UPSCಯಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಸಾಧಕರು-ಬೆಂಗಳೂರಿನ ಜಯದೇವ್ ಗೆ 5 ನೇ RANK-ಯಶಸ್ವಿನಿಗೆ 71 ನೇ RANK-ವಿನೋದ್ ಪಾಟೀಲ್ ಗೆ 132 ನೇ RANK

0

ಬೆಂಗಳೂರು:ದೇಶದ ಅತ್ಯನ್ನುತ ನಾಗರಿಕ ಸೇವೆಯ ಹುದ್ದೆಗೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ 2019ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆಗಳ ಅಂತಿಮ ಫಲಿತಾಂಶ ಹೊರಬಿದ್ದಿದೆ.ಸಂತಸದ ವಿಷಯ ಎಂದ್ರೆ ರಾಜ್ಯದಿಂದ 40ಕ್ಕೂ ಹೆಚ್ಚು ಅಭ್ಯರ್ಥಿಗಳು ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ. 5ನೇ ಸ್ಥಾನ ಪಡೆದಿರುವ ಜಯದೇವ್ ಸಿ.ಎಸ್. ರಾಜ್ಯದ ಟಾಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಪ್ರದೀಪ್ ಸಿಂಗ್ ಅಖಿಲ ಭಾರತ ಮೊದಲ ರ್ಯಾಂಕ್ ಪಡೆದಿದ್ದರೆ, ಜತಿನ್ ಕಿಶೋರ್ ಪ್ರತಿಭಾ ಶರ್ಮ ಕ್ರಮವಾಗಿ ಎರಡು ಹಾಗೂ ಮೂರನೇ ರ್ಯಾಂಕ್ ಪಡೆದಿದ್ದಾರೆ.ಐಎಎಸ್, ಐಪಿಎಸ್, ಐಎಫ್ಎಸ್ ಸೇರಿದಂತೆ ವಿವಿಧ ನಾಗರಿಕ ಸೇವೆಗಳಡಿ ಒಟ್ಟು 829 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಟಾಪ್ 25 ಪಟ್ಟಿಯಲ್ಲಿ 9 ಮಂದಿ ಮಹಿಳಾ ಅಭ್ಯರ್ಥಿಗಳು ಸ್ಥಾನ ಪಡೆದಿರುವುದು ಆಶ್ಚರ್ಯ ಹಾಗೂ ಸಂತಸದ ವಿಚಾರ.
ಯಶಸ್ವಿನಿಗೆ 71 ನೇ ರ್ಯಾಂಕ್:ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಬ್ಬಿಹಳ್ಳಿಯ ಯುವತಿ ಯಶಸ್ವಿನಿ 71ನೇ ರ್ಯಾಂಕ್ ಪಡೆದು ಜಿಲ್ಲೆಗಷ್ಟೇ ಅಲ್ಲ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕಳೆದ ಬಾರಿ 293ನೇ ರ್ಯಾಂಕ್ ಪಡೆದಿದ್ದ ಯಶಸ್ವಿನಿ . ಇಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳದೆ ಮತ್ತೆ ಪರೀಕ್ಷೆ ಬರೆದಿದ್ದರು.ಅದರ ಫಲವಾಗಿ 71ನೇ ರ್ಯಾಂಕ್ ಪಡೆದಿದ್ದಾರೆ. ಸದ್ಯ ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್ ನಲ್ಲಿ(IDES) ಸೇವೆ ಸಲ್ಲಿಸುತ್ತಿರುವ ಯಶಸ್ವಿನಿ, ಗುಬ್ಬಿಹಳ್ಳಿಯ ಬಸವರಾಜಪ್ಪ-ಇಂದಿರಾ ದಂಪತಿಯ ಪುತ್ರಿ. ತಂದೆ ಬಸವರಾಜಪ್ಪ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ. ಯಶಸ್ವಿನಿ ಕಡೂರಿನಲ್ಲಿ ಪ್ರಾಥಮಿಕ-ಪ್ರೌಢ ಶಿಕ್ಷಣ ಮುಗಿಸಿ ನಂತರ ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.
ಬಿ. ಕೃತಿ. 297 ನೇ ರ್ಯಾಂಕ್: ಕುಮಟಾ ಕತಗಾಲದ ಕುಗ್ರಾಮದ ಕೃತಿ 297 ರ್ಯಾಂಕ್ ಪಡೆದಿದ್ದಾರೆ. ಹಾಲಿ ಬೆಂಗಳೂರಿನಲ್ಲಿ ವಾಸವಿರುವ ಬಿ. ಕೃತಿ.ತಂದೆ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಭಾಸ್ಕರ್ ವಿಷ್ಣು ಭಟ್ಟ,ತಾಯಿ ಅಲಕಾ. ಇಂಜಿನಿಯರಿಂಗ್ ಪದವಿ ಬಳಿಕ ಎರಡು ವರ್ಷಗಳ ಕಾಲ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿ ನಂತರ ಯುಪಿಎಸ್ಸಿ ಪರೀಕ್ಷೆ ಎದುರಿಸಿ ರ್ಯಾಂಕ್ ನೊಂದಿಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ವೆಂಕಟರಮಣ ಕೌಡಿಕೆರೆ 363 ರ್ಯಾಂಕ್ :ಯಲ್ಲಾಪುರದ ಕೌಡಿಕೆರೆಯ ವೆಂಕಟ್ರಮಣ ಕೌಡಿಕೆರೆ 363 ನೇ ರ್ಯಾಂಕ್ ಪಡೆದಿದ್ದಾರೆ.ಮೂಲತಃ ಇಂಜಿನಿಯರಿಂಗ್ ಪದವೀಧರರಾಗಿರುವ ವೆಂಕಟರಮಣ ಪ್ರಸ್ತುತ ದೆಹಲಿಯಲ್ಲಿ ಬ್ಯಾಂಕ್ ಪ್ರೊಬೇಶನರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಚಿನ್ ಹಿರೇಮಠ್ ಗೆ 213ನೇ ರ್ಯಾಂಕ್: ದಾಂಡೇಲಿ ನಗರದ ಟೌನ್ ಶಿಪ್ ನಿವಾಸಿ ಸಚಿನ್ ಹಿರೇಮಠ್ 213 ನೇ ರ್ಯಾಂಕ್ ಪಡೆದಿದ್ದಾರೆ. ಶಿಕ್ಷಕ ದಂಪತಿಯ ಪುತ್ರ ಸಚಿನ್ ಹಿರೇಮಠ ಯುಪಿಎಸ್ಸಿ ಪರೀಕ್ಷೆಯಲ್ಲಿ 213ನೇ ರ್ಯಾಂಕ್ ಗಳಿಸಿ ಹಳ್ಳಿಯ ಸಾಧನೆಯನ್ನು ದೆಹಲಿಯತ್ತ ಕೊಂಡೊಯ್ದಿದ್ದಾರೆ.
ಸಿವಿಲ್ ಸರ್ವಿಸ್ ನಲ್ಲಿ ಮೂರನೆಯ ಪ್ರಯತ್ನದಲ್ಲಿ 213 ನೇ ರ್ಯಾಂಕ್ ಪಡೆದಿರುವ ಸಚಿನ್ ಕೋಲ್ಕತ್ತಾದಲ್ಲಿ ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಹೇಮಾ ನಾಯ್ಕ 225 ನೇ ರ್ಯಾಂಕ್: ಅಂಕೋಲಾ ತಾಲೂಕಿನ ವಾಸರಕುದ್ರಿಗಿಯ ಶಿಕ್ಷಕ ದಂಪತಿ ಶಾಂತಾರಾಮ ನಾಯಕ ಹಾಗು ರಾಜಮ್ಮ ಅವರ ಪುತ್ರಿ ಹೇಮಾ ನಾಯಕ, 225ನೇ ರ್ಯಾಂಕ್ ಪಡೆದಿದ್ದಾರೆ. ಪ್ರೌಢಶಿಕ್ಷಣದವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದ ಹೇಮಾನಾಯ್ಕ,ಯುಪಿಎಸ್ ಸಿಗಾಗಿ ಕಠಿಣ ಅಭ್ಯಾಸ ನಡೆಸಿ ಮೊದಲ ಪ್ರಯತ್ನದಲ್ಲಿ ಯುಪಿಎಸ್ ಸಿ ಯಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
ದರ್ಶನ್ 594 ನೇ ರ್ಯಾಂಕ್ :
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹರಳಕಟ್ಟೆ ಗ್ರಾಮದ ದರ್ಶನ್ ಯುಪಿಎಸ್ಸಿ ಪರೀಕ್ಷೆಯಲ್ಲಿ 594ನೇ ರ್ಯಾಂಕ್ ಪಡೆದಿದ್ದಾರೆ. .ತಂದೆ ಗಂಗಾಧರಯ್ಯ,ತಾಯಿ ಜಯಂತಿ ಕೃಷಿ
ಕರು. ಹಗರಿಬೊಮ್ಮನಹಳ್ಳಿ ರಾಷ್ಟೋತ್ಥಾನ ವಿದ್ಯಾಲಯದಲ್ಲಿ ವ್ಯಾಸಂಗದ ಸಮಯದಲ್ಲೇ ದೇಶಸೇವೆಯ ಕನಸು ಕಂಡಿದ್ದರಂತೆ ಇವರು. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಪ್ರತಿಭಾನ್ವಿತ ವಿದ್ಯಾರ್ಥಿ ಎನಿಸಿಕೊಂಡಿದ್ದರು.

ತಮ್ಮ ಸಾಧನೆ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನು ದೇಶದ ಮಟ್ಟಕ್ಕೆ ಕೊಂಡೊಯ್ದ ಈ ಸಾಧಕರಿಗೆ ಕನ್ನಡ ಫ್ಲಾಶ್ ನ್ಯೂಸ್ ಅಭಿನಂದನೆ ಸಲ್ಲಿಸುತ್ತೆ..ಇವರಿಂದ ಕರ್ನಾಟಕ ಸಾಕಷ್ಟನ್ನು ನಿರೀಕ್ಷಿಸುತ್ತಿದೆ. ಇನ್ನು ಕನ್ನಡದ ಸಾಧಕರ ಸಾಧನೆಯನ್ನು ಗಣ್ಯರು ಶ್ಲಾಘಿಸಿದ್ದಾರೆ. ಮಾಜಿ ಪ್ರಧಾನಿ ಎಚ್,ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಟಿ ಶುಭಾಷಯ ಕೋರಿ ಅವರ ಸೇವೆ ನಾಗರಿಕರಿಗೆ ಉತ್ತಮ ರೀತಿಯಲ್ಲಿ ಸಿಗಲಿ ಎಂದು ಹಾರೈಸಿದ್ದಾರೆ.

Spread the love
Leave A Reply

Your email address will not be published.

Flash News