ಕೊರೊನಾ ವಿರುದ್ಧದ ಫೈಟ್ ಗೆ ಫಿಟ್ ಆಗಿರೊಕ್ಕೆ ಪೊಲೀಸರಿಗೆ ಕಷಾಯ-ಟ್ಯಾಬ್ಲೆಟ್ಸ್- ಠಾಣೆಗಳಲ್ಲಿ ಫೈಬರ್ ಬಾಕ್ಸ್ ..

0
ಫೈಬರ್ ಬಾಕ್ಸ್ ಗಳನ್ನು ಅಳವಡಿಸಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ರು
ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ  ಫೈಬರ್ ಬಾಕ್ಸ್ ಗಳನ್ನು ಅಳವಡಿಸಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು..

ಬೆಂಗಳೂರು:ಕೊರೊನಾ ಸೋಂಕು ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ತಗಲುತ್ತಿರುವುದರಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಬೆಂಗಳೂರಿನ ಅನೇಕ ಪೊಲೀಸ್ ಠಾಣೆಗಳು ಮುಂದಾಗಿವೆ.

ತಮ್ಮದೇ ಆದ ರೀತಿಯ ಪ್ಲ್ಯಾನ್ ಗಳನ್ನು ಇಂಪ್ಲಿಮೆಂಟ್ ಮಾಡಿಕೊಂಡು ಪೊಲೀಸ್ ಸಿಬ್ಬಂದಿ ಹಾಗೂ ಠಾಣೆಗಳಿಗೆ ಬರುವ ಸಾರ್ವಜನಿಕರ ಹಿತ ಕಾಯೊಕ್ಕೆ ಮುಂದಾಗಿದ್ದಾರೆ.

ಅನೇಕ ಪೊಲೀಸ್ ಠಾಣೆಗಳು ಈಗಾಗ್ಲೇ ಫೈಬರ್ ಬಾಕ್ಸ್ ಗಳ ಮೊರೆ ಹೋಗಿವೆ.ಪೊಲೀಸ್ ಅಧಿಕಾರಿ ಸಿಬ್ಬಂದಿ ಕುಳಿತುಕೊಳ್ಳುವ ಟೇಬಲ್ ಗಳ ಅಡ್ಡಲಾಗಿ ಫೈಬರ್ ಬಾಕ್ಸ್ ಗಳನ್ನು ಅಳವಡಿಸಲಾಗಿದೆ.ಇದರಿಂದ ದೂರು-ದುಮ್ಮಾನ ಹೇಳಿಕೊಂಡು ಪೊಲೀಸ್ ಠಾಣೆಗಳಿಗೆ ಬರುವ ಸಾರ್ವಜನಿಕರೊಂದಿಗೆ ಅಂತರ ಕಾಯ್ದುಕೊಳ್ಳಲು ಸಹಕಾರಿಯಾಗುತ್ತೆ ಎನ್ನುವುದು ಫೈಬರ್ ಬಾಕ್ಸ್ ಅಳವಡಿಕೆ ಹಿಂದಿನ ಉದ್ದೇಶ.

ಹುಳಿಮಾವು ಠಾಣೆಯಲ್ಲಿ ಕಷಾಯ ಸಿದ್ದಪಡಿಸಿ ಬಳಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ
ಹುಳಿಮಾವು ಠಾಣೆಯಲ್ಲಿ ಕಷಾಯ ಸಿದ್ದಪಡಿಸಿ ಬಳಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ
ಕೊರೊನಾದಿಂದ ಮುಕ್ತರಾಗೊಕ್ಕೆ ಠಾಣೆಗಳಲ್ಲಿ ಸಿಬ್ಬಂದಿಗೆ ವಿತರಿಸಲಾಗುತ್ತಿರುವ ಟ್ಯಾಬ್ಲೆಟ್ಸ್
ಕೊರೊನಾದಿಂದ ಮುಕ್ತರಾಗೊಕ್ಕೆ  ಸಿಬ್ಬಂದಿಗೆ ವಿತರಿಸಲಾಗುತ್ತಿರುವ ಟ್ಯಾಬ್ಲೆಟ್ಸ್

ಈಗಾಗಲೇ ಅನೇಕ ಪೊಲೀಸ್ ಠಾಣೆಗಳಲ್ಲಿ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಜೊತೆಗೆ ಸಾರ್ವಜನಿಕರ ಜೊತೆ ಈ ಮೂಲಕ ಉತ್ತಮ ಹಾಗೂ ರಕ್ಷಣಾತ್ಮಕ ಸಂವಹನ ಕೂಡ ಸಾಧ್ಯವಾಗಲಿದೆ.ಈ ಕಾನ್ಸೆಪ್ಟ್ ಅಡಾಪ್ಟ್ ಆದ್ಮೇಲೆ ಪೊಲೀಸರಿಗೆ ಕೊರೊನಾ ಹರಡುವಂಥ ಆತಂಕ ದೂರವಾಗಿದೆ.

ಇದು ಒಂದ್ ರೀತಿಯ ರಕ್ಷಣಾತ್ಮಕ ಕಾರ್ಯವಾದ್ರೆ ಮತ್ತೊಂದು ರೀತಿಯ ಸುರಕ್ಷತಾ ಕ್ರಮವನ್ನು ಪೊಲೀಸ್ ಠಾಣೆಗಳಲ್ಲಿ ಕೈಗೊಳ್ಳಲಾಗುತ್ತಿದೆ.ಠಾಣೆಗಳಲ್ಲಿಯೇ ಕೊರೊನಾ ಕಶಾಯ ಸಿದ್ಧಪಡಿಸಿ ಸಿಬ್ಬಂದಿ ಹಾಗೂ ಠಾಣೆಗಳಿಗೆ ಬರುವ ಸಾರ್ವಜನಿಕರಿಗೆ ನೀಡಲಾಗುತ್ತಿದೆ.

ಕೊರೊನಾ ಕಷಾಯ ಸಾಕಷ್ಟು ಪರಿಣಾಮಕಾರಿ ಫಲಿತಾಂಶ ನೀಡಿರುವುದರಿಂದ್ಲೇ ಇದನ್ನೇ ಅಡಾಪ್ಟ್ ಮಾಡಿಕೊಳ್ಳಲಾಗ್ತಿದೆ.ಎಲ್ಲಕ್ಕಿಂತ ಹೆಚ್ಚಾಗಿ ಠಾಣೆಗಳಲ್ಲಿರುವ ಆಪಾದಿತರಿಗೂ ಕಷಾಯ ನೀಡುವ ಮೂಲಕ ಪೊಲೀಸರು ಔದಾರ್ಯ ಪ್ರದರ್ಶಿಸುತ್ತಿದ್ದಾರೆ.

ಹುಳಿಮಾವು ಸ್ಟೇಷನ್ ನಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದ್ದು ಇತರೆ ಸ್ಟೇಷನ್ ಗಳು ಇದನ್ನು ಫಾಲೋ ಮಾಡುವ ಸಾಧ್ಯತೆಗಳಿವೆ.ಇದಿಷ್ಟೇ ಅಲ್ಲ,ಕೊರೊನಾದಿಂದ ರಕ್ಷಣೆ ಪಡೆಯೊಕ್ಕೆ ಕೊರೊನಾ ಟ್ಯಾಬ್ಲೆಟ್ಸ್ ಗಳನ್ನು ಕೂಡ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಪೊಲೀಸರ ಆರೋಗ್ಯ ಕಾಪಾಡುವುದು ಇದೆಲ್ಲದರ ಹಿಂದಿನ ಉದ್ದೇಶ ಕೊರೊನಾದಿಂದ ಸಾರ್ವಜನಿಕರನ್ನು ರಕ್ಷಿಸುವ ಕೆಲಸ ಮಾಡುವ ಪೊಲೀಸರ ಅಮೂಲ್ಯವಾದ ಜೀವಗಳನ್ನು ಕಾಯುವುದಾಗಿದೆ.ಕೊರೊನಾದಿಂದ ರಕ್ಷಣೆ ಪಡೆಯೊಕ್ಕೆ ಇಲಾಖೆ ಇನ್ನೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ನೂತನ ಪೊಲೀಸ್ ಕಮಿಷನರ್ ಕಮಲ್ ಪಂತ್ ಅಧಿಕಾರ ಸ್ಬೀಕಾರ ಸಂದರ್ಭದಲ್ಲಿಯೂ ಕೊರೊನಾ ವಿರುದ್ದ ಹೋರಾಡುತ್ತಿರುವ ಪೊಲೀಸ್ ಸಿಬ್ಬಂದಿಯ ರಕ್ಷಣೆಯೇ ತಮ್ಮ ಆಧ್ಯತೆ ಎಂದಿದ್ದರು.ಅದೇ ನಿರೀಕ್ಷೆಯಲ್ಲೇ ಪೊಲೀಸ್ ಸಿಬ್ಬಂದಿಗಳಿದ್ದಾರೆ.

ಕೊರೊನಾ ವಿರುದ್ಧದ ಫೈಟ್ ಗೆ ಫಿಟ್ ಆಗಿರೊಕ್ಕೆ ಪೊಲೀಸರಿಗೆ ಕಷಾಯ-ಟ್ಯಾಬ್ಲೆಟ್ಸ್- ಠಾಣೆಗಳಲ್ಲಿ ಫೈಬರ್ ಬಾಕ್ಸ್ ..

Spread the love
Leave A Reply

Your email address will not be published.

Flash News