ಭಾರತದ ನೂತನ ಕಂಟ್ರೋಲರ್ ಆಡಿಟರ್ ಜನರಲ್ ಆಗಿ ನಿವೃತ್ತ IAS ಗಿರೀಶ್ ಚಂದ್ರ ಮುರ್ಮು ನೇಮಕ..

0

ನವದೆಹಲಿ:ಮಾಜಿ ಲೆಫ್ಟಿನೆಂಟ್ ಗವರ್ನರ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ  ಗಿರೀಶ್ ಚಂದ್ರ ಮುರ್ಮು ಇದೀಗ ಭಾರತದ ನೂತನ ಭಾರತದ ಕಂಟ್ರೋಲರ್ ಆಡಿಟರ್ ಜನರಲ್ (ಸಿಎಜಿ )ಆಗಿ ನೇಮಕಗೊಂಡಿದ್ದಾರೆ.ಕೇಂದ್ರ ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಸಚಿವಾಲಯ ಮುರ್ಮು ಅವರ ನೇಮಕಾತಿಯ  ಆದೇಶವನ್ನು ಅಧೀಕೃತಗೊಳಿಸಿದೆ.

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಗಿರೀಶ್ ಚಂದ್ರ ಮುರ್ಮು ಅವರಿಗೆ ಸಿಎಜಿ ಹುದ್ದೆ ಸಿಕ್ಕಿರುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.ಅದು ನಿರೀಕ್ಷಿತ.ಅವರು ಸರ್ಕಾರಿ ಅಧಿಕಾರಿಯಾಗಿ ಸಲ್ಲಿಸಿದ ಸೇವೆ ಹಾಗೂ ಜೇಷ್ಠತೆಯನ್ನು ಗಮನಿಸಿಯೇ ಅವರನ್ನು  ಸಿಎಜಿ ಆಗಿ ನೇಮಕಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ಅಂದ್ಹಾಗೆ  ನವದೆಹಲಿಯ ರಾಜಭವನದಲ್ಲಿ ಆಗಸ್ಟ್ 08ರಂದು ಸಿಎಜಿ ಆಗಿ ಗಿರೀಶ್ ಚಂದ್ರ ಮುರ್ಮು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಬುಧವಾರವಷ್ಟೇ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಗಿರೀಶ್ ಚಂದ್ರ ಮುರ್ಮು ರಾಜೀನಾಮೆ ಸಲ್ಲಿಸಿದ್ದರು. ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದರು. ಇದರ ಬೆನ್ನಲ್ಲೇ ಜಮ್ಮು ಕಾಶ್ಮೀರಕ್ಕೆ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರನ್ನು ನೇಮಕ ಮಾಡಿತ್ತು ಸರ್ಕಾರ.

ಅಂದ್ಹಾಗೆ  ಭಾರತದ ಕಂಟ್ರೋಲರ್ ಆಡಿಟರ್ ಜನರಲ್ (ಸಿಎಜಿ) ಹುದ್ದೆಗೆ ಗಿರೀಶ್ ಚಂದ್ರ ಮುರ್ಮು ಅವರ ಹೆಸರು ಮೊದಲಿಂದಲೂ ಮುಂಚೂಣಿಯಲ್ಲಿತ್ತು. 1985 ರ ಬ್ಯಾಚ್ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (ಐಎಎಸ್)ನ  ಗುಜರಾತ್ ಕೇಡರ್ ಅಧಿಕಾರಿಯಾಗಿದ್ದ ಮುರ್ಮು,, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.ಪ್ರಧಾನಿಯಾದ ಮೇಲೆ ಮೋದಿ ಅವರೊಂದಿಗೆ ನಿಕಟ ಸಂಪರ್ಕವೂ ಇತ್ತು.ಇದೇ ಕಾರಣಕ್ಕೆ ಅವರನ್ನು ಜಮ್ಮುಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ನಿಯೋಜಿಸಲಾಗಿದೆ ಎನ್ನುವ ಮಾತುಗಳೂ ಕೇಳಿಬಂದಿದ್ವು.  ವರ್ಷ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ರ ಅಡಿಯಲ್ಲಿ ಹಿಂದಿನ ರಾಜ್ಯದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಅವರನ್ನು 2019 ರ ಅಕ್ಟೋಬರ್ 31 ರಂದು ಜಮ್ಮು ಮತ್ತು ಕಾಶ್ಮೀರದ ಮೊದಲ ಲೆಫ್ಟಿನೆಂಟ್-ಗವರ್ನರ್ ಆಗಿ ನೇಮಿಸಲಾಯಿತು.

ಮುರ್ಮು ಅವರು ನೂತನ ಸಿಎಜಿಯಾಗಿ ಆಯ್ಕೆಯಾಗಿರುವುದರ ಹಿಂದಿನ ಉದ್ದೇಶವನ್ನು ವಿಪಕ್ಷಗಳು ಪ್ರತಿಭಟನೆಯ ಅಸ್ತ್ರವನ್ನಾಗಿಸಿಕೊಂಡ್ರೂ ಆಶ್ಚರ್ಯವಿಲ್ಲ.ಏಕೆಂದ್ರೆ ಮುರ್ಮು ಅವರ ನೇಮಕಾತಿಯ ಆದೇಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳು ಮುರ್ಮು ಅವರ ನೇಮಕಾತಿಯ ಹಿಂದೆ ಎಲ್ಲಾ ಹಗರಣ-ಭ್ರಷ್ಟಾಚಾರ ಮುಚ್ಚಿಕೊಳ್ಳುವ ಹುನ್ನಾರ ಇದೆ ಎಂದು ಆಪಾದಿಸಲಾರಂಭಿಸಿದೆ.

Spread the love
Leave A Reply

Your email address will not be published.

Flash News