ಕೊರೊನಾ ಹೆಸ್ರಲ್ಲಿ” ಹೀಗೂ ಒಂದು ದಂಧೆ”..!! ಹಣ ಲೂಟಿಗಂತನೇ ಸಿದ್ಧವಾಗ್ತಿವೆಯಾ “+ve” ರಿಪೋರ್ಟ್… ?? ಬಿಬಿಎಂಪಿ ಕೆಲ ಭ್ರಷ್ಟ ವೈದ್ಯರೇ ಇದರ ಕಿಂಗ್ ಪಿನ್..!!

0

ಬೆಂಗಳೂರು:ಕೊರೊನಾ ನಿಯಂತ್ರಣಕ್ಕೆ ಹಗಲಿರುಗಳು ಶ್ರಮಿಸುತ್ತಿರುವ..ಏನೇ ಅಕ್ರಮ ಕಂಡ್ ಬಂದ್ರೂ ಅದಕ್ಕೆ ಮುಲಾಜಿಲ್ಲದೆ ಬ್ರೇಕ್ ಹಾಕುವಂಥ ಕೆಲಸ ಮಾಡ್ತಿರುವ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಎಚ್ಚೆತ್ತುಕೊಳ್ಳಲೇಬೇಕಾದ ವಿಷಯವಿದು..ಅಂತದ್ದೊಂದು ಮಹಾ ಸ್ಪೋಟಕ…ಅಘಾತಕಾರಿ ಸುದ್ದಿಯೊಂದನ್ನು ಹೊತ್ತು ತಂದಿದೆ ಕನ್ನಡ ಫ್ಲಾಶ್ ನ್ಯೂಸ್..

ಈ ಸುದ್ದಿಯನ್ನು ಕೇಳಿ ಖುದ್ದು ಮಂಜುನಾಥ್ ಪ್ರಸಾದ್ ಬೆಚ್ಚಿಬಿದ್ದರೂ ಆಶ್ಚರ್ಯವಿಲ್ಲ..ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರೆಂದು ನಾವೇನ್ ಟ್ರೀಟ್ ಮಾಡ್ತೇವೋ..ಕೊರೊನಾ ಸಮಯದಲ್ಲದಂತೂ ವಾರಿಯರ್ಸ್ ಅಂಥ ಕರೆಯುತ್ತೇವೋ..ಅಂಥವ್ರಲ್ಲಿ ಕೆಲವರು ಹಣಕ್ಕಾಗಿ ಹೊಸದೊಂದು ದಂಧೆಯನ್ನೇ ಶುರುವಿಟ್ಟುಕೊಂಡಿರುವ ಮಾಹಿತಿ ಕನ್ನಡ ಫ್ಲಾಶ್ ನ್ಯೂಸ್ ಗೆ ದೊರೆತಿದೆ.ಈ ದಂಧೆ-ಮಾಫಿಯಾದಾಳಕ್ಕೆ ಹೋದ್ರೆ ಬಿಬಿಎಂಪಿ ಆರೋಗ್ಯ ಇಲಾಖೆಯಲ್ಲಿನ ಅಕ್ರಮದ ಹೂರಣ..ಕಳ್ಳಕಾಕರ ಗುಂಪಿನ ಕರಾಳ ಮುಖ ಅನಾವರಣವಾಗೋದ್ರಲ್ಲಿ ಡೌಟೇ ಇಲ್ಲ..

ಯೆಸ್..ಕೊರೊನಾ ರಿಸಲ್ಟ್ ನೆವದಲ್ಲಿ  ಬಿಬಿಎಂಪಿಯಲ್ಲೊಂದು ಹೊಸ  ದಂಧೆ ಶುರುವಾಗಿದೆಯಾ.? ಕೊರೊನಾ ಇಲ್ಲದವರಿಗೂ ಕೊರೊನಾ ಎಂದು ತೋರಿಸಿ ಪಾಸಿಟಿವ್ ರಿಸಲ್ಟ್ ವಿಷಯದಲ್ಲಿ ಲಕ್ಷಾಂತರ ಕೊಳ್ಳೆ ಹೊಡೆಯುವ ದುಷ್ಟಕೂಟವೊಂದು ಬಿಬಿಎಂಪಿ ಕ್ಯಾಂಸಪ್ ನಲ್ಲಿ ಆಕ್ಟೀವ್ ಆಗಿದೆಯಾ..ಕೊರೊನಾ ಸ್ವಾಬ್ ಟೆಸ್ಟ್  ಫಲಿತಾಂಶದಲ್ಲೂ ಗೋಲ್ಮಾಲ್ ನಡೆಸಲಾಗುತ್ತಿದೆಯೇ?..  ಬಿಬಿಎಂಪಿ ಡಾಕ್ಟರ್ಸ್ ಹಾಗೂ ವೈದ್ಗ ಸಿಬ್ಬಂದಿ ನಡೆಸುತ್ತಿರುವ ಮಹಾನ್ ಲೂಟಿ ಹಾಗೂ  ಕುತಂತ್ರದ ಸ್ಪೋಟಕ ಸ್ಟೋರಿಯನ್ನು ಹೊತ್ತು ತಂದಿದೆ ಕನ್ನಡ ಫ್ಲಾಶ್ ನ್ಯೂಸ್.

ಕೊರೊನಾ ವಿಷಯದಲ್ಲಿ  ಇಂತದ್ದೊಂದು ದಂಧೆ ನಡೆಯುತ್ತಿರಬಹುದೆನ್ನುವ  ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್ ಇನ್ವೆಸ್ಟಿಗೇಷನ್ ಟೀಮ್ ಗೆ ಮೊದಲಿಂದ್ಲೂ  ಒಂದಷ್ಟುಅನುಮಾನಗಳಿದ್ದವು.ಸಾಕಷ್ಟು ಜನ ನಮ್ಮೋರಿಗೆ ನೆಗೆಟಿವ್ ಇದ್ರೂ ಪಾಸಿಟಿವ್ ರಿಸಲ್ಟ್ ಕೊಟ್ಟಿದ್ದಾರೆ..ಆಸ್ಪತ್ರೆಯವ್ರು ಪಾಸಿಟಿವ್ ಎಂದು ರಿಸಲ್ಟ್ ಕೊಟ್ಟ ಮೇಲೂ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿದೆ ಸಾರ್…ಏನೋ ಗೋಲ್ಮಾಲ್ ನಡೆಯುತ್ತಿದೆ ಸರ್…ಪ್ಲೀಸ್ ಕ್ರಾಸ್ ಚೆಕ್ ಮಾಡಿ ನ್ಯಾಯ ದೊರಕಿಸಿಕೊಡಿ ಎಂದು ಅನೇಕರು ರಿಕ್ವೆಸ್ಟ್ ಮಾಡಿಕೊಂಡಿದ್ದುಂಟು.ಇದನ್ನೆಲ್ಲಾ ಇಟ್ಕೊಂಡು ನಡೆಸಲಾದ ಅಧ್ಯಯನದ ವೇಳೆ ಸಿಕ್ಕ ಉದಾಹರಣೆಗಳು ಅಕ್ರಮ-ದಂಧೆ ನಡೆಯುತ್ತಿರುವ ಸತ್ಯವನ್ನು ಸಾರಿ ಹೇಳುವಂತಿದ್ವು. ಆ ಕಳ್ಳಾಟದ ದಂಧೆಯನ್ನು  ಇಂಚಿಂಚೂ ಕನ್ನಡ ಫ್ಲಾಶ್ ನ್ಯೂಸ್ ಅನಾವರಣ ಮಾಡ್ತಿದೆ.

ಕೊರೊನಾಮುಕ್ತರಾಗಿ ವಾಪಸ್ಸಾದ ದಿನವೇ ಮತ್ತೊಮ್ಮೆ ಪಾಸಿಟಿವ್ ಬಂದಿದೆ ಎಂದು ಬಿಬಿಎಂಪಿ ಹೇಳಿದ ಮಾತಿಗೆ ಕಂಗಾಲಾದ ನಿವೃತ್ತ SI ಪರಶಿವಮೂರ್ತಿ
ಕೊರೊನಾಮುಕ್ತರಾಗಿ ವಾಪಸ್ಸಾದ ದಿನವೇ ಮತ್ತೊಮ್ಮೆ ಪಾಸಿಟಿವ್ ಬಂದಿದೆ ಎಂದು ಬಿಬಿಎಂಪಿ ಹೇಳಿದ ಮಾತಿಗೆ ಕಂಗಾಲಾದ ನಿವೃತ್ತ SI ಪರಶಿವಮೂರ್ತಿ

ಕೊರೊನಾ ಸೋಂಕಿನ ವಿಷಯದಲ್ಲಿನ ದಂಧೆಯ ಲೇಟೆಸ್ಟ್ ಸ್ವರೂಪವಾಗಿ ಅದರ ಕರಾಳ ಮುಖ ಅನಾವರಣಗೊಳ್ಳುತ್ತಿದೆ. .ಕೊರೊನಾ ಸೋಂಕೆನ್ನುವುದು ಜನಸಾಮಾನ್ಯರಿಗೆ ಆತಂಕದ ವಿಷಯವಾಗಿದ್ರೆ, ಬಿಬಿಎಂಪಿಯಲ್ಲಿರುವ ಕೆಲವು ಭ್ರಷ್ಟ ವೈದ್ಯರಿಗೆಹಾಗೂ ಅವರೊಂದಿಗೆ ಕೈ ಜೋಡಿಸಿರುವ ನೀಚ ಮನಸ್ತಿತಿಯವರಿಗೆ ಹಣ ಮಾಡಿಕೊಳ್ಳೊಕ್ಕೆ ಇರುವ  ಒಂದ್ ಶಾರ್ಟ್ ಕಟ್.ಪ್ರತಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ-ಆರೈಕೆಗೆಂದೇ ಕೇಂದ್ರ ಹಾಗು ರಾಜ್ಯ ಸರ್ಕಾರದ ಗೈಡ್ ಲೈನ್ಸ್ ನಂತೆ ಇಂತಿಷ್ಟು ಎಂದುನಿಗಧಿ ಮಾಡಲಾಗಿದೆ.ಸೋಂಕಿತ ಎಂದು ದೃಢಪಟ್ಟರೆ ಸಾಕು,ಅವರ ಹೆಸರು ಬಿಬಿಎಂಪಿ ಆರೋಗ್ಯ ಇಲಾಖೆ ಕೊರೊನಾ ಸೋಂಕಿತರ ಹೆಸರು-ವಿಳಾಸಕ್ಕೆಂದೇ ರೂಪಿಸಿರುವ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿಬಿಡುತ್ತೆ.ಸೋಂಕಿತ ಆಸ್ಪತ್ರೆ ಅಥವಾ ಆರೈಕೆ ಕೇಂದ್ರಕ್ಕೆ ದಾಖಲಾದ್ರೆ ಮಾತ್ರ ಆತನಿಗೆ ಚಿಕಿತ್ಸೆ.ಅಡ್ಮಿಟ್ ಆಗದಿದ್ದ ಪಕ್ಷದಲ್ಲಿ ಹಣಮಾತ್ರ ಯಾರಿಗೆ ಜಮೆ ಆಗ್ಬೇಕೋ..ಅದರ ಪಾಡಿಗೆ ಜಮೆ ಆಗುತ್ತಿರುತ್ತೆ..ಆದ್ರೆ ಅದು ಎಲ್ಲಿ ಜಮೆ ಆಗುತ್ತದೆ ಎಂದು ಮಾತ್ರಕೇಳ್ಬೇಡಿ..ಅದು ಬಿಬಿಎಂಪಿ ಆರೋಗ್ಯ ಇಲಾಖೆ ಮೆಂಟೇನ್ ಮಾಡ್ತಾ ಬಂದಿರುವ ಸೀಕ್ರೆಟ್.

ಕೊರೊನಾ ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆಯೋ..ಹೆಚ್ಚಾಗುತ್ತಿರುವಂತೆ ತೋರಿಸಲಾಗುತ್ತಿದೆಯೋ ಎನ್ನುವ ಅನುಮಾನವೂ ಇದೆ.ಅದರ ಮತ್ತೊಂದು ತನಿಖಾ ಸುದ್ದಿಯನ್ನು ಕನ್ನಡ ಫ್ಲಾಶ್ ನ್ಯೂಸ್ ಮತ್ತೊಮ್ಮೆ ಅನಾವರಣ ಮಾಡಲಿದೆ. ಇಂದಿನ ಸಂದರ್ಭದಲ್ಲಿ ಅದೆಷ್ಟ್ ಜನ ಆಸ್ಪತ್ರೆ-ಆರೈಕೆಕೇಂದ್ರಕ್ಕೆ ನೈಜವಾಗಿ ಸೇರುತ್ತಿದ್ದಾರೋ..ಅಡ್ಮಿಟ್ ಎಂದು ದಾಖಲೆಗಳಲ್ಲಷ್ಟೇ ತೋರಿಸಿ ಅದೆಷ್ಟ್ ಸೋಂಕಿತರ ಹೆಸರಿನಲ್ಲಿ ಹಣವನ್ನು ಲೂಟ್ ಮಾಡಲಾಗ್ತಿದೆಯೋ ಗೊತ್ತಾಗ್ತಿಲ್ಲ.ಆದ್ರೆ ನೆಗೆಟಿವ್ ಇದ್ದವರಿಗೂ ಪಾಸಿಟಿವ್ ಎಂದು ತೋರಿಸಿ ಅವರತಲೆಗೊಂದರಂತೆ ಹಣ ಲೂಟ್ ಮಾಡುತ್ತಿರುವ ಬಗ್ಗೆ ಅನುಮಾನಗಳಿವೆ.ಅದನ್ನು ಸಾರ್ವಜನಿಕರೇ ಬಹಿರಂಗಗೊಳಿಸಿದ್ದಾರೆ ಕೂಡ.

ಮು?ಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ
ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್

ವಿಜಯನಗರದ ವಾರ್ಡ್ 23ರ ಚೋಳರ ಪಾಳ್ಯದಲ್ಲಿ  ನಡೆದ ಘಟನೆಯನ್ನೇ ಹೇಳ್ಬಿಡ್ತೇವೆ ನೋಡಿ…  ಬಿಬಿಎಂಪಿ ಆರೋಗ್ಯಾಧಿಕಾರಿಗಳು ಜನರ ಸ್ವಾಬ್ ಟೆಸ್ಟ್ ಮಾಡಲಿಕ್ಕೆ ಈ ವಾರ್ಡ್ ಗೆ ಹೋಗಿದ್ದಾರೆ.  ಸಹಜವಾಗಿ ಬಂದು ಗಂಟಲು ದ್ರವ್ಯ ಪಡೆದು ಹೋಗಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ.ಆದ್ರೆ ಹಾಗೆ ಬಂದ ಆರೋಗ್ಯ ಸಿಬ್ಬಂದಿ ಪರಸ್ಪರ ಮಾತ್ನಾಡಿಕೊಂಡ ರೀತಿ..ವೈದ್ಯರೊಬ್ಬರು ತಮ್ಮ ಸಿಬ್ಬಂದಿಗೆ ಆದೇಶಿಸಿದ ರೀತಿಅಕ್ರಮದ ಘಾಟು ಹೊಡೆಯೊಕ್ಕೆ ಕಾರಣವಾಗಿದೆ.ಮೆಟಿರಿಯಲ್ಸ್ ಸಮೇತ ಸ್ವಾಬ್ ಟೆಸ್ಟ್ ಗೆ ಸಿಬ್ಬಂದಿ ಸಿದ್ಧವಾಗ್ತಿದ್ದಂತೆ ಇಡೀ ತಂಡವನ್ನು ಲೀಡ್ ಮಾಡುವ ವೈದ್ಯರುಸಿಬ್ಬಂದಿಗೆ ಯಾರ್ದೇ ಸ್ವಾಬ್ ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡ್ರೂ ಅವರ ರಿಸಲ್ಟೆಲ್ಲಾ ಪಾಸಿಟಿವ್ ಬರಲೇಬೇಕು..ಹಾಗೆನೋಡಿಕೊಳ್ಳಿ ಎಂದು ಸೂಕ್ಷ್ಮವಾಗಿ ತಿಳಿಸಿದ್ದಾರೆ.ಅಲ್ಲಿಯೇ ಇದ್ದು ಈ ಮಾತನ್ನು ಕೇಳಿಸಿಕೊಂಡ ಸ್ಥಳೀಯರು ಏನ್ಹೇಳಿದ್ರೆ.ಇನ್ನೊಮ್ಮೆ ಹೇಳಿ ಮೇಡಮ್ ಎಂದು ಒತ್ತಾಯಿಸಿದ್ದಾರೆ.ತಡಬಡಾಯಿಸಿದ ವೈದ್ಯರು ಹಾಗೂ ಸಿಬ್ಬಂದಿ ಏನೂ..ಏನೂಇಲ್ಲ ಬಿಡಿ ಎಂದಿದ್ದಾರೆ..ಹೆಚ್ಚು ಜನ ಜಮಾಯಿಸಿ ಈ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಅಲ್ಲಿಂದ ವೈದ್ಯರು ಹಾಗು ಸಿಬ್ಬಂದಿಕಾಲ್ಕಿತ್ತಿದ್ದಾರೆ.ಆಗಲೇ ಟೆಸ್ಟ್ ರಿಸಲ್ಟ್ ನಲ್ಲಿ ಏನೋ ಗೋಲ್ಮಾಲ್ ನಡೆಯುತ್ತಿದೆ ಎಂಬ ಗುಮಾನಿ ದಟ್ಟವಾಗಿದೆ.ಈ ಬಗ್ಗೆ ಫೋನ್ ಮಾಡಿದ್ರೆ ನಾಟ್ ರೀಚಬಲ್…ಸ್ವಿಚಾಫ್..

ನಾವ್ ಹೇಳ್ತಿರೋದು ಇದು ಒಂದು ಸ್ಯಾಂಪಲ್ ಅಷ್ಟೇ..ಇಂತದ್ದೇ ಮತ್ತೊಂದು ಘಟನೆ ಹೇಳ್ತೇವೆ ಕೇಳಿ.. ಕೊರೊನಾ ಪಾಸಿಟಿವ್ ನಿಂದಾಗಿ ಚಿಕಿತ್ಸೆ ಪಡೆದು ವಾಪಸ್ಸಾದ ನಿವೃತ್ತ ಎಸ್ ಐ ಪರಶಿವಮೂರ್ತಿ ಅವರ ವಿಷಯದಲ್ಲೂ ಇಂತದ್ದೇ ಪ್ರಮಾದ ನಡೆದೋಗಿದೆ.ಕೊರೊನಾ ಸೋಂಕಿನಿಂದ ಮುಕ್ತವಾಗಿ ಮನೆಗೆ ಬಂದು ಜೀವ ಉಳೀತಲ್ಲಾಎಂದು ಇನ್ನೇನು ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ಮತ್ತೆ ಬಿಬಿಎಂಪಿ ಸಿಬ್ಬಂದಿ ನಿಮಗೆ ಪಾಸಿಟಿವ್ ಬಂದಿದೆ..ಬಂದು ಆಸ್ಪತ್ರೆಗೆಅಡ್ಮಿಟ್ ಆಗಿ ಎಂದು ಸೂಚಿಸಿದ್ದಾರಂತೆ. ಇದರಿಂದ ನಾರ್ಮಲ್ ಆಗಿದ್ದ ಅವರ ಬಿಪಿ-ಶುಗರ್ ಅಬ್ನಾರ್ಮಲ್ ಆಗಿ ಕುಸಿದುಬಿದ್ದಿದ್ದಾರೆ.ಇದೆಲ್ಲದ್ರ ಹಿಂದೆ ದೊಡ್ಡ ಮಟ್ಟದ ದಂಧೆ ನಡೆಯುತ್ತಿರುವ ಬಗ್ಗೆ ಅವರು ಕೂಡ ಶಂಕೆ ವ್ಯಕ್ತಪಡಿಸಿದ್ದಾರೆ.

ಹಣದ ಆಸೆಗಾಗಿ ರಿಸಲ್ಟ್ ಕೊಡುವ ವಿಚಾರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ದೊಡ್ಡಮಟ್ಟದಲ್ಲಿ ಗೇಮ್ ಪ್ಲೇ ಮಾಡ್ತಿದ್ದಾರೆನ್ನುವ ಅನುಮಾನಗಳಿವೆ.ಜನರಿಗೆಪ್ರಾಣ ಸಂಕಟವಾದರೆ ಇವರಿಗೆ ಹಣ ಮಾಡುವ ಕೆಟ್ಟ ಖಯಾಲಿ.  ಈ  ಅಕ್ರಮದ ಮಾಹಿತಿ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ಅವರ ಗಮನಕ್ಕೆ ಬಂದಿದೆಯೋ..ಇಲ್ಲವೋ ಗೊತ್ತಿಲ್ಲ..ಗೊತ್ತಿರದೇ ಇರ್ಲಿಕ್ಕೆ ಸಾಧ್ಯವಿಲ್ಲ..ಒಂದ್ವೇಳೆ ಗೊತ್ತಿದ್ರೂ ಸುಮ್ಮನಿದ್ರೆ ಅದಕ್ಕಿಂತ ದೊಡ್ಡ ನಿರ್ಲಕ್ಷ್ಯ ಮತ್ತೊಂದಿಲ್ಲ..ಇನ್ನು ಕೊರೊನಾ ಮೂಲೋತ್ಪಾಟನೆಗೆಂದೇ ಕಮಿಷನರ್ ಆಗಿ ಬಂದ ಮಂಜುನಾಥ್ ಪ್ರಸಾದ್ ಈ ಬಗ್ಗೆ  ತನಿಖೆಗೆ ಆದೇಶಿಸ್ಬೇಕಿದೆ.ತನಿಖೆ ಯಾರದೇ ಹಸ್ತಕ್ಷೇಪ-ಪ್ರಭಾವವಿಲ್ಲದೆ ನಡುದ್ರೆ  ಮಾತ್ರ  ಕರಾಳದಂಧೆ ಹಾಗೂ ಅದರ ಹಿಂದಿರುವ ಘೋಮುಖ ವ್ಯಾಘ್ರಗಳ ಮುಖ ಅನಾವರಣವಾಗಲಿದೆ.ಬಿಬಿಎಂಪಿ ಮೊದ್ಲು ಮಾಡಬೇಕಿರುವುದು ಅದನ್ನೇ..

Spread the love
Leave A Reply

Your email address will not be published.

Flash News