ದೃಷ್ಟಿವೈಕಲ್ಯವನ್ನೇ ಛಲವನ್ನಾಗಿಸಿಕೊಂಡು IAS ಗೆದ್ದ ಛಲಗಾತಿ ಮೇಘನಾ…

0

ಬೆಂಗಳೂರು:ಸಾಧನೆಗೆ ಅಂಗವೈಕಲ್ಯ ತೊಡಕಾಗದು ಎನ್ನುವುದು ಹಲವಾರು ಸಾಧಕರಿಂದ ಪ್ರೂವ್ ಆಗುತ್ತಲೇ ಬರುತ್ತಿದೆ.ಅಂತದ್ದೊಂದು ಉದಾಹರಣೆಗೆ ಸಾಕ್ಷೀಪ್ರಜ್ಞೆಯಂತಿದ್ದಾರೆ ಕರ್ನಾಟಕದ ಹೆಮ್ಮೆಯ  ಸಾಧಕಿ ಮೇಘನಾ.ಕೆ.ಟಿ
ದೃಷ್ಟಿದೋಷದಿಂದ ಬಳಲುತ್ತಿದ್ದರೂ ಅದನ್ನೆಂದು ಸಾಧನೆಗೆ ತೊಡಕಾಗಿಸಿಕೊಳ್ಳದೆ ಸವಾಲನ್ನಾಗಿ ಸ್ವೀಕರಿಸಿದ ಪರಿಣಾಮ ಈ ಬಾರಿಯ ಯುಪಿಎಸ್ ಸಿ ಪರೀಕ್ಷೆಯಲ್ಲಿ ಕರ್ನಾಟಕದ ಮೇಘನಾ 465 ನೇ ರ್ಯಾಂಕ್ ಪಡೆದು ವಿಕಲಚೇತನರ ಕೆಪಾಸಿಟಿ ಏನನ್ನೋದನ್ನ ಸಾರಿ ಹೇಳಿದ್ದಾಳೆ.
ಕಣ್ಣು ಕಾಣದಿದ್ದರೂ ಅದನ್ನೆಂದೂ ಮೈನಸ್ ಮಾಡಿಕೊಳ್ಳದೆ ಹಿಡಿದ ಹಠವನ್ನು ಸಾಧಿಸಿದ ಮೇಘನಾ ಜಾಬ್ ಅಕ್ಸೆಸ್ ವಿಥ್ ಸ್ಪೀಚ್ (ಜಾಸ್) ಎಂಬ ಸಾಫ್ಟ್ವೇರ್ ಸಹಾಯದಿಂದ ಪರೀಕ್ಷೆ ತಯಾರಿ ನಡೆಸಿ ಈ ಸಾಧನೆ ಮಾಡಿದ್ದಾರೆ. ಇದೊಂದು ಸತತ ಪ್ರಯತ್ನವಾಗಿದ್ದು, ಸಾಕಷ್ಟು ಪರಿಶ್ರಮ ವಹಿಸಬೇಕಿದೆ. ಯುಪಿಎಸ್ಸಿ ಪರೀಕ್ಷೆಯು ಸುದೀರ್ಘ ಪ್ರಕ್ರಿಯೆಯಾಗಿದೆ. ಪರೀಕ್ಷೆಯ ಮೂರೂ ಹಂತಗಳಾದ ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನ ಹಂತಗಳಿಗೆ ವಿಭಿನ್ನವಾದ ತಯಾರಿ ನಡೆಸಬೇಕಿತ್ತು ಎಂದು ಮೇಘನಾ ಕನ್ನಡ ಫ್ಲಾಶ್ ನ್ಯೂಸ್ ಗೆತಿಳಿಸಿದ್ರು.
ಅಂದ್ಹಾಗೆ ಅಂಧ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಸ್ಕ್ರೈಬ್ ಫೆಸಿಲಿಟಿ ಲಭ್ಯವಿದೆ. ಅಂದರೆ, ಬೇರೊಬ್ಬರ ಸಹಾಯ ಪಡೆದು ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷೆ ಬರೆಯಲು ಯುಪಿಎಸ್ಸಿಯೇ ಯಾರನ್ನಾದರೂ ನೇಮಿಸುತ್ತದೆ. ಅಥವಾ, ನಾವೇ ಯಾರನ್ನಾದರೂ ಕರೆದುಕೊಂಡು ಹೋಗಬಹುದು. ಆದರೆ, ಅವರು ಪದವಿಯನ್ನು ಪೂರ್ಣಗೊಳಿಸಿರಬಾರದು. ಕೆಪಿಎಸ್ಸಿಯಲ್ಲಿ ಪ್ರತಿ ಗಂಟೆಗೆ ಹೆಚ್ಚುವರಿಯಾಗಿ 10 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಯುಪಿಎಸ್ಸಿಯಲ್ಲಿ ಪ್ರತಿ ನಿಮಿಷಕ್ಕೆ 20 ನಿಮಿಷ ಕಾಲಾವಕಾಶ ನೀಡಲಾಗುತ್ತದೆ.ತಾನು ಪಟ್ಟ ಪರಿಶ್ರಮದಿಂದ ಕೊನೆಗೂ ಸಾಧನೆ ತನ್ನದಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ಮೇಘನಾ ಭಾರತೀಯ ನಾಗರಿಕ ಸೇವೆಯ ಯಾವುದೇ ಹುದ್ದೆ ಸಿಕ್ಕರೂ ಜನಸೇವೆಯನ್ನು ಪ್ರಾಮಾಣಿಕತೆಯಿಂದ ಮಾಡುವ ಹೆಬ್ಬಯಕೆ ವ್ಯಕ್ತಪಡಿಸಿದ್ದಾರೆ.ಆಲ್ ದಿ ಬೆಸ್ಟ್ ಮೇಘನಾ ಮೇಡಮ್..

Spread the love
Leave A Reply

Your email address will not be published.

Flash News