ಕಸ..ಟೆಂಡರ್..ಕಿಕ್ ಬ್ಯಾಕ್-ಪರ್ಸಂಟೇಜ್…ಸ್ವಹಿತಾಸಕ್ತಿಯುತ ಚರ್ಚೆಯಲ್ಲೇ ಬಿಬಿಎಂಪಿ ಕಾರ್ಪೊರೇಟರ್ಸ್ ಕಾಲಹರಣ..

0

ಬೆಂಗಳೂರು:ಬಿಬಿಎಂಪಿ ಕೌನ್ಸಿಲ್ ಸಭೆಯ ಗಾಂಭೀರ್ಯವನ್ನೇ ಕಳೆಯುತ್ತಿದ್ದಾರೆ ಕಾರ್ಪೊರೇಟರ್ಸ್.. ವಾರ್ಡ್ ಜನರಿಂದ ಆಯ್ಕೆಯಾದವ್ರು ವಾರ್ಡ್ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಕ್ಕಿಂತ ತಮ್ ಹಿತಾಸಕ್ತಿ ಬೇಳೆ ಬೇಯಿಸಿಕೊಂಡಿದ್ದೇ ಹೆಚ್ಚು..ಇದಕ್ಕೆ ಇಂದಿನ ಕೌನ್ಸಿಲ್ ಸಭೆಯೂ ಹೊರತಾಗಿಲ್ಲ.ಮೂಲಭೂತ ಸೌಲಭ್ಯಗಳಿಲ್ಲದೆ ವಾರ್ಡ್ ನಲ್ಲಿ ಜನ ಪರದಾಡುತ್ತಿದ್ದರೆ,ಕಸದ ಟೆಂಡರ್-ಕಿಕ್ ಬ್ಯಾಕ್-ಪರ್ಸಂಟೇಜ್ ಉದ್ದೇಶಗಳನ್ನೇ ಇಟ್ಕೊಂಡು ವಾಗ್ಯುದ್ಧ ನಡೆಸಿ ಕಾಲಹರಣ ಮಾಡಿದ್ರು.

ಮೇಯರ್ ಗೌತಮ್ ಕುಮಾರ್ ಅವರ ಅಧಿಕಾರವಧಿ ಮುಗಿಯೊಕ್ಕೆ ದಿನಗಣನೆ ಆರಂಭವಾಗಿದೆ.ಅವರ ಅಧ್ಯಕ್ಷತೆಯಲ್ಲಿ ಒಂದೇ ಒಂದು ಸಭೆಯೂ ಕೌನ್ಸಿಲ್ ನ ಗೌರವ-ಪ್ರತಿಷ್ಟೆಯನ್ನು ಒಳಗೊಂಡು ನಡೆದ ಉದಾಹರಣೆಗಳೇ ಇಲ್ಲ..ಬರೀ ಉಡಾಫೆ..ಗದ್ದಲ-ಕೋಲಾಹಲ..ಹೀಗೆಯೇ ಎಲ್ಲಾ ಸಭೆಗಳನ್ನು ನಡೆಸಿ ಮುಗಿಸಿದ್ದೇ ಇವರ ಸಾಧನೆ..ಇವತ್ತಿನ ಸಭೆಯೂ ಅದಕ್ಕೆ ಹೊರತಾಗಿರಲಿಲ್ಲ..

ಗುತ್ತಿಗೆದಾರನ  ವಿರುದ್ಧದ ಆಕ್ರೋಶಕ್ಕೇ ಸೀಮಿತವಾದ ಸಭೆ:ಬಿಬಿಎಂಪಿ ಕೌನ್ಸಿಲ್ ಮೀಟಿಂಗ್ನಲ್ಲಿ ಕಸದ ವಿಚಾರ ಗದ್ದಲ-ಕೋಲಾಹಲ ಎಬ್ಬಿಸಿತು.ಕಸದ ಟೆಂಡರ್ ನ್ನು ಕಪ್ಪುಪಟ್ಟಿಗೆ ಸೇರೊಕ್ಕೆ ಎಲ್ಲಾ ಅರ್ಹತೆ ಇರುವ ಸಂಸ್ಥೆಗೆ ಕೊಡುವ ಮೂಲಕ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಲಾಗ್ತಿದೆ ಎಂದು ಆಡಳಿತ ಹಾಗೂ ವಿಪಕ್ಷಗಳ ಸದಸ್ಯರು ಒಕ್ಕೊರಲಿನಿಂದ ವಿರೋಧಿಸಿದರು.ಅದೇ ರೀತಿ ಮೇಯರ್ ಗೌತಮ್ ಕಾರ್ಯವೈಖರಿಗೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಟಿಪಿಎಸ್ ಸಂಸ್ಥೆಗೆ ಟೆಂಡರ್ ನೀಡುವ ವಿಚಾರದಲ್ಲಿ ಯಾಕೆ  ಕ್ವಾಟ್ಲೆ..ಕಸದ ಟೆಂಡರ್ ನೀಡುವ ವಿಚಾರದ  ಬಗ್ಗೆ ಮಾತನಾಡಿದ ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ,ಈ  ಹಿಂದೆ TPS ಸಂಸ್ಥೆಗೆ ನೀಡಲಾಗಿತ್ತು, ಈಗಲೂ ಅದೇ ಸಂಸ್ಥೆಗೆ ನೀಡಲಾಗಿದೆ.ತತ್ ಕ್ಷಣಕ್ಕೆ ಟೆಂಡರ್ ರದ್ದುಪಡಿಸಿ ಎಂದು ಒತ್ತಾಯಿಸಿದರು.ಇವರಿಗೆ ಸಾಥ್ ಕೊಟ್ಟ, ಪದ್ಮನಾಭರೆಡ್ಡಿ, ನಿಮ್ಮ ವಾರ್ಡಿನಲ್ಲೇ ಆಗಲಿ, ನಮ್ಮ ವಾರ್ಡಿನಲ್ಲೇ ಆಗಲಿ 20 ಕಿಲೋ ಮೀಟರ್ ಕಸ ಗುಡಿಸಿ ತೋರಿಸಲಿ.ಇದುವರೆಗೂವಇಪ್ಪತ್ತು ಕಿ.ಮೀ ಕಸ ಕೂಡ ಗುಡಿಸಿಲ್ಲ.ಸ್ವೀಪಿಂಗ್ ಮೆಶಿನ್ ಕಸ ಗುಡಿಸಿರೋ ದಾಖಲೆ ನೀಡಿದ್ರೆ ಒಂದು ಲಕ್ಷ ಬಹುಮಾನ ನೀಡ್ತೀನಿ.ಸ್ವೀಪಿಂಗ್ ಯಂತ್ರ ದಿನಕ್ಕೆ ೨೦ ಕಿಲೋ ಮೀಟರ್ ಕಸ ಗುಡಿಸಲಿ,ಒಂದು ಯಂತ್ರ ೨೦ ಕಿಲೋ ಮೀಟರ್ ಕಸ ಗುಡಿಸಿದ್ರೆ ೧ ಲಕ್ಷ ಬಹುಮಾನ ನೀಡುವುದಾಗಿ  ಸವಾಲು ಹಾಕಿದ್ರು.

ವಿಪಕ್ಷಗಳೂ ಸಾಥ್ :ಟಿಪಿಎಸ್ ಸಂಸ್ಥೆ ಮೂಲಕ ಖರೀದಿ ಮಾಡಿದ್ದ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ವನ್ನು ಕೋಟಿ ಕೋಟಿ ಕೊಟ್ಟು ಖರೀದಿ ಮಾಡಲಾಗಿದೆಯಾದ್ರೂ ಒಂದೆ ಒಂದು ಯಂತ್ರಗಳೇ ಕೆಲ್ಸ ಮಾಡ್ತಿಲ್ಲ.ಇದ್ರ ನಡುವೆನೇ ಮತ್ತೆ ೨೦ ಕ್ಕೂ ಹೆಚ್ಚು ವಾಹನಗಳಿಗೆ ಟೆಂಡರ್ ಕರೆದಿದೆ.ಈಗಾಗಲೇ 60  ಕ್ಕೂ ಹೆಚ್ಚು ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಬಿಬಿಎಂಪಿ ಬಳಿ ಇದೆ.ಪ್ರತಿ ತಿಂಗಳು ನಿರ್ವಹಣೆಗೆ ಲಕ್ಷ ಲಕ್ಷ  ಹಣ ನೀಡಲಾಗ್ತಿದೆ.ಹಾಡಹಗಲೇ ದರೋಡೆ ಮಾಡಲಿಕ್ಕೆ ಹೊರಟಿರುವ ಆಡಳಿತ ಪಕ್ಷ  ಕೂಡಲೆ ಟೆಂಡರ್ ರದ್ದು ಮಾಡುವಂತೆ ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜೀದ್  ಒತ್ತಾಯಿಸಿದರು.

ಮೇಯರ್ ಫೇಲ್ಯೂರ್..ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಾಜೀದ್, ಮೇಯರ್ ಆಗಿ ೮ ತಿಂಗಳು ಕಳೆದಿಲ್ಲ.೮ ತಿಂಗಳಲ್ಲಿ ಸಾಕಷ್ಟು ಗೋಲ್ಮಾಲ್ ಆಗಿದೆ.ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ .ಟೆಂಡರ್ ನೀಡಿಕೆ, ಅಭಿವೃದ್ಧಿ ವಿಚಾರದಲಿ ಗೋಲ್ಮಾಲ್ ಆಗಿದೆ.ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಖರೀದಿ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿದರು.

ಯಾರ್ ರೀ ಆ ರವೀಂದ್ರ ಮಾನ ಮರ್ಯಾದೆ ಇಲ್ಲವಾ..:ಬಡ ಮಕ್ಕಳಿಗೆ ಲ್ಯಾಪ್ ಟಾಪ್ ನೀಡುವ ವಿಚಾರದಲ್ಲಿ ಕ್ರಮ  ಕೈಗೊಳ್ಳಬೇಕಿದ್ದ  ವಿಶೇಷ ಆಯುಕ್ತ ರವೀಂದ್ರ ಕಳೆದ ಎರಡು ಸಭೆಗೆ ಬಂದಿಲ್ಲ.ಬಿಬಿಎಂಪಿ ಮಕ್ಕಳು ದಿನನಿತ್ಯ ಆನ್ ಲೈನ್ ಶಿಕ್ಷಣ ಸಿಗದೆ ಪರದಾಡುತ್ತಿದ್ದಾರೆ. ಮೊಬೈಲ್ ಆದ್ರೂ ಕೊಡಿಸುವಂತೆ ಪೋಷಕರು ಮನವಿ ಮಾಡ್ತಿದ್ದಾರೆ. ಆದೇಶ ನೀಡಿದ್ರೆ ಸಾಕು ಮಕ್ಕಳಿಗೆ ಲ್ಯಾಪ್ ಟಾಪ್, ಟ್ಯಾಬ್ ನೀಡಬಹುದು. ಇದಕ್ಕೆ ಆದೇಶ ನೀಡುವಂತೆ ಸೂಚನೆ ನೀಡುವಂತೆ ಎಮ್ಮೆಲ್ಸಿ ರಮೇಶ್ ಗೌಡ ಒತ್ತಾಯಿಸಿದರು.

ಬಿಬಿಎಂಪಿ ಇಂದ ಲ್ಯಾಪ್‌ಟಾಪ್ ನೀಡಬೇಕು, ಇಲ್ಲ ಆನ್ ಲೈನ್ ಕ್ಲಾಸ್ ಸ್ಥಗಿತಗೊಳಿಸಬೇಕು.ಎಷ್ಟೇ ಕಡಿಮೆ ಬೆಲೆಗೆ ಸಿಗಲಿದೆಯೋ ನೀವೆ ತರಿಸಿ. ನಮ್ಮ ಪ್ರೊಗ್ರಾಮ್ ಆಫ್ ವರ್ಕ್ಸ್ (POW) ನಿಂದ ಹಣ ಮೊಟಕುಗೊಳಿಸಿ. ಇದೇ 25 ರ ಒಳಗೆ 198 ವಾರ್ಡುಗಳಿಗೆ ಅನ್ವಯ ಆಗುವಂತೆ ಆದೇಶ ನೀಡಬೇಕು. ಕೂಡಲೇ ಆಯುಕ್ತರಿಂದ ಆದೇಶ ಮಾಡಿಸುವಂತೆ  ಮಾಜಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ  ಒತ್ತಾಯಿಸಿದರು

ಬೆಂಗಳೂರು ನಗರದಿಂದ ಏರ್ಪೋರ್ಟ್ ಹೋಗಬೇಕೆಂದರೆ ಟ್ರಾಫಿಕ್ ಇರುತ್ತದೆ ಹೆಣ್ಣೂರು ರಸ್ತೆಯಿಂದ ಏರ್ಪೋರ್ಟ್ ಗೆ ಹೋಗಬಹುದು. ಆದರೆ, ದುರ್ದೈವ ಆ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.ಆ ರಸ್ತೆ ಯಾವಾಗ ಸರಿ ಮಾಡುತ್ತೀರಾ  ಇದಕ್ಕೆ ಉತ್ತರ ಬಯೋಸೊದಿಲ್ಲ ಬದಲಾಗಿ ಆದೇಶ ಬಯಸುತ್ತೇನೆ ಬೆಂಗಳೂರಿನಲ್ಲಿ ಮಾಫಿಯಾಗಳು ಹೆಚ್ಚಾಗಿವೆ.ಕೆಲವೊಮ್ಮೆ ಒಂದೊಂದು ಮಾಫಿಯಾ ಬಗ್ಗೆ ಕಂಪ್ಲೇಂಟ್ ಕೊಡ್ತೇವೆ. ಆದರೆ ಒಂದಿಷ್ಟು ಮಾಫಿಯಾ ಬಗ್ಗೆ ಗೊತ್ತೇ ಆಗುವುದಿಲ್ಲ .

ಟ್ಯಾಂಕರ್ ಮಾಫಿಯಾ ವಿರುದ್ದ ಗುಡುಗು:ಅದರಲ್ಲಿ ಟ್ಯಾಂಕರ್ ಮಾಫಿಯಾ ಕೂಡ ಒಂದು.Bwssbಯಿಂದ ಟ್ಯಾ‌ಂಕರ್ ಗಳಿಗೆ ದರ ನಿಗಧಿ ಮಾಡಲಾಗಿದೆ.ಖಾಸಗಿ ಟ್ಯಾಂಕರ್ ಗಳಿಗೆ ಹಣ ನಿಗಧಿ ಇಲ್ಲ, ಮನಸ್ಸಿಗೆ ಬಂದ ಹಣ ಪಡೆಯುತ್ತಾರೆ.ಬಡವರ ಬಳಿ ಹಣ ಪೀಕುತ್ತಿದ್ದಾರೆ .ಅಧಿಕಾರಿಗಳು ಕತ್ತೆ ಕಾಯ್ತಾ ಇದ್ದಾರಾ, ಖಾಸಗಿ ಟ್ಯಾಂಕರ್ ಗಳ ಬಗ್ಗೆ ಗೊತ್ತಿಲ್ವಾ..?ಅವರಿಗೆ ದರ ನಿಗಧಿಯಾಗಿಲ್ಲ, ಮೂರು ಸಾವಿರ ಇದ್ರೆ ಆರು ಸಾವಿರ ಲೀಟರ್ ಅಂತಾರೆ.ವಾಟರ್ ಮೆನ್ ಅಜ್ಜೆಸ್ಟ್ ಮಾಡಿಕೊಂಡು ಏರಿಯಾಗಳಿಗೆ ನೀರೇ ಬಿಡಲ್ಲ. ಆಗ ಖಾಸಗಿ ಟ್ಯಾಂಕರ್ ಗಳು ಹೋಗಿ ನೀರು ಬಿಡುತ್ತಾರೆ ಎಂದು ರಮೇಶ್ ಗೌಡ ಹೇಳಿದ್ರು. ಹೀಗೆ ಯಾವ ವಿಚಾರ ಕೂಡ ಜನಹಿತವನ್ನು ಒಳಗೊಂಡು ಇಂದಿನ ಕೌನ್ಸಿಲ್ ಮೀಟಿಂಗ್ನಲ್ಲಿ ಮಂಡನೆಯಾಗಲಿಲ್ಲ..ಇನ್ನು ಚರ್ಚೆಯೋ ದೂರದ ಮಾತು ಬಿಡಿ..

Spread the love
Leave A Reply

Your email address will not be published.

Flash News