ಬ್ಯಾನ್ ಆದ್ರೇನು..ರಾಜಾರೋಷವಾಗೇ ನಗರವನ್ನು ಪ್ರವೇಶಿಸ್ತಿವೆ ಪಿಓಪಿ ಗಣಪತಿಗಳು:ಮಾರಾಟಕ್ಕೆ ಬ್ರೇಕ್ ಹಾಕೊಕ್ಕೆ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ರೂಪುರೇಷೆ ಸಿದ್ಧ

0

ಬೆಂಗಳೂರು:ಗಣಪತಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ.ಕೊರೊನಾ ಕಾರಣಕ್ಕೆ ಈ ಬಾರಿ ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆ ನಿಷೇಧಿಸಲಾಗಿದೆ.ಮನೆಗಳಲ್ಲಿ ಮಾತ್ರ ಮಣ್ಣು ಹಾಗೂ ಹರಿಶಿಣದ ಗಣಪತಿಗಳನ್ನು ಪ್ರತಿಷ್ಟಾಪಿಸ್ಲಿಕ್ಕೆ ಅವಕಾಶ ಕಲ್ಪಿಸಲಾಗಿದೆ.ಹಾಗೆಂದು ನಿಷೇಧಿತ ಪಿಓಪಿ ಗಣಪತಿಗಳ ಮಾರಾಟ ಹಾಗೂ ತಯಾರಿಕೆ ನಿಂತಿದೆಯೇ…ಖಂಡಿತಾ ಇಲ್ಲ,ನಾನಾ ಕಡೆ ಪಿಓಪಿ ಗಣಪತಿಗಳ ತಯಾರಿಕೆ ಎಂದಿನಂತೆ ಅಲ್ಲದಿದ್ದರೂ ಒಂದಷ್ಟು ಪ್ರಮಾಣದಲ್ಲಿ ನಡೆಯುತ್ತಿರುವುದಂತೂ ಸತ್ಯ..ಆದರೆ POP ಗಣಪತಿಗಳ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಹಾಕೊಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ. ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಇದಕ್ಕಾಗಿ ಬ್ಲ್ಯೂ ಪ್ರಿಂಟ್ ಸಿದ್ದಪಡಿಸಿಕೊಂಡಿದೆ.

ಕೊರೊನಾಕ್ಕೆ ಇಡೀ ಮನುಕುಲವೇ ತತ್ತರಿಸಿದೆ.ಅನೇಕ ಧಾರ್ಮಿಕ ಆಚರಣೆಗಳೇ ಈ ಬಾರಿ ಕೊರೊನಾಕ್ಕೆ ಬಲಿಯಾಗಿವೆ. ಇದರಲ್ಲಿ ಹಬ್ಬ ಹರಿದಿನಗಳು ಕೂಡ ಸೇರಿವೆ.ಅದರ ಸಾಲಿಗೆ ಇನ್ನೇನು ಕೆಲ ದಿನ ಬಾಕಿ ಇರುವ ಗಣೇಶೋತ್ಸವ ಕೂಡ ಸೇರುತ್ತಿದೆ.ಗಣೇಶೋತ್ಸವದ ಮುಖ್ಯ ಆಕರ್ಷಣೆಯೇ ಗಣಪತಿಗಳ ಪ್ರತಿಷ್ಟಾಪನೆ.ಕೊರೊನಾ ಕಾರಣಕ್ಕೆ ಈ ಬಾರಿ ಸಾರ್ವ ಜನಿಕ ಗಣಪತಿಗಳ ಪ್ರತಿಷ್ಟಾಪನೆಗೆ ಸಂಪೂರ್ಣ ಬ್ರೇಕ್ ಹಾಕಿದೆ.ಇದರಿಂದ ದೊಡ್ಡ ಮಟ್ಟದ ಹೊಡೆತ ಬಿದ್ದಿರುವುದು POP ಗಳ ತಯಾರಿಕೆ ಹಾಗೂ ಮಾರಾಟಕ್ಕೆ…ಈ ಆದೇಶದ ಹೊರತಾಗ್ಯೂ ಪಿಓಪಿ ಗಣಪತಿಗಳೇ ನಗರದ ಹೊರ ಹಾಗೂ ಒಳಗೆ ತಯಾರಿಸಲ್ಪಡುತ್ತಿದೆ ಹಾಗೂ ಮಾರಾಟಕ್ಕೂ ಅಣಿಯಾಗುತ್ತಿವೆ.

ಪಿಓಪಿ ಗಣಪತಿಗಳನ್ನು ರೇಡ್ ಮಾಡಲು ಅಂದಿನ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ನಡೆಸಿದ ಕಾರ್ಯಾಚರಣೆ..ಆದರೆ ಹಿಂದೂಪರ ಸಂಘಟನೆಗಳ ಬೆದರಿಕೆ-ಒತ್ತಡಕ್ಕೆ ಮಣಿದು ರೇಡ್ ನ್ನು ಮೊಟಕುಗೊಳಿಸಿ ವಾಪಸ್ಸಾಗಿದ್ರು...
ಪಿಓಪಿ ಗಣಪತಿಗಳನ್ನು ರೇಡ್ ಮಾಡಲು ಅಂದಿನ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ನಡೆಸಿದ ಕಾರ್ಯಾಚರಣೆ..ಆದರೆ ಹಿಂದೂಪರ ಸಂಘಟನೆಗಳ ಬೆದರಿಕೆ-ಒತ್ತಡಕ್ಕೆ ಮಣಿದು ರೇಡ್ ನ್ನು ಮೊಟಕುಗೊಳಿಸಿ ವಾಪಸ್ಸಾಗಿದ್ರು…

ಮನೆಗಳಲ್ಲಿ ಸಣ್ಣಗಾತ್ರದ ಹಾಗೆಯೇ ಪರಿಸರಸ್ನೇಹಿ ಗಣೇಶ ಮೂರ್ತಿಗಳ ಪ್ರತಿಷ್ಟಾಪನೆಗೆ ಅವಕಾಶ ಬಿಟ್ಟರೆ ಸಾರ್ವಜನಿಕ ವಾಗಿ ಗಣಪತಿಗಳನ್ನು ಇಡೊಕ್ಕೆ ಸುತಾರಾಂ ಅವಕಾಶವಿಲ್ಲ ಎಂದು ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಕಡ್ಡಿಮುರಿದಂತೆ ಹೇಳಿಬಿಟ್ಟಿದೆ.ಪೊಲೀಸ್ ಇಲಾಖೆ ಕೂಡ ಸಾಥ್ ಕೊಡುವುದಾಗಿ ಹೇಳಿದೆ.

ಆದ್ರೆ…ಆದ್ರೆ ಹೀಗೆ ಆದೇಶಿಸಿದಾಕ್ಷಣ ಪಿಓಪಿ ಗಣಪತಿಗಳ ಮಾರಾಟಕ್ಕೆ ಬ್ರೇಕ್ ಬಿದ್ ಬಿಡುತ್ತಾ..ತಯಾರಿಕೆ ಹಾಗೂ ಮಾರಾಟವನ್ನೇ ಬದುಕಾಗಿಸಿಕೊಂಡ ನೂರಾರು ಕುಟುಂಬಗಳು ಹೆದರಿಕೊಂಡು ಪಿಓಪಿ ತಯಾರಿಸುವುದನ್ನು ಬಿಟ್ ಬಿಡ್ತಾರಾ ಎಂದೇನಾದ್ರೂ ಅಂದುಕೊಂಡಿದ್ರೆ ಅದು ಶುದ್ಧ ಸುಳ್ಳು..ಪಿಓಪಿ ಗಣೇಶಗಳನ್ನು ಕುಂಬ್ಳಗೋಡು…ಕೆ.ಗೊಲ್ಲಹಳ್ಳಿ..ಮೈಸೂರು ರಸ್ತೆ..ದೇವನಹಳ್ಳಿ…ಪಾಟರಿ ರಸ್ತೆಯ ವ್ಯಾಪ್ತಿಯಲ್ಲಿ  ಕದ್ದುಮುಚ್ಚಿ ತಯಾರಿಸುವ  ಹಾಗೂ ಮಾರಾಟ ಮಾಡುವ ಕೆಲಸ ಮಾಡ್ತಿದ್ದಾರೆನ್ನುವುದು  ಪಕ್ಕಾ ಮಾಹಿತಿ..

ಬೆಂಗಳೂರಿನ ಹೊರಭಾಗದಿಂದ ಪಿಓಪಿ ಗಣೇಶಗಳು ವ್ಯವಸ್ಥಿತವಾಗಿ ನಗರದೊಳಗೆ ಎಂಟ್ರಿ ಕೊಡ್ತಿವೆ ಎನ್ನುವ ಮಾಹಿತಿ ಇದೆ.ಅವು ಪಿಓಪಿನೋ ಅಥವಾ ಪರಿಸರಸ್ನೇಹಿ ಮಣ್ಣಿನ ಗಣಪತಿಗಳೋ ಎನ್ನುವುದು ಮಾತ್ರ ಸ್ಪಷ್ಟವಾಗುತ್ತಿಲ್ಲ.ಅಲ್ಲದೇ ಚೆಕ್ ಪೋಸ್ಟ್ ಅಥವಾ ಟೋಲ್ ಗಳಲ್ಲಿ ಇವುಗಳ ಪ್ರವೇಶವನ್ನು ತಡೆಯಲಿಕ್ಕೆ ಪ್ರತ್ಯೇಕ ಆದೇಶವನ್ನೇನೂ ಇಲಾಖೆಗಳು ಮಾಡಿಲ್ಲ..ಹಾಗಾಗಿ ನಾವ್ ಎಂಟ್ರಿಯಾಗೋದು ಯಾವ್ ಗಣಪತಿ ಎಂದು ಚೆಕ್ ಮಾಡ್ಲಿಕ್ಕೆ ಆಗುತ್ತಿಲ್ಲ ಎನ್ತಾರೆ ದೇವನಹಳ್ಳಿ ಬಳಿಯ ಸಾದಳ್ಳಿ ಗೇಟ್ ಟೋಲ್ ನ ಸಿಬ್ಬಂದಿ.

ಮಾರಾಟಕ್ಕೆ ಬ್ರೇಕ್ ಹಾಕೊಕ್ಕೆ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ರೂಪುರೇಷೆ ಸಿದ್ಧ
ಮಾರಾಟಕ್ಕೆ ಬ್ರೇಕ್ ಹಾಕೊಕ್ಕೆ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ರೂಪುರೇಷೆ ಸಿದ್ಧ

ಮಹಾರಾಷ್ಟ್ರ,ತಮಿಳ್ನಾಡು,ಹೈದ್ರಾಬಾದ್,ಪಶ್ಚಿಮ ಬಂಗಾಳದ ಮುಖೇನ ಪಿಓಪಿ ಗಣಪತಿಗಳು ಕರ್ನಾಟಕದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸುತ್ತಲೇ ಇವೆ.ಇದು ನಮ್ಮ ಆಡಳಿತ ವ್ಯವಸ್ಥೆಗಳಿಗೆ ಗೊತ್ತಿಲ್ಲವೆಂದೇನಿಲ್ಲ.ಗೊತ್ತಿದ್ರೂ ಮಾರಾಟಗಾರರೊಂದಿಗೆ ಪರ್ಸಂಟೇಜ್ ಫಿಕ್ಸ್ ಮಾಡಿಕೊಂಡು ಅವುಗಳನ್ನು ಒಳ ಬಿಡುವ ಕೆಲಸ ಮಾಡಲಾಗ್ತಿದೆ.ಇದರಲ್ಲಿ ಪೊಲೀಸ್..ಪೊಲ್ಯೂಷನ್ ಕಂಟ್ರೋಲ್ ಬೋರ್ಡ್,ಬಿಬಿಎಂಪಿ,ಗ್ರಾಮ ಪಂಚಾಯ್ತಿಯವ್ರು ಶಾಮೀಲಾಗಿದ್ದಾರೆನ್ನುವುದು ಗುಟ್ಟಾಗಿ ಉಳಿದಿರುವ ಸಂಗತಿಯೇನಲ್ಲ.

ಕಳೆದ ಬಾರಿ ಮಂಡಳಿ ಅಧ್ಯಕ್ಷರಾಗಿದ್ದ ಡಾ.ಕೆ ಸುಧಾಕರ್ ಪಿಓಪಿ ಗಣಪತಿಗಳ ಮಾರಾಟಕ್ಕೆ ಬ್ರೇಕ್ ಹಾಕುವ ಯತ್ನ ಮಾಡಿದ್ರು.ಮಾದ್ಯಮಗಳೊಂದಿಗೆ ತೆರಳಿ ರೇಡ್ ಕೂಡ ಮಾಡಿದ್ರು.ಆದ್ರೆ ಕೆಲವು ಹಿತಾಸಕ್ತಿಗಳ ಪ್ರೆಷರ್ ಕ್ರಿಯೇಟ್ ಆಗಿದ್ರಿಂದ ರೇಡನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ಸಾಗಿದ್ರು. ಪಿಓಪಿಗಳಿಗೆ ಅತೀ ಹೆಚ್ಚು ಆರ್ಡರ್ ಕೊಟ್ಟಂಥವು ಹಿಂದೂಪರ ಸಂಘಟನೆಗಳೆನ್ನುವುದೇ ಈ ಅಸಹಾಯಕತೆಗೆ ಕಾರಣವಾಗಿತ್ತು.

ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನಿರಾಕರಿಸುವ ನಡುವೆಯೂ ನಗರಕ್ಕೆ ಆಗಮಿಸಿರುವ-ಆಗಮಿಸಲು ಸಿದ್ಧವಾಗಿರುವ ಸಾವಿರಾರು ಪಿಓಪಿ ಗಣಪತಿಗಳು ಹಾಗೆಯೇ ಕದ್ದುಮುಚ್ಚಿ ತಯಾರಾಗಿರುತ್ತಿರುವ ಪಿಓಪಿ ಗಣಪತಿಗಳಿಗೆ ಬ್ರೇಕ್ ಹಾಕುವ ಅತೀ ದೊಡ್ಡ ಸವಾಲು ಮಾಲಿನ್ಯ ನಿಯಂತ್ರಣ ಮಂಡಳಿ ಮೇಲಿದೆ.

ಈ ಬಗ್ಗೆ ಈಗಾಗ್ಲೇ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ರಾಜ್ಯಾದ್ಯಂತ ತಮ್ಮ ಇಲಾಖೆ ಅಧಿಕಾರಿಗಳಿಗೆ ಪಿಓಪಿಗೆ ಬ್ರೇಕ್ ಹಾಕ್ಬೇಕೆಂದು ಕಟ್ಟಪ್ಪಣೆ ಮಾಡಿದ್ದಾರೆ.ಅಷ್ಟೇ ಅಲ್ಲ,ಇದರಲ್ಲಿ ವಿಫಲವಾದವ್ರ ವಿರುದ್ದ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.ಅವರ ಖಡಕ್ ಆದೇಶಕ್ಕೆ ಕಂಗಾಲಾಗಿ ಹೋಗಿರುವ ಅಧಿಕಾರಿ ಸಿಬ್ಬಂದಿ ಮೈ ಚಳಿ ಬಿಟ್ಟು ಪರಿಶೀಲನೆ ಹಾಗೂ ಕಾರ್ಯಾಚರಣೆಗೆ ಇಳಿದಿದ್ದಾರೆ.ಪಿಓಪಿ ವಿರುದ್ಧದ ಶ್ರೀನಿವಾಸಲು ಅವರ ಪ್ರಾರಂಭಿಕ ಹೋರಾಟಕ್ಕೆ ಸಿಕ್ಕಿರುವ ಜಯ ಹೀಗೆ ನಿರಂತರವಾಗಿರಲಿ.

Spread the love
Leave A Reply

Your email address will not be published.

Flash News