“ನಿವೃತ್ತ ನೌಕರನಿಗೆ ಸೌಲಭ್ಯ ಕೊಡಿ..ಇಲ್ಲಾಂದ್ರೆ ಪರಿಣಾಮ ಎದುರಿಸಿ” ಬಿಎಂಟಿಸಿಗೆ ಮಾನವಹಕ್ಕು ಆಯೋಗ ಖಡಕ್ ವಾರ್ನ್..

0
ರಫಾಯಲ್ ರಾಜ್
ನಿವೃತ್ತ ನೌಕರ ರಫಾಯಲ್ ರಾಜ್
ಮಾನವಹಕ್ಕು ಆಯೋಗ ಬಿಎಂಟಿಸಿ ಎಂಡಿಗೆ ಜಾರಿಗೊಳಿಸಿದ ನೊಟೀಸ್
ಮಾನವಹಕ್ಕು ಆಯೋಗ ಬಿಎಂಟಿಸಿ ಎಂಡಿಗೆ ಜಾರಿಗೊಳಿಸಿದ ನೊಟೀಸ್

ಬೆಂಗಳೂರು: ಇದು ನಿಜಕ್ಕೂ ಬಿಎಂಟಿಸಿಗೆ ಬೇಕಿರಲಿಲ್ಲ..ಆದ್ರೆ ನೌಕರರ ವಿಚಾರದಲ್ಲಿ  ಅಧಿಕಾರಿಗಳ ಅಮಾನವೀಯ ಧೋರಣೆಗೆ ಇಂತದ್ದೊಂದು ಸರಿಯಾದ ಶಾಸ್ತಿ ಆಗಬೇಕಿತ್ತು.ಅದನ್ನು ನಿವೃತ್ತ ನೌಕರನೇ ಮಾನವ ಹಕ್ಕು ಆಯೋಗದಿಂದ ಮಾಡಿಸಿ ಬಿಎಂಟಿಸಿ ಆಡಳಿತವರ್ಗದಲ್ಲಿ ನಡುಕ ಸೃಷ್ಟಿಸಿದ್ದಾರೆ.

ಬಿಎಂಟಿಸಿಗೆ ಮುಖಭಂಗವಾಗುವಂತೆ ಮಾಡಿರುವ ಆ ನೌಕರರೇ ರೆಫಾಯಲ್ ರಾಜ್.ನಿವೃತ್ತಿ ಬಳಿಕ ತಮಗೆ ಬರಬೇಕಿರುವ ಸರ್ಕಾರಿ ಸೌಲಭ್ಯಗಳಿಗೆ ತಡಕಾಡಿದ್ರೂ ಆಡಳಿತ ಮಂಡಳಿಯಿಂದ ಸೂಕ್ತ ಸ್ಪಂದನೆ ಸಿಗದ್ದಕ್ಕೆ ರಫಾಯಲ್, ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ರು.ಇದೀಗ  ಅಲ್ಲಿಂದ್ಲೇ ಆರ್ಡರ್ ಮಾಡಿಸಿಕೊಂಡು ಬಂದಿದ್ದಾರೆ..

ಬಿಎಂಟಿಸಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಫಾಯಲ್ ರಾಜ್ 31-05-2019 ರಂದು ಸೇವೆಯಿಂದ ನಿವೃತ್ತರಾದ್ರು.ನಿವೃತ್ತಿ ನಂತರ ಸಿಗಬೇಕಿದ್ದ ಸವಲತ್ತುಗಳಿಗೆ ಬಿಎಂಟಿಸಿಯ ಸಂಬಂಧಿತ ವಿಭಾಗಗಳಿಗೆ ಎಡತಾಕಿದ್ದಾರೆ.ಕೇವಲ ನೌಕರರಷ್ಟೇ ಅಲ್ಲ,ಸಾರಿಗೆ ನೌಕರರ ಮುಖಂಡರೂ ಆಗಿರುವ ರಫಾಯಲ್ ಅವರನ್ನು ಅಧಿಕಾರಿ ಸಿಬ್ಬಂದಿ ಒಂದ್ ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದಾಡಿಸಿ ಮಜಾ ತೆಗೆದುಕೊಂಡಿದ್ದಾರೆ.

ಮಾನವಹಕ್ಕು ಆಯೋಗದ ಸದಸ್ಯ ಆರ್.ಕೆ ದತ್ತಾ
ಮಾನವಹಕ್ಕು ಆಯೋಗದ ಸದಸ್ಯ-ನಿವೃತ್ತ ಐಪಿಎಸ್ ಅಧಿಕಾರಿ   ಆರ್.ಕೆ ದತ್ತಾ
ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ
ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ

ರಫಾಯಲ್ ರಾಜ್ ಅವ್ರೇ ಹೇಳುವಂತೆ ತಮಾಷೆ ಹಾಗು ವಿಪರ್ಯಾಸದ ವಿಚಾರ ಏನ್ ಗೊತ್ತಾ.. ಸೇವೆಯಲ್ಲಿದ್ದಾಗ ಇವ್ರೇ ಇಂಥಾ ಹತ್ತಲವು ನಿವೃತ್ತ ನೌಕರರ ಸೌಲಭ್ಯಗಳ ಬಗ್ಗೆ ಹೋರಾಡಿ ನ್ಯಾಯ ದೊರಕಿಸಿಕೊಟ್ಟಿದ್ದರು. ನಿವೃತ್ತಿ ಬಳಿಕ ತಮಗೆ ಬರಬೇಕಿರುವ ಸವಲತ್ತುಗಳಿಗೆ ಅಲೆದಾಡಿಸಿದ ಸಿಬ್ಬಂದಿ ಧೋರಣೆಗೆ ಕೆಂಡಾಮಂಡಲವಾಗಿದ್ದಾರೆ. ತಾಳ್ಮೆ ಇರುವವರೆಗೂ ಸೆಕ್ಷನ್ ಟು ಸೆಕ್ಷನ್ ಗೂ ಅಲೆದಾಡಿದ ರಫಾಯಲ್ ತಮಗೆ ಇಲಾಖೆಯಿಂದ ನ್ಯಾಯ ಸಿಗೊಲ್ಲ ಎಂದು ಯಾವಾಗ ಅನಿಸಿತೋ..ಆಗ್ಲೇ ಕಾನೂನಾತ್ಮಕ ಹೋರಾಟಕ್ಕೆ ನಿರ್ಧರಿಸಿದ್ದಾಗಿ ಹೇಳ್ತಾರೆ.

ಬಿಎಂಟಿಸಿ ಅಧಿಕಾರಿಗಳಿಂದ  ತಮಗೆ ನ್ಯಾಯ ಸಿಗೊಲ್ಲ ಎಂದೆನಿಸಿದಾಕ್ಷಣ ತಮಗಾದ ಅನ್ಯಾಯ..ಮಾನಸಿಕ ಕಿರಿಕಿರಿ..ಅಲೆದಾಡಿದ್ರೂ ಸ್ಪಂದಿಸದ ಸಿಬ್ಬಂದಿಯ ಅಮಾನವೀಯತೆಗೆ ಬೇಸತ್ತು ಮಾನವ ಹಕ್ಕುಗಳ ಆಯೋಗದ ಮೆಟ್ಟಿಲನ್ನೇರಲು ನಿರ್ಧರಿಸಿ ಈ ಬಗ್ಗೆ ಕಳೆದ ತಿಂಗಳು ದೂರು ನೀಡಿದ್ದರು.ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ಸದಸ್ಯ ಹಾಗು ನಿವೃತ್ತ ಐಪಿಎಸ್ ಅಧಿಕಾರಿ ಆರ್.ಕೆ ದತ್ತಾ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಜಯಕಿರಣಕ್ಕೆ ದಾಖಲೆ ಸಮೇತ ಮಾಹಿತಿ ನೀಡಿರುವ ರಫಾಯಲ್ ರಾಜ್,ತಮಗೆ ಆಗಿರುವ ಅನ್ಯಾಯಕ್ಕೆ ನಾನು ಕೆಲಸ ಮಾಡಿದ ಸಂಸ್ಥೆಯೇ ನ್ಯಾಯ ಒದಗಿಸಲಿಲ್ಲ..ಹಾಗಾಗಿ ನ್ಯಾಯಕ್ಕಾಗಿ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲನ್ನೇರುವಂತಾಯ್ತು..ಆಯೋಗದ ಸೂಚನೆಯಂತೆ ನ್ಯಾಯ ದೊರಕಿಸಿಕೊಡದಿದ್ದರೆ ಕಾನೂನಾತ್ಮಕ ಹೋರಾಟವನ್ನು ಮತ್ತಷ್ಟು ಗಂಭೀರಗೊಳಿಸುವುದಾಗಿ ಹೇಳಿದ್ದಾರೆ.ಇದು ನಿಗಮದಲ್ಲಿರುವ ಮೈಗಳ್ಳ ಹಾಗೂ ಅಮಾನವೀಯ ಅಧಿಕಾರಿ ಸಿಬ್ಬಂದಿಗೆ ಪಾಠವಾಗ್ಬೇಕು ಎಂದು ತಿಳಿಸಿದ್ರು.

ಈ ಬಗ್ಗೆ  ಕನ್ನಡ ಫ್ಲಾಶ್ ನ್ಯೂಸ್, ಬಿಎಂಟಿಸಿ ಆಡಳಿತ ವಿಭಾಗ ಹಾಗು ಪಿಂಚಣಿ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದ್ರೂ  ಸಂಪರ್ಕ ಲಭ್ಯವಾಗಲಿಲ್ಲ..ಅದೇನೇ ಆಗಲಿ ರಫಾಯಲ್ ರಾಜ್ ವಿಷಯದಲ್ಲಿ ಮಾನವ ಹಕ್ಕುಗಳ ಆಯೋಗ ನೀಡಿರುವ ಆದೇಶವನ್ನು ನಿಗಧಿತ ಅವಧಿಯೊಳಗೆ ಪಾಲಿಸ್ಲೇಬೇಕಿದೆ. ನಿವೃತ್ತಿ ಬಳಿಕ ನೌಕರರು ತಮ್ಮ ಪಿಂಚಣಿ ಹಾಗು ಇತರೆ ಸೌಲಭ್ಯ ಪಡೆಯೊಕ್ಕೆ ವರ್ಷಗಟ್ಟಲೇ ಚಪ್ಪಲಿ ಸವೆಸಬೇಕಾದ ಪರಿಸ್ತಿತಿಯಿದೆ.

ಅಂದ್ಹಾಗೆ ನಿವೃತ್ತ ನೌಕರರಿಗೆ ಆಗುತ್ತಿರುವ ಅನ್ಯಾಯ ಸಾರಿಗೆ ಸಚಿವ ಲಕ್ಷ್ಮಣ ಸವದಿ,ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಹಾಗೂ ಎಂಡಿ ಶಿಖಾ ಅವರ ಗಮನಕ್ಕೆ ಇಲ್ಲದೇ ಇಲ್ಲ..ಬಹುತೇಕ ಮೈಗಳ್ಳ ಹಾಗು ಭ್ರಷ್ಟರಿಂದ್ಲೇ ತುಂಬಿ ಹೋಗಿರುವ ಬಿಎಂಟಿಸಿಯ ಅಧಿಕಾರಿ ಸಿಬ್ಬಂದಿಗೆ ಚುರುಕು ಮುಟ್ಟಿಸದಿದ್ದಲ್ಲಿ  ಸಚಿವ,ಅಧ್ಯಕ್ಷರಾದಿಯಾಗಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶಿಖಾ ಮೇಡಮ್ ಗೂ ಕಳಂಕ ತಟ್ಟದೇ ಇರದು..ಶಿಖಾ ಮೇಡಮ್ ಈ ಕೂಡಲೇ ಆ ಅಧಿಕಾರಿಗಳಿಗೆ ಚಳಿ ಬಿಡಿಸ್ಬೇಕಿದೆ. 

Spread the love
Leave A Reply

Your email address will not be published.

Flash News