ತಮ್ಮದೇ ಅಭ್ಯರ್ಥಿಗಳ ಸೋಲಿಗೆ ಕಾರಣವಾದ “SDPI” ಬೆನ್ನಿಗೆ ನಿಂತ್ರಾ “ಕೈ “ನಾಯಕರು..!?

0

ಬೆಂಗಳೂರು:ಎಸ್ ಡಿಪಿಐ ನವರಿಂದಾಗಿಯೇ ಸೋತ ಕೈ ಪರಾಜಿತ ಅಭ್ಯರ್ಥಿಗಳು ವ್ಯಕ್ತಪಡಿಸ್ತಿರುವ ಆಕ್ರೋಶ ಇದು..ತಮ್ಮ ಸೋಲಿಗೆ ಯಾರ್ ಕಾರಣರಾಗಿ ಬಿಜೆಪಿಗೆ ಗೆಲುವನ್ನು ದೊರಕಿಸಿಕೊಟ್ಟ SDPI ಮಾಡಿದ ಕೃತ್ಯ ಖಂಡಿಸೋದನ್ನು ಬಿಟ್ಟು ಅವರ ಬೆನ್ನಿಗೆ ನಿಂತಿರೋದು ಯಾವ್ ನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ ರಮಾನಾಥ್ ರೈ ಸೇರಿದಂತೆ ಸೋಲುಂಡ ಅನೇಕ ಕೈ ನಾಯಕರು.

ಇನ್ನು ಪುಲಕೇಶಿನಗರದ ಹೊತ್ತು ಉರಿದ ದಳ್ಳುರಿಯ ಹಿಂದೆ ನಡೆದ ಸಾಕಷ್ಟು ಬೆಳವಣಿಗೆಗಳು ಅಚ್ಚರಿ ಮೂಡಿಸುತ್ತಿವೆ… ಸರ್ಕಾರವಂತೂ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಜ್ಯದಲ್ಲಿ SDPI, PFI, KFD ಸಂಘಟನೆಗಳ ನಿಷೇಧಕ್ಕೆ ಅಗತ್ಯ ಸಾಕ್ಷಿಗಳ ಸಂಗ್ರಹ ಕಾರ್ಯದಲ್ಲಿ ಮುಂದಾಗಿದೆ. ಈ ನಿಟ್ಟಿನಲ್ಲಿ ಒಂದು ಸಮಿತಿಯನ್ನು ಕೂಡ ರಚಿಸಲಾಗಿದೆ.

ಸಿಸಿಬಿ ಪೊಲೀಸರ ಕಾರ್ಯಾಚರಣೆ ವೇಳೆ ಹೆಗ್ಗಡೆನಗರದ ಎಸ್ ಡಿಪಿಐ ಕಚೇರಿಯಲ್ಲಿ ಕಬ್ಬಿಣದ ರಾಡುಗಳು,ಬ್ಯಾಟುಗಳು, ಹಾಗೂ ಮಾರಣಾಂತಿಕ ಆಯುಧಗಳನ್ನು ಜಪ್ತಿ ಮಾಡಲಾಗಿತ್ತು. ಮೇಲ್ನೋಟಕ್ಕೆ ಕಾವಲು ಬೈರಸಂದ್ರ ಗಲಭೆ ಉದ್ದೇಶಪೂರಿತ ಯೋಜನೆ ಕೃತ್ಯ ಎಂದು ತಿಳಿದು ಬಂದಿದೆ. ಇನ್ನು, 8  ದಾಳಿಕೋರರ ಬಂಧನ ಎಲ್ಲವು ಪ್ರೀ ಫ್ಲ್ಯಾನ್ ಅನ್ನೋದಕ್ಕೆ ಮತ್ತಷ್ಟು ಪುಷ್ಟಿನೀಡುತ್ತಿದೆ.  ಪರಿಣಾಮ  ಸರ್ಕಾರ ಕೇಂದ್ರದ ಪ್ರಭಾವ ಬಳಸಿ ಕರ್ನಾಟಕ ರಾಜ್ಯದ SDPI, PFI ಹಾಗೂ, KFD   ಸಂಘಟನೆಗಳನ್ನು ನಿಷೇಧ ಮಾಡಲು ಸೂಕ್ತವಾದ ದಾಖಲೆ ಸಿಕ್ಕಿರುವ ಮಾಹಿತಿ ಇದೆ ….

ಸರ್ಕಾರ ಇನ್ನು ಮುಂದೆ ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲಿದೆ.  ಯಾವುದೇ ಗುರುತರ ಪ್ರಕರಣಗಳು ಉದ್ದೇಶಪೂರ್ವಕ ಕೋಮುಗಲಭೆಗೆ ಸಂಬಂಧಿಸಿದಂತೆ ಮಾಹಿತಿ ಇದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಅಂಥವರ ವಿರುದ್ದ  ಕ್ರಮ ತೆಗೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ… ಪರಿಣಾಮ ಇದೀಗ ಅರೆಸ್ಟ್ ಆಗಿರತಕ್ಕಂತಹ ಎಲ್ಲ ದಾಳಿಕೋರರು  ಅಡಿಯಲ್ಲಿ ಕ್ಷೇತ್ರ ಬಿಡುವ ಸಾಧ್ಯತೆಗಳು ಹೆಚ್ಚಾಗಿವೆ…

ಈ ನಡುವೆ ಕಾಂಗ್ರೆಸ್ ನ ಸ್ಥಿತಿ ಹೇಗಿದೆ ಅಂದ್ರೆ ಅದು ಎಸ್ ಡಿಪಿಐ ಸಂಘಟನೆಗಳ ಬೆನ್ನಿಗೆ ನಿಲ್ಲುವ ಹಾಗೆಯೂ ಇಲ್ಲ ಸಮರ್ಥಿಸಿಕೊಳ್ಳುವ ಹಾಗೇ ಇಲ್ಲದಂತ ಪರಿಸ್ಥಿತಿ ತಂದಿ ತಂದಿಟ್ಟುಕೊಂಡಿದ್ದೇ.. ಇದಕ್ಕೊಂದು ಜ್ವಲಂತ ಉದಾಹರಣೆ ಎಲ್ಲಿಯೂ ಎಸ್ಡಿಪಿಐ ಬಿಜೆಪಿಯ ಪರಮ ಶತ್ರುವೂ ಅಥವಾ ಪರವಾ ವಿರೋಧಿಯಾ ಅಲ್ವೇ ಅಲ್ಲ ..ಅದೇನಿದ್ದರೂ ಕಾಂಗ್ರೆಸ್ಸಿಂದ ಸಿಡಿದು ಬಂದ ಒಂದು ಬಣ… ಕಾಂಗ್ರೆಸ್ ನಿಂದ ಸಿಗದ ಸವಲತ್ತನ್ನ ಅವಕಾಶವನ್ನು ಕಾಂಗ್ರೆಸ್ ನಿಂದ ಕಿತ್ತುಕೊಳ್ಳಲು ಹುಟ್ಟಿಕೊಂಡ ಒಂದು ಎಸ್ ಡಿಪಿ ಸಂಸ್ಥೆ .

ಬಂಟ್ವಾಳದಲ್ಲಿ ರಮಾನಾಥ ರೈ ರವರನ್ನ ಸೋಲಿಸಿದ್ದು ಇದೇ SDPI  ಹೊರತು ಅಲ್ಲಿ ಗೆದ್ದದ್ದು ಬಿಜೆಪಿಯಲ್ಲ. ಹಾಗೆಯೇ ಬೆಂಗ್ಳೂರಿನ ಸಿದ್ದಾಪುರ ವಾರ್ಡಿನಲ್ಲಿ ಉದಯಶಂಕರರ ಸೋಲಿಗೆ ಮುಜಾಹಿದ್ ಪಾಷಾ SDPI ಸ್ಪರ್ಧಿಸಿದ್ದೇ ಹೊರತು ಬಿಜೆಪಿ ಅಲ್ಲವೇ ಅಲ್ಲ..ಹಾಗಾಗಿ  ಕಾಂಗ್ರೆಸ್ ಮತ್ತು SDPI ಪರಮ ಶತ್ರುಗಳಂತೆ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ.. ಅವರ ನಡುವಿನ ಕಿತ್ತಾಟದಲ್ಲಿ ಬಿಜೆಪಿಗೆ ಲಾಭ ಆಗುತ್ತಿದೆ ಅಷ್ಟೆ…. ಹಾಗಾಗಿ ಈ ವಿಚಾರದಲ್ಲಿ SDPI  ತನ್ನ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ವಿರುದ್ಧ ತಿರುಗಿಬಿತ್ತು.. ಪರಿಣಾಮ ಪುಲಕೇಶಿನಗರದ ಗಲಾಟೆ ಅಂತ ಹೇಳಬಹುದೇನೋ.ಕೈ ನಾಯಕರಿಗೆ ಇನ್ನಾದ್ರೂ ಈ ಸತ್ಯ ಮನದಟ್ಟಾದ್ರೆ ಸಾಕೆನಿಸುತ್ತೆ..

Spread the love
Leave A Reply

Your email address will not be published.

Flash News