ಬೆಂಗಳೂರಿನಲ್ಲಿ ಕಂಗೊಳಿಸುತ್ತಿದೆ ಕೊರೊನಾ ಗಣಪ-ನಷ್ಟದ ನೋವಿನ ನಡುವೆಯೂ ಕೊರೊನಾ ಗಣಪ ತಯಾರಿಸಿ ಗಮನ ಸೆಳೆದ ತಯಾರಕ ಶಿಲ್ಪಿ ಶ್ರೀನಾಥ್

0

ಬೆಂಗಳೂರು:ಕೊರೊನಾ ಇರೋದ್ರಿಂದ ಈ ಬಾರಿಯ ಗಣೇಶೋತ್ಸವದ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.ಹಾಗೆಯೇ ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಟಾಪಿಸುವುದನ್ನೂ ಕಂಪ್ಲೀಟ್ ಬ್ಯಾನ್ ಮಾಡಲಾಗಿದೆ.ಹಾಗಂತ ಮಣ್ಣಿನ  ಗಣಪತಿಗಳನ್ನು ಸಿದ್ದಪಡಿಸಿ ಮನೆಗಳಿಗೆ ಮಾರಾಟ ಮಾಡೊಕ್ಕೇನು ನಿರ್ಬಂಧ ಹೇರಿಲ್ಲ.ಆದ್ರೆ ಬೃಹತ್ ಗಾತ್ರದ ಗಣಪತಿಗಳನ್ನು ಸಿದ್ಧಪಡಿಸುವುದರಲ್ಲೇ ಜೀವನ ಕಂಡುಕೊಂಡಿರುವ ಗಣಪತಿ ತಯಾರಕರ ಬದುಕುಗಳು ಮಾತ್ರ ಮೂರಾಮಟ್ಟೆಯಾಗಿದೆ.ಹಾಗಾಗಿಯೇ ಒಲ್ಲದ ಮನಸಿನಿಂದ್ಲೇ ಸಣ್ಣಪುಟ್ಟ ಗಾತ್ರದ ಗಣಪತಿಗಳನ್ನು ತಯಾರಿಸುವುದರಲ್ಲಿ ನಿರತವಾಗಿದ್ದಾರೆ.

ಗಣಪತಿ ಹಬ್ಬಕ್ಕೆ ಇಷ್ಟೊತ್ತಿಗಾಗ್ಲೇ ಎಲ್ಲೆಡೆ ಸಂಭ್ರಮ ಕಳೆಗಟ್ಟಬೇಕಿತ್ತು.ತಮಗೆ ಬೇಕಾದ ಗಾತ್ರದ ಗಣಪತಿಗಳಿಗೆ ಮುಂಗಡವಾಗಿ ಬುಕ್ಕಿಂಗ್ ಮಾಡೋದ್ರಲ್ಲಿ ಜನರು ತಲ್ಲೀನರಾಗಿರುತ್ತಿದ್ದರು.ಹಾಗೆಯೇ ಮೂರ್ತಿ ತಯಾರಕರು ಬಿಡುವಿಲ್ಲದಂತೆ ದುಡಿಮೆಯಲ್ಲಿ ತೊಡಗಬೇಕಿತ್ತು.ಆದ್ರೆ ಎಲ್ಲಕ್ಕೂ ಕೊರೊನಾ ಬ್ರೇಕ್ ಹಾಕ್ಬಿಟ್ಟಿದೆ.ಆದ್ರೆ ಹಾಗಂತ ಜೀವನ ನಡೆಸಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಗಣಪತಿ ತಯಾರಕರು ತಮಗೆ ಬರುವ ಸಣ್ಣಪುಟ್ಟ ಆರ್ಡರ್ ಗಳನ್ನು ಮುಗಿಸುವಲ್ಲಿ ತೊಡಗಿದ್ದಾರೆ.

ವಿವಿಧ ಭಂಗಿಗಳ ಗಣಪತಿಗಳು ಸಿದ್ಧವಾಗುತ್ತಿದ್ದ ಪ್ರದೇಶಗಳಲ್ಲಿ ಸಿಂಪಲ್ ಭಂಗಿಯ ಗಣೇಶನನ್ನು ತಯಾರಿಸುವ ಕೆಲಸ ನಡೆಯುತ್ತಿದೆ.ಆದ್ರೆ ಇಲ್ಲೊಂದಿಷ್ಟು ಕಲಾವಿದರು  ಹಬ್ಬದ ಸಂಭ್ರಮದ ಜೊತೆಗೆ ತಮ್ಮ ತುತ್ತಿನ ಚೀಲವನ್ನೂ ಕಸಿದುಕೊಂಡಿರುವ ಕೊರೊನಾ ಮಹಾಮಾರಿಯನ್ನೇ ಪ್ರಧಾನ ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡು ಗಣಪತಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿದ್ದಾರೆ.ತಿಂಗಳಿಂದ್ಲೂ ನಡೆಸುತ್ತಾ ಬಂದಿರುವ ಕಾರ್ಯಕ್ಕೆ  ಫೈನಲ್ ಟಚ್ ಕೊಡುವಲ್ಲಿ ನಿರತವಾಗಿದ್ದಾರೆ.

"ಕೊರೊನಾ" ಗಣೇಶ ನಿರ್ಮಾತೃ ಶಿಲ್ಪಿ ಮಾವಳ್ಳಿ ಶ್ರೀಧರ್
ಕೊರೊನಾ” ಗಣೇಶ ನಿರ್ಮಾತೃ ಶಿಲ್ಪಿ ಮಾವಳ್ಳಿ ಶ್ರೀಧರ್

ಜೆಸಿ ರಸ್ತೆಯ ಮಾವಳ್ಳಿ ಎಂದ್ರೆ ಆ ಇಡೀ ಸ್ಟ್ರೀಟ್ ಪಾರಂಪರಿಕ ಗಣಪತಿ ತಯಾರಿಕೆಗೆ ಫೇಮಸ್.ದಶಕಗಳಿಂದ್ಲೂ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕುಂಬಾರಿಕೆಯ ಅನೇಕ ಕುಟುಂಬಗಳೇ ಇಲ್ಲಿವೆ. ಕೊ ರೊನಾ ಕಾರಣಕ್ಕೆ ದುಡಿಮೆಯಿಲ್ಲದೆ ಸಣ್ಣಪುಟ್ಟ ಆರ್ಡರ್ಸ್ ನ್ನೇ ಪೂರೈಸಿಕೊಡುತ್ತಿವೆ  ಇಲ್ಲಿನ ಫ್ಯಾಮಿಲಿಗಳು.ಮಾವಳ್ಳಿ ವ್ಯಾಪ್ತಿಯ  ಉಪ್ಪಾರಳ್ಳಿಯಲ್ಲಿರುವ ಶ್ರೀಧರ್  ಅಲಿಯಾಸ್  ಚಿಕ್ಕಮುನಿ ಹಾಗೂ ಕುಟುಂಬ ಕೆಲ ದಿನಗಳಿಂದ್ಲೂ ಕೊರೊನಾವನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಗಣಪತಿ ಮೂರ್ತಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ.

ಈಗಾಗ್ಲೇ ಅವರ ಕೈ ಚಳಕದಲ್ಲಿ ಮೂರ್ತಿಗಳು ಕೊನೇ ಹಂತದ ಸ್ವರೂಪ ಪಡೆದುಕೊಳ್ಳುತ್ತಿವೆ.ಸಂಕಷ್ಟದ ಕಾಲದಲ್ಲಿ ಇಂತದ್ದೊಂದು ಪ್ರಯತ್ನದ ಅವಶ್ಯಕತೆ ಇರಲಿಲ್ಲ ಎಂದೆನಿಸಿದ್ರೂ ತಮ್ಮ ಹೊಟ್ಟೆ ಮೇಲೆ ಹೊಡೆದಿದ್ದಷ್ಟೇ ಅಲ್ಲ,ಇಡೀ ಮನುಕುಲವನ್ನು ತತ್ತರಿಸಿದ ಕೊರೊನಾದ ವಿದ್ವಂಸಕತೆಯನ್ನು ಈ ಮೂಲಕ ತೋರಿಸುವ ಏಕೈಕ ಉದ್ದೇಶಕ್ಕೆ ಈ ವಿಭಿನ್ನ ಕಾನ್ಸೆಪ್ಟ್ ಆರಂಭಿಸಿದ್ದಾಗಿ ಹೇಳ್ತಾರೆ ಶ್ರೀಧರ್.ಕೊರೊನಾ ಮೂಲೋತ್ಪಾಟನೆ ಮಾಡು ವಿಘ್ನವಿನಾಶಕ ಎಂದು ಪ್ರಾರ್ಥಿಸುವುದು ಕೂಡ ಮೂರ್ತಿ ನಿರ್ಮಾಣದ ಹಿಂದಿನ ಮತ್ತೊಂದು ಉದ್ದೇಶ ಎನ್ತಾರೆ ಅವರು.

ಮಾವಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಕೊರೊನಾಧಾರಿತ ಗಣೇಶನ ಮೂರ್ತಿ ಈ ಬಾರಿ ಎಲ್ಲರ ಆಕರ್ಷಣೆಯಾಗುವುದರಲ್ಲಿ ಅನುಮಾನವೇ ಇಲ್ಲ.ಶೀಘ್ರ ಇದರ ನಿರ್ಮಾಣ ಪೂರ್ಣವಾಗಲಿದ್ದು ಸಾರ್ವಜನಿಕರ ವೀಕ್ಷಣೆಗೂ ಮುಕ್ತವಾಗಲಿದೆ. ನೀವೂ ಒಮ್ಮೆ ಪುರುಸೊತ್ತಿದ್ದರೆ ಈ ಕಡೆ ಹೋಗ್ ಬನ್ನಿ..ಗಣೇಶನ ದರ್ಶನ ಪಡೆದು ಕೊರೊನಾದಿಂದ ಜಗತ್ತನ್ನು ಮುಕ್ತ ಮಾಡಪ್ಪ ಎಂದು ಬೇಡಿಕೊಳ್ಳಿ..  

Spread the love
Leave A Reply

Your email address will not be published.

Flash News