ಬೆಂಗಳೂರನ್ನು ಉದ್ದಾರ ಮಾಡ್ಬೇಕಾದವ್ರಿಂದ್ಲೇ 400 ಕೋಟಿ ಲೂಟಿ..! ಅಕ್ರಮದಲ್ಲಿ ಸಚಿವ ಸೋಮಣ್ಣ,ಲಿಂಬಾವಳಿ,ವಿಶ್ವನಾಥ್,ಸತೀಶ್ ರೆಡ್ಡಿ,ಮುನಿರತ್ನ ಹೆಸರು ಥಳಕು..

0

ಬೆಂಗಳೂರು:ಬೆಂಗಳೂರಿನಂಥ ಮಹಾನಗರದ ಅಭಿವೃದ್ದಿಗೆ ಟೊಂಕಕಟ್ಟಿ ಕೆಲಸ ಮಾಡ್ಬೇಕಾದ ಚುನಾಯಿತ ಪ್ರತಿನಿಧಿಗಳ ವಿರುದ್ಧವೇ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.ರಾಜಧಾನಿ ಅಭಿವೃದ್ದಿಗಂಥ ಬಿಡುಗಡೆಯಾದ ನಗರೋತ್ಥಾನ ನಿಧಿಯನ್ನು ದುರ್ಬಳಕೆ ಮಾಡಿಕೊಂಡು ಜನರ ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆನ್ನುವುದು ಅವರ ಮೇಲಿರುವ ಆರೋಪ.

ಬಿಜೆಪಿ ಸರ್ಕಾರದಲ್ಲಿರುವ ಕೆಲವು ಸಚಿವರು ಹಾಗೂ ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ನಗರೋತ್ಥಾನ ಯೋಜನೆಗೆ ಬಿಡುಗಡೆಯಾದ ಸಾವಿರಾರು ಕೋಟಿ ಹಣದಲ್ಲಿ ನೂರಾರು ಕೋಟಿ ಅಕ್ರಮವಾಗಿದೆ ಎನ್ನುವ ಗಂಭೀರ ಆರೋಪ ಮಾಡಿರುವುದು ಆಮ್ ಆದ್ಮಿ ಪಕ್ಷ.ಸಾಕ್ಷ್ಯ ಸಮೇತ ಇಂದು ಆಪ್ ಕಾರ್ಯಕರ್ತರು ಭ್ರಷ್ಟಾಚಾರ ನಿಗ್ರಹದಳ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ನಗರೋತ್ಸಾನ ಯೋಜನೆಯಲ್ಲಿ ಪ್ರತಿ ಕ್ಷೇತ್ರಕ್ಕೂ ಕೋಟ್ಯಾಂತರ ಹಣ ಬಿಡುಗಡೆಯಾಗುತ್ತೆ.ಈ ಹಣವನ್ನು ಅಭಿವೃದ್ದಿ ಕಾರ್ಯಗಳಿಗೆ ವಿನಿಯೋಗಿಸುವುದು ಆಯಾ ಕ್ಷೇತ್ರ ಶಾಸಕರ ಜವಾಬ್ದಾರಿ.ಆದ್ರೆ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದೇ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೊತೆ ಶಾಮೀಲಾಗಿ ಹಣವನ್ನು ಲೂಟ್ ಮಾಡಿದ್ದಾರೆ. ಅಭಿವೃದ್ದಿ ಹಾಗೂ ಹಣ ಖರ್ಚಾಗಿರುವುದು ಕೇವಲ ದಾಖಲೆಗಳಲ್ಲಿದೆಯೇ ಹೊರತು ಎಲ್ಲೂ ಬಹಿರಂಗವಾಗಿ ಕಾಣಿಸುತ್ತಿಲ್ಲ ಎನ್ನೋದು ಆಮ್ ಆದ್ಮಿ ಪಕ್ಷದ  ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಅರೋಪ.

ಸಚಿವರಾಗಿರುವ ಮಂತ್ರಿ ಸೋಮಣ್ಣ  ಶಾಸಕರಾದ ಎಸ್.ಆರ್.ವಿಶ್ವನಾಥ್, ಅರವಿಂದ ಲಿಂಬಾವಳಿ,ಸತೀಶ್ ರೆಡ್ಡಿ  ಅನರ್ಹ ಶಾಸಕ ಮುನಿರತ್ನ ಅವರ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ.ಹಣವನ್ನು ಖರ್ಚು ಮಾಡದೆ ಅಭಿವೃದ್ಧಿ ಮಾಡಲಾಗಿದೆ ಎಂದು ಬಿಂಬಿಸಲಾಗುತ್ತಿದೆ.

ಆದ್ರೆ ಅದನ್ನು ಹಿಡಿದುಕೊಂಡು ಕ್ಷೇತ್ರಗಳಿಗೆ ಹೋಗಿ ರಿಯಾಲಿಟಿ ಚೆಕ್ ಮಾಡಿದಾಗ ಇವರೆಲ್ಲರ ಬಂಡವಾಳ ಬಯಲಾಗಿದೆ.ಜನರ ತೆರಿಗೆ ಹಣವನ್ನು ಲೂಟ್ ಮಾಡಿರುವ ಇಂಥ ಭ್ರಷ್ಟರ  ವಿರುದ್ದ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ಸಲ್ಲಿಸಲಾಗಿದೆ ಎನ್ನೋದು ರಾಜ್ಯ ಕಾನೂನು ವಿಭಾಗದ ಅಧ್ಯಕ್ಷರಾದ ನಂಜಪ್ಪ ಕಾಳೇಗೌಡ ಆಪಾದನೆ.

ಬೆಂಗಳೂರು ನವ ನಗರೋಥ್ಥಾನ, ಕಾಮಗಾರಿಗಳಲ್ಲಿ ನಡೆದಿರುವ  ಭ್ರಷ್ಟಾಚಾರದ ಮೊತ್ತ ಬರೋಬ್ಬರಿ 400 ಕೋಟಿ ಎಂದು ಆಪ್ ಕಾರ್ಯಕರ್ತರು ಆಪಾದಿಸಿದ್ದಾರೆ. ಕೋಟ್ಯಂತರ ರೂಪಾಯಿಗಳ   ಅಕ್ರಮ ಕಾಮಗಾರಿಗಳಲ್ಲಿ  ನೇರವಾಗಿ ಶಾಸಕರು ಹಾಗೂ ಸಚಿವರ ಹಸ್ತಕ್ಷೇಪವಿದೆ.ಇದರ ಬಗ್ಗೆ ಸಮಗ್ರ ತನಿಖೆಯಾಗ್ಬೇಕು.ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗ್ತದೆ ಎಂದು ಆಪ್ ಕಾರ್ಯಕರ್ತರು ಎಚ್ಚರಿಸಿದ್ದಾರೆ. 

Spread the love
Leave A Reply

Your email address will not be published.

Flash News