ಕೊರೊನಾಂತಕದ ನಡುವೆಯೇ SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮನಸ್ಥೈರ್ಯಕ್ಕೆ ಗೆಲುವು-ಶೇ 70.1 ವಿದ್ಯಾರ್ಥಿಗಳು ಪಾಸ್-ಸನ್ನಿದಿ ಮಹಾಬಲೇಶ್ವರ ಹೆಗಡೆ ಟಾಪರ್- ವಿದ್ಯಾರ್ಥಿನಿಯರೇ ಮೇಲುಗೈ- ಚಿಕ್ಕಾಬಳ್ಳಾಪುರ ಫಸ್ಟ್-ಯಾದಗಿರಿ ಲಾಸ್ಟ್…

0

ಬೆಂಗಳೂರು:2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ.ಕೊರೊನಾ ನಡುವೆ ಯೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದ ಪರಿಣಾಮ ಶೇಕಡಾ 70.1 ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಶಿರಸಿಯ ಮಾರಿಕಾಂಬ ಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ 625ಕ್ಕೆ 625 ಅಂಕಗಳನ್ನು ಪಡೆಯುವ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಈ ಬಾರಿಯ ಕೊರೊನಾ ಎಫೆಕ್ಟ್ ವಿದ್ಯಾರ್ಥಿಗಳ ಮಾನಸಿಕತೆ ಹಾಗೂ ಶೃದ್ಧೆ ಮೇಲೆ ಕೊಂಚವೂ ಪರಿಣಾಮ ಬೀರಿಲ್ಲ ಎನ್ನುವುದು ಈ ಬಾರಿಯ ಫಲಿತಾಂಶದಿಂದ ಪ್ರೂವ್ ಆಗಿದೆ.ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಕಳೆದ ಬಾರಿಯ ಫಲಿತಾಂಶದ ಹೋಲಿಕೆಯಲ್ಲಿ ಈ ಬಾರಿ ಫಲಿತಾಂಶದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.ಕಳೆದ ಬಾರಿ ಶೇ.73.70 ರಷ್ಟು ಫಲಿತಾಂಶ ಬಂದಿತ್ತು.ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೇ ಫಲಿತಾಂಶದಲ್ಲಿ ಮೊದಲಿಗರಾಗಿದ್ದು ಶೇಕಡಾ 72.70 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದ್ದು, ಸರ್ಕಾರಿ ಶಾಲೆಗಳ ಹೋಲಿಕೆಯಲ್ಲಿ  ಖಾಸಗಿ ಶಾಲೆಗಳ ಶೇಕಡಾ 70.60 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಇನ್ನು ಅನುದಾನರಹಿತ ಶಾಲೆಗಳ ಶೇಕಡಾ 82.3 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರೀಕ್ಷೆ ಬರೆದವರಲ್ಲಿ 5 ಲಕ್ಷದ 82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.2 ಲಕ್ಷದ 18,734 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ವಿವರಿಸಿದರು.

ಇನ್ನು ನಗರ ಹಾಗು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯನ್ನು ಹೋಲಿಸಿದಾಗ ನಗರದ ವಿದ್ಯಾರ್ಥಿಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಿಂದಿಕ್ಕಿದ್ದಾರೆ.ಪರೀಕ್ಷೆ ಬರೆದವರಲ್ಲಿ  2,99,855 ಬಾಲಕರು ಪಾಸಾಗಿದ್ದು, 2,82,461 ಬಾಲಕರು, ಬಾಲಕಿಯರು  ಉತ್ತೀರ್ಣರಾಗಿದ್ದಾರೆ.ನಗರ ಪ್ರದೇಶದಲ್ಲಿ ಶೇಕಡಾ 73.4 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ಗ್ರಾಮೀಣ ಪ್ರದೇಶದ 77.81 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಹಾಗೆಯೇ ಕನ್ನಡ ಮಾದ್ಯಮದಲ್ಲಿ ಪಾಸಾದ ಶೇಕಡಾ 70.49 ರಷ್ಟು ವಿದ್ಯಾರ್ಥಿಗಳ ಹೋಲಿಕೆಯಲ್ಲಿ ಇಂಗ್ಲೀಷ್ ಮಾದ್ಯಮದ ಶೇಕಡಾ 84.98 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಮೇಲುಗೈ  ಸಾಧಿಸಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದ್ರು.ಈ ಬಾರಿ 625ಕ್ಕೆ 625 ಅಂಕಗಳನ್ನು  6 ವಿದ್ಯಾರ್ಥಿಗಳು ಪಡೆದಿದ್ದು ಕಳೆದ ಬಾರಿ ಇಬ್ಬರು ಮಾತ್ರ ಈ ಸಾಧನೆ ಮಾಡಿದ್ರು.ಹಾಗೆ 625ಕ್ಕೆ 624 ಅಂಕಗಳನ್ನು 12 ವಿದ್ಯಾರ್ಥಿಗಳು ಪಡೆದಿದ್ದು,623 ಅಂಕಗಳನ್ನು 43 ವಿದ್ಯಾರ್ಥಿಗಳು, 56  ವಿದ್ಯಾರ್ಥಿಗಳು  622 ಅಂಕಗಳನ್ನು,  43 ವಿದ್ಯಾರ್ಥಿಗಳು 621 ಅಂಕಗಳನ್ನು ಹಾಗು ದಾಖಲೆಯ 117 ವಿದ್ಯಾರ್ಥಿಗಳು 625ಕ್ಕೆ 620 ಅಂಕಗಳನ್ನು ಪಡೆದಿದ್ದಾರೆ ಎಂದು ಸುರೇಶ್ ಕುಮಾರ್ ವಿವರಿಸಿದ್ರು.ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ಮೊದಲು-ಯಾದಗಿರಿ ಕೊನೆ:ಈ ಬಾರಿಯ ಪರೀಕ್ಷಾ ಫಲಿತಾಂಶವನ್ನು ಗಮನಿಸಿದಾಗ ಜಿಲ್ಲಾವಾರು  ಚಿಕ್ಕಬಳ್ಳಾಪುರ ಮೊದಲ ಸ್ಥಾನದಲ್ಲಿದ್ದು ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು (ಮಧುಗಿರಿ)ಮೂರನೇ ಸ್ಥಾನದಲ್ಲಿದೆ.4ನೇ ಸ್ಥಾನದಲ್ಲಿ ಮಂಡ್ಯ ಹಾಗೂ  ಚಿತ್ರದುರ್ಗ ಜಿಲ್ಲೆ 5ನೇ ಸ್ಥಾನದಲ್ಲಿದೆ. ಯಾದಗಿರಿ ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಟಾಪರ್ ಗಳ ಸಾಧನೆ:ಸನ್ನಿಧಿ ಮಹಾಬಲೇಶ್ವರ ಹೆಗಡೆ ಟಾಪರ್ ಆಗಿ ಹೊರಹೊಮ್ಮಿದ್ರೆ,ಬೆಂಗಳೂರಿನ ಚಿರಾಯು, ಸನ್ನಿಧಿ,ಮಂಡ್ಯದ ಧೀರಜ್ ರೆಡ್ಡಿ,ಬೆಂಗಳೂರಿನ ಜಿ.ಕೆ ಅಮೋಘ್,ನಿಖಿಲೇಶ್,ದಕ್ಷಿಣ ಕನ್ನಡ ಸುಳ್ಯಾದ ಅನೂಷ್,ಚಿಕ್ಕಮಗಳೂರಿನ ಅನಿರುದ್ಧ್ ಹಾಗೂ ಅದೇ ಜಿಲ್ಲೆಯ ತನ್ಮಯಿ ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ.

ಫಲಿತಾಂಶದ ಅನ್ವಯ ಗ್ರೇಡ್.. ಸೆಪ್ಟೆಂಬರ್ ನಲ್ಲಿ ಸಪ್ಲಿಮೆಂಟರಿ ಪರೀಕ್ಷೆ ನಡೆಯಲಿದ್ದು ಇನ್ನೆರೆಡು ದಿನಗಳಲ್ಲಿ ದಿನಾಂಕವನ್ನು ಪ್ರಕಟಿಸಲಾಗುವುದು.ಫಲಿತಾಂಶ ಸಾಧನೆ ಮೇಲೆ ಗ್ರೇಡ್ ನೀಡಲಾಗಿದ್ದು,10 ಜಿಲ್ಲೆಗಳಿಗೆ ಎ ಗ್ರೇಡ್ ನೀಡಲಾಗಿದ್ದು ,20 ಜಿಲ್ಲೆಗಳು ಬಿ ಗ್ರೇಡ್,4 ವಿದ್ಯಾರ್ಥಿಗಳು ಸಿ ಗ್ರೇಡ್ ಪಡೆದಿವೆ. 62 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

ಹಾರ್ಡ್ ವರ್ಕ್ ಮಾಡಿದ್ದೆ..ನಿರೀಕ್ಷೆ ಇರಲಿಲ್ಲ:ಟಾಪರ್ ಆಗಿ ಹೊರಹೊಮ್ಮಿರುವ ಸನ್ನಿಧಿ ಮಹಾಬಲೇಶ್ವರ ಹೆಗಡೆ,ಅವರನ್ನ ಕನ್ನಡ ಫ್ಲಾಶ್ ನ್ಯೂಸ್ ಸಂಪರ್ಕಿಸಿದಾಗ, ಹಾರ್ಡ್ ವರ್ಕ್ ಮಾಡಿದ್ದೆ..ಆದ್ರೆ ಟಾಪರ್ ಬರ್ತೇನೆಂದು ನಿರೀಕ್ಷಿಸಿರಲಿಲ್ಲ..ನನ್ನ ಪರಿಶ್ರಮ,ಪೋಷಕರ ಸಹಕಾರ ಹಾಗೂ ಶಾಲೆಯವ್ರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ.ಇದು ಕೇವಲ ನನ್ನೊಬ್ಬಳ ಸಾಧನೆಯಲ್ಲ ಎಂದು ವಿನಮ್ರಳಾಗಿ ಪ್ರತಿಕ್ರಿಯಿಸಿದ್ರು.

ಕೊರೊನಾ ಭಯವಿಲ್ಲದೆ ಓದಿದ್ದೆ- ಕಷ್ಟಪಟ್ಟಿದ್ದಕ್ಕೆ ಸಾರ್ಥಕತೆ ಸಿಕ್ಕಿದೆ:ಇನ್ನು ಟಾಪರ್ ಆಗಿ ಹೊರಹೊಮ್ಮಿರುವ  ಬೆಂಗಳೂರಿನ ಚಿರಾಯು ಕೊರೊನಾ ಭಯದ ನಡುವೆಯೇ ಕಷ್ಟಪಟ್ಟು ಓದಿದ್ದೆ..ಕೊರೊನಾ ಸನ್ನಿವೇಶದಲ್ಲಿ ಟಾಪರ್ ಆಗಿ ಹೊರಹೊಮ್ಮಿರುವುದು ಸ್ಮರಣೀಯ ಅನುಭವ..ಇದನ್ನು ಎಂದೂ ಮರೆಯೊಲ್ಲ ಎಂದು ಸಂತಸ ಹಂಚಿಕೊಂಡ್ರು.

ಇನ್ನು ಮಂಡ್ಯದ ಧೀರಜ್ ರೆಡ್ಡಿ,ಬೆಂಗಳೂರಿನ ಜಿ.ಕೆ ಅಮೋಘ್,ನಿಖಿಲೇಶ್,ದಕ್ಷಿಣ ಕನ್ನಡ ಸುಳ್ಯಾದ ಅನೂಷ್,ಚಿಕ್ಕಮಗಳೂರಿನ ಅನಿರುದ್ಧ್ ಹಾಗೂ ಅದೇ ಜಿಲ್ಲೆಯ ತನ್ಮಯಿ ಅವರುಗಳನ್ನು ಸಂಪರ್ಕಿಸಿದ ಜಯಕಿರಣದೊಂದಿಗೆ  ತಮ್ಮ ಸಾಧನೆ ಹಿಂದಿರುವ ಪರಿಶ್ರಮ ಹಾಗೂ ವ್ಯಕ್ತಿ,ಸಂಸ್ಥೆಗಳ ಸಹಾಯ-ನೆರವನ್ನು ಸ್ಮರಿಸಿದ್ರು.ಎಲ್ಲಾ ಟಾಪರ್ಸ್,ಸಾಧಕರು ಹಾಗೂ ಪಾಸಾದ ವಿದ್ಯಾರ್ಥಿಗಳಿಗೆ   ಕನ್ನಡ ಫ್ಲಾಶ್ ನ್ಯೂಸ್ಅಭಿನಂದನೆ ಸಲ್ಲಿಸುತ್ತೆ.  

Spread the love
Leave A Reply

Your email address will not be published.

Flash News