ಅವಹೇಳನಕಾರಿ ಬರಹ ಸೃಷ್ಟಿಸಿದ  ಧಾವಾಗ್ನಿಯಲ್ಲಿ “ಬೆಂದ” ಬೆಂಗಳೂರು:ಗಲಭೆಗ್ರಸ್ಥ ಪ್ರದೇಶಗಳ ಪರಿಸ್ತಿತಿಯಿನ್ನೂ ಬೂದಿಮುಚ್ಚಿದ ಕೆಂಡ- ಇದೆಲ್ಲಾ SDPI ಪೂರ್ವಸಂಚಾ..? 7 FIR ದಾಖಲು-ಮೌಲ್ವಿ ಬಂಧನ

0

ಬೆಂಗಳೂರು:ಸೋಶಿಯಲ್ ಮೀಡಿಯಾ ಎಷ್ಟು ಪರಿಣಾಮಕಾರಿ ಎನ್ನೋದು ಆಗಾಗ ಪ್ರೂವ್ ಆಗ್ತಲೇ ಬಂದಿದೆ.ಮತಾಂಧತೆಯ ದಳ್ಳುರಿಯಲ್ಲಿ ಬೆಂದು ನಲುಗಿದ ಬೆಂಗಳೂರಿನ ದುರಂತವೂ ಅದಕ್ಕೆ ಮತ್ತೊಂದು ಉದಾಹರಣೆಯಾಗೋಯ್ತು.

ಪುಲಕೇಶಿನಗರ ಕೈ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಹತ್ತಿರದ ಸಂಬಂಧಿ ಎನ್ನಲಾಗ್ತಿರುವ ಕಿಡಿಗೇಡಿ ಮಾಡಿದಕೃತ್ಯದಿಂದ  ಹತ್ತಿ ಹೊರಿದ ಪುಲಕೇಶಿನಗರದ ಪರಿಸ್ತಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತಿದೆ.ಪೊಲೀಸರು ನಡೆಸಿದ ಗೋಲಿ ಬಾರ್ ನಲ್ಲಿ ಸಾವನ್ನಪ್ಪಿದ ಮೂವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಉದ್ರಿಕ್ತರ ಗುಂಪು ಹೊಂಚುಹಾಕಿ ಕೂತಿದೆ. ಇನ್ನು ಗಲಭೆಗೆ ಎಸ್ ಡಿಪಿಐ-ಕೆಎಫ್ ಡಿ ಸಂಘಟನೆಗಳೇ ಕಾರಣ ಎಂದು ನೇರವಾಗಿ ಬಿಜೆಪಿ ಆಪಾದಿಸಿದ್ದು ತತ್ ಕ್ಷಣ ಸಂಘಟನೆಗಳು ಶಾಶ್ವತವಾಗಿ ರದ್ದುಪಡಿಸಬೇಕೆನ್ನುವ ಕೂಗು ಮತ್ತೊಮ್ಮೆ ಪ್ರತಿಧ್ವನಿಸಿದೆ.

ಕೈ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಪ್ರತಿನಿಧಿಸುವ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅವಹೇಳನಕಾರಿ ಪೋಸ್ಟ್ ಸೃಷ್ಟಿಸಿದ ರಾದ್ಧಾಂತಕ್ಕೆ ಕೆಲವು ಏರಿಯಾಗಳು ಹತ್ತಿ ಉರಿದಿದ್ದವು.ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿ ಬಾಗಿಲನ್ನು ಜಖಂಗೊಳಿಸಲಾಗಿತ್ತು.ಉದ್ರಿಕ್ತರು ಕೈಗೆ ಸಿಕ್ಕ ವಸ್ತುಗಳಿಂದ ಏರಿಯಾದ ಮನೆಗಳ ಮೇಲೆ ಕಲ್ಲು ತೂರಿದ್ರು.ವಾಹನಗಳಿಗೆ ಬೆಂಕಿ ಹಚ್ಚಿದ್ರು.

ಪುಕೇಶಿನಗರ ವಿಧಾನಸಭಾ ಕ್ಷೇತ್ರದ ಕೆಜಿ ಹಳ್ಳಿ..ಡಿಜೆ ಹಳ್ಳಿ..ಕಾವಲ್ ಭೈರಸಂದ್ರ ಪ್ರದೇಶಗಳಲ್ಲಿ  ನಡೆದ ಅಹಿತಕರ ಘಟನೆ ಹಾಗೂ ಕೈ ಮೀರಿದ ಪರಿಸ್ಥಿತಿ ನಿಯಂತ್ರಿಸಲು ನಡೆಸಲಾದ ಗೋಲಿಬಾರ್ ನಲ್ಲಿ ವಾಜೀದ್ ಖಾನ್ ಸೇರಿದಂತೆ ಇತರೆ ಮೂವರು ಸಾವನ್ನಪ್ಪಿದ್ದರು. (ಸಾವನ್ನಪ್ಪಿದ 20 ವರ್ಷದ  ವಾಜೀದ್ ಖಾನ್ ಕೊರೊನಾ ಸೋಂಕಿತ ಎನ್ನುವುದು ದೃಢಪಟ್ಟಿದೆ)  ಘಟನೆಯಲ್ಲಿ 30ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ವು.ಡಿಸಿಪಿ ಉಮಾಶಂಕರ್ ಗುಳೇದ ಅವರ ಕಾರನ್ನು ಸ್ಟೇಷನ್ ಮುಂದೆಯೇ ಕೆಳಗುರುಳಿಸಿ ದ್ವಂಸಗೊಳಿಸಿದ್ರು ದುಷ್ಕರ್ಮಿಗಳು.

ಇದು ಪೂರ್ವನಿಯೋಜಿತನಾ..ಈ ಬಗ್ಗೆ ಮೀಟಿಂಗ್ ಕೂಡ ನಡೆದಿತ್ತಾ?:ಇನ್ನು ಈ ಘಟನೆ ಪೂರ್ವನಿಯೋಜಿತ ಎಂದು ಆಪಾದಿಸಲಾಗ್ತಿದೆ.ಎಸ್ ಡಿಪಿಐ ಮುಖಂಡರು ಈ ಕೃತ್ಯವನ್ನು ಎಗಸೊಕ್ಕೆ ಅನೇಕ ದಿನಗಳಿಂದ್ಲೂ ಪ್ಲ್ಯಾನ್ ಮಾಡುತ್ತಿದ್ದರು.ಅದನ್ನು ನಿನ್ನೆ ರಾತ್ರಿ ಆಪರೇಟ್ ಮಾಡಿದ್ದಾರಷ್ಟೇ..ಏಕೆಂದ್ರೆ ಘಟನೆಗೂ ಮುನ್ನ ಅದೇ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅರೇಬಿಕ್ ಕಾಲೇಜ್ ಬಳಿ ದುಷ್ಕರ್ಮಿಗಳು ಮೀಟಿಂಗ್ ಮಾಡ್ತಾರೆ..ಹೇಗೆ ಗಲಭೆ ಸೃಷ್ಟಿಸ್ಬೇಕು..ಏನೆಲ್ಲಾ ದ್ವಂಸ ಮಾಡಬೇಕು..ಯಾರನ್ನೆಲ್ಲಾ ಟಾರ್ಗೆಟ್ ಮಾಡ್ಬೇಕೆನ್ನುವುದರ ಬಗ್ಗೆ ಚರ್ಚಿಸಿದ ಬಳಿಕವೇ ಗುಂಪಿನೊಂದಿಗೆ ತೆರಳಿ ಕೃತ್ಯ ಎಸಗಿದ್ದಾರೆಂದು ಮಾಜಿ ಎಮ್ಮೆಲ್ಸಿ ಅಶ್ವತ್ಥನಾರಾಯಣ ಗಂಭೀರ ಆರೋಪ ಮಾಡಿದ್ದಾರೆ.

ಯಾರ್ ಗೊತ್ತಾ ಇಡೀ ಕೃತ್ಯದ ಮಾಸ್ಟರ್ ಮೈಂಡ್:ಅಂದ್ಹಾಗೆ ಮದರಸದಾದಲ್ಲಿ ಶಿಕ್ಷಕನಾಗಿರುವ ಸೈಯ್ಯದ ಅಸನಾನ್  ನೇ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗ್ತಿದೆ.ಆತನೇ ಈ ಕೃತ್ಯವನ್ನು ರೂಪಿಸಿ ಅದನ್ನು ಇಂಪ್ಲಿಮೆಂಟ್ ಮಾಡಿದ ಎನ್ನಲಾಗ್ತಿದೆ.ಆತನನ್ನು ಈಗಾಗ್ಲೇ ಪೊಲೀಸರು ವಶಕ್ಕೂ ಪಡೆದಿದ್ದಾರೆ.ಇದಕ್ಕು ಮುನ್ನ  ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಮುಜಾಮಿಲ್ ಪಾಷಾ ಯನ್ನು ಪ್ರಕರಣದ ಮಾಸ್ಟರ ಮೈಂಡ್ ಎನ್ನಲಾಗ್ತಿತ್ತು.

ಘಟನೆ ನಿಯಂತ್ರಿಸಲಾರದೆ ಹೋದ್ರಾ ಪೊಲೀಸ್ರು.. ? ಮುಸ್ಲಿಂ ಬಾಹುಳ್ಯವಿರುವ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿನ ಕೆಲವು ಏರಿಯಾಗಳು ಸೂಕ್ಷ್ಮ ಪ್ರದೇಶಗಳೆನ್ನುವ ಮಾಹಿತಿ ಪೊಲೀಸ್ ರಿಗೂ ಗೊತ್ತಿದೆ.ಈ ಕಾರಣಕ್ಕೆ ಸದಾ ಅಂಬೇಡ್ಕರ್ ಸರ್ಕಲ್ ನಲ್ಲಿ ಉಪಠಾಣೆ ಮಾಡಿ ಕೆಎಸ್ ಆರ್ ಪಿ ವಾಹನವನ್ನು ಗಸ್ತಿಗೆ ನಿಯೋಜಿಸಲಾಗಿರುತ್ತೆ.ಆದ್ರೆ ನಿನ್ನೆ ಕೆಎಸ್ ಆರ್ ಪಿ ವೆಹಿಕಲ್ ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿಯೇ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ದೊಂಬಿ ಗಲಾಟೆ ಹಿಂಸೆಯ ರೂಪ ಪಡೆಯೊಕ್ಕೆ ಕಾರಣವೂ ಅದೇ..ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಕಂಟ್ರೊಲ್ ಗೆ ತೆಗೆದುಕೊಳ್ಳುವ ಹೊತ್ತಿಗಾಗ್ಲೇ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಬರಹ  ಪೋಸ್ಟ್ ಆಗಿದ್ರ ಬಗ್ಗೆ ಎಸ್ ಡಿಪಿಐ ಮುಖಂಡ ದೂರು ನೀಡಿ ಆ ಬಗ್ಗೆ ದಾಂಧಲೆ ಎಬ್ಬಿಸಲಾರಂಭಿಸಿದಾಗ್ಲೇ ಪೊಲೀಸರು ಮುಂದೆ ಆಗಬಹುದಾದ ದುರಂತವನ್ನು ಮನಗಂಡು ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕಿತ್ತು.ಆದ್ರೆ ಆ ರೀತಿ ಮಾಡದಿದ್ದರಿಂದ್ಲೇ ಗಲಭೆ ಹಿಂಸಾತ್ಮಕ ಸ್ವರೂಪ ಪಡೆಯಿತು ಎನ್ನುವುದು ಸ್ಥಳೀಯರ ಆರೋಪ.ಪೊಲೀಸ್ ರು ಸೂಕ್ತ ಸಮಯದಲ್ಲಿ ಅಗತ್ಯ ವ್ಯವಸ್ಥೆ ಮಾಡಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎನ್ನೋ ಅಭಿಪ್ರಾಯ ಕೂಡ ಕೇಳಿಬಂದಿದೆ.

ಪೊಲೀಸ್ ಇಂಟಲಿಜೆನ್ಸ್  ಇಷ್ಟೊಂದು ದುರ್ಬಲವಾಗಿತ್ತಾ..ಇಂತದ್ದೊಂದು ಪ್ರಶ್ನೆ ಕೂಡ ಈಗ ಕಾಡಹತ್ತಿದೆ.ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ ಇಂತದ್ದೊಂದು ಕೃತ್ಯ ನಡೆಯಬಹುದೆಂದು ಅಂದಾಜಿಸಲಾಗದಷ್ಟು ಪೊಲೀಸ್ ಇಂಟಲಿಜೆನ್ಸ್ ದುರ್ಬಲವಾಯ್ತಾ ಎಂದು ಇಲಾಖೆಯಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ.ಎಸ್ ಡಿಪಿಐ ಮುಖಂಡ ನಡೆಸಲಾರಂಭಿಸಿದ ದಾಂಧಲೆ ನಂತರವೂ ಪೊಲೀಸ್ ಏನೂ ಮಾಡಲಾಗದಷ್ಟು ಅಸಹಾಯಕವಾಗಿದ್ದು ಕೂಡ ಇಂಟಲಜೆನ್ಸ್ ನ ವೈಫಲ್ಯ ಎನ್ನಲಾಗ್ತಿದೆ.ವಿಪಕ್ಷಗಳು ಇದನ್ನೇ ಒತ್ತಿ ಹೇಳುತ್ತಿದ್ದು ಇಂಟಲಿಜೆನ್ಸ್ ಸ್ಟ್ರಾಂಗ್ ಆಗಿದಿದ್ದರೆ ಇಂಥ ದುರಂತ ಸಂಭವಿಸುತ್ತಲೇ ಇರಲಿಲ್ಲ ಎಂದು ಆಪಾದಿಸಿವೆ.

ಕೆಲವರ ತಲೆದಂಡವಾಗುತ್ತಾ.?:ಬಹುಷಃ ಈ ಕೃತ್ಯದ ಹಿನ್ನಲೆಯಲ್ಲಿ ಪೊಲೀಸ್ ಇಂಟಲಿಜೆನ್ಸ್ ವಿಭಾಗದ ಮುಖ್ಯಸ್ಥರು ಸೇರಿ ದಂತೆ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾದ ಪೊಲೀಸ್ ಠಾಣೆಗಳ ಅಧಿಕಾರಿಗಳ ತಲೆದಂಡವಾದ್ರೂ ಆಶ್ಚರ್ಯವಿಲ್ಲ ಎನ್ನಲಾಗ್ತಿದೆ

ಘಟನೆ ಹಿನ್ನಲೆಯಲ್ಲಿ 7 FIR  ದಾಖಲು:  ಪೊಲೀಸರು ಈವರೆಗು 7 ಪ್ರತ್ಯೇಕ FIR ಗಳನ್ನು ದಾಖಲಿಸಿದ್ದಾರೆ.ಏಳು FIR  ಗಳಲ್ಲೂ ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಮುಜಾಮಿಲ್ ಪಾಷಾ ಅವರನ್ನು ಎ-1 ಆಗಿ ಮಾಡಲಾಗಿದೆ.ಗಲಭೆಗೆ ಈತನೇ ಪ್ರಮುಖ ಕಾರಣ.ಈತನ ಕುಮ್ಮಕ್ಕು ಇಲ್ಲದಿದ್ದರೆ ಇಷ್ಟೆಲ್ಲಾ ನಡೆಯುತ್ತಿರಲಿಲ್ಲ ಎನ್ನುವುದನ್ನು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.ಸಧ್ಯ ಆತನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿತ್ತು.ಘಟನೆಗೆ ಮುಖ್ಯ ಕಾರಣ ಏನನ್ನುವುದನ್ನು ಶೀಘ್ರವೇ ಆತನಿಂದ ಗೊತ್ತು ಮಾಡಿಕೊಳ್ಳುವ ಸಾಧ್ಯತೆಗಳಿವೆ.

ವಿದ್ವಂಸಕತೆಗ ಎಸ್ ಡಿಪಿಐ-ಪಿಎಫ್ ಸಂಘಟನೆಗಳೇ ಕಾರಣ..!:ಇನ್ನು ಇಂಥ ಸೂಕ್ಷ್ಮ ಸಂದರ್ಭದಲ್ಲೇ ಬಿಜೆಪಿ ಮುಖಂಡರು ಕೃತ್ಯಕ್ಕೆ ನೇರವಾಗಿ ಮುಸ್ಲಿಂ ಸಂಘಟನೆಗಳೇ ಕಾರಣ ಎಂದು ಆಪಾದಿಸಿದ್ದಾರೆ.ಕಂದಾಯ ಸಚಿವ ಆರ್.ಅಶೋಕ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಈ ಕೃತ್ಯದಿಂದೆ ಇರುವ ಈ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ಬ್ಯಾನ್ ಆಗುತ್ವಾ..ಎಸ್ ಡಿಪಿಐ-ಕೆಎಫ್ ಡಿ-ಪಿಎಫ್ ಐ..:ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಗಲಭೆ ಹಿಂದೆ ಕೈವಾಡ ಇದೆ ಎನ್ನಲಾಗ್ತಿರುವ ಸಂಘಟನೆಗಳನ್ನು ಬ್ಯಾನ್ ಮಾಡುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.ಹಿಂದೆ ರಾಜ್ಯದ ನಾನಾ ಕಡೆ ನಡೆದಿರುವ ವಿದ್ವಂಸಕ ಕೃತ್ಯಗಳಿಗೂ ಇವೇ ಸಂಘಟನೆಗಳು ಕಾರಣ.ಇಂಥಾ ಭಯೋತ್ಪಾದಕ ಸಂಘಟನೆಗಳನ್ನು ಬ್ಯಾನ್ ಮಾಡಿ ಎನ್ನುವ ಕೂಗು ಕೇಳಿಬಂದಿತ್ತು.

ಈಗ ಇದಕ್ಕೆ ಪುಷ್ಪಿಕರಿಸುವ ರೀತಿಯಲ್ಲಿ ಈ ಕೃತ್ಯ ನಡೆದಿದ್ದು ಸರ್ಕಾರ ಮೇಲ್ಕಂಡ ಸಂಘಟನೆಗಳನ್ನು ಬ್ಯಾನ್ ಮಾಡುವ ಬಗ್ಗೆ ಅಂತಿಮ ನಿರ್ದಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.  ಆದರೆ ಘಟನೆಗೆ ಎಸ್ ಡಿಪಿಐ ಸಂಘಟನೆ ಕೈವಾಡ ಇದೆ ಎನ್ನುವ ಬಿಜೆಪಿ ಸರ್ಕಾರದ ಹೇಳಿಕೆಗೆ ಸಂಘಟನೆ ರಾಜ್ಯಾಧ್ಯಕ್ಷ  ಮೊಹಮ್ಮದ್ ಇಲಿಯಾಸ್ ತೀಕ್ಷ್ಣವಾಗಿ ಖಂಡಿಸಿದ್ದಾರೆ.ನಾವೇಕೆ ಇಂಥ ಕೃತ್ಯಕ್ಕೆ ಕುಮ್ಮಕ್ಕು ಕೊಡೋಣ.ಅವಹೇಳನಕಾರಿ ಪೋಸ್ಟ್ ಬಗ್ಗೆ ಕ್ರಮ ಕೈಗೊಳ್ಳಿ ಎಂದು ದೂರು ಕೊಡೊಕ್ಕೆ ಹೋಗಿದ್ದೇ ತಪ್ಪಾ..ದೂರು ಕೊಡೊಕ್ಕೆ ಹೋದಾಗ ನಮ್ಮನ್ನು ಎರಡು ಗಂಟೆಗಳವರೆಗೆ ಪೊಲೀಸ್ ಠಾಣೆ ಹೊರಗೆ ಕಾಯಿಸಿದ್ರು.ಅದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ತಪ್ಪಾ..ಆದ್ರೆ ಈ ಘಟನೆಗೂ ನಮಗು ಯಾವುದೇ ಸಂಬಂಧವಿಲ್ಲ ಎಂದು ಇಲಿಯಾಸ್  ಕ್ಕೆ ಸ್ಪಷ್ಟಪಡಿಸಿದ್ದಾರೆ.

ಅದೇನೇ ಆಗಲಿ ನಿನ್ನೆ ಸಂಜೆಯಿಂದ ಆರಂಭವಾಗಿ ಮಧ್ಯರಾತ್ರಿವರೆಗೆ ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಘಟನೆ ಒಂದು ಕೆಟ್ಟ ಘಟನಾವಳಿಯಾಗಿ ಇತಿಹಾಸದ ಪುಟ ಸೇರಿದ್ದು ಮಾತ್ರ ದೌರ್ಭಾಗ್ಯಪೂರ್ಣ.

 ಹೀಗೆ ನಡೆದೋಯ್ತು…ದೊಂಬಿ-ಗಲಭೆ

ಸಂಜೆ 6: ಶಾಸಕ  ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ನವೀನ್ ಎಂಬಾತನಿಂದ ಅವಹೇಳನಕಾರಿ ಪೋಸ್ಟ್

ಸಂಜೆ 7: ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಮುಜಾಮಿಲ್ ಪೊಲೀಸ್ ಠಾಣೆಗೆ ಆಗಮನ

ಸಂಜೆ 7.30:ಅವಹೇಳನಕಾರಿ ಪೋಸ್ಟ್ ಬಗ್ಗೆ ದೂರು ಸಲ್ಲಿಕೆ

ಸಂಜೆ 7:30: ದೂರು ಪಡೆದ ಪೊಲೀರು-ಪರಿಶೀಲನೆ

ಸಂಜೆ 7:45:ದೂರು ಪಡೆದ ಹೊರತಾಗ್ಯೂ ಪೊಲೀಸ್ ಠಾಣೆ ಹೊರಗೆ ಮುಜಾಮಿಲ್ ಗಲಾಟೆ

ಸಂಜೆ 7.45:ಗಲಾಟೆ ಬಿಡಿಸುವ ನೆಪದಲ್ಲಿ ಸ್ಥಳಕ್ಕೆ ಬಂದ ಕಾರ್ಯಕರ್ತ ಅಯಾಜ್

ಸಂಜೆ 7:45: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಉದ್ರಿಕ್ತರಿಂದ ಕಲ್ಲುತೂರಾಟ

ರಾತ್ರಿ 8:00:ರಸ್ತೆಗಳಲ್ಲೆಲ್ಲಾ ಕಿರುಚ್ತಾ-ಅರಚ್ತಾ ಅಡ್ಡಾಡಿ ಕಲ್ಲು ತೂರಾಟ-ವಾಹನಗಳಿಗೆ ಬೆಂಕಿ

ರಾತ್ರಿ 11:45 ಲಾಠಿ ಚಾರ್ಜ್

ರಾತ್ರಿ 12 ಅಶ್ರುವಾಯು ಪ್ರಯೋಗ

ರಾತ್ರಿ 12.05:ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ

ರಾತ್ರಿ 12.10: ಪೊಲೀಸ್ ರಿಂದ ಗಾಳಿಯಲ್ಲಿ ಗುಂಡು

ರಾತ್ರಿ 12.22 ಪೊಲೀಸ್ ರಿಂದ ಫೈರಿಂಗ್

ರಾತ್ರಿ 12.30 ಕೆಜಿ ಹಳ್ಳಿಯಲ್ಲಿ ಓರ್ವ ಸಾವು

 

 

 

Spread the love
Leave A Reply

Your email address will not be published.

Flash News