ಇಂದು ಮಧ್ಯಾಹ್ನ SSLC ರಿಸಲ್ಟ್…ವಿದ್ಯಾರ್ಥಿ ಮಿತ್ರರೇ “ಗುಡ್ ಲಕ್…ಡೋಂಟ್ ವರಿ ಬಿ ಹ್ಯಾಪಿ”

0

ಬೆಂಗಳೂರು:  ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ತೀವ್ರ ಕಾತುರದಿಂದ ಕಾಯುತ್ತಿದ್ದ  ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಲಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾದ ಎಸ್.ಎಸ್ .ಎಲ್ ಸಿ ಪರೀಕ್ಷೆಯ ಫಲಿತಾಂಶ   ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಗುಂಪು ಗೂಡಬಾರದು ಎಂಬ ದೃಷ್ಟಿಯಿಂದ ವಿಶೇಷ ವ್ಯವಸ್ಥೆ
ರೂಪದಲ್ಲಿ ಈ ಬಾರಿ ವಿದ್ಯಾರ್ಥಿಗಳ ಮೊಬೈಲ್​ಗೆ ಎಸ್.ಎಂ.ಎಸ್. ಮೂಲಕ ಫಲಿತಾಂಶ ಬರುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಯ ಮೊಬೈಲ್ ಗೆ ಫಲಿತಾಂಶ  ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವೆಬ್​ಸೈಟ್​ನಲ್ಲೂ ಫಲಿತಾಂಶ ಪ್ರಕಟಿಸಲು ವ್ಯವಸ್ಥೆ ಮಾಡಲಾಗಿದೆ.

ಅಂದ್ಹಾಗೆ  ಕೊರೊನಾ ಆತಂಕದ ನಡುವೆಯೂ  ಈ ಬಾರಿಯ ಪರೀಕ್ಷೆಯನ್ನು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬರೆದಿದ್ದಾರೆ. ಒಳ್ಳೆಯ ಫಲಿತಾಂಶ ಬರಬೇಕೆಂಬುದು ನಮ್ಮೆಲ್ಲರ ಅಪೇಕ್ಷೆ. ಅನುತ್ತೀರ್ಣರಾದವರು ಯಾರು ಸಹ ನಿರಾಶರಾಗುವುದು ಬೇಡ. ಜೀವನದಲ್ಲಿ ಇದೇ ಕೊನೇ ಅಲ್ಲ. ಇದೂ ಒಂದು ಭಾಗ ಅಷ್ಟೆ ಎಂದು ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಮನಸ್ಥೈರ್ಯ ತುಂಬುವ ಮಾತನ್ನಾಡಿದ್ದಾರೆ.

ಜೂನ್, ಜುಲೈನಲ್ಲಿ ನಡೆದ ಪರೀಕ್ಷೆಯಲ್ಲಿ ಕೊರೋನಾ ಕಾರಣದಿಂದು ಸುಮಾರು 16 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಇವರೆಲ್ಲರನ್ನು ಪೂರಕ ಪರೀಕ್ಷೆಯಲ್ಲಿ ಫ್ರೆಶ್ ಸ್ಟೂಡೆಂಟ್ ಎಂದು  ಪರಿಗಣಿಸಲಾಗುವುದು. ಅಂಕಪಟ್ಟಿಯಲ್ಲೂ ಸಹ ಅಟೆಂಪ್ಟ್ ಎಂದು ನಮೂದಿಸುವುದಿಲ್ಲ.ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು ಸೆಪ್ಟೆಂಬರ್​ನಲ್ಲಿ ನಡೆಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಫಲಿತಾಂಶ ವ್ಯತಿರಿಕ್ತವಾಗಿ ಬಂದ್ರೆ ಯಾರೂ ದೃತಿಗೆಡಬೇಡಿ..ಇದು ಎಲ್ಲರ ಬದುಕಿನಲ್ಲೂ ಬಂದ್ಹೋಗುವ ಸಾಮಾನ್ಯ ಪ್ರಕ್ರಿಯೆ ಅಷ್ಟೆ..ಅದಕ್ಕೆ ದೃತಿಗೆಡಬೇಡಿ..ತಪ್ಪು ನಿರ್ದಾರಕ್ಕೆ ಕೈ ಹಾಕಬೇಡಿ..ಇನ್ನೂ ಸಾಕಷ್ಟು ಅವಕಾಶಗಳಿವೆ..ಬದುಕು ಮುಖ್ಯ..ಅದೇ ಮೊದಲು ಹಾಗೂ ದೊಡ್ಡದು ಎನ್ನುವುದನ್ನು ಮರೆಯಬೇಡಿ..ಎಲ್ಲಾ ವಿದ್ಯಾರ್ಥಿಗಳಿಗೂ ಕನ್ನಡ ಫ್ಲಾಶ್ ವತಿಯಿಂದ ಆಲ್ ದಿ ಬೆಸ್ಟ್…ಗುಡ್ ಲಕ್..   

Spread the love
Leave A Reply

Your email address will not be published.

Flash News