2 ತಿಂಗ್ಳಿಂದ ಸಂಬಳವಿಲ್ಲದೆ ಗದ್ದೆ-ತೋಟಗಳಲ್ಲಿ ಕೂಲಿಗಳಾದ… ತರಕಾರಿ ಮಾರಾಟಕ್ಕಿಳಿದ… ಬಿಎಂಟಿಸಿ ನೌಕರರು….

0

ಬೆಂಗಳೂರು:ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವ್ರೇ ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳುವಂಥ ಸ್ಟೋರಿ ಇದು…ನಿಮ್ಮ ಮನೆ ಮಕ್ಳ ಪರಿಸ್ಥಿತಿ ಹೀಗಾಗಿದ್ರೆ ಏನ್ ಮಾಡ್ತಿದ್ರಿ..ಅವರಿವರ ಗದ್ದೆ-ತೋಟಗಳಲ್ಲಿ ಕೂಲಿಗಳಾಗಿ ದುಡಿಯೊಕ್ಕೆ ಅವರನ್ನು ಬಿಡ್ತಿದ್ರಾ..ಸಾರಿಗೆ ಇಲಾಖೆ ಎನ್ನುವ ಕುಟುಂಬದ ಯಜಮಾನರಾಗಿರೋ ನಿಮಗೆ, ಸಾರಿಗೆ ನಿಗಮಗಳಲ್ಲಿ 2 ತಿಂಗಳಿಂದ ಸಂಬಳವಿಲ್ಲದೆ ನೌಕರರು ಬದುಕಿಗೋಸ್ಕರ ಏನೆಲ್ಲಾ ಮಾಡ್ತಿದ್ದಾರೆನ್ನೋ ಮಾಹಿತಿಯಾದ್ರೂ ಇದೆಯೇ..ತುತ್ತಿನ ಚೀಲ ತುಂಬಿಸಿಕೊಳ್ಳೊಕ್ಕೆ ಏನೆಲ್ಲಾ ಉಪಕಸುಬುಗಳನ್ನು ಅವಲಂಭಿಸಿದ್ದಾರೆನ್ನೋದು ತಿಳಿದಿದ್ಯಾ..ಎಸಿ ಕಚೇರಿಯಲ್ಲಿ ಕುತ್ಕೊಂಡ್ ದರ್ಬಾರ್ ಮಾಡೋದನ್ನು ಬಿಟ್ಟು ಸ್ವಲ್ಪ ಹೊರಗೆ ಬಂದ್ ನೋಡ್ರಿ..ಇದು ಕನ್ನಡ ಫ್ಲಾಶ್ ನ್ಯೂಸ್ ನಿಮ್ಮಲ್ಲಿ ಮಾಡಿಕೊಳ್ತಿರುವ ಮನವಿ..

ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿರುವ ಸಾರಿಗೆ ನಿಗಮಗಳು ತನ್ನ ಸಂಕಷ್ಟಸಮಸ್ಯೆಯನ್ನು ನೌಕರರ ಹೆಗಲಿಗೇರಿಸಿರೋ ಆಪಾದನೆಗೆ ತುತ್ತಾಗಿವೆ.ನೌಕರರಿಗೆ ಸಂಬಳ ಕೊಡ್ಲಿಕ್ಕಾಗದೆ ಸೀಮಿತ ಸಂಖ್ಯೆಯ ಬಸ್ ಗಳನ್ನು ರಸ್ತೆಗಿಳಿಸದೆ ಕೆಲವಷ್ಟು ನೌಕರರಿಗೆ ಮಾತ್ರ ಡ್ಯೂಟಿ ಕೊಡೋದು..55 ವರ್ಷ ಮೇಲ್ಪಟ್ಟವರಿಗೆ ವಾಲೆಂಟೈರಿ ರಿಟೈರ್ಮೆಂಟ್ ಸ್ಕೀಮ್ ನ್ನು ಬಲವಂತವಾಗಿ ಜಾರಿಗೊಳಿಸುವುದು.. ರೀತಿಯ ಕೆಲವು ವ್ಯವಸ್ಥೆ ಅಳವಡಿಸಿಕೊಂಡಿದೆ.ನಿಗಮ ನಷ್ಟದಲ್ಲಿದೆ ಒಪ್ಪಿಕೊಳ್ಳೋಣ,ಆದ್ರೆ ಅದಕ್ಕಾಗಿ ನೌಕರರ ಹೊಟ್ಟೆ ಮೇಲೆ ಹೊಡೆಯುವಂತದ್ದು ಎಷ್ಟು ಸರಿ..ಇದನ್ನು ಯಾಕೆ ಹೇಳ್ತಿದೀವಿ ಗೊತ್ತಾ,ಸಂಬಳ ಸಿಗದೆ ನೌಕರರು ಬೆಂಗಳೂರನ್ನು ತೊರೆದು ತಮ್ತಮ್ಮ ಊರುಗ್ರಾಮಗಳಲ್ಲಿ ಉಪಕಸುಬುಗಳನ್ನು ಶುರುವಿಟ್ಟುಕೊಂಡಿದ್ದಾರೆ.

ಕೆಎಸ್ ಆರ್ ಟಿಸಿ,ಬಿಎಂಟಿಸಿ,ಈಶಾನ್ಯ ಸಾರಿಗೆ.ವಾಯುವ್ಯ ಸಾರಿಗೆಯ ನಾಲ್ಕು ನಿಗಮಗಳಲ್ಲಿ ಸುಮಾರು 1 ಲಕ್ಷದ 35 ಸಾವಿರದಷ್ಟು ಕೆಲಸ ಮಾಡುತ್ತಿದ್ದಾರೆ.ಡ್ರೈವರ್ಸ್ಕಂಡಕ್ಟರ್ಸ್ ಗಳೇ ಇದರಲ್ಲಿ ಹೆಚ್ಚು.ಕೆಎಸ್ ಆರ್ ಟಿಸಿ ಬಿಟ್ಟರೆ ಉಳಿದ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಎರಡು ತಿಂಗಳಿಂದ ಸಂಬಳವೇ ಆಗಿಲ್ಲವಂತೆ..ಕೊರೊನಾದಂಥ ಸಂಕಷ್ಟದ ಕಾಲದಲ್ಲಿ ಜೀವನ ನಡೆಸೋದೇ ಕಷ್ಟವಾಗಿರುವಾಗ ಎರಡು ತಿಂಗಳಿಂದ ಸಂಬಳವೇ ನೀಡಿಲ್ಲ ಎಂದ್ರೆ ನೌಕರರೇನು ಮಾಡ್ಬೇಕು..ಹೊಟ್ಟೆಗೆ ಏನ್ ತಿನ್ನಬೇಕು..ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವ್ರೇ ಇದಕ್ಕೆ ಉತ್ತರಿಸ್ಬೇಕು.

ಬಿಎಂಟಿಸಿ ವಿಷಯಕ್ಕೆ ಬಂದ್ರೆ   ನಾಲ್ಕು ಸಾರಿಗೆ ನಿಗಮಗಳ ಪೈಕಿ ಬಿಎಂಟಿಸಿಯಲ್ಲಿ 36,000 ನೌಕರರು ಕೆಲಸ ಮಾಡುತ್ತಿದ್ದಾರೆ.ದಿನನಿತ್ಯ 6 ವರೆ ಸಾವಿರ ಬಸ್ ಗಳನ್ನು ರಸ್ತೆಗಿಳಿಯುತ್ವೆ. ಆದರೆ ಕೊರೊನಾ ಸಂಕಷ್ಟ ಬಂದ್ಮೇಲೆ 3 ಸಾವಿರ ಬಸ್ ಗಳು ಸಂಚರಿಸ್ತಿವೆ.ಅಂದ್ರೆ 36 ಸಾವಿರ ನೌಕರರ ಪೈಕಿ 12 ಸಾವಿರ ನೌಕರರಿಗೆ ಮಾತ್ರ ಡ್ಯೂಟಿ ಸಿಗ್ತಿದೆ.ಹಾಗಾದ್ರೆ ಉಳಿದ ಸಾವಿರಾರು ನೌಕರರು ಎಲ್ಲೋದ್ರು..ಅವರ ಕಥೆಯೇನು..ಅವರ ಜೀವದ ಪಾಡೇನು..ಜೀವನಕ್ಕೆ ಏನ್ ಮಾಡಿಕೊಳ್ತಿದಾರೆ ಎನ್ನುವ ಪ್ರಶ್ನೆ ಸೃಷ್ಟಿಯಾಗ್ತದೆ.ಏಕೆಂದ್ರೆ ಸಂಬಳ ಬರುತ್ತಿದ್ದರೆ ಸಮಸ್ಯೆ ಇರುತ್ತಿರಲಿಲ್ಲ.ಆದ್ರೆ ಕಳೆದ 2 ತಿಂಗಳಿಂದ ಸಂಬಳ ಬಾರದಿರುವುದರಿಂದ ನೌಕರರ ಜೀವನ ನಿರ್ವಹಣೆ ಬಗ್ಗೆ ಯೋಚಿಸಲೇಬೇಕಾಗ್ತದೆ.ಆದ್ರೆ ಆ ಯೋಚನೆ ಸರ್ಕಾರಕ್ಕೂ ಇಲ್ಲ..ಆಡಳಿತ ಮಂಡಳಿಗೂ ಬೇಕಾಗಿಲ್ಲ ಅನ್ನಿಸುತ್ತೆ.

2 ತಿಂಗಳಿಂದ ಸಂಬಳ ಸಿಗದಿರುವುದರಿಂದ ಬಿಎಂಟಿಸಿ ನೌಕರರು ಏನ್ ಮಾಡ್ತಿದ್ದಾರೆ ಗೊತ್ತಾ…ಸರ್ಕಾರ ಈ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಮಾಡದಿದ್ದರೂ ಕನ್ನಡ ಫ್ಲಾಶ್ ನ್ಯೂಸ್  ಇದರ ಮೇಲೆ ಬೆಳಕು ಚೆಲ್ಲಿದೆ.ಸಂಬಳ ಸಿಗದ ಬಹುತೇಕ ನೌಕರರು ಮಾಡ್ತಿರುವ ಕೆಲಸದ ಬಗ್ಗೆ ಕೇಳಿದ್ರೆ ಬೇಸರವಾಗುತ್ತೆ.

ಸಂಬಳವನ್ನು ನೆಚ್ಚಿಕೊಂಡು ಕೂರಲಾಗದ ನೌಕರರು ತಮ್ ತಮ್ ಹಳ್ಳಿ-ಊರುಗಳಿಗೆ ತೆರಳಿ ಕೃಷಿ ಚಟುವಟಿಕೆ ಮಾಡ್ತಿದ್ದಾರೆ.ಬೇರೆಯವ್ರ ಗದ್ದೆಗಳಲ್ಲಿ ದುಡಿದು ದಿನಕ್ಕೆ 250-300 ರೂ ಸಂಪಾದಿಸುತ್ತಿರುವ ಬಗ್ಗೆ ಜಯಕಿರಣಕ್ಕೆ ಮಾಹಿತಿ ದೊರೆತಿದೆ. ಇನ್ನು ಕೆಲವರು ಡ್ರೈವಿಂಗ್ ಕೆಲಸ ಮಾಡ್ತಿದ್ದಾರೆ.ಅದರಿಂದ ದಿನಕ್ಕೂ ನೂರಿ ನ್ನೂರು ಸಂಪಾದನೆ ಮಾಡ್ತಿದ್ದಾರೆ.ತರಕಾರಿ ಮಾರಾಟ ಮಾಡುತ್ತಿರುವವರ ಸಂಖ್ಯೆಗು ಕಡ್ಮೆಯೇನಿಲ್ಲ.. ಬೆಂಗಳೂರಿನಲ್ಲಿ ಉಳಿದಿರುವ ಸಾಕಷ್ಟು ನೌಕರರು ತರಕಾರಿ ಮಾರಲಾರಂಭಿಸಿದ್ದಾರೆ.ಇದರಿಂದ ಅಂದಿನ ದಿನದ ತುತ್ತಿನ ಚೀಲ ತುಂಬಿಸಿಕೊಳ್ತಿದಾರೆ. ಇನ್ನು ಕೆಲವರು ಫುಡ್ ಡೆಲಿವರಿ ಕೆಲಸ ಮಾಡುತ್ತಿರುವ ಬಗ್ಗೆಯೂ ಮಾಹಿತಿ ಇದೆ.

ಜೀವನ ನಡೆಸ್ಲಿಕ್ಕೆ ಏನೆಲ್ಲಾ ಮಾಡ್ಬೋದೋ ಆ ಮಾರ್ಗಗಳ ಮೂಲಕ ತಮ್ಮ ಹಾಗೂ ತಮ್ಮನ್ನು ನಂಬಿರುವ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಸರ್ಕಾರದಿಂದ ನೆರವು ಕೋರಿದ್ದೇವೆ..ಹಣದ ನಿರೀಕ್ಷೆಯಲ್ಲೇ ಇದ್ದೇವೆ.ಈವರೆಗೆ ಬಂದ ಹಣದಿಂದ ನೌಕರರ ಸಂಬಳ ಕೊಟ್ಟಿದ್ದೇವೆ.

ಸಂಬಳ ಕೊಡಲು ಯಾವುದೇ ಆದಾಯದ ಮೂಲಗಳಿಲ್ಲ..ನಿಗಮಗಳು ಕೂಡ ಸಂಕಷ್ಟದಲ್ಲಿವೆ.ನಾವು ಕೂಡ ಏನೆಲ್ಲಾ ಪ್ಲ್ಯಾನ್ ಮಾಡ್ಬೇಕೋ ಮಾಡ್ತಿದ್ದೇವೆ..ಆದ್ರೆ ಸಧ್ಯಕ್ಕಂತೂ ಪರಿಸ್ಥಿತಿ ಶೋಚನೀಯವಾಗಿದೆ ಅಷ್ಟೆ ಎಂಬ ಹಾರಿಕೆ ಉತ್ತರ ಕೊಡ್ತಾರೆ.ಇನ್ನು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವ್ರೋ ಇದಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ.ದೊಡ್ಡವರೇ ಹೀಗೆ ಕೈ ಚೆಲ್ಲಿ ಕೂತಾಗ ಪಾಪ ಎಂಡಿ ಶಿಖಾ ಮೇಡಮ್ ಏನ್ ಮಾಡ್ಲಿಕ್ಕಾಗುತ್ತೆ ಹೇಳಿ..

ಸಂಬಳವಿಲ್ಲದೆ ಕಂಗಾಲಾಗಿ ಹೋಗಿರುವ ಬಿಎಂಟಿಸಿ ನೌಕರರು ಉಪಕಸುಬುಗಳನ್ನು ಅವಲಂಭಿಸಿದ್ದಾರೆ.ಆದ್ರೆ ಇದು ಕೂಡ ಇನ್ನೆಷ್ಟು ದಿನ..ಆ ಮೂಲಗಳೂ ಬಂದ್ ಆದ್ರೆ ಏನ್ ಮಾಡೋದು ಎನ್ನುವುದು ಅವರ ಬದುಕುಗಳ ಮುಂದೆ ಉದ್ಭವವಾಗಿರುವ ಪ್ರಶ್ನಾರ್ಥಕ ಚಿಹ್ನೆ.  

Spread the love
Leave A Reply

Your email address will not be published.

Flash News