“ಪೈಲೆಟ್” ಕ್ಷಣದ ಮೈಮರೆವಿಗೆ ಕುಂತಲ್ಲೇ ಶವವಾದ ಪ್ರಯಾಣಿಕರು-ಅವಘಡದ ತೀವ್ರತೆಗೆ ವಿಮಾನವೇ ಹೋಳು-ಸ್ಮಶಾಣವಾದ ಕರಿಪುರ್ ಏರ್ ಪೋರ್ಟ್..

0
ಪ್ರಯಾಣಿಕರನ್ನು ಹೊತ್ತು ದುಬೈನಿಂದ ಕೋಝಿಕೋಡ್ ನತ್ತ ಆಗಮಿಸುತ್ತಿದ್ದ ವಿಮಾನ..
ಪ್ರಯಾಣಿಕರನ್ನು ಹೊತ್ತು ದುಬೈನಿಂದ ಕೋಝಿಕೋಡ್ ನತ್ತ ಆಗಮಿಸುತ್ತಿದ್ದ ಇದೇ ವಿಮಾನ ಅಪಘಾತಕ್ಕೀಡಾಗಿದೆ(ಸಂಗ್ರಹ ಚಿತ್ರ)
ಅಪಫಾತದ ತೀವ್ರತೆಗೆ ಎರಡು ಹೋಳಾದ ವಿಮಾನ ಹಾಗೂ ಅವಶೇಷಗಳು..
ಅಪಫಾತದ ತೀವ್ರತೆಗೆ ಎರಡು ಹೋಳಾದ ವಿಮಾನ ಹಾಗೂ ಅವಶೇಷಗಳು..

ಕೇರಳಾ(ಕ್ಯಾಲಿಕಟ್): ಒಂದ್ ಕ್ಷಣ ಮೈಮರುತ್ರೆ ಏನೆಲ್ಲಾ ಆಗುತ್ತೆನ್ನೋದಕ್ಕೆ ದುರಂತ ಉದಾಹರಣೆ ಕೇರಳಾದ ಕ್ಯಾಲಿಕಟ್ ನಲ್ಲಿ ನಡೆದೋಗಿದೆ.ಇನ್ನೇನು ಸುರಕ್ಷಿತವಾಗಿ ಲ್ಯಾಂಡ್ ಆಗಿ ತಮ್ಮ ಗಮ್ಯ ಸೇರುವ ಧಾವಂತದಲ್ಲಿ ಒಂದಷ್ಟು ಪ್ರಯಾಣಿಕರು ನೇರವಾಗಿ ಯಮನಪಾದ ಸೇರಿದ್ದಾರೆ.ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ ಲ್ಯಾಂಡ್ ಆಗುವ ವೇಳೆ ರನ್ ವೇ ನಲ್ಲಿ ಲಯ ತಪ್ಪಿದೆ.ಪರಿಣಾಮ ನೋಡ ನೋಡುತ್ತಿದ್ದಂತೆ ವಿಮಾನ ಭಾಗಶಃ ಹತ್ತಿ ಉರಿದಿದೆ.ದುರಂತದ ತೀವ್ರತೆಗೆ ಸ್ಥಳದಲ್ಲೇ 14 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆಯನ್ನು ವೈದ್ಯರು ಹೇಳಿದ್ದಾರೆಂದು ನ್ಯೂಸ್ ಏಜೆನ್ಸಿಗಳು ವರದಿ ಮಾಡಿವೆ.

ದುಬೈನಿಂದ 195 ಪ್ರಯಾಣಿಕರನ್ನು ಹೊತ್ತು ಕೇರಳಾದ ಕೋಜಿಕೊಡ್ ಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ  ಕರಿಪುರ್ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು.ಅದಾಗಲೇ ಸಂಜೆ 7.45 ರ ಸಮಯವಾಗಿತ್ತು.ಮಳೆ ಬೇರೆ ಜೋರಾಗಿ ಬರುತ್ತಿತ್ತು.ಅನುಭವಿ  ಪೈಲೆಟ್ ದೀಪಕ್ ವಸಂತ್ ಗೆ ಮಳೆಯ ನಡುವೆ ರನ್ ವೇ ಸ್ಪಷ್ಟವಾಗಿ ಕಾಣಿಸಿಲ್ಲ.ಸ್ವಲ್ಪ ಗೊಂದಲದಲ್ಲೇ ಲ್ಯಾಂಡಿಂಗ್ ಮಾಡಲು ಮುಂದಾಗಿದ್ದಾರೆ.ಆಗ್ಲೇ ನೋಡಿ ಸಂಭವಿಸಿತು ಮಹಾ ದುರಂತ.ನೋಡ ನೋಡುತ್ತಿದ್ದಂತೆ ವಿಮಾನ ಪತನವಾಗಿದೆ.ಪೈಲೆಟ್ ಸೇರಿದಂತೆ 14 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದುಬೈನಿಂದ ಕೇರಳದ ಕೊಜಿಕೊಡ್ ಗೆ ಹೊರಟಿದ್ದ ಏರ್ ಇಂಡಿಯಾದ ವಿಮಾನವು ಶುಕ್ರವಾರ ಸಂಜೆ 7.45ರ ವೇಳೆಗೆ ಕೇರಳದ ಕರಿಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಈ ಅವಘಡದಲ್ಲಿ ವಿಮಾನವು ಎರಡು ಹೋಳಾಗಿದೆ.

ಘಟನಾ ಸ್ಥಳಕ್ಕೆ ತತ್ ಕ್ಷಣ ಆಗಮಿಸಿದ ವಿಮಾನಯಾನ ಇಲಾಖೆ ಅಧಿಕಾರಿಗಳು ರಕ್ಷಣಾ ಪಡೆಗಳನ್ನು ಕರೆಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.ವಿಮಾನದೊಳಗೆ ಗಾಯಗೊಂಡವರ ಗೋಳು ಮನಕಲಕುವಂತಿದ್ದರೆ,ಇವರೆಲ್ಲರ ಬರುವಿಕೆಗಾಗಿ ಕಾಯುತ್ತಿದ್ದ ಸಂಬಂಧಿಗಳ ಕೂಗಾಟ-ಕಿರುಚಾಟ ಮುಗಿಲು ಮುಟ್ಟುವಂತಿತ್ತು.

ಗಾಯಾಳುಗಳನ್ನು ಕ್ಯಾಲಿಕಟ್ ಅಸ್ಪತ್ರೆಗೆ ದಾಖಲಿಸಲಾಗಿದ್ದು,  ಸ್ಥಳಕ್ಕೆ ಆಗಮಿಸಿದ ಎನ್ ಡಿಆರ್ ಎಪ್ ತಂಡ   ರಕ್ಷಣಾ ಕಾರ್ಯಾದಲ್ಲಿ ತೊಡಗಿದೆ.ಜೊತೆಗೆ 24 ಕ್ಕೂ ಅಂಬುಲೆನ್ಸ್ ಗಳು ಗಾಯಾಳುಗಳನ್ನು ಅಸ್ಪತ್ರೆಗೆ  ಸಾಗಿಸಿವೆ. ನಾಗರೀಕ ವಿಮಾನಯಾನ ಸಚಿವಾಲಯ ಈ ಅಪಘಾತದ ತನಿಖೆಗೆ ಆದೇಶಿಸಿದೆ. ಇನ್ನು  ದುರ್ಘಟನೆಗೆ ರಾಷ್ಟ್ರಪತಿ ಕೊವಿಂದ್,ಪ್ರಧಾನಿ ನರೇಂದ್ರ ಮೋದಿ ದಿಗ್ಬ್ರಾಂತಿ ವ್ಯಕ್ತಪಡಿಸಿದ್ದಾರೆ.ದುರಂತದಲ್ಲಿ ಮಡಿದ ಕುಟುಂಬಗಳಿಗೆ ಪರಿಹಾರವನ್ನೂ ಘೋಷಿಸಲಾಗಿದೆ.

Spread the love
Leave A Reply

Your email address will not be published.

Flash News