“ಡ್ಯೂಟಿ”ಗಾಗಿ ಬಿಎಂಟಿಸಿ ಡಿಪೋಗಳ ಮುಂದೆ “ಚಪ್ಪಲಿ” ಕ್ಯೂ..

0

ಬೆಂಗಳೂರು:..ಎಲ್ಲಿಗೆ ಬಂತ್ ನೋಡಿ.ಬಿಎಂಟಿಸಿ ಸ್ಥಿತಿ..

ಸಿನೆಮಾ ಟಿಕೆಟ್ ಗಾಗೋ..ಪಡಿತರಕ್ಕೋ…ಹಾಲಿಗೋ ಅಥವಾ ಜೀವ ನಾವಶ್ಯಕ ವಸ್ತುಗಳಿಗೋ ಜನ ಕ್ಯೂ ನಿಲ್ಲೋದನ್ನು ನೋಡಿರ್ತಿರಿ. ಕೊ ರೊನಾ ಟೈಮಲ್ಲಿ ಪರಿಹಾರ ಸಾಮಾಗ್ರಿ ಪಡೆಯೊಕ್ಕೆ ಚಪ್ಪಲಿಗ ಳನ್ನಿಟ್ಟು ಕ್ಯೂ ನಿಂತಿದ್ದನ್ನು ನೋಡಿದ್ದೇವೆ..ಆದ್ರೆ ಅಟ್ ದಿ ಫಸ್ಸ್ ಟೈಮ್ ಇನ್ ದಿ ಹಿಸ್ಟರಿ ಆಫ್ ಬಿಎಂಟಿಟಿಸಿ ನೌಕರರು ದಿನದ ಡ್ಯೂಟಿ ಪಡೆಯೊಕ್ಕೆ ಚಪ್ಪಲಿಗಳನ್ನಿಟ್ಟು ಕಾಯುವಂಥ ಸ್ತಿತಿ ನಿರ್ಮಾಣವಾಗಿದೆ. ನಂಬೊಕ್ಕಾ ಗಲ್ಲ ಅಲ್ವಾ..ಇಲ್ಲಿದೆ ನೋಡಿ ಅದರ ಎಕ್ಸ್ ಕ್ಲ್ಯೂಸಿವ್ ರಿಪೋರ್ಟ್

ಸಮೂಹ ಸಾರಿಗೆ ಎಂದಾಕ್ಷಣ ನೆನಪಾಗುತ್ತಿದ್ದುದು ಬಿಎಂಟಿಸಿ.ಆದ್ರೆ ಕೊರೊನಾ ಅಪ್ಪಳಿಸಿದ ಮೇಲಂತೂ ಬಸ್ ಗಳತ್ತ ಅರ್ಧಕ್ಕರ್ಧ ಪ್ರಯಾಣಿಕರು ಆಸಕ್ತಿಯನ್ನೇ ಕಳಕೊಂಡಿದ್ದಾರೆ.ನಿಗಮ ಏನೇ ಸುರಕ್ಷತಾ ಕ್ರಮ ಕೈಗೊಂಡ್ರೂ ಪ್ರಯಾಣಿಕರಲ್ಲಿ ಕೊರೊನಾ ಭಯ ದೂರವಾಗಿಲ್ಲ.ಪ್ರಯಾಣಿಕರ ಕೊರತೆ ದಿನೇದಿನೇ ಬಾಧಿಸುತ್ತಿರುವುದರಿಂದಾಗಿ ಆಡಳಿತ ಮಂಡಳಿ ಬಸ್ ಗಳ ಸಂಖ್ಯೆಯನ್ನು ಕಡ್ಮೆ ಮಾಡಿದೆ.ಸಹಜವಾಗೇ ಇದರಿಂದ ಡ್ರೈವರ್ಸ್-ಕಂಡಕ್ಟರ್ಸ್ ಗಳಿಗೆ ಮೊದಲಿದ್ದ ಡ್ಯೂಟಿ ಸಿಗುತ್ತಿಲ್ಲ.

ಆರಂಭದಲ್ಲಿ ಹೇಗೋ ನಡೆದೋಗುತ್ತೆ,ಮನೆಗಳಲ್ಲಿ ಟೈಂ ಪಾಸ್ ಮಾಡುತ್ತಿದ್ದ,ಊರುಗಳಿಗೆ ತೆರಳಿ ಉಪಕಸುಬುಗಳನ್ನು ಮಾಡ್ತಾ ದುಡಿಮೆ ಮಾಡುತ್ತಿದ್ದ ಅದೆಷ್ಟೋ ಡ್ರೈವರ್ಸ್-ಕಂಡಕ್ಟರ್ಸ್ ಗಳು ಈ ನೆವ-ನಿರ್ಲಕ್ಷ್ಯಗಳು ತಮ್ಮ ಉದ್ಯೋಗಕ್ಕೇನೆ ಕುತ್ತನ್ನಂಟು ಮಾಡಬಹುದು ಎಂದು ಭಾವಿಸಿ ಡ್ಯೂಟಿಗೆ ತೆರಳೊಕ್ಕೆ ಶುರುಮಾಡಿದ್ದಾರೆ.ಆದ್ರೆ ಇವರೆಲ್ಲಾ ಹೆದರಿಕೊಂಡು ಡ್ಯೂಟಿಗೆ ಬಂದ್ರೇನು..ಹಾಲಿ ಕೆಲಸ ಮಾಡುತ್ತಿರುವ ನೌಕರರನ್ನು ಮನೆಗೆ ಕಳುಹಿಸಲಾಗುತ್ತಾ..ಹಾಗಾಗಿ ಮುಂಚೆ ಯಾರ್ ಡಿಪೋಗೆ ಬರ್ತಾರೋ ಅವರಿಗೆ ಫಸ್ಟ್ ಡ್ಯೂಟಿ ಎನ್ನುವ ಹೊಸ ನಿಯಮ ಜಾರಿಗೆ ಬಂದಿದೆ.

ಫಸ್ಟ್ ಯಾರೋ..ಅವರಿಗೆ ಮೊದಲ ಡ್ಯೂಟಿ ಎನ್ನುವ ನಿಯಮ ಅಳವಡಿಕೆಯಾದ ದಿನಗಳಿಂದ್ಲೂ ನೌಕರರು ಪೈಪೋಟಿಗೆ ಬಿದ್ದು ಕೆಲಸಕ್ಕೆ ಬರೊಕ್ಕೆ ಶುರುಮಾಡಿದ್ದಾರೆ.6 ಕ್ಕೆ ಡ್ಯೂಟಿ ಇದ್ದರೆ 5 ಗಂಟೆಗೆ ಬಂದು ಡಿಪೋಗಳ ಹೊರಗೆ ಕಾಯುವಂತಾಗಿದೆ.ಪ್ರತಿ ಡಿಪೋದಿಂದ ಕೆಲವೇ ಕೆಲವು ಬಸ್ ಗಳನ್ನು ಆಪರೇಟರ್ ಮಾಡ್ತಿರುವುದರಿಂದ ಡ್ಯೂಟಿಗೆ ಗಲಾಟೆಗಳೇ ನಡೆದೋಗ್ತಿವೆ.ಅದು ಎಲ್ಲಿಯ ಮಟ್ಟಕ್ಕೆ ಎಂದರೆ ಡಿಪೋ ಮ್ಯಾನೇಜರ್ಸ್ ಗಳಿಗೆ ಅವರಿವರಿಂದ ಹೇಳಿಸಿ ಶಿಫಾರಸ್ಸು ಮಾಡಿಸುವ ಪ್ರಯತ್ನವೂ ನಡೆಯುತ್ತಿದೆ.

ತಿಂಗಳು ಪೂರ್ತಿ ಮಾಡಿ ಸಂಬಳ ಕೊಡ್ಲಿಕ್ಕೆ ಬೇಕಿರುವಷ್ಟು ದಿನಗಳವರೆಗಾದ್ರೂ ಡ್ಯೂಟಿಯನ್ನು ಮಾಡಿದ್ರೆ ಸಾಕೆನ್ನುವ ನಿರ್ದಾರಕ್ಕೆ ಬಂದಿರುವ ಚಾಲಕರು ಡ್ಯೂಟಿ ಪಡೆಯೊಕ್ಕೆ ಬೆಳ್ಳಂಬೆಳಗ್ಗೆ 5 ಗಂಟೆಗೆ ಬಂದು,ತಾವ್ ನಿಂತು ಕಾಯೊಕ್ಕಾಗೊಲ್ಲ ಎಂದು ಚಪ್ಪಲಿಗಳನ್ನಿಟ್ಟು ದೂರದಲ್ಲಿ ಡಿಪೋ ಓಪನ್ ಆಗೋದನ್ನೇ ಕಾಯುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ.ಇದಕ್ಕೆ ಪೂರಕ ಎನ್ನುವಂತೆ ಡಿಪೋ ನಂಬರ್ 9 ರಲ್ಲಿ ಚಾಲಕರು-ನಿರ್ವಾಹಕರು ಡಿಪೋ ಮುಂದೆ ಚಪ್ಪಲಿಗಳನ್ನು ಕ್ಯೂನಲ್ಲಿ ಇಟ್ಟು ಕಾಯುತ್ತಿರುವ ದೃಶ್ಯಗಳು ಜಯಕಿರಣಕ್ಕೆ ಲಭಿಸಿದೆ.

ಇಂತದ್ದೇ ಸನ್ನಿವೇಶಕ್ಕೆ ಸದಾ ಬಾಯಿ ಬಿಟ್ಟುಕೊಂಡು ಕಾಯುವ ಕೆಲವು ಡಿಪೋ ಮ್ಯಾನೇಜರ್ಸ್ ನೌಕರರ ಪೈಪೋಟಿ-ಸ್ಪರ್ಧೆಯನ್ನೇ ಹಣ ಮಾಡಿಕೊಳ್ಳೊಕ್ಕೆ ದಾರಿ ಮಾಡಿಕೊಂಡಿದ್ದಾರೆ.ನೌಕರರಿಗೆ ಅತ್ಯಗತ್ಯವಿರುವ ಡ್ಯೂಟಿಯನ್ನೇ ನೆವ ಮಾಡಿಕೊಂಡು ಅವರಿಂದ ಹಣ ವಸೂಲಿ ಮಾಡಲಾರಂಭಿಸಿದ್ದಾರೆನ್ನುವ ಮಾಹಿತಿಗಳಿವೆ.ವಾರದಲ್ಲಿ ಇಷ್ಟ್ ದಿನ ಡ್ಯೂಟಿ ನೀಡ್ಬೇಕಾದ್ರೆ ಇಂತಿಷ್ಟು ಹಣ ಕೊಡ್ಬೇಕೆನ್ನುವ ಅನಧೀಕೃತ ಫರ್ಮಾನ್ ನ್ನು ಡಿಪೋ ಮ್ಯಾನೇಜರ್ಸ್ ಹೊರಡಿಸಿದ್ದಾರೆನ್ನುವ ಆರೋಪ ಸಿಬ್ಬಂದಿಯಿಂದ್ಲೇ ಕೇಳಿಬಂದಿದೆ.

ಅದೇನೇ ಇರಲಿ,ಡ್ಯೂಟಿ ಪಡೆಯೊಕ್ಕೆ ಬಿಎಂಟಿಸಿ ಡ್ರೈವರ್ಸ್-ಕಂಡಕ್ಟರ್ಡ್ ಚಪ್ಪಲಿ ಕ್ಯೂ ನಲ್ಲಿಟ್ಟು ಕಾಯ್ಬೇಕಾದ ಸನ್ನಿವೇಶ ಸೃಷ್ಟಿಯಾಗಿರೋದು ಮಾತ್ರ ವಿಪರ್ಯಾಸಕರ.ಆದ್ರೆ ಈ ಪರಿಸ್ತಿತಿಯನ್ನು ಹಣ ಮಾಡಿಕೊಳ್ಳೊಕ್ಕೆ ಕೆಲ ಡಿಪೋ ಮ್ಯಾನೇಜರ್ಸ್ ಬಳಸಿಕೊಳ್ಳುತ್ತಿರುವುದಕ್ಕೆ ಬಿಎಂಟಿಸಿ ಎಂಡಿ ಶಿಖಾ ಕಡಿವಾಣ ಹಾಕಬೇಕಿದೆ.ಇಲ್ಲದಿದ್ದಲ್ಲಿ ಸಮಾಜಕ್ಕೆ  ಒಂದು ಕೆಟ್ಟ ಸಂದೇಶ ರವಾನೆಯಾದಂತಾಗುತ್ತೆ.

“ಡ್ಯೂಟಿ”ಗಾಗಿ ಬಿಎಂಟಿಸಿ ಡಿಪೋಗಳ ಮುಂದೆ “ಚಪ್ಪಲಿ” ಕ್ಯೂ..

Spread the love
Leave A Reply

Your email address will not be published.

Flash News