ಜೀವದ ಗೆಳೆಯ ಶ್ರೀರಾಮುಲುಗೆ “ಕುಚುಕು” ಜನಾರ್ಧನರೆಡ್ಡಿಯ ಭಾವನಾತ್ಮಕ “ಹ್ಯಾಪಿ ಬರ್ತಡೇ” ಪತ್ರ..

0

ಬಳ್ಳಾರಿ/ಬೆಂಗಳೂರು: ಬಳ್ಳಾರಿಯ ಗಣಿಧಣಿ  ಗಾಲಿ ಜನಾರ್ಧನರೆಡ್ಡಿ ಹಾಗು ಶ್ರೀರಾಮುಲು ಸಂಬಂಧ.ಅವರ ನಡುವಿರುವ ಗಾಢ ಸ್ನೇಹ ಏನನ್ನೋದು ಎಲ್ಲರಿಗೂ ಗೊತ್ತಿರೋದೇ..ಎರಡು ದೇಹ ಒಂದೇ ಆತ್ಮದಂತೆ ಬದುಕುತ್ತಿರುವ ಪರಸ್ಪರರ ನಡುವೆ ಅದೆಂಥಾ ವಿಶ್ವಾಸ-ನಂಬಿಕೆ ಎಂದ್ರೆ ರೆಡ್ಡಿ ಹೇಳಿದ್ದನ್ನು ಶ್ರೀರಾಮಲು ಮಾಡ್ದೇ ಇರೊಲ್ಲ..ಹಾಗೆ ಶ್ರೀರಾಮುಲು ಹಾಕಿದ ಲಕ್ಷ್ಮಣ ರೇಖೆಯನ್ನು ಗಾಲಿ ಮಿರೊಲ್ಲ..ಇವತ್ತು ಆರೋಗ್ಯ ಸಚಿವ ಶ್ರೀರಾಮುಲುಗೆ ಹುಟ್ಟಿದ ಹಬ್ಬ..ತನ್ನ ಕುಚುಕುಗೆ ಜನಾರ್ಧನ ರೆಡ್ಡಿ ಕವನದ ಮೂಲಕ ಶುಭಾಷಯ ಕೋರಿದ್ದಾರೆ.ಅದು ಕನ್ನಡ ಫ್ಲಾಶ್ ನ್ಯೂಸ್ ಗೆ ದೊರೆತಿದೆ..ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ..ಓದಿ..ಖುಷಿ ಪಡಿ..

ಜೀವದ ಗೆಳೆಯನಿಗೆ ಜನ್ಮದಿನದ ಶುಭಾಶಯಗಳು.. ಜನ ನಾಯಕ, ಬಡವರ ಬಂಧು, ಆರೋಗ್ಯ ಸಚಿವ, ನನ್ನ ಪ್ರಾಣ ಸ್ನೇಹಿತ ಶ್ರೀರಾಮುಲು ಅವರಿಗೆ ಸಾಗರದಷ್ಟು ಆಳವಾಗಿರುವ
ನಮ್ಮ ಗಟ್ಟಿ ಗೆಳತನವನ್ನು ಚಿಕ್ಕ ಕವನದ ರೂಪದಲ್ಲಿ ಕಟ್ಟಿ ಹಾಕುವ ಮೂಲಕ ಹುಟ್ಟು ಹಬ್ಬದ ಶುಭ ಕೋರುತ್ತೇನೆ.

ಭೂತಾಯಿಯ ಮಡಿಲಲ್ಲಿ ಆಡಿ ಬೆಳೆದ ಸ್ನೇಹ ನಮ್ಮದು.
ಕನ್ನಡಮ್ಮನ ಮಣ್ಣಲ್ಲಿ ಹದವಾಗಿ ಬೆಳೆದ ಪವಿತ್ರ ಸ್ನೇಹ ನಮ್ಮದು.
ಬಡತನ ಸಿರಿತನವನ್ನು ಮೆಟ್ಟಿ ನಿಂತ ಸ್ನೇಹ ನಮ್ಮದು.
ರಕ್ತ ಸಂಬಂದವನ್ನು ಮೀರಿ ಬೆಳೆದ ಸ್ನೇಹ ನಮ್ಮದು.
ಜಾತಿ, ಮತ, ಭೇದವನ್ನು ಮೀರಿದ ಸ್ನೇಹ ನಮ್ಮದು.
ಸ್ವಾರ್ಥವನ್ನು ಹತ್ತಿರ ಸುಳಿಯಲು ಬಿಡದ, ನಿಸ್ವಾರ್ಥ ಸ್ನೇಹ ನಮ್ಮದು.

ಅವನು ಜೀವಕ್ಕೆ ಜೀವ ಕೊಡುವ ಗೆಳೆಯ
ಅಧಿಕಾರದ ದಾಹವಿಲ್ಲ, ಸಿರಿ ಸಂಪತ್ತಿನ ಚಿಂತೆ ಇಲ್ಲ.
ಇವೆಲ್ಲವನ್ನು ಮೀರಿದ್ದು, ನಮ್ಮ ಸ್ನೇಹ.
ಹೇಗೆ ವರ್ಣಿಸಲಿ ಈ ನನ್ನ ಸ್ನೇಹಿತನ ಸ್ನೇಹವನ್ನು
ಅಕ್ಷರಗಳಲ್ಲಿ ಹೇಗೆ ಕಟ್ಟಿಹಾಕಲಿ ಈ ನನ್ನ ಗೆಳೆಯನ ಗೆಳೆತನವನ್ನು.
ನನ್ನ ಕಷ್ಟ ಕಾಲದಲ್ಲಿ ಸ್ನೇಹವೆಂಬ ವಜ್ರದ ರಕ್ಷಾ ಕವಚ ನೀಡಿದವನು ನನ್ನ ಗೆಳೆಯ.
ಗೆಳೆತನದಲ್ಲಿ ಸ್ವಾರ್ಥ ಬಯಸದೆ ಸದಾ ನನ್ನ ಬೆನ್ನ ಹಿಂದೆ ನೆರಳಾಗಿ ನಿಂತವನು ನನ್ನ ಗೆಳೆಯ.
ನಮ್ಮ ನಿಸ್ವಾರ್ಥ, ನಿಷ್ಕಲ್ಮಶ, ನಿಷ್ಕಳಂಕ ಸ್ನೇಹಕ್ಕೆ ಸಾಕ್ಷಿಯಾದವನು ನನ್ನ ಗೆಳೆಯ.

ಬಡವರ ಬಂಧು ನೀನು.
ಬಡವ, ಬಲ್ಲಿದರ ಆದರ್ಶ ನಾಯಕ ನೀನು.
ಕಷ್ಟದಲ್ಲಿರುವ ಜನರ ರಕ್ಷಕ ನೀನು.
ಜನ ನಾಯಕನಾಗಿ ಜನರ ಮನದಾಳದಲ್ಲಿ ಬೇರೂರಿದ ನಾಯಕ ನೀನು.
ಆಕಾಶದಲ್ಲಿನ ಸಹಸ್ರಾರು ತಾರೆಗಳಲ್ಲಿನ ದೃವ ತಾರೆ ನೀನು.
ಇವನೇ ನನ್ನ ಪ್ರಾಣ ಸ್ನೇಹಿತ ಶ್ರೀರಾಮುಲು..

ಆ ಭಗವಂತನು ನಿನಗೆ ಆರೋಗ್ಯ, ದೀರ್ಘಾಯುಷ್ಯ ನೀಡಲಿ, ರಾಜಕೀಯ ಜೀವನದಲ್ಲಿ ಮೇಲೆತ್ತರಕ್ಕೆ ಬೆಳೆದು, ಅತ್ಯುನ್ನತ ಸ್ಥಾನ ದೊರಕಲಿ, ಇಂತಹ ಅನೇಕ ಹುಟ್ಟು ಹಬ್ಬಗಳನ್ನು ಜೊತೆ ಜೊತೆಗೆ ಆಚರಿಸಿಕೊಳ್ಳುವ ಭಾಗ್ಯ ನಮ್ಮದಾಗಲಿ, ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ ಎಂದು ಆಶಿಸುತ್ತಾ..
ಇದೋ ನಿನಗೆ ಮತ್ತೊಮ್ಮೆ ಮನಪೂರ್ವಕವಾಗಿ ನಿನ್ನ ಪ್ರಾಣ
ಸ್ನೇಹಿತ ಕೋರುತ್ತಿರುವ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಗೆಳೆಯ..

ನಿನ್ನ ನಲ್ಮೆಯ ಜೀವದ ಗೆಳೆಯ
-ಗಾಲಿ ಜನಾರ್ಧನ್ ರೆಡ್ಡಿ. 

Spread the love
Leave A Reply

Your email address will not be published.

Flash News