ಯುಪಿಎಸ್ ಸಿಯಲ್ಲಿ ಕೃಷಿ ಕುಟುಂಬದ ಯುವಕ ಟಾಪರ್-ನಾಲ್ಕನೇ ಪ್ರಯತ್ನದಲ್ಲಿ ಟಾಪರ್ ಆದ ಪ್ರದೀಪ್ ಸಿಂಗ್- 829 ಅಭ್ಯರ್ಥಿಗಳು ಆಯ್ಕೆ-11 ಅಭ್ಯರ್ಥಿಗಳ ಫಲಿತಾಂಶ ಪೆಂಡಿಂಗ್..

0
ಯುಪಿಎಸ್ ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ RANK ಪಡೆದ ಹರ್ಯಾಣದ ಕೃಷಿ ಕುಟುಂಬದ ಪ್ರದೀಪ್ ಸಿಂಗ್
ಯುಪಿಎಸ್ ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ RANK ಪಡೆದ ಹರ್ಯಾಣದ ಕೃಷಿ ಕುಟುಂಬದ ಪ್ರದೀಪ್ ಸಿಂಗ್

ನವದೆಹಲಿ:ದೇಶದ ಅತ್ಯನ್ನುತ ನಾಗರಿಕ ಸೇವೆಯ ಹುದ್ದೆಗೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ 2019ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆಗಳ ಅಂತಿಮ ಫಲಿತಾಂಶ ಹೊರಬಿದ್ದಿದೆ.ಇಡೀ ದೇಶವೇ ಹೆಮ್ಮೆ ಪಡುವಂಥ ಸಾಧನೆ ಮಾಡಿದ್ದಾನೆ ಹರಿಯಾಣ ಮೂಲದ ಕೃಷಿಕ ಕುಟುಂಬದ 29ರ ಹರೆಯದ ಯುವಕ ಪ್ರದೀಪ್ ಸಿಂಗ್ ದೇಶಕ್ಕೆ ಮೊದಲಿಗನಾಗಿ ಹೊರಹೊಮ್ಮಿದ್ದಾರೆ.ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿ ಶೃದ್ಧೆ ಹಾಗೂ ಪರಿಶ್ರಮದಿಂದಲೇ ಯುಪಿಎಸ್ ಸಿಯಲ್ಲಿ ನಾಲ್ಕನೇ ಅಟೆಂಪ್ಟ್ ನಲ್ಲಿ ಮೊದಲ ರ್ಯಾಂಕ್ ಪಡೆದಿರುವ ಪ್ರದೀಪ್ ಸಿಂಗ್ ಸಾಧನೆಗೆ ದೇಶಾದ್ಯಂತ ಹೆಮ್ಮೆಯ ಮಾತುಗಳು ಕೇಳಿ ಬರುತ್ತಿವೆ. ಸಧ್ಯ ಸದ್ಯ ಭಾರತೀಯ ಕಂದಾಯ ಸೇವೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಎರಡನೇ ರ್ಯಾಂಕ್ ಪಡೆದಿರುವ ಜತಿನ್ ಕಿಶೋರ್ ಕೂಡ ಸಾಧನೆ ಮೂಲಕ ಯಶಸ್ಸನ್ನು ಸಂಪಾದಿಸಿದ್ದಾರೆ.. ಮಹಿಳೆಯರ ಪೈಕಿ ಉತ್ತರಪ್ರದೇಶದ ಪ್ರತಿಭಾ ವರ್ಮಾ ಮೊದಲಿಗರಾಗಿದ್ದು ಅಖಿಲ ಭಾರತ ಶ್ರೇಯಾಂಕದಲ್ಲಿ (ಎಐಆರ್) ಮೂರನೇ ಸ್ಥಾನದಲ್ಲಿದ್ದಾರೆ. ಸಧ್ಯ ಅವರು ಭಾರತೀಯ ಕಂದಾಯ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಅಂದ್ಹಾಗೆ ಈ ಬಾರಿ ಒಟ್ಟು 829 ಅಭ್ಯರ್ಥಿಗಳನ್ನು ಯುಪಿಎಸ್ಸಿ ಆಯ್ಕೆ ಮಾಡಿದೆ. ಮೊದಲ ಬಾರಿಗೆ ಜಾರಿಗೆ ಬಂದಂಥಹ ಆರ್ಥಿಕ- ದುರ್ಬಲ ವರ್ಗಗಳ ಕೋಟಾದಲ್ಲಿ(ಇಡಬ್ಲುಎಸ್) 78 ಅಭ್ಯರ್ಥಿಗಳು ಸಿವಿಲ್ ಸರ್ವೀಸ್ಗೆ ಆಯ್ಕೆ ಆಗಿರುವುದು ಗಮನಾರ್ಹ. 304 ಅಭ್ಯರ್ಥಿಗಳು ಸಾಮಾನ್ಯ ವರ್ಗದವರಾಗಿದ್ದು, 251 ಅಭ್ಯರ್ಥಿಗಳು ಹಿಂದುಳಿದ ವರ್ಗದವರಾಗಿದ್ದಾರೆ.
ಹಾಗೆಯೇ 129 ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ವರ್ಗದ 67 ಅಭ್ಯರ್ಥಿಗಳು ಕೂಡ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ. ಜತೆಗೆ 11 ಅಭ್ಯರ್ಥಿಗಳ ಫಲಿತಾಂಶವನ್ನು ಯುಪಿಎಸ್ಸಿ ಕಾಯ್ದಿರಿಸಿದೆ.
ಟಾಪ್ 10ರಲ್ಲಿ 3 ಯುವತಿಯರು
ಮುಸ್ಲಿಂ ಯುವಕ-ಯುವತಿಯರ ಸಾಧನೆ ಕಡಿಮೆಯೇನಲ್ಲ: ಯುಪಿಎಸ್ ಸಿಯಲ್ಲಿ ಮಹಿಳಾ ಅಭ್ಯರ್ಥಿಗಳ ಸಾಧನೆ ಈ ಬಾರಿ ಗಣನೀಯ ಎನ್ನುವಂತಿದೆ.ಏಕೆಂದ್ರೆ ಟಾಪ್ 10 ರ್ಯಾಂಕ್ ಪಡೆದವರಲ್ಲಿ ಮೂವರು ಯುವತಿಯರಿದ್ದಾರೆ. ಉತ್ತರಪ್ರದೇಶದ ಸುತಾನ್ಪುರದ ಪ್ರತಿಭಾ ವರ್ಮಾ ಎಐಆರ್-3, ವಿಶಾಖಾ ಯಾದವ್ ಎಐಆರ್-6 ಮತ್ತು ಸಂಜಿತಾ ಮೊಹಾಪಾತ್ರ ಎಐಆರ್-10 ಗಳಿಸಿ ಮಹಿಳಾ ಪ್ರಾತಿನಿಧ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಟಾಪ್ 50ಯಲ್ಲಿಏಕೈಕ ಮುಸ್ಲಿಂ ಯುವತಿ, ಒಟ್ಟು 42 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು, ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಒಟ್ಟು 42 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆ ಪೈಕಿ ಅಗ್ರ 50 ರ್ಯಾಂಕ್ಗಳಲ್ಲಿ ಏಕೈಕ ಮುಸ್ಲಿಂ ಯುವತಿ ಇದ್ದಾರೆ. ಸಫ್ನಾ ನಜರುದ್ದೀನ್ 45ನೇ ರ್ಯಾಂಕ್ ಗಳಿಸಿದ್ದಾರೆ. ಕಳೆದ ವರ್ಷ 28 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಆಯ್ಕೆಯಾಗಿದ್ದನ್ನು ಕಂಪೇರ್ ಮಾಡಿದ್ರೆ ಈ ಬಾರಿ ಮುಸ್ಲಿಂ ಅಭ್ಯರ್ಥಿಗಳ ಸಾಧನೆ ಗಣನೀಯವಾಗಿದೆ.
ಯುಪಿಎಸ್ಸಿ ಟಾಪ್ 10 ರ್ಯಾಂಕ್ ವಿಜೇತರು
1 ಪ್ರದೀಪ್ ಸಿಂಗ್
2 ಜತಿನ್ ಕಿಶೋರ್
3 ಪ್ರತಿಭಾ ವರ್ಮಾ
4 ಹಿಮಾಂಶು ಜೈನ್
5 ಜಯದೇವ್ ಸಿ.ಎಸ್
6 ವಿಶಾಖ ಯಾದವ್
7 ಗಣೇಶ್ ಕುಮಾರ್ ಭಾಸ್ಕರ್
8 ಅಭಿಷೇಕ್ ಸರಾಫ್
9 ರವಿ ಜೈನ್
10 ಸಂಜಿತಾ ಮೊಹಾಪಾತ್ರ
ನಾಗಾ ಸಮುದಾಯದ ಯುವಕನ ಐಎಎಸ್  ಸಾಧನೆ: ಆದಿವಾಸಿ-ಬುಡಕಟ್ಟು ಜನಾಂಗದ ಅಭ್ಯರ್ಥಿಗಳು ನಾನಾ ಕಾರಣಕ್ಕೆ ಯುಪಿಎಸ್ ಸಿಯಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡುವುದು ಅಪರೂಪ. ನಾಗಾಲ್ಯಂಡ್ ಮೂಲದ ರಿಚರ್ಡ್ ಯಾಂಥನ್ ಅಂತದ್ದೊಂದು ಸಾಧನೆ ಮಾಡಿದ್ದಾರೆ.133ನೇ ರ್ಯಾಕ್ ಪಡೆದಿರುವ ರಿಚರ್ಡ್ ಯಾಂಥನ್ ನಾಗಾ ಸಮುದಾಯದವರು ಎನ್ನುವುದು ವಿಶೇಷ. ಕಳೆದ ಮೂರು ವರ್ಷಗಳಲ್ಲಿ ನಾಗಾ ಸಮುದಾಯದಿಂದ ಐಎಎಸ್ಗೆ ಅಭ್ಯರ್ಥಿಗಳು ಆಯ್ಕೆಯಾಗಿರಲಿಲ್ಲ. 2017ರಲ್ಲಿ 64ನೇ ರ್ಯಾಂಕ್ ಗಳಿಸಿದ್ದ ಡೀಮಾಪುರದ ಸ್ವಪ್ನೀಲ್ ಪೌಲ್ ಯುಪಿಎಸ್ ಸಿಗೆ ಆಯ್ಕೆಯಾಗಿದ್ದನ್ನ ಬಿಟ್ಟರೆ ಅಂತದ್ದೊಂದು ಸಾಧನೆ ಮಾಡಿದ ಕೀರ್ತಿಗೆ ರಿಚರ್ಡ್ ಭಾಜನರಾಗಿದ್ದಾರೆ.
ಟಾಪ್ 10 ರಲ್ಲಿ ಮೂವರು ಯುವತಿಯರು: ಇನ್ನು ಟಾಪ್ 10 ಪಟ್ಟಿಯಲ್ಲಿನ ಮೂವರು ಯುವತಿಯರ ಪೈಕಿ 6ನೇ ರ್ಯಾಂಕ್ ಪಡೆದಿರುವ ವಿಶಾಖ ಯಾದವ್ ಸಾಧನೆ ಹೆಸರಿಸಲೇಬೇಕಾದಂತದ್ದು.ವಿಶಾಖಾ ಅವರ ತಂದೆ ರಾಜ್ಕುಮಾರ್ ದಿಲ್ಲಿ ಪೊಲೀಸ್ನಲ್ಲಿ ಎಎಸ್ಸೈ. ಮಥುರಾ ಮೂಲದ ವಿಶಾಖ ಬಿ.ಟೆಕ್ ಮುಗಿಸಿದ ನಂತರ ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಅವರು ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು.ಆದ್ರೆ ಪ್ರಿಲಿಮ್ಸ್ ತೇರ್ಗಡೆಯಾಗಿರಲಿಲ್ಲ.ಆದರೆ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಈ ಬಾರಿ 6ನೇ ರ್ಯಾಂಕ್ ನ ಸಾಧನೆ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

Spread the love
Leave A Reply

Your email address will not be published.

Flash News