ರಾಜಕೀಯಕ್ಕೋಸ್ಕರವಾದ್ರೂ ಕೆಜಿ ಹಳ್ಳಿ  ಕೃತ್ಯ ಖಂಡಿಸ್ಲಿಕ್ಕೆ”ಕೈ” ನಾಯಕರಿಗೆ ಮುಖವಿಲ್ಲದಂತೆ ಮಾಡ್ಬಿಟ್ರಾ “ಛೋಟೆ ಮಿಯಾ” ಜಮೀರ್…..   

0

ಬೆಂಗಳೂರು:ಯಾವ್ ಮುಖವಿಟ್ಟುಕೊಂಡು ಕೈ ನಾಯಕರು ಕೆಜಿ ಹಳ್ಳಿ ಕೃತ್ಯ ಖಂಡಿಸ್ಬೇಕೋ ಗೊತ್ತಾಗ್ತಿಲ್ಲ..ವಿದ್ವಂಸಕ ಕೃತ್ಯಕ್ಕೆ ಇಡೀ ರಾಜ್ಯ ಖಂಡನೆ ವ್ಯಕ್ತಪಡಿಸುತ್ತಿದ್ದರೆ,ಕೈ ನಾಯಕರಿಗೆ ಮಾತ್ರ ಹಾಗೆ ಮಾಡ್ಲಿಕ್ಕಾಗದ ಸಂದಿಗ್ಧತೆ ಹಾಗೂ ಅಸಹಾಯಕತೆಗೀಡು ಮಾಡಿಬಿಟ್ರು ಶಾಸಕ ಜಮೀರ್ ಅಹಮದ್.

ಹೌದು..ಹೇಗೇ ಮಾಡಿದ್ರೂ..ಹೇಗೆಲ್ಲಾ ನೋಡಿದ್ರೂ ಕೆಜಿ ಹಳ್ಳಿ ವಿದ್ವಂಸಕ ಪ್ರಕರಣದಲ್ಲಿ ಕಾಂಗ್ರೆಸ್ ಗೆ ಮುಖಭಂಗವಾಗಿದ್ದಂತೂ ನಿಜ.ಮುಖಂಡರು ತೀವ್ರ ಮುಜುಗರಕ್ಕೊಳಗಾಗುವಂತದ್ದೂ ಸತ್ಯ..ಕಾಂಗ್ರೆಸನ್ನು ಇಂತದ್ದೊಂದು ಸ್ಥಿತಿಗೆ ತಂದು ನಿಲ್ಲಿಸಿದ್ದು ಇನ್ನ್ಯಾರೂ ಅಲ್ಲ,ಮುಸ್ಲಿಂ ಸಮುದಾಯದವ್ರ ದೃಷ್ಟಿಯಲ್ಲಿ ಕೇವಲ ತಾನೊಬ್ಬ ಒಳ್ಳೆಯವನಾಗುವ ಸ್ವಾರ್ಥದಿಂದ ಕೆಲಸ ಮಾಡಿದ ಜಮೀರ್ ಅಹ್ಮದ್..ಇದನ್ನು ನಾವೇಳುತ್ತಿಲ್ಲ,ಸ್ವತಃ ಪಕ್ಷದೊಳಗೆ ಇಂತದ್ದೊಂದು ಆಕ್ರೋಶ ವ್ಯಕ್ತವಾಗ್ತಿದೆ.

ಹೇಗೆ ನೋಡಿದ್ರೂ,ಕೆಜಿ ಹಳ್ಳಿ,ಡಿಜೆ ಹಳ್ಳಿಯ ವಿದ್ವಂಸಕ ಘಟನೆಯಲ್ಲಿ ಜಮೀರ್ ಜವಾಬ್ದಾರಿಯುತ ಶಾಸಕನಾಗಿ ನಡೆದುಕೊಂಡರೆಂದೆನಿಸುವುದೇ ಇಲ್ಲ..ಒಂದು ಸಮುದಾಯವನ್ನು ಓಲೈಸುವ ನಾಯಕನಾಗಿ ನಡೆದುಕೊಂಡರಷ್ಟೇ..ಘಟನೆ ನಡೆದಾಗಿನಿಂದ್ಲೂ ಅಲ್ಲ,ಈ ಕ್ಷಣದವರೆಗೂ ಝಮೀರ್ ಅವರ ವರ್ತನೆ-ಧೋರಣೆ-ನಡುವಳಿಕೆ ಸಾಕಷ್ಟು ಅನುಮಾನ ಹಾಗೂ ಗೊಂದಲಕ್ಕೆ ಎಡೆಮಾಡಿಕೊಡುತ್ತೆ.

ತನ್ನ ಕೃಪೆಯಿಂದಲೇ ಗೆದ್ದ, ಶಾಸಕ ಅಖಂಡ ಶ್ರೀನಿವಾಸ್ ಬೆನ್ನಿಗೆ ನಿಲ್ಲಬೇಕಿದ್ದ,ಘಟನೆಗೆ ನ್ಯಾಯ ತೀರಿಸ್ಬೇಕಿದ್ದ  ಜಮೀರ್ ಅಹ್ಮದ್ ಅದ್ಯಾಕೋ ಜೀವದ ಗೆಳೆಯನಿಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸದೆ ತನ್ನ ಸಮುದಾಯದವ್ರು ಎನ್ನುವ ಕಾರಣಕ್ಕೆ ಕಿಡಿಗೇಡಿಗಳನ್ನು ಬೆಂಬಲಿಸುವ ಕೆಲಸಕ್ಕೆ ಮುಂದಾದ್ರಾ ಎನ್ನುವ ಮಾತುಗಳು ಒಟ್ಟಾರೆ ಸನ್ನಿವೇಶದ ಹಿನ್ನಲೆಯಲ್ಲಿ ಕೇಳಿಬರುತ್ತಿವೆ. ಸಿದ್ಧರಾಮಯ್ಯನವರ ಆಪ್ತ ವಲಯದ ನೀಲಿ ಕಣ್ಣಿನ ಹುಡುಗನಾಗಿ ಬೆಳೆಯುತ್ತಿದ್ದಾರೆ  ಜಮೀರ್ ಅಹಮದ್ .ಈ ಪ್ರಕರಣದಲ್ಲಿ ಎಷ್ಟರ ಮಟ್ಟಿಗೆ ಲಾಭ ಮಾಡಿಕೊಳ್ಳಬೇಕೋ ಅಷ್ಟರ ಪ್ರಮಾಣದಲ್ಲಿ ಅವಕಾಶವನ್ನು ಬಳಸಿಕೊಂಡಿದ್ದಾರೆ.  ತಮ್ಮ ಸಮುದಾಯದ  ಧರ್ಮಗುರುಗಳ ಕರೆದು ಅಖಂಡ ಶ್ರೀನಿವಾಸ್ ಅವರ ಸುಟ್ಟಮನೆ ತೋರಿಸಿ ಅದರ ಪುನಶ್ಚೇತನ ಖುದ್ದು ನಿಂತು ತಾವೇ ಮಾಡಿಸುವುದಾಗಿ ಜಮೀರ್ ಹೇಳಿದ್ದಾರೆ.ಇದೆಲ್ಲಾ ಇಂಥಾ ಸಂದರ್ಭದಲ್ಲಿ ಬೇಕಿತ್ತಾ..ಇದು ರವಾನಿಸುವ ಸಂದೇಶ ಎಂತದ್ದು..ಅದರ ಇಂಪ್ಯಾಕ್ಟ್ ಕಾಂಗ್ರೆಸ್ ಪಕ್ಷ ಹಾಗು ಮುಖಂಡರ ಮೇಲೆ ಹೇಗಾಗುತ್ತೆ ಎನ್ನುವ ಸಾಮಾನ್ಯ ವಿವೇಕ-ಜ್ಞಾನ ಜಮೀರ್ ಗೆ ಇಲ್ಲದೇ ಹೋಯ್ತಾ..  

ಅಷ್ಟೇ ಅಲ್ಲ,ಪೊಲೀಸರ ಗೋಲಿಬಾರ್ ನಲ್ಲಿ ಸತ್ತವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ್ದು,ಅವರ ಕುಟುಂಬಕ್ಕೆ ಪರಿಹಾರ ಕೊಡಿ ಎಂದು ಸರ್ಕಾರವನ್ನು ಆಗ್ರಹಿಸಿದಂತದ್ದು ಕೂಡ ಜಮೀರ್ ಬಗ್ಗೆ ಪಕ್ಷ ಮುಜುಗರ ಪಡುವಂತಾಗಿದೆ.ಅವರ ಈ ಹೇಳಿಕೆ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುಪ್ಪವಾಗಿದೆ .ಅದರ ಜೊತೆಜೊತೆಗೆ  ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿ ಕಾನೂನನ್ನು ಕೈಗೆ ತೆಗೆದುಕೊಂಡು ಕ್ಷೇತ್ರವನ್ನೇ ಸುಟ್ಟು ಕರಕಲು ಮಾಡಿದ ಕುಟುಂಬಗಳಿಗೆ ತಲಾ ಐದು ಲಕ್ಷ ಕೊಟ್ಟು ತಮ್ಮ ಸ್ವಾರ್ಥ ರಾಜಕೀಯ ಮೆರೆದಿರುವುದರಿಂದ ಜಮೀರ್ ಕಿಡಿಗೇಡಿಗಳ ಬೆನ್ನಿಗೆ ನಿಂತ್ರಾ ಎನ್ನುವ ಶಂಕೆ ಮೂಡಿದೆ. ಕಿಡಿಗೇಡಿಗಳ ಕೃತ್ಯ ಖಂಡಿಸುತ್ತಿರುವ ಬೆನ್ನಲ್ಲೇ ದುಷ್ಕರ್ಮಿಗಳಿಗೆ ಸಹಕಾರ ಕೊಟ್ಟ ಅದೇ ಜಮೀರ್ ಅವರನ್ನುಹೇಗೆ  ಸಮರ್ಥಿಸಿಕೊಳ್ಳಬೇಕೆಂದು ಗೊತ್ತಾಗದೆ ಕೈ ಮುಖಂಡರು ಪೀಕಲಾಟಕ್ಕೆ ಸಿಲುಕಿದ್ದಾರೆ.ಜಮೀರ್ ಅವರಿಂದ ಪಕ್ಷ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಮುಜುಗರ ಅನುಭವಿಸುವಂತಾಗಿದೆ.

ಅಂದ್ಹಾಗೆ ಈ ಘಟನೆಯಲ್ಲಿ ಕಾಂಗ್ರೆಸ್ ನ ಪರಿಸ್ಥಿತಿ ಹೇಗಿದೆಯೆಂದರೆ ತಮ್ಮದೇ ಪಕ್ಷದ ಶಾಸಕನ ಮೇಲೆ ಆದ ಹಲ್ಲೆ, ಮನೆಯ ಮೇಲೆ ಆದ ಅವಘಡವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಆಗದ ಸ್ಥಿತಿ ತಲುಪಿದೆ .ಸಿದ್ದರಾಮಯ್ಯನವರ ಶೀತಲಸಮರ. ಡಿ ಕೆ ಶಿವಕುಮಾರ್  ಧೀರ ನಾಯಕ ತ್ತ್ವಗಳೇ ಕಾಂಗ್ರೆಸ್ ಪಾಲಿಗೆ ಮುಳುವಾಗುವ ಲಕ್ಷಣಗಳು ಕಾಣುತ್ತಿವೆ.

ಕೆಜಿ ಹಳ್ಳಿ ಘಟನೆಯಲ್ಲಿ ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ಹಾಗೆಯೇ ಕೈ ಪಕ್ಷ ಕೇವಲ ಒಂದು ಮುಸ್ಲಿಂ ಸಮುದಾಯವನ್ನು ಮಾತ್ರ ಓಲೈಸುವ ಪಕ್ಷ ಎನ್ನುವ ಭಾವನೆ ವ್ಯಕ್ತವಾಗೊಕ್ಕೆ ಕಾರಣವಾದ ಜಮೀರ್ ವಿರುದ್ಧ ಕಾಂಗ್ರೆಸ್ ಯಾವ್ ರೀತಿ ಕ್ರಮ ಕೈಗೊಳ್ಳುತ್ತೆನ್ನುವುದು ಕುತೂಹಲ ಮೂಡಿಸಿದೆ.

Spread the love
Leave A Reply

Your email address will not be published.

Flash News