ಮಹಾತ್ಮರೆಂದ್ರೆ “ಇವರಿಗೆ” ಅಷ್ಟೊಂದು ನಿರ್ಲಕ್ಷ್ಯನಾ..!? ಆ ಮಟ್ಟದ ತಾತ್ಸಾರನಾ..?!ಶೂ ಧರಿಸಿಯೇ ಮಹಾತ್ಮರ ಫೋಟೋಗಳಿಗೆ ಪುಷ್ಪಾರ್ಚನೆ…

0
ಬಿಡಿಎ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ವೇಲೆ ಶೂ ಧರಿಸಿ ಮಹಾತ್ಮರಿಗೆ ಪುಷ್ಪಾರ್ಚನೆ ಮಾಡಿದ ಕಮಿಷನರ್ ಮಹಾದೇವ್
ಬಿಡಿಎ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ವೇಳೆ ಶೂ ಧರಿಸಿ ಮಹಾತ್ಮರಿಗೆ ಪುಷ್ಪಾರ್ಚನೆ ಮಾಡಿದ ಕಮಿಷನರ್ ಮಹಾದೇವ್…!!
ಶೂ ಹಾಕಿಯೇ ಪುಷ್ಪಾರ್ಚನೆ ಮಾಡಿದ್ರಿ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ..
ನೀವು..ಶೂ ಹಾಕಿಯೇ ಪುಷ್ಪಾರ್ಚನೆ ಮಾಡಿದ್ರಿ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ..!!

ಬೆಂಗಳೂರು:ಒಳ್ಳೆಯ ಕಾರಣಗಳಿಗೆ ಸುದ್ದಿಯಾಗ್ಬೇಕಿದ್ದ ಬಿಡಿಎ ಕಮಿಷನರ್ ಮಹಾದೇವ್..ಅನಗತ್ಯ ವಿವಾದಗಳಿಂದ್ಲೇ ಹೆಚ್ಚೆಚ್ಚು ಚರ್ಚೆಗೀಡಾಗುತ್ತಿದ್ದಾರೆ.ಆಡಳಿತ ವ್ಯವಸ್ಥೆಯನ್ನು ತಮ್ಮದೇ “ಶೈಲಿ”ಮೂಲಕ ವಿವಾದಗಳ ಗೂಡನ್ನಾಗಿಸಿರುವ ಆರೋಪದ ಬೆನ್ನಲ್ಲೇ ಮತ್ತೊಂದು ಕ್ಷಮಿಸಲಾಗದಂಥ ಮಹಾಪ್ರಮಾದವನ್ನು ಎಸಗುವ ಮೂಲಕ ಟೀಕಾಕಾರರ ಬಾಯಿಗೆ ಎಲೆ ಅಡಿಕೆಯಾಗಿದ್ದಾರೆ.ಮುಖ್ಯಮಂತ್ರಿಗಳು ನಿಷ್ಪಕ್ಷಪಾತವಾಗಿ ಘಟನೆಯನ್ನು ಅವಲೋಕಿಸಿದ್ದೇ ಆದಲ್ಲಿ ಒಂದ್ ಕ್ಷಣವೂ ಮಹಾದೇವ್ ಅವರನ್ನು ಬಿಡಿಎನ ಕಮಿಷನರ್ ಸ್ಥಾನದಲ್ಲಿ ಉಳಿಯೊಕ್ಕೆ ಅವಕಾಶ ನೀಡಬಾರದು. ಏಕೆಂದರೆ ಮಿಸ್ಟರ್ ಮಹಾದೇವ್ ಅವರು ಮಾಡಿರುವುದು ಅಂಥಾ ಘನಘೋರ ಕೃತ್ಯ.

ಇಂದು ದೇಶಾದ್ಯಂತ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಅಲ್ಲದಿದ್ದರು ಸಂಭ್ರಮದಿಂದ್ಲೇ ನೆರವೇರಿಸಲಾಗಿದೆ.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲೂ ಇಂದು ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ.ಪ್ರಾದಿಕಾರದ ಮುಖ್ಯಸ್ಥರಾಗಿ ಮಹಾದೇವ್ ಅವರಿಗೆ ದ್ವಜಾರೋಹಣ ನೆರವೇರಿಸುವ ಹೊಣೆ ನೀಡಲಾಗಿತ್ತು.ಅದನ್ನು ಅವರು ಮಾಡಿದ್ರು ಕೂಡ.ಆದ್ರೆ ಅವರು ಜವಾಬ್ದಾರಿಯನ್ನು ನೆರವೇರಿಸಿದ ಮೇಲೆ ಮಹಾತ್ಮಾಗಾಂಧೀ ಸೇರಿದಂತೆ ವಿವಿಧ ಗಣ್ಯರ ಫೋಟೋಗಳಿಗೆ ಪುಷ್ಪಗುಚ್ಛ ಸಮರ್ಪಿಸುವ ವೇಳೆ ಸಾಮಾನ್ಯಜ್ಞಾನವೂ ಇಲ್ಲದವರಂತೆ ವರ್ತಿಸಿದ್ದಾರೆ( ದ್ವಜಾರೋಹಣ ವೇಳೆಯೂ ಮಹಾದೇವ್ ಬೂಟ್ ಧರಿಸಿದ್ದರೆನ್ನುವ ಮಾತಿದೆ..ಆದ್ರೆ ಅದಕ್ಕೆ ಫೋಟೋ ಸಾಕ್ಷ್ಯಗಳಿಲ್ಲ..ಒಂದ್ವೇಳೆ ಹಾಗೆಯೇ ಆಗಿದ್ದರೆ ಅದು ಕೂಡ ಪ್ರಮಾದವಾಗಬಲ್ಲದು)

ತಾನೊಬ್ಬ ಐಎಎಸ್ ಅಧಿಕಾರಿ..ತಾನ್ ಏನ್ ಮಾಡ್ಬೇಕು..ಏನ್ ಮಾಡಿದ್ರೆ ಏನಾಗುತ್ತೆ ಎನ್ನುವುದರ ವಿವೇಚನೆಯೂ ಇಲ್ಲದಂತೆ ಶೂ ಹಾಕ್ಕೊಂಡು ಮಹಾತ್ಮರ ಫೋಟೋಗಳಿಗೆ ಪುಷ್ಪನಮನ ಸಲ್ಲಿಸಿದ್ದಾರೆ.ಇಂತದ್ದೊಂದು ಸಂದರ್ಭಗಳಲ್ಲಿ ಯಾವ್ ರೀತಿ ವರ್ತಿಸಬೇಕೆನ್ನುವುದರ ಮಾಹಿತಿ ಮಹಾದೇವ್ ಅವರಿಗೆ ಇರಲಿಲ್ಲವೋ..ಅಥವಾ ಸತ್ಯ ಗೊತ್ತಿದ್ದ ಮೇರೆಗೂ ತಾನ್ ಏನ್ ಮಾಡಿದ್ರೂ ಅದನ್ನು ಮುಚ್ಚಾಕೊಕ್ಕೆ ದೊಡ್ಡವರ ಕೃಪಕಟಾಕ್ಷ ಪಡೆಯಬಹುದು..ಅವರ ಆಶ್ರಯ ಪಡೆದು ತಪ್ಪನ್ನು ಮುಚ್ಚಾಕಬಹುದೆನ್ನುವ ಓವರ್ ಕಾನ್ಫೆಡೆನ್ಸ್ ನಿಂದ ಪ್ರಜ್ಞಾಪೂರ್ವಕವಾಗೇ ಹೀಗೆ ಮಾಡಿದ್ರೋ ಗೊತ್ತಾಗ್ತಿಲ್ಲ..ಆದ್ರೆ ಮಾಡಿರುವುದಂತೂ ಸ್ವಾತಂತ್ರ್ಯೋತ್ಸವದ ಆಚರಣೆಗಿರುವ ಮಹತ್ವಕ್ಕೆ ಅಪಮಾನ ಹಾಗೂ ಸಲ್ಲಿಸಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ  ಮಹಾತ್ಮರ ತ್ಯಾಗಬಲಿದಾನಕ್ಕೆ ಅಗೌರವ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮಹಾದೇವ್  ಅವರ ಪಕ್ಕದಲ್ಲಿರುವ ಬಿಡಿಎ ಕಾರ್ಯದರ್ಶಿ ಡಾ.ವಾಸಂತಿ ಅಮರ್ ಅವರು ಚಪ್ಪಲಿ ತೆಗೆದು ಗೌರವ ಸಲ್ಲಿಸುವ ಕೆಲಸ ಮಾಡಿದ್ರೆ,ಓರ್ವ ಕಮಿಷನರ್ ಆಗಿ ಶೂ ಹಾಕಿ ಪುಷ್ಪನಮನ ಸಲ್ಲಿಸ್ತಾರೆಂದ್ರೆ ಮಹಾದೇವ್ ಅವರಿಗೆ ಯಾರ್ ಬುದ್ದಿ ಹೇಳ್ಬೇಕೋ ಗೊತ್ತಾಗ್ತಿಲ್ಲ.ಈ ಬಗ್ಗೆ ವಾಸಂತಿ ಅಮರ್ ಅವರನ್ನೇ ಪ್ರಶ್ನಿಸಿದ್ರೆ ಕಮಿಷನರ್ ಸಾಹೇಬ್ರನ್ನು ನಾನು ಗಮನಿಸಿಲ್ಲ..ನನಗೂ ಮಾದ್ಯಮದವರೊಬ್ಬರು ಶೂ ಹಾಕಿ ಪುಷ್ಪನಮನ ಸಲ್ಲಿಸುತ್ತಿರುವ ಫೋಟೋವನ್ನು ಕಳುಹಿಸಿದ್ದಾರೆ..ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದ್ರು.

ಉತ್ತರ ಕೊಡಿ ಪಿಆರ್ ಓ ಗಿರೀಶ್ ಅವ್ರೇ..
ಉತ್ತರ ಕೊಡಿ  ಗಿರೀಶ್ ಅವ್ರೇ..

ಸ್ವಾತಂತ್ರ್ಯ ದಿನಾಚರಣೆ,ಗಣರಾಜ್ಯೋತ್ಸವದಂಥ  ಸಂದರ್ಭಗಳಲ್ಲಿ ಹಿರಿಯ ಅಧಿಕಾರಿಗಳಾಗಿ ಯಾವ್ ರೀತಿ ವರ್ತಿಸಬೇಕು..ನಡೆದುಕೊಳ್ಳಬೇಕು..ನಡುವಳಿಕೆಗಳು ಹೇಗಿರಬೇಕು..ಸ್ವಲ್ಪ ತಪ್ಪಾದ್ರೂ ಯಾವ್ ರೀತಿಯ ಸಂಕಷ್ಟಕ್ಕೆ ಸಿಲುಕಬೇಕಾಗ್ತದೆ.ಅದು ವೃತ್ತಿಗೆ ಯಾವ್ ರೀತಿ ಕಂಟಕ ತರಬಹುದೆನ್ನುವ ವಿಷಯಗಳನ್ನೆಲ್ಲಾ ಹೇಳಿಕೊಟ್ಟಿ ರಲಾಗಿರುತ್ತೆ.ಇದನ್ನು ಮಹಾದೇವ್ ಅವರಿಗೂ ಹೇಳಿಕೊಟ್ಟಿರಬಹುದೆನ್ನುವುದು..ಇದೆಲ್ಲಾ ಗೊತ್ತಿದ್ದರೂ ಅಗೌರವ ಸಲ್ಲಿಸುವ-ಅಪಮಾನ ಮಾಡುವಂಥ ದುಸ್ಸಾಹಸ ಮಾಡಿದ್ದು ಸರಿನಾ.ಇದನ್ನು ಇಲ್ಲಿಗೆ  ಬಿಡೋದಿಲ್ಲ.. ಮುಖ್ಯಮಂತ್ರಿಗಳವರೆಗೂ ಈ ದೂರನ್ನು ಕೊಂಡೊಯ್ಯುತ್ತೇವೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.

ಎಲ್ಲಾ ವಿಷಯಗಳಲ್ಲು ತಮ್ಮದೇ ಆದ ಧಾಟಿಯಲ್ಲಿ ಸ್ಪಷ್ಟನೆ ಕೊಡ್ತಾ,ಹುಳುಕುಗಳನ್ನು ಮುಚ್ಚಿಕೊಳ್ಳುವ ಕೆಲಸ ಮಾಡ್ತಾ ಬಂದಿರುವ ಪಿಆರ್ ಓ ಗಿರೀಶ್ ಅವ್ರೇ ತಮ್ಮ ಕಮಿಷನರ್ ಮಾಡಿರುವ ಕೃತ್ಯದ ಬಗ್ಗೆ ಏನನ್ನುತ್ತೀರಿ..ಅವರು ಮಾಡಿದ್ದು ಎಲ್ಲರೂ ಮೆಚ್ಚುವಂಥ ಕೆಲಸವನ್ನಾ..ಸ್ವಾತಂತ್ರ್ಯೋತ್ಸದ ಹಿರಿಮೆ-ಗರಿಮೆ ಎತ್ತಿ ಹಿಡಿಯುವ ಕೆಲಸವನ್ನಾ..ಸರ್ಕಾರಿ  ನಿಯಮಗಳ ಚೌಕಟ್ಟಿನಲ್ಲಿ ಹೀಗೆ ಮಾಡೊಕ್ಕೆ ಅವಕಾಶವಿದೆಯಾ.?..ಹಾಗೆ ಮಾಡಿದ್ರೆ ಕ್ಷಮಾದಾನ ಇದೆಯೇ?ದಯವಿಟ್ಟು ತಿಳಿಸಬೇಕು..

ಕಮಿಷನರ್ ಸಾಹೇಬ್ರು ಮಾಡಿದ್ದು ಸರಿಯಾಗಿಯೇ ಇದೆ ಎನ್ನುವುದು ನಿಮ್ಮ ಸಮರ್ಥನೆಯಾದ್ರೆ ಅದಕ್ಕೆ ಸ್ಪಷ್ಟನೆ ಕೊಡಿ..ನಿಮ್ಮ ಸ್ಪಷ್ಟನೆಯನ್ನು  ಪುಷ್ಟೀಕರಿಸುವ ಸಾಕ್ಷ್ಯಾಧಾರಗಳನ್ನು ದಯವಿಟ್ಟು ಸಾರ್ವಜನಿಕರ ಮುಂದಿಡಿ..ಎಲ್ಲದಕ್ಕೂ ಮೂಗಿ ತೂರಿಸಿಕೊಂಡು ಬರುವ ಪಿಆರ್ ಓ ಗಿರೀಶ್ ಸಾರ್ವಜನಿಕವಾಗಿ ಉದ್ಭವಾಗಿರುವ ಈ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲೇಬೇಕು..ಅದು ನಿಮ್ಮ ನೈತಿಕ ಹೊಣೆಗಾರಿಕೆಯೂ ಕೂಡ..ಎಲ್ಲರ ಜವಾಬ್ದಾರಿ ನೆನಪಿಸುವ ನೀವು..ಕಮಿಷನರ್ ಸಾಹೇಬ್ರ ವಿಷಯದಲ್ಲಾಗಿರುವ ಪ್ರಮಾದದ ಬಗ್ಗೆ ವಿವರಣೆ ಕೊಡ್ಬೇಕಾದದ್ದು ನಿಮ್ಮ ಕರ್ತವ್ಯ ಎನ್ನುವುದನ್ನು ದಯವಿಟ್ಟು ಮರೆಯಬೇಡಿ..  

Spread the love
Leave A Reply

Your email address will not be published.

Flash News