ರಸ್ತೆ ಬೀದಿಗಳಲ್ಲಿ ಗಣೇಶನನ್ನಿಟ್ಟರೆ ಶಿಕ್ಷೆ ..ಮನೆಯಲ್ಲೇ ಪ್ರತಿಷ್ಟಾಪಿಸಿ ವಿಸರ್ಜಿಸಿ..ಮಾಲಿನ್ಯ ನಿಯಂತ್ರಣ ಮಂಡಳಿ ಶಿಫಾರಸ್ಸುಗಳನ್ನಾಧರಿಸಿ ಗಣೇಶನ ಹಬ್ಬಕ್ಕೆ “ಸ್ಟ್ರಿಕ್ಟ್” ರೂಲ್ಸ್

0
ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಶ್ರೀನಿವಾಸಲು
ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಶ್ರೀನಿವಾಸಲು

ಬೆಂಗಳೂರು:ಗಣೇಶ ಮೂರ್ತಿಗಳನ್ನುಎಲ್ಲಿ ಬೇಕಾದರಲ್ಲಿ ಇಡುವಂತಿಲ್ಲ..ಹಾದಿ ಬೀದಿಗಳಲ್ಲಿ ತಿಂಗಳುಗಟ್ಟಲೇ-ವಾರಗಟ್ಟಲೇ  ಇಟ್ಟು ಸಂಭ್ರಮಿಸುವಂತಿಲ್ಲ..ಮನೆಯಲ್ಲೇ ಇಟ್ಟು ಗೌರವಿಸಿ ಮನೆಯಲ್ಲೇ ವಿಸರ್ಜಿಸ ಬೇಕು.ಇದನ್ನು ಮೀರಿ ಏನಾದ್ರೂ ಗಣಪತಿ ಮೂರ್ತಿಗಳು ಬೀದಿಗೆ ಬಂದ್ರೆ ಶಿಕ್ಷೆ ಗ್ಯಾರಂಟಿ..ಹೀಗೊಂದು ಎಚ್ಚರಿಕೆ ನೀಡಿದೆ ಬಿಬಿಎಂಪಿ.ಶಿಕ್ಷೆಯ ಬಗ್ಗೆ ಎಚ್ಚರಿಸಿದೆ ಪೊಲೀಸ್ ಇಲಾಖೆ.ಮಾಲಿನ್ಯ ಕಡಿಮೆಯಾಯ್ತಲ್ಲ ಎಂದು ನಿಟ್ಟುಸಿರುಬಿಡುವ ಜೊತೆಗೆ ನಿಯಮ ಮೀರಿ ಗಣಪತಿ ಮೂರ್ತಿಗಳಲ್ಲಿ ವ್ಯತ್ಯಾಸ ಮಾಡುವವರ ಮೇಲೆ ಹದ್ದುಗಣ್ಣಿ ನಿಗಾ ಇಡಲಿದೆ  ಮಾಲಿನ್ಯ ನಿಯಂತ್ರಣ ಮಂಡಳಿ.

ಯೆಸ್..ನಿರೀಕ್ಷೆಯಂತೆಯೇ ಆಗಿದೆ.. ಕೊರೊನಾ ಹಿನ್ನಲೆಯಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಟಾಪನೆಯ ಸಾಧಕ ಬಾಧಕಗಳನ್ನು ಕ್ರೋಢೀಕರಿಸಿ ಅಂತಿಮವಾಗಿ ಸಾರ್ವಜನಿಕ ಗಣಪತಿಗಳ ಪ್ರತಿಷ್ಟಾಪನೆಗೆ ಅವಕಾಶ ನೀಡಬಾರದೆಂದು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಶಿಫಾರಸ್ಸು-ಸಲಹೆಗೆ ಸರ್ಕಾರ ಮನ್ನಣೆ ನೀಡಿದೆ.

ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಗಳ ಜತೆ ನಡೆಸಿದ ಮೀಟಿಂಗ್ ಮ್ಯಾರಥಾನ್ ನ ಶ್ರಮ ಕೊನೆಗೂ ಫಲಿಸಿದೆ.ಮಾಲಿನ್ಯಕ್ಕೆ ಬ್ರೇಕ್ ಹಾಕಲು ಇದೊಂದು ಉತ್ತಮ ಸನ್ನಿವೇಶ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ  ಕಾರ್ಯದರ್ಶಿ ನೇತೃತ್ವದಲ್ಲಿ ನೀಡಲಾದ ಶಿಫಾರಸ್ಸುಗಳಿಗೆ ಸರ್ಕಾರ ಮನ್ನಣೆ ನೀಡಿದೆ.

ಕೊರೊನಾ ಕಾರಣಕ್ಕೆ ಅನೇಕ ಧಾರ್ಮಿಕ ಆಚರಣೆ-ಹಬ್ಬಗಳು ಕ್ಯಾನ್ಸಲ್ ಆಗಿರೋದನ್ನು ನೋಡಿದ್ದೇವೆ.ಧಾರ್ಮಿಕ ಶೃದ್ಧೆಯನ್ನು ಕೂಡ ಕೊಂದಾಕಿದೆ ನಿಷ್ಕರುಣಿ ಕೊರೊನಾ.ಇದಕ್ಕೆ ಗಣೇಶ ಹಬ್ಬವೂ ಸೇರ್ಪಡೆಯಾಗಿದೆ.ಹಬ್ಬವನ್ನು ಸಾರ್ವಜನಿಕವಾಗಿ ಅಚರಿಸದಂತೆ ನಿರ್ಬಂಧ ಹೇರಿರುವ ಸರ್ಕಾರ ಧಾರ್ಮಿಕ ಶೃದ್ಧೆಗೆ ಧಕ್ಕೆ ಉಂಟಾಗದಿರುವಂತೆಯೇ ತಮ್ ತಮ್ಮ ಮನೆಗಳಲ್ಲಿ ಗಣೇಶನ ಮೂರ್ತಿಗಳನ್ನಿಟ್ಟು ಸಂಭ್ರಮಿಸಲು ಅವಕಾಶ ನೀಡಿದೆ. ಕೊರೊನಾ ಮಹಾಮಾರಿಯಿಂದಲೂ ದೂರ ಇರಬೇಕು..ಹಾಗೆಯೇ ಹಬ್ಬದ ಆಚರಣೆಗೂ ಅವಕಾಶ ನೀಡುವಂತಾಗ್ಬೇಕೆನ್ನುವ ಡಬಲ್ ಧಮಾಕದ ಪ್ಲ್ಯಾನ್ ಕೊಟ್ಟಿದ್ದು ಮಾಲಿನ್ಯ ನಿಯಂತ್ರಣ ಮಂಡಳಿ.ಈ ಪ್ಲ್ಯಾನ್ ಇಷ್ಟವಾಗಿಯೇ  ಬಿಬಿಎಂಪಿ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ರೂಲ್ಸ್ ಫ್ರೇಮ್ ಮಾಡಿ ಹೊರಡಿಸಿದೆ.

ಬಿಬಿಎಂಪಿ ಮಾಡಿರುವ ರೂಲ್ಸ್ ಗಳ ಅನ್ವಯ ಗಣೇಶನ ಮೂರ್ತಿಗಳನ್ನು ಸಾರ್ವಜನಿಕವಾಗಿ ಪ್ರತಿಷ್ಟಾಪಿಸುವಂತಿಲ್ಲ.ಅದಕ್ಕೆ ಸ್ಟ್ರಿಕ್ಟಾಗಿ ಬಿಬಿಎಂಪಿ ಪರ್ಮಿಷನ್ ನ್ನು ನಿರಾಕರಿಸಿದೆ.ಮನೆಯಲ್ಲೇ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ವಿಸರ್ಜಿಸೊಕ್ಕೆ ಅವಕಾಶ ಕಲ್ಪಿಸಿದೆ.ಕೆರೆ ಕಟ್ಟೆಗಳ ವ್ಯವಸ್ಥೆಯನ್ನೂ ನಿಲ್ಲಿಸಿದೆ. ಇದರಿಂದ ತಿಂಗಳುಗಟ್ಟಲೇ ಸಾರ್ವಜನಿಕವಾಗಿ ಆಗುತ್ತಿದ್ದ ದೊಡ್ಡ ಮಟ್ಟದ ತೊಂದರೆ-ಕಿರಿಕಿರಿಗಳು ದೂರವಾದಂತಾಗಿದೆ. ಹದಗೆಡುತ್ತಿದ್ದ ಕಾನೂನು ಸುವ್ಯವಸ್ಥೆ ಸುಭದ್ರವಾಗಿರುತ್ತೆ..ಮೈಕಾಸುರನ ಹಾವಳಿ ನಿಲ್ಲುತ್ತೆ.ಗಣಪತಿ ಪ್ರತಿಷ್ಟಾಪನೆ ಹೆಸರಲ್ಲಿ ಚಂದಾ ಎೆತ್ತುವುದನ್ನು ದಂಧೆಯಾಗಿಸಿಕೊಂಡವರ ಆಟಾಟೋಪಕ್ಕೆ ಬ್ರೇಕ್ ಬೀಳುತ್ತದೆ.

ಒಂದ್ವೇಳೆ ನಮಗೆ ರೂಲ್ಸ್ ಗಿಂತ ಹಬ್ಬವೇ ಇಂಪಾರ್ಟ್ಮೆಂಟ್ ಎಂದುಕೊಂಡು ಮೂರ್ತಿಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ದುಸ್ಸಾಹಸ ಮಾಡಿದ್ದೇ ಆದರೆ ಅಂಥವ್ರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸೊಕ್ಕೆ ಬಿಬಿಎಂಪಿ ಮುಂದಾಗಿದೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್(ಎನ್ ಡಿಎಂಎ) ಅಡಿಯಲ್ಲಿ ಅಂಥವ್ರನ್ನು ಶಿಕ್ಷೆಗೊಳಪಡಿಸಲಾಗುತ್ತಂತೆ.ಕೊರೊನಾದ ನಡುವೆಯೂ ಕೆಲವು ಕಿಡಿಗೇಡಿಗಳು ರೂಲ್ಸ್ ಬ್ರೇಕ್ ಮಾಡುವ ಅವಕಾಶಗಳಿರುವುದರಿಂದ್ಲೇ ಪೊಲೀಸ್ ಇಲಾಖೆಯ ಸಹಕಾರವನ್ನು ಪಡೆಯಲು ಬಿಬಿಎಂಪಿ ಕಮಿಷನರ್ ಮಂಜುನಾಥ ಪ್ರಸಾದ್ ನಿರ್ದರಿಸಿರುವ ಸಂಗತಿಯನ್ನು ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ಇದೆಲ್ಲದರ ಜೊತೆಗೆ ಗಣೇಶ ಮೂರ್ತಿಗಳ ಪ್ರತಿಷ್ಟಾಪನೆ ವಿಷಯದಲ್ಲಿ ನಿರ್ಣಾಯಕ ಪಾತ್ರ ವಹಿಸೋದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ.ಕೊರೊನಾ ಸಮಯದಲ್ಲಿ ಮಾಲಿನ್ಯ ತಹಬದಿಗೆ ಬರೋದ್ರಲ್ಲಿ ಮಂಡಳಿಯ ಪಾಲುದಾರಿಕೆಯೂ ನಿರ್ಣಾಯಕವಾಗಿದೆ.ಇದರ ಬೆನ್ನಲ್ಲೇ ಗಣೇಶನ ಮೂರ್ತಿಗಳನ್ನು ಪ್ರತಿಷ್ಟಾಪಿಸಲು ಅವಕಾಶ ನೀಡುವ ಬಗ್ಗೆ ಸಾಕಷ್ಟು ದೊಡ್ಗ ತಲೆನೋವು ಮಂಡಳಿ ಕಾರ್ಯದರ್ಶಿ ಶ್ರೀನಿವಾಸಲು ಎದುರಿತ್ತು.ಇಂಥಾ ಸವಾಲಿನ ಸೂಕ್ಷ್ಮ ಸನ್ನಿವೇಶದಲ್ಲಿ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡೋದ್ರ ಜೊತೆಗೆ ಕೊರೊನಾ ನಿಯಂತ್ರಣದ ಉದ್ದೇಶವೂ ಈಡೇರಬೇಕೆನ್ನುವ ಕಾರಣಕ್ಕೆ ಸರ್ಕಾರಕ್ಕೆ ತಿಂಗಳುವರೆಗೆ ತಲೆಕೆಡಿಸಿಕೊಂಡು ಸಿದ್ಧಪಡಿಸಿದ ಸಲಹೆ-ಶಿಫಾರಸ್ಸುಗಳನ್ನು ಸಲ್ಲಿಸಲಾಯ್ತು.

ಮಂಡಳಿ ಕಾರ್ಯದರ್ಶಿ ಶ್ರೀನಿವಾಸಲು ಅವರ ಯೋಚನಾಲಹರಿ,ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸರ್ಕಾರ, ಬಿಬಿಎಂಪಿಗೆ ಈ ಶಿಫಾರಸ್ಸುಗಳ ಅನುಷ್ಠಾನಕ್ಕೆ ಒತ್ತು ನೀಡುವಂತೆ ಸೂಚಿಸಿತು. ಸರ್ಕಾರದ ಸೂಚನೆ ಮೇರೆಗೆ ಬಿಬಿಎಂಪಿ ಕೊರೊನಾ ಸನ್ನಿವೇಶದಲ್ಲಿ ಗಣೇಶ ಹಬ್ಬದ ಆಚರಣೆ ಹಾಗೂ ಗಣೇಶನ ಮೂರ್ತಿ ಪ್ರತಿಷ್ಟಾಪನೆ ಹೇಗಿರಬೇಕೆನ್ನುವುದನ್ನು ಸ್ಪಷ್ಟಪಡಿಸಿದೆ.ಇಷ್ಟೆಲ್ಲಾ ಆದ್ರೂ ಮಾಲಿನ್ಯ ನಿಯಂತ್ರಣ ಮಂಡಳಿ  ಸರ್ಕಾರದ ಶಿಫಾರಸ್ಸುಗಳನ್ನು ಬಿಬಿಎಂಪಿ ಯಾವ್ ರೀತಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಿದೆ ಎನ್ನುವುದರ ಮೇಲೆಯೂ ಹದ್ದುಗಣ್ಣಿನ ನಿಗಾ ಇಡಲು ನಿರ್ಧರಿಸಿದೆ.   

Spread the love
Leave A Reply

Your email address will not be published.

Flash News