ಪುಲಕೇಶಿನಗರ ಹೊತ್ತಿ ಉರಿಯೊಕ್ಕೆ ಕಾರಣ ಆ ಮಾಜಿಮೇಯರ್ರಾ…?!..ಹಾಲಿ ಶಾಸಕರ ವಿರುದ್ದ “ಅವ್ರು “ಮಸಲತ್ತು ನಡೆಸಿದ್ದು ನಿಜನಾ ?!ಈ ದುಸ್ಸಾಹಕ್ಕೆ ಸಾಥ್ ಕೊಟ್ರಾ “ಕೈ ” ಕಾರ್ಪೊರೇಟರ್ಸ್..?!

0

ಬೆಂಗಳೂರು: ಹೀಗೂ ಆಗಿರ್ಬೋದಾ….ಹೀಗೂ ನಡೆದಿರ್ಲಿಕ್ಕೆ ಸಾಧ್ಯವಿದೆಯಾ….ಪುಲಕೇಶಿನಗರ ಮತಾಂಧತೆಯ ಧಾವಾಗ್ನಿ ಯಲ್ಲಿ  ಉರಿಯಲು ಅದು ಕಾರಣವಿರಬಹುದಾ..ಇದು ಕಾರಣವಿರಬಹುದಾ..ಎಂದು ಮಾಡಲಾಗ್ತಿರುವ ತರಹೇವಾರಿ  ಊಹೆಗ ಳಲ್ಲಿ ಹೀಗೂ ಒಂದು ಅಂದಾಜನ್ನು ಮಾಡಲಾಗ್ತಿದೆ.ಅದು ನಿಜವಿರಬಹುದು..ಸತ್ಯಕ್ಕೆ ದೂರವಾದ ವಿಚಾರವೂ ಇರಬಹುದು.ಆದ್ರೆ ಅದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಪ್ರತಿನಿಧಿಸುವ ಆ ವಾರ್ಡ್ ಕಾರ್ಪೊರೇಟರ್ ಹಾಗು ಮಾಜಿ ಮೇಯರ್ ಅವರ ಕೈವಾಡವನ್ನು ಶಂಕಿಸಲಾಗ್ತಿರುವುದಕ್ಕೆ ಪುಷ್ಟಿ ನೀಡುವಂಥ ಒಂದಷ್ಟು ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡ್ತಿದೆ ಕನ್ನಡ ಫ್ಲಾಶ್ ನ್ಯೂಸ್.

ಘಟನೆಗೆ ಕಣ್ಣೀರಿಟ್ಟ ಶಾಸಕ ಅಖಂಡ ಶ್ರೀನಿವಾಸಮೂರ್ತಿ..
ಘಟನೆಗೆ ಕಣ್ಣೀರಿಟ್ಟ ಶಾಸಕ ಅಖಂಡ ಶ್ರೀನಿವಾಸಮೂರ್ತಿ..

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಡಿ.ಜೆ ಹಳ್ಳಿ,ಕೆಜೆಹಳ್ಳಿ ಪ್ರದೇಶಗಳು ಹೊತ್ತಿ ಉರಿದಿದ್ದಾಗಿದೆ..ಶಂಕೆಯ ಹಿನ್ನಲೆಯಲ್ಲಿ ಪೊಲೀಸ್ರು ಒಂದಷ್ಟು ಜನರನ್ನು ಎತ್ತಾಕೊಂಡು ಹೋಗಿ ವರ್ಕೌಟ್ ಮಾಡುತ್ತಲೂ ಇದ್ದಾರೆ.ಕೃತ್ಯಕ್ಕೆ ಕಾರಣವನ್ನು ರಾಜಕೀಯ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿವೆ.ಎಡಪಂಥೀಯರು-ಬಲಪಂಥೀಯರು-ನಡುಪಂಥೀಯರು ಕೂಡ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.ಒಂದ್ ಹೆಜ್ಜೆ ಮುಂದ್ಹೋಗಿ ಮಾದ್ಯಮಗಳು ಟಿಆರ್ ಪಿಗಾಗಿ ತಮ್ಮದೇ ವ್ಯಾಖ್ಯಾನ-ತಮ್ಮದೇ ಅವಲೋಕನ-ತಮ್ಮದೇ ವಿಮರ್ಷೆ ಮಟ್ಟದಲ್ಲಿ ಘಟನೆಯನ್ನು ನೋಡುವ ಪ್ರಯತ್ನವನ್ನೂ ಮಾಡುತ್ತಿವೆ..ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಕೂಡ ರಚಿಸಿ ಸತ್ಯಾನ್ವೇಷಣೆಗೆ ಹೊರಟಿದೆ.ಎಲ್ಲಾ ಸರಿ..ಇದೆಲ್ಲದರ ನಡುವೆಯೇ ಕನ್ನಡ ಫ್ಲಾಶ್ ನ್ಯೂಸ್ ಘಟನೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವ-ಸಂಬಂಧಿಸಿದ  ಕೆಲ ಮಾಹಿತಿ-ವ್ಯಕ್ತಿಗಳ ಅಭಿಪ್ರಾಯ-ಅನುಮಾನಗಳನ್ನೆಲ್ಲಾ ಕ್ರೋಢೀಕರಿಸುವ ಪ್ರಯತ್ನ ಮಾಡಿದೆ.

ಡಿಜೆ ಹಳ್ಳಿ..ಕೆಜೆ ಹಳ್ಳಿ ಹೊತ್ತಿ ಉರಿಯುವುದಕ್ಕೆ ಅವಹೇಳನಕಾರಿ ಪೋಸ್ಟ್ ಒಂದೇ ಕಾರಣವಾಯ್ತಾ.. ಕಡ್ಡಿಯಲ್ಲಿ ಹೋಗುವ ವಿಚಾರಕ್ಕೆ  ಕೊಡಲಿ ತೆಗೆದುಕೊಂಡ್ರು ಎನ್ನುವಂತೆ ಎಸ್ ಡಿಪಿಐ ಈ ಘಟನೆಗೆ ವಿದ್ವಂಸಕ ಕೃತ್ಯದ ತಿರುವು ಕೊಡ್ತಾ..ಇದರ ಹಿಂದೆ ಮತಾಂಧತೆಯೇ ಅಸಲಿ ಕಾರಣವಾಯ್ತಾ…ಹೀಗೊಂದಿಷ್ಟು ಪ್ರಶ್ನೆಗಳಿಗೆ ಪೊಲೀಸ್ ವ್ಯವಸ್ಥೆ ತನ್ನದೇ ಆದ ರೀತಿಯಲ್ಲಿ ಕಾನೂನು ಚೌಕಟ್ಟಿನಲ್ಲಿ ಉತ್ತರ ಕಂಡುಕೊಳ್ಳುವ ಯತ್ನ ಮಾಡ್ತಿದೆ..ಬಿಡಿ..ಅದು ಒತ್ತಟ್ಟಿಗಿರಲಿ,ಆದ್ರೆ ಒಟ್ಟಾರೆ ಘಟನೆ ಹಿಂದೆ ಬಲವಾಗಿ ಕೇಳಿಬರುತ್ತಿರುವ ಅನುಮಾನ ಇದೆಲ್ಲದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿದ್ವು ಎನ್ನೋದು.ಬಿಜೆಪಿ ಆರೋಪವೂ ಅದೇ..

ಆದ್ರೆ..ಆದ್ರೆ ಅಂತದ್ದೊಂದು  ರಾಜಕೀಯ ಷಡ್ಯಂತ್ರ ನಡೆಸಿದವ್ರು ಯಾರು..ಅವರ ಕುತಂತ್ರ ಏನಾಗಿತ್ತು..ಅಷ್ಟಕ್ಕೂ ಅದರಿಂದ ಅವರಿಗೆ ಧಕ್ಕುತ್ತಿದ್ದುದ್ದಾರೂ ಏನು..ಎನ್ನುವ ಪ್ರಶ್ನೆಗಳು ಸಹಜವಾಗೇ ಮೂಡುತ್ವೆ.ಕನ್ನಡ ಫ್ಲಾಶ್ ನ್ಯೂಸ್ ಕಲೆಹಾಕಿದ ಒಂದಷ್ಟು ಮಾಹಿತಿಗಳನ್ನು ಕ್ರೋಢೀಕರಿಸಿ ಹೇಳೋದಾದ್ರೆ  ಈ ದಳ್ಳುರಿಯ ಹಿಂದೆ ರಾಜಕೀಯ ಕೈವಾಡ-ಕುತಂತ್ರವಿದ್ದುದ್ದು ಬಹುತೇಕ ನಿಜದಂಥೆ ಕಾಣುತ್ತದೆ.ಇಂತದ್ದೊಂದು ಕೃತ್ಯದ ಹಿಂದೆ ಇರಬಹುದಾದವ್ರು ಕೂಡ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಪ್ರತಿನಿಧಿಸುವ ಕೈ ಪಕ್ಷದವರೇ ಎನ್ನಲಾಗ್ತಿರುವುದು ಅಘಾತಕಾರಿ ಅಷ್ಟೇ ಅಲ್ಲ ಅವಮಾನಕಾರಿ..ಎಲ್ಲಕ್ಕಿಂತ ಹೆಚ್ಚಾಗಿ ಅದೇ ಸತ್ಯವಾಗಿದ್ದರೆ ನಾಚಿಕೆಗೇಡಿನ ವಿಚಾರ ಕೂಡ.

ಮಾಜಿ ಮೇಯರ್ ಸಂಪತ್ ರಾಜ್
ಮಾಜಿ ಮೇಯರ್ ಸಂಪತ್ ರಾಜ್

ಕ್ಷೇತ್ರದಲ್ಲಿ ಅಜಾತಶತೃ ಶಾಸಕ ಎಂದೇ ಕರೆಯಿಸಿಕೊಂಡಿರುವ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧವೆ ತೊಡೆ ತಟ್ಟುವ-ದ್ವೇಷ ಕಾರುವ ಕಾಂಗ್ರೆಸ್ಸಿಗರು ಯಾರಿದ್ದಾರೆ ಎನ್ನುವ ಪ್ರಶ್ನೆ ಮೂಡೋದು ಸಹಜ.ಆದ್ರೆ ರಾಜಕೀಯ-ಅಧಿಕಾರಕ್ಕಾಗಿ  ಏನ್ ಬೇಕಾದ್ರೂ ಆಗಬಹುದೆನ್ನುವ ಮಾತುಗಳಿವೆ.ಹಾಗೆಯೇ ಆದ ನಿದರ್ಶನಗಳೂ ಇವೆ.ಅದಕ್ಕೆ ಅಖಂಡ ಶ್ರೀನಿವಾಸಮೂರ್ತಿ ಕೂಡ ಹೊರತಾಗಿರ್ಲಿಕ್ಕಿಲ್ಲ.

ಕೆಲವು ರಾಜಕೀಯ ಮೂಲಗಳ ಪ್ರಕಾರ ಅಖಂಡ ವಿರುದ್ಧ ತೊಡೆ ತಟ್ಟೊಕ್ಕೆ ಸಮರ್ಥವಿರುವ ಹಾಗೆಯೇ ಅಷ್ಟೇ ಬಲಾಢ್ಯವಿರುವ ವ್ಯಕ್ತಿ ಯಾರಾದ್ರೂ ಇದ್ರೆ ಅದು ಒಂದಾ ಮಾಜಿ ಶಾಸಕ ಪ್ರಸನ್ನಕುಮಾರ್ ಅಥವಾ ಮಾಜಿ ಮೇಯರ್  ಸಂಪತ್ ರಾಜ್ ಮಾತ್ರ ಎನ್ನಲಾಗ್ತಿದೆ.ಇವರಿಬ್ಬರ ಪೈಕಿ ಈಗಾಗ್ಲೇ ಅನಾರೋಗ್ಯದ ಕಾರಣಕ್ಕೆ ಪ್ರಸನ್ನಕುಮಾರ್ ಬಹುತೇಕ ನೇಪಥ್ಯಕ್ಕೆ ಸರಿದಿದ್ದಾರೆ.ಹಾಗಾದ್ರೆ ಅಖಾಡದಲ್ಲುಳಿಯುವ ಆ ಒಂದೇ ಹೆಸರು ಸಂಪತ್ ರಾಜ್…ಯೆಸ್..ಅದೇ ಸಂಪತ್ ರಾಜ್.,

ನಿನ್ನೆವರೆಗೆ ಎಸ್ ಡಿಪಿಐ ಸಂಘಟನೆಯತ್ತಲೇ ಹೊರಳುತ್ತಿದ್ದ ಆಪಾದನೆಯ ಬೊಟ್ಟು ಇವತ್ತು ಮಾಜಿ ಮೇಯರ್ ಸಂಪತ್ ರಾಜ್ ಕಡೆ ಶಿಫ್ಟ್ ಆಗ್ತಿದೆ.ಸಂಪತ್ ರಾಜ್ ಹೇಳಿ ಕೇಳಿ ಎರಡನೇ ಬಾರಿ ಕಾರ್ಪೊರೇಟರ್,ಮೇಯರ್ ಕೂಡ ಆದವ್ರು.ತನ್ನ ರಾಜಕೀಯ ಗಾಡ್ ಫಾದರ್ ಡಿಕೆಶಿ ಮೇಲೆ ಪ್ರಭಾವ ಬಳಸಿ ಕಳೆದ ಬಾರಿ ಕೊನೇ ಕ್ಷಣಗಳಲ್ಲಿ ಅಚ್ಚರಿಯ ರೀತಿಯಲ್ಲಿ ಸಿ.ವಿ ರಾಮನ್ ನಗರ ಕ್ಷೇತ್ರದ ಟಿಕೆಟ್ ಪಡೆದವ್ರು.ತುಂಬಾ ಕಡಿಮೆ ಮಾರ್ಜಿನ್ ನಲ್ಲಿ ಎಮ್ಮೆಲ್ಲೆ ಆಗುವ ಅವಕಾಶ ಕಳೆದುಕೊಂಡವ್ರು.

ಸಂಪತ್ ರಾಜ್ ಅವ್ರ ಹೆಸ್ರೇ ಏಕೆ…. ಈ ಪ್ರಶ್ನೆಗೂ ರಾಜಕೀಯ ವಲಯಗಳಲ್ಲಿ ಅದರದೇ ಆದ ವ್ಯಾಖ್ಯಾನಗಳಿವೆ.ಸಂಪತ್ ರಾಜ್ ಡಿಜೆ ಹಳ್ಳಿ ಕಾರ್ಪೊರೇಟರ್ ಆಗಿ ಆಯ್ಕೆಯಾದ 2010-15ರ ಅವಧಿಯಲ್ಲಿ  ಅಖಂಡ ಶ್ರೀನಿವಾಸ ಮೂರ್ತಿ ಓರ್ವ ಜೆಡಿಎಸ್ ಪಕ್ಷದ ನಾಯಕ ಅಷ್ಟೇ.ಅವರ ಧರ್ಮಪತ್ನಿ ಕಾವಲ್ ಭೈರಸಂದ್ರ ವಾರ್ಡ್ ನ  ಕಾರ್ಪೊರೇಟರ್ ಆಗಿದ್ರಷ್ಟೆ..ಅವರ ವಾರ್ಡ್ ಮಟ್ಟದ ಕೆಲಸಗಳನ್ನು ಅಖಂಡ ಶ್ರೀನಿವಾಸಮೂರ್ತಿ ನೋಡಿಕೊಳ್ಳುತ್ತಿದ್ದರು.

ಆದ್ರೆ ವಿಧಾನಸಭಾ ಎಲೆಕ್ಷನ್ ಅನೌನ್ಸ್ ಆಗ್ತಿದ್ದಂತೆ ಜೆಡಿಎಸ್ ನಲ್ಲಿದ್ದ ಜಮೀರ್ ಅವರನ್ನು ಹಿಡಿದು ಪುಲಕೇಶಿನಗರ  ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿ ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರದಲ್ಲಿ ಜಮೀರ್ ಅಲೆಯ ಕಾರಣದಿಂದ ಎಮ್ಮೆಲ್ಲೆಯಾದವ್ರು ಅಖಂಡ ಶ್ರೀನಿವಾಸ್ ಮೂರ್ತಿ.ಆ ಚುನಾವಣೆಯಲ್ಲಿಯೇ ಸಂಪತ್ ರಾಜ್ ಕೈ ಪಕ್ಷದ ಟಿಕೆಟ್ ಗೆ ಸಿಕ್ಕಾಪಟ್ಟೆ ಲಾಭಿ ಮಾಡಿದ್ರು.ಆದ್ರೆ ಡಿಕೆಶಿ ತಮ್ಮ ಶಿಷ್ಯನಿಗೆ ಸಪೋರ್ಟ್ ಮಾಡಲು ಲಾಭಿ ಮಾಡಿದ್ರೂ ಪ್ರಸನ್ನಕುಮಾರ್ ಅವರಿಗಿದ್ದ ಶಿಫಾರಸ್ಸಿನ ಕಾರಣಕ್ಕೆ ಅದು ಸಾಧ್ಯವಾಗಲೇ ಇಲ್ಲ.ತಾನು ಕಾರ್ಪೊರೇಟರ್ ಆದಾಗ ರಾಜಕೀಯವಾಗಿ ಏನೂ ಅಲ್ಲವಾಗಿದ್ದ ಅಖಂಡ,ಎಮ್ಮೆಲ್ಲೆ ಆಗಿದ್ದರ ಬಗ್ಗೆ ಸಂಪತ್ ಗೆ ಬೇಸರವಿತ್ತು ಎನ್ನಲಾಗ್ತಿದೆ.ಅವರಿಂದ ಒಂದಷ್ಟು ಅಂತರ ಕಾಯ್ದುಕೊಂಡಿದ್ದೂ ಅಷ್ಟೇ ಸತ್ಯ.ಎಮ್ಮೆಲ್ಲೆಯಾಗುವ ಕನಸಿಗೆ ಅಖಂಡ ಅವರ ಬೆಳವಣಿಗೆ ಮಾರಕವಾಗ್ತದೋ ಎನ್ನುವ ರಾಜಕೀಯ ಅಳುಕು ಕೂಡ ಇದಕ್ಕೆ ಕಾರಣವಾಗಿದ್ದಿರಬಹುದು.

ಮುಸ್ಲಿಂಮರು,ಅಲ್ಪಸಂಖ್ಯಾತರೇ ನಿರ್ಣಾಯಕವಾಗಿರುವ ಕ್ಷೇತ್ರವನ್ನು ಪ್ರಸನ್ನಕುಮಾರ್  ಕಾಂಗ್ರೆಸ್ನ   ಭದ್ರಕೋಟೆಯನ್ನಾ ಗಿಸಿಕೊಂಡಿದ್ರು.ಜಮೀರ್ ಪ್ರಭಾವ ಬೀರಲಾರಂಭಿಸಿದ ಮೇಲೆ ಕೈ ಬಿಟ್ಟು ಜೆಡಿಎಸ್ ಬೆಂಬಲಿಸಿ ಅಖಂಡರನ್ನು ಗೆಲ್ಲಿಸಿದ್ರು. ಕಳೆದ ಬಾರಿ ಬದಲಾದ ಸನ್ನಿವೇಶದಲ್ಲಿ ಜಮೀರ್ ಕಾರಣಕ್ಕೆ ಅಖಂಡ ಕೈ ಪಕ್ಷಕ್ಕೆ ಜಿಗಿದಾಗ ಕೈ ಪಕ್ಷದಿಂದ ಟಿಕೆಟ್ ಗಿಟ್ಟಿಸಬಹುದೆನ್ನುವ ಸಂಪತ್ ಲೆಕ್ಕಾಚಾರ ಕೈ ಕೊಟ್ಟಿತ್ತು.ಶತಗತಾಯ  ಸ್ವಕ್ಷೇತ್ರದಿಂದ್ಲೇ ಟಿಕೆಟ್ ಗಿಟ್ಟಿಸೊಕ್ಕೆ ಯತ್ನಿಸಿದ್ರೂ ಸಾಧ್ಯವಾಗಲಿಲ್ಲ.ಆನಂತರವೇ ಡಿಕೆಶಿ ಅವ್ರನ್ನು ಇಟ್ಕೊಂಡು ಸಿವಿ ರಾಮನ್ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದು,ಆ ಎಲೆಕ್ಷನ್ ನಲ್ಲಿ ಕೈ ಪಕ್ಷದವ್ರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇ ಆಗಿದ್ರೆ ಸಂಪತ್ ರಾಜ್ ಗೆಲ್ಲೋದ್ರಲ್ಲಿ ಡೌಟೇ ಇರಲಿಲ್ಲ..

ಸಂಪತ್ ರಾಜ್ ಗೆ ಈ ಕ್ಷಣಕ್ಕೂ ಸಿಟ್ಟು-ಆಕ್ರೋಶ-ಜಿದ್ದು,ಅಸಹನೆ ಇರುವುದೆಲ್ಲಾ ಅಖಂಡ ಮೇಲೆ ಎನ್ನಲಾಗ್ತದೆ.ಎರಡನೇ ಬಾರಿ ಗೆದ್ದ ಮೇಲಂತೂ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿ,ಕ್ಷೇತ್ರದ ಜನರೊಂದಿಗೆ ವಿಶ್ವಾಸ ಹೊಂದಿರುವ ಬೆಳವಣಿಗೆಯಿಂದ ಸಂಪತ್ ರಾಜ್ ಕಂಗಾಲಾಗಿ ಹೋಗಿದ್ರು..ಹೀಗೆ ಮುಂದುವರುದ್ರೆ ಕ್ಷೇತ್ರವನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗ್ತದೆ.ಮುಂಬರುವ ಬಿಬಿಎಂಪಿ ಎಲೆಕ್ಷನ್ ನಲ್ಲೂ ಗೆಲ್ಲೋದು ಕಷ್ಟವಾಗ್ಬೋದು ಎನ್ನುವ ಸಿಟ್ಟು ಆತಂಕದಲ್ಲಿ ಕುದಿಯುತ್ತಿದ್ದರಾ ಸಂಪತ್ ರಾಜ್ ಗೊತ್ತಿಲ್ಲ.

ಅಖಂಡ ಶ್ರೀನಿವಾಸಮೂರ್ತಿ ಅವರ ಬೆಳವಣಿಗೆಯಿಂದ ಸಹಜವಾಗೇ ಕಂಗಾಲಾಗಿ ಹೋಗಿದ್ದ ಸಂಪತ್ ರಾಜ್ ತನ್ನ ರಾಜಕೀಯ ಲೆಕ್ಕಾಚಾರಗಳಿಂದ ಅಖಂಡ ಅವರ ಜನಪ್ರಿಯತೆಗೆ ಬೆಂಕಿ ಹಾಕಲು ಇಂತದ್ದೊಂದು ದುಸ್ಸಾಹಸಕ್ಕೆ ಕೈ ಹಾಕಿದ್ರಾ…ಯಾವ ಸಮುದಾಯದಲ್ಲಿ ಜನಪ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದಾರೋ ಅದೇ  ಕೋಮಿನ ದೃಷ್ಟಿಯಲ್ಲಿ ವಿಲನ್ ಆಗಿ ರೂಪಿಸುವ ಪ್ಲ್ಯಾನ್ ಮಾಡಿದ್ರಾ….ಈ ಮೂಲಕ ಮುಂದಿನ ಚುನಾವಣೆಯಲ್ಲಿ  ಅಖಂಡ ಸ್ಥಾನ ತಾನ್ ತುಂಬಬಹುದೆನ್ನುವ ದುರಾಲೋಚನೆ ಏನಾದ್ರೂ ಅವರಿಗಿತ್ತಾ..ಇದಕ್ಕಾಗಿ ಅದೇ ಕ್ಷೇತ್ರದಲ್ಲಿರುವ ಇತರೆ ಕೈ ಕಾರ್ಪೊರೇಟರ್ ಗಳ ನೆರವನ್ನು ಪಡುದ್ರಾ,, ಗೊತ್ತಾಗ್ತಿಲ್ಲ.ಆದ್ರೆ ವಿಶ್ಲೇಷಣೆ ನಡೆಯುತ್ತಿರುವುದು ಮಾತ್ರ ಹಾಗೇನೇ..

ಆದ್ರೆ ಕೃತ್ಯ ಯಾರೇ ಎಸಗಿರ್ಲಿ,ಅದು ಇವತ್ತಲ್ಲ ನಾಳೆ ಬಹಿರಂಗವಾಗಲೇ ಬೇಕಿದೆ,ಒಂದ್ವೇಳೆ ಈ ಒಟ್ಟಾರೆ ಪ್ರಕರಣದಲ್ಲಿ ಸಂಪತ್ ರಾಜ್ ಅವರ ರಾಜಕೀಯ ಲೆಕ್ಕಾಚಾರಗಳಿದ್ವು ಎನ್ನೋದೇನಾದ್ರೂ ಪ್ರೂವ್ ಆದ್ರೆ ಜನರ ಸಿಂಪಥಿ ಅಖಂಡ ಶ್ರೀನಿವಾಸ್ ಗೆ  ಸಿಗುತ್ತೆ,..ಹೀರೋ ಆಗಲು ಹೋಗಿ ವಿಲನ್ ಆಗೋದು ಸಂಪತ್ ರಾಜ್ ಹಾಗೂ ಅವರ ಬೆಂಬಲಕ್ಕೆ ನಿಂತಿದ್ದಾರೆನ್ನಲಾಗ್ತಿರುವ ಕಾರ್ಪೊರೇಟರ್ಸ್ ಮಾತ್ರ..ಇದು ಯಾವ್ ಮಟ್ಟದ ಡ್ಯಾಮೇಜ್ ಉಂಟುಮಾಡಬಹುದೆಂದ್ರೆ ಎಮ್ಮೆಲ್ಲೆ ಎಲೆಕ್ಷನ್ ಗಲ್ಲ,ಮುಂದಿರುವ ಬಿಬಿಎಂಪಿ ಎಲೆಕ್ಷನ್ ನಲ್ಲೂ ಸಂಪತ್  ಹಾಗೂ ಅವರನ್ನು ಬೆಂಬಲಿಸಿದ ಕಾರ್ಪೊರೇಟರ್ ಗೆ ಬಿ ಫಾರಂ ಸಿಗೋದು ಕಷ್ಟ ವಾಗಬಹುದು..ಕೆಪಿಸಿಸಿ ಅಧ್ಯಕ್ಷರಾಗಿರುವ ಸಂಪತ್ ಗುರು ಡಿ.ಕೆ ಶಿವಕುಮಾರ್ ಕೂಡ ಸಂಪತ್ ನ್ನು ಬೆಂಬಲಿಸದಷ್ಟು ಅಸಹಾ ಯಕರಾಗ್ಬೋದು..ಇದನ್ನು ಕೈ ಮುಖಂಡರೇ ರಾಜಕೀಯ ಲೆಕ್ಕಾಚಾರಗಳಿಗೋಸ್ಕರ ವಿರೋಧಿಸ್ಬೋದು..

ಒಂದ್ವೇಳೆ  ಸಂಪತ್ ಗೆ ಟಿಕೆಟ್ ಸಿಕ್ಕೇ ಬಿಡ್ತು ಎಂದುಕೊಂಡ್ರೂ, ಶಾಸಕರಿಗೆ ಮಾಡಿದ ಮೋಸಕ್ಕೆ ಜನರು ಸುಮ್ಮನಿರು ತ್ತಾರಾ.. ಪ್ರತೀಕಾರಕ್ಕಾಗಿಯಾದ್ರೂ ಸಂಪತ್ ಹಾಗೂ ಇತರೆ ಕಾರ್ಪೊರೇಟರ್ಸ್ ಗಳನ್ನು ಸೋಲಿಸಿ ಮನೆಗೆ ಕಳಹಿಸುವ ಆತಂಕಗಳೆಲ್ಲಾ ಇವೆ..ಸಂಪತ್  ರಾಜ್ ಅವರ ಪೊಲಿಟಿಕಲ್ ಕೆರಿಯರ್ ಹಾಗು ಇಷ್ಟು ವರ್ಷ ಕಾಪಾಡಿಕೊಂಡು ಬಂದಿದ್ದ ಪ್ರತಿಷ್ಟೆ ಹಾಗೂ ಜನಪ್ರಿಯತೆ ಎಲ್ಲಾ ಮಣ್ಣುಪಾಲಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗ್ತಿದೆ..ಆದ್ರೆ ಯಾವ್ದ್ ಸತ್ಯ..ಯಾವ್ದ್ ಸುಳ್ಳು..ಇದೆಲ್ಲದರ ಹಿಂದಿರುವ ಷಡ್ಯಂತ್ರ ನಿಜಕ್ಕೂ ಯಾರದು ಎನ್ನುವುದೆಲ್ಲಾ ಪೊಲೀಸ್ ತನಿಖೆಯಿಂದ್ಲೇ ಸ್ಪಷ್ಟವಾಗುತ್ತೆ. 

Spread the love
Leave A Reply

Your email address will not be published.

Flash News