಿರೋದು ಸರಿನಾ..?ಹೀಗೊಂದಿಷ್ಟು ಪ್ರಶ್ನೆ ಇಟ್ಕೊಂಡು ಸುದ್ದಿ ಮಾಡಿ,ನೊಂದವರಿಗೆ ಧ್ವನಿಯಾಗೊಕ್ಕೆ ಯತ್ನಿಸ್ತಾರೆ.ಆದ್ರೆ..ಇದೇ  ಕೊರೊನಾ ಟೈಮಲ್ಲಿ ಎಷ್ಟ್ ಪತ್ರಕರ್ತರು ಬೀದಿಗೆ ಬಿದ್ರು..ಮ್ಯಾನೇಜ್ಮೆಂಟ್ ಗಳು ಅವರೊಂದಿಗೆ ಎಷ್ಟು ಅಮಾನವೀಯವಾಗಿ ವರ್ತಿಸಿದ್ವು..ಹಾಗೆಯೇ  ಕೆಲಸ ಕಳೆದುಕೊಳ್ಳೊಕ್ಕೆ ಇನ್ನೆಷ್ಟು ಪತ್ರಕರ್ತರು ಕ್ಯೂನಲ್ಲಿದ್ದಾರೆನ್ನೋದನ್ನು ತಿಳಿದ್ರೆ ಬೇಸರವಾಗುತ್ತೆ.ಪತ್ರಕರ್ತರ ಸ್ಥಿತಿ ಇಷ್ಟು ಶೋಚನೀಯವಾಗಿದ್ಯಾ ಎನ್ನುವ ಸಹಾನುಭೂತಿ ವ್ಯಕ್ತವಾಗುತ್ತೆ.ಕ್ಷಣ ಕ್ಷಣವೂ ಆತಂಕದಲ್ಲಿಸತ್ ಬದುಕುತ್ತಿರುವ ಪತ್ರಕರ್ತರ ಬದುಕುಗಳ ಸಂದಿಗ್ಧತೆ-ಪಿಂಕ್ ಸ್ಲಿಪ್ ಕೊಡೊಕ್ಕೆ ತುದಿಗಾಲಲ್ಲಿ ನಿಂತಿರುವ ಮ್ಯಾನೇಜ್ಮೆಂಟ್ ಗಳ ಕ್ರೌರ್ಯದ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡ್ತಿದೆ ಕನ್ನಡ ಫ್ಲಾಶ್ ನ್ಯೂಸ್.

ಪತ್ರಿಕಾ ಕಚೇರಿಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಹಾಗೂ ಸಿಬ್ಬಂದಿ ಅಕ್ಷರಶಃ ಆತಂಕದಲ್ಲಿದ್ದಾರೆ.ಅವರ ಜೀವ-ಜೀವನಗಳು ಅಡಕತ್ತರಿಗೆ ಸಿಲುಕಿವೆ.ಪ್ರತಿ ಕ್ಷಣವೂ ಅಭದ್ರತೆಯ ಕುಲುಮೆಯಲ್ಲಿ ಬೇಯುತ್ತಲೇ ಕೆಲಸ ಮಾಡಬೇಕಾದ ಸ್ಥಿತಿಯಲ್ಲಿದ್ದಾರೆ.ಯಾವ್ ಕ್ಷಣ ಕೆಲಸ ಕಳೆದುಕೊಂಡು ಬೀದಿಗೆ ಬೀಳ್ತೇವೋ ಎನ್ನುವ ದಿಗಿಲಿನಲ್ಲೇ ಕೆಲಸ ಮಾಡುತ್ತಿದ್ದಾರೆ.ಪತ್ರಕರ್ತರ ಆತಂಕ ಈ ರೀತಿಯದ್ದಾದ್ರೆ ಯಾರಿಗೆ ಪಿಂಕ್ ಸ್ಲಿಪ್ ಕೊಡೋದು..ಇವತ್ತೆಷ್ಟು ಪತ್ರಕರ್ತರು ಹಾಗೂ ಸಿಬ್ಬಂದಿಯನ್ನು ಮನೆಗೆ ಕಳುಹಿಸೋದೋ ಎನ್ನುವ ಲೆಕ್ಕಾಚಾರದಲ್ಲಿ ದಿನದೂಡುತ್ತಿವೆ.

ಕೊರೊನಾ ನಷ್ಟದ ನೆವದಲ್ಲಿ ಪಿಂಕ್ ಸ್ಲಿಪ್.. ನೀಯತ್ತು..ಬದ್ಧತೆ..ಪ್ರಾಮಾಣಿಕತೆ..ವೃತ್ತಿಪರತೆ..ಇವೆಲ್ಲವೂ ಪತ್ರಿಕೋದ್ಯಮದ ಮಟ್ಟಿಗೂ ಸವಕಲು-ಅರ್ಥಹೀನ ಪದಗಳಾಗಿಬಿಟ್ಟಿವೆ.ಪತ್ರಿಕೋದ್ಯಮದ ಪರಿಭಾಷೆ-ವ್ಯಾಖ್ಯಾನದ ಜತೆಗೆ ಅದರ ಉದ್ದೇಶಗಳು ಕೂಡ ಬದ್ಲಾಗೋಗಿವೆ ಬಿಡಿ.ಆದ್ರೆ ಕೊರೊನಾ ಸಮಯದಲ್ಲಿ ಅದು ಅಪಾಯಕಾರಿ ಮಟ್ಟ ತಲುಪಿರುವುದು ಮಾತ್ರ ದುರಂತ.ಕೊರೊನಾದಲ್ಲಿ ನಷ್ಟದ ಚಿತ್ರಣವನ್ನು ತೋರಿಸಿ, ಕಾಸ್ಟ್ ಕಟ್ಟಿಂಗ್ ಮಾಡುವ ಕೆಟ್ಟ ಹಾಗೂ ಹೀನ ಸಂಪ್ರದಾಯ ಪತ್ರಿಕೋದ್ಯಮದಲ್ಲಿ ಸೃಷ್ಟಿಯಾಗಿದೆ.

ವೃತ್ತಿಪರತೆಯೇ ಇಲ್ಲದ ಅಯೋಗ್ಯರನ್ನು ರಕ್ಷಿಸುವ ಸಲುವಾಗಿ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಸಾಕಷ್ಟು ಪತ್ರಕರ್ತರನ್ನು ನಿರ್ದಾಕ್ಷಿಣ್ಯವಾಗಿ,ಕೊಂಚವೂ ಮನುಷ್ಯತ್ವ ಇಲ್ಲದಂತೆ ಕೆಲಸದಿಂದ ತೆಗೆದುಹಾಕಲಾಗ್ತಿದೆ.ಈಗಾಗ್ಲೇ ಕನ್ನಡ ಪತ್ರಿಕೋದ್ಯಮದಲ್ಲೇ ನೂರಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಸಿಬ್ಬಂದಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.ಕೆಲವರು ಜೀವನೋಪಾಯಕ್ಕೆ ಸಂಬಂಧವೇ ಇಲ್ಲದ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.ಇನ್ನು ಕೆಲವರು ತುತ್ತು ಚೀಲ ತುಂಬಿಸೊಕ್ಕೆ ಯಾವುದಾದ್ರೂ ನೌಕರಿ ಸಿಕ್ಕರೆ ಸಾಕೆನ್ನುವ ಉದ್ದೇಶದಲ್ಲಿ ಉದ್ಯೋಗಾನ್ವೇಷಣೆಯಲ್ಲೇ ನಿರತವಾಗಿದ್ದಾರೆ.ಆದ್ರೆ ಟ್ರ್ಯಾಜಿಡಿ ನೋಡಿ,ಕೊರೊನಾ ಸುನಾಮಿಗೆ ಸಿಲುಕಿರುವ ಉದ್ಯೋಗಕ್ಷೇತ್ರದಲ್ಲಿ ಅವಕಾಶಗಳನ್ನೂ ನಿರಾಕರಿಸಲಾಗ್ತಿದೆ. ಕೆಲಸ ಕಳೆದುಕೊಂಡ ಪತ್ರಕರ್ತರ ಬದುಕುಗಳು ಅಕ್ಷರಶಃ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಮ್ಯಾನೇಜ್ಮೆಂಟ್ ಗಳು ಹೇಳಿಕೊಳ್ಳುವಷ್ಟೇನು ನಷ್ಟದಲ್ಲಿಲ್ಲ ಪತ್ರಿಕೆ-ಚಾನೆಲ್ಸ್..: ಮುದ್ರಣ ಹಾಗೂ ದೃಶ್ಯ ಮಾದ್ಯಮದ ಮ್ಯಾನೇಜ್ಮೆಂಟ್ ಗಳು ಬಿಂಬಿಸುವಂಥ ಚಿತ್ರಣವೇನೂ ನಿರ್ಮಾಣವಾಗಿಲ್ಲ. ಕೊರೊನಾದ ಹೊಡೆತಕ್ಕೆ ಬೇರೆ ಕ್ಷೇತ್ರಗಳು ತತ್ತರಿಸಿರುವಂಥ ಸ್ಥಿತಿ ಪತ್ರಿಕೋದ್ಯಮಕ್ಕೇನೂ ಆಗಿಲ್ಲ. ಪ್ರಮುಖ ರಾಜ್ಯ ಪತ್ರಿಕೆಗಳು ಪುಟವನ್ನು ಕಡ್ಮೆ ಮಾಡಿಕೊಳ್ಳುವ ಮೂಲಕ ಲಾಸ್ ಕಡ್ಮೆ ಮಾಡಿಕೊಂಡ್ವು.ಕೊರೊನಾ ಟೈಮಲ್ಲಿ ಇದೊಂದು ಡಿಫೆನ್ಸಿವ್ ಐಡ್ಯಾ ಕೂಡ.ಆದ್ರೆ ಹಾಗೆಂದು ಪತ್ರಿಕಾ ಸಿಬ್ಬಂದಿಯನ್ನು ಮನೆಗೆ ಕಳುಹಿಸುವಂಥ ಕೆಟ್ಟ-ಹೀನಾತೀಹೀನ ನಿರ್ದಾರಕ್ಕೆ ಬಂದಿದ್ದು ಮಾತ್ರ ದುರಂತ.ಅದರ ಅಗತ್ಯವೂ ಮ್ಯಾನೇಜ್ಮೆಂಟ್ ಗಳಿಗೆ ಖಂಡಿತಾ ಇರಲಿಲ್ಲ.ವರ್ಕ್ ಫ್ರಮ್ ಹೋಂ ನೆವದಲ್ಲಿ ಸಮಸ್ಯೆಯನ್ನು ತಾವೇ ಸೃಷ್ಟಿಸಿ ಇದಕ್ಕೆ ಪತ್ರಿಕಾ ಸಿಬ್ಬಂದಿಯನ್ನು ಬಲಿಪಶು ಮಾಡಿದ್ದು ಖಂಡಿತಾ ಸರಿಯಲ್ಲ.ಕೊಡುತ್ತಿರುವ ಸಂಬಳದಲ್ಲೇ ಒಂದಷ್ಟು ಪರ್ಸಂಟೇಜನ್ನು ನಷ್ಟದ ಕಾರಣಕ್ಕೆ ಕಡ್ಮೆ ಮಾಡಿದ್ದರೂ ಪತ್ರಿಕಾಸಿಬ್ಬಂದಿಗೆ ತಗಾದೆ ಇರಲಿಲ್ಲ. ಬೇಸರವಿದ್ದರೂ ಕೆಲಸ ಉಳಿಯಿತಲ್ಲಾ ಎಂದು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದರು.ಆದ್ರೆ ಇದ್ಯಾವುದಕ್ಕೂ ಬೆಲೆ ಕೊಡದೆ ಪತ್ರಿಕಾ ಸಿಬ್ಬಂದಿಯನ್ನು ಜೀತಗಾರಿಕೆಯ ರೇಂಜ್ನಲ್ಲಿ ದುಡಿಸಿಕೊಂಡು ಕಷ್ಟ ಕಾಲದಲ್ಲಿ ಬೀದಿಗೆ ತಳ್ಳಿಬಿಟ್ಟಿವೆ. ನಮ್ಮನ್ನು ಈ ರೀತಿ ಬೀದಿಪಾಲು ಮಾಡಿದ್ರೆ ಎಲ್ಲಿ ಹೋಗೋದು ಎಂದು ಕಣ್ಣೀರು ಹಾಕುವವರು ನಮ್ಮ ನಡುವೆ ನೂರಾರು ಸಂಖ್ಯೆಯಲ್ಲಿ ಸಿಗ್ತಾರೆ.

ಮ್ಯಾನೇಜ್ಮೆಂಟ್ ಗಳು ಹೇಳುವಂತೆ ಪತ್ರಿಕೆಗಳನ್ನು-ಚಾನೆಲ್ ಗಳನ್ನು ಮುಚ್ಚುವಷ್ಟರ ರೀತಿಯ ನಷ್ಟವೇನೂ ಅವುಗಳಿಗೆ ಖಂಡಿತಾ  ಆಗಿಲ್ಲ.ಏಕೆಂದ್ರೆ ಕೊರೊನಾ ಟೈಮಲ್ಲಿ ಬಹುತೇಕ ಎಲ್ಲರಿಗೂ ಒಳ್ಳೆಯ ಕಮರ್ಷಿಯಲ್ ಸಿಕ್ಕಿದೆ.ಜಾಹಿರಾತಿಗೇನು ಕೊರತೆಯಾಗಿಲ್ಲ..ಸಿಬ್ಬಂದಿಗೆ ಸಂಬಳ ಕೊಟ್ಟು ಇಟ್ಟುಕೊಳ್ಳವಷ್ಟು ಗಳಿಕೆಯಂತೂ ಆಗಿದೆ.ಆದ್ರೆ ಲಾಭವನ್ನು ಮುಚ್ಚಿಟ್ಟು ಲಾಸ್ ನ್ನು ತೋರಿಸಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕ್ತಿವೆ ಮ್ಯಾನೇಜ್ಮೆಂಟ್ಸ್.ಇದರಿಂದೆ ಅಡಗಿರುವುದು ಲಾಭಕೋರತನವಲ್ದೇ ಇನ್ನೇನು ಅಲ್ಲವೇ..?

ಪ್ರಮುಖ ಪತ್ರಿಕೆಗಳಲ್ಲಿ ಸಿಬ್ಬಂದಿಗೆ ಪಿಂಕ್ ಸ್ಲಿಪ್.. ಪ್ರಜಾವಾಣಿ..ಕನ್ನಡಪ್ರಭ..ವಿಜಯವಾಣಿ..ಉದಯವಾಣಿ.ವಿಜಯ ಕರ್ನಾಟಕದಂಥ ಪ್ರಮುಖ ಪತ್ರಿಕೆಗಳು ಈಗಾಗ್ಲೇ ಒಂದು ಹಂತದಲ್ಲಿ ತಮ್ಮ ನೌಕರ ಸಿಬ್ಬಂದಿಗೆ ಪಿಂಕ್ ಸ್ಲಿಪ್ ಕೊಟ್ಟಿವೆ.ಯಾವ್ ಮಾನದಂಡದಲ್ಲಿ ಅವರನ್ನೆಲ್ಲಾ ಮನೆಗೆ ಕಳುಹಿಸಿಕೊಡಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ.ಆಯಾ ಪತ್ರಿಕೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳೇ ಹೇಳುವಂತೆ ಮತ್ತೊಂದು ಹಂತದ ಪಿಂಕ್ ಸ್ಲಿಪ್ ನೀಡುವ ಸಿದ್ಧತೆಗಳು ಆಗ್ತಿವೆ.ವರ್ಕ್ ಫ್ರಮ್ ಹೋಮ್ ಎಂದು ಮನೆಗೆ ಕೂರಿಸಿ ಕ್ರಮೇಣ ಶಾಶ್ವತವಾಗಿ ಮನೆಯಲ್ಲೇ ಉಳಿದುಬಿಡುವಂತೆ ಮಾಡುವ ಪ್ಲ್ಯಾನ್ ಕೂಡ ಮಾಡಲಾಗಿದೆ.ಆ ಲೀಸ್ಟ್ ನಲ್ಲಿ ಯಾರಿದ್ದಾರೆನ್ನುವ ಕುತೂಹಲಕ್ಕಿಂತ ತಾವೇನಾದ್ರೂ ಇರಬಹುದಾ ಎನ್ನುವ ಆತಂಕ ಕಾಡುತ್ತಿದೆ.ಹಾಗೇನಾದ್ರೂ ಆದ್ರೆ ನಾವ್ ಏನ್ ಮಾಡ್ಬೇಕು..ಬೇರೆಲ್ಲೂ ಓಪನಿಂಗ್ಸ್ ಇಲ್ಲ..ಆತ್ಮಹತ್ಯೆ ಮಾಡಿಕೊಳ್ಳೋದಷ್ಟೇ ನಮಗೆ ಉಳಿದಿರೋ ಆಯ್ಕೆ ಎಂದು ನೋವು ತೋಡಿಕೊಳ್ತಾರೆ.

ಪಿಂಕ್ ಸ್ಲಿಪ್ ಕೊಡುವಂಥ ಪ್ರವೃತ್ತಿ ಕೇವಲ ಪೇಪರ್ ಗಳಿಗೆ ಮಾತ್ರ ಸೀಮಿತವಾಗಿಲ್ಲ.ದೃಶ್ಯ ಮಾದ್ಯಮಗಳಲ್ಲೂ ಭಲೇ ಜೋರಾಗೇ ನಡೆಯುತ್ತಿದೆ.ಬಹುತೇಕ ಟಿವಿ ಚಾನೆಲ್ ಗಳು ಭಾರೀ ಪ್ರಮಾಣದ ಕಮರ್ಷಿಯಲ್ಸ್ ಬಂದ ಹೊರತಾಗ್ಯೂ ನಷ್ಟದ ನೆವ ಒಡ್ಡಿ ಸಿಬ್ಬಂದಿಗೆ ಮನೆಗೆ ಕಳುಹಿಸುವ ಪ್ಲ್ಯಾನ್ ನಲ್ಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.ಆದ್ರೆ ಇದರಲ್ಲಿ ಯೋಗ್ಯರಿಗಿಂತ ಅಯೋಗ್ಯರೇ ಉಳಿದುಕೊಳ್ಳುವ ಆತಂಕವಿದೆ.ಒಂದ್ ದಿನ ಕೆಲಸ ಮಾಡದೇ,ಕೇವಲ ಮನೆಗಳಲ್ಲಿ ವರ್ಕ್ ಫ್ರಮ್ ಹೋಂ ಎನ್ನುವ ನೆವ ಇಟ್ಕೊಂಡು ಬಾಸಿಸಮ್ ಮಾಡುವ ಸಾಕಷ್ಟು ಅಯೋಗ್ಯ ಚೀಫ್ ಗಳು ಬಕೆಟ್ ಹಿಡಿದು ಉಳಿದುಕೊಳ್ಳುವ ಅಪಾಯ ಹೆಚ್ಚಾಗಿದೆ.ಆದ್ರೆ  ಇವರಿಂದಾಗಿ ನಿಜವಾಗ್ಯೂ ಕೆಲಸ ಮಾಡುವ,ಕೊರೊನಾ ಟೈಮ್ನಲ್ಲಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಿರುವ ಒಂದಷ್ಟು ಯೋಗ್ಯರಿಗೆ ಅನ್ಯಾಯವಾಗುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ ಎನ್ನುತ್ತಾರೆ ಹಿರಿಯ ಪತ್ರಕರ್ತ ಸೂರ್ಯನಾರಾಯಣ ಭಟ್.

ಪಿಂಕ್ ಸ್ಲಿಪ್ ಪಡೆಯಲು  ಕ್ಯೂನಲ್ಲಿದ್ದಾರೆ ಇನ್ನು ನೂರಾರು ಮಾದ್ಯಮ ಸಿಬ್ಬಂದಿ;  ಕೊರೊನಾ ಟೈಮಲ್ಲಿ ಪ್ರಿಂಟ್ ಹಾಗೂ ನ್ಯೂಸ್ ಚಾನೆಲ್ ಗಳ  ನೂರಕ್ಕೂ ಹೆಚ್ಚು ನೌಕರರು ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ.ಕೊರೊನಾ ಮುಗಿಯುವುದರೊಳಗೆ ಅದಕ್ಕಿಂತ ಹೆಚ್ಚು ಪ್ರಮಾಣದ ಸಿಬ್ಬಂದಿ ಕೆಲಸ ಕಳೆದುಕೊಳ್ಳುವುದು ನಿಕ್ಕಿಯಾಗಿದೆ.ಆದ್ರೆ ಟ್ರ್ಯಾಜಿಡಿ ಏನ್ ಗೊತ್ತಾ..ಬೇರೆ ಕ್ಷೇತ್ರಗಳಲ್ಲಿ ಕೆಲಸ ಕಳೆದುಕೊಳ್ಳುವವರ ಪರ ನಿಂತು ಧೈರ್ಯವಾಗಿ ನ್ಯಾಯ ಕೇಳುವ..ವರದಿ ಮೂಲಕ ಅನ್ಯಾಯಕ್ಕೆ ನ್ಯಾಯ ಕೊಡುವ ಕೆಲಸವನ್ನು ಮಾಡುವ ಪತ್ರಕರ್ತರ ಪರ ನಿಲ್ಲೋರೇ ಇಲ್ಲವಾಗಿದೆ.ಯಾವುದಾದ್ರೂ ಪತ್ರಿಕೆ ಅಥವಾ ಟಿವಿ ಚಾನೆಲ್ ಎದುರು ನೌಕರರಿಗೆ ಆದ ಅನ್ಯಾಯಗಳ ವಿರುದ್ದ ಪ್ರತಿಭಟನೆ ಮಾಡಿರುವ ಉದಾಹರಣೆಗಳಿವೆಯಾ..ಇಲ್ಲವೇ ಇಲ್ಲ..ಆ ತಾಕತ್ತು..ನೈತಿಕತೆ ಎಲ್ಲಿಂದ ಬರಬೇಕ್ಹೇಳಿ..

ಮಾದ್ಯಮ ಸಿಬ್ಬಂದಿಗಾಗುತ್ತಿರುವ ಅನ್ಯಾಯ ಪ್ರಶ್ನಿಸಲು ಎಲ್ಲಿವೆ ಪ್ರಾತಿನಿಧಿಕ ಸಂಸ್ಥೆಗಳು…ದಂಧೆಯಲ್ಲಿ ನಿರತವಾಗಿರುವ ಅವಕ್ಕೆಲ್ಲಿದೆ ಪುರುಸೊತ್ತು..: ಇಂಥ ಸಂಕಷ್ಟದ ಹಾಗೂ ಸಂದಿಗ್ಧತೆಯ ಸಮಯದಲ್ಲಿ ಪತ್ರಕರ್ತರ  ಹಿತ ಕಾಯಲಿಕ್ಕಂಥ ಒಂದೇ ಒಂದು ಪ್ರಾತಿನಿಧಿಕ ಸಂಸ್ಥೆ-ಸಂಘಟನೆ ಇಲ್ಲದಿರುವುದು ಶೋಚನೀಯ.ಯಾವುದೇ ಸಿಬ್ಬಂದಿ ಕೆಲಸ ಕಳೆದುಕೊಂಡಾಗ ಮ್ಯಾನೇಜ್ಮೆಂಟ್ ಗಳ ವಿರುದ್ಧ ಸಿಡಿದೆದ್ದು ನ್ಯಾಯ ಕೇಳುವ,ಅನ್ಯಾಯವಾಗಿದ್ರೆ ಅಂಥ ಸಿಬ್ಬಂದಿಗೆ ನ್ಯಾಯ ನೀಡುವಂಥ ಕೆಲಸವನ್ನು ಯಾವುದಾದ್ರೂ ಸಂಘಟನೆಗಳು ಮಾಡಿವೆಯಾ..ಎದೆ ಮುಟ್ಟಿಕೊಂಡು ಹೇಳುವ ಧೈರ್ಯ ಯಾವುದಾದ್ರೂ ಸಂಘಗಳಿಗಿವೆಯಾ..ಎದೆ ಮುಟ್ಟಿಕೊಂಡು ಹೇಳಲಿ… ಖಂಡಿತಾ ಇಲ್ಲ..ಅವಕ್ಕೆ ಅದು ಬೇಕಾಗಿಯೂ ಇಲ್ಲ.

ಕೇವಲ ಪತ್ರಕರ್ತರ ತಲೆಗಳನ್ನು ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ…. ರಾಜಕಾರಣಿಗಳ ಜತೆ ಫೋಸ್ ಕೊಟ್ಟಿಕೊಂಡು ತಮ್ಮ ಹಿತಾಸಕ್ತಿ ಈಡೇರಿಸಿಕೊಳ್ಳುವ….ತಮ್ಮ ಜತೆಗಾರರನ್ನು ಹಿಂದೆಯೇ ಬಿಟ್ಟು ತಾವ್ ಮಾತ್ರ ಎಲ್ಲಾ ರೀತಿಯಲ್ಲೂ ಬೆಳೆದು ಕೊಬ್ಬುವಂಥ ಸ್ವಾರ್ಥಿಗಳೇ ಬಹುತೇಕ ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ.ಅವರಿಗೆ ಪತ್ರಕರ್ತರ ಬವಣೆಗಳಿಗಿಂತ ತಮ್ಮಹಿತಾಸಕ್ತಿ ಮುಖ್ಯವಾಗೋಗಿದೆ.. ಇಂಥಾ ಪರಿಸ್ಥಿತಿಯಲ್ಲಿ ಕೆಲಸ ಕಳೆದುಕೊಂಡು ಬೀದಿ ಪಾಲಾಗುವ ಪತ್ರಿಕಾಸಿಬ್ಬಂದಿಯ ಗೋಳು-ಸಂಕಟ-ನೋವು ಕೇಳೋರ್ಯಾರು..ಇದು..ಈ ಕ್ಷಣಕ್ಕೂ ಉತ್ತರ ಸಿಗದ ಪ್ರಶ್ನೆಯಾಗುಳಿದೋಗಿದೆ…

Spread the love
Leave A Reply

Your email address will not be published.

Flash News