ಕೊರೊನಾಸಂಕಷ್ಟಕ್ಕೆ ಚಿಕ್ಕಮಗಳೂರಿನ ಉದಯೋನ್ಮುಖ ಜಿಮ್ ಟ್ರೈನರ್ ಸುನೀಲ್ ಆತ್ಮಹತ್ಯೆ

0

ಚಿಕ್ಕಮಗಳೂರು:ಕೊರೊನಾ ಉದಯೋನ್ಮುಖ ಜಿಮ್ ಟ್ರೈನರ್ ಬದುಕನ್ನೇ ಆಪೋಷನ ತೆಗೆದುಕೊಂಡಿದೆ.ಜಿಮ್ ಟ್ರೈನರ್ ಆಗಿ ಕೆಲಸ ಮಾಡು ತ್ತಿದ್ದ ಸುನೀಲ್ ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಜಯ ಪುರದಲ್ಲಿ ಜಿಮ್ ಟ್ರೈನರ್ ಆಗಿದ್ದ ಸುನೀಲ್ ಜಿಮ್ ಕ್ಲೋಸ್ ಆಗಿದ್ದರಿಂದ ಜೀವನ ನಿರ್ವಹಣೆಗೆ ಸಾಕಷ್ಟು ಸಾಲ ಮಾಡಿಕೊಂಡಿದ್ರು.ಜಿಮ್ ಇವತ್ ಓಪನ್ ಆಗ್ಬೋದು,..ನಾಳೆ ಓಪನ್ ಆಗ್ಬೋದೆನ್ನುವ ನಿರೀಕ್ಷೆಯಲ್ಲೇ ಸಾಲಗಾರರಿಗೆ ಸಮಾಧಾನ ಮಾಡಿದ್ರು.ಆದ್ರೆ ಜಿಮ್  ಗಳು ತಿಂಗಳುಗಟ್ಟಲೇ ಮುಚ್ಚಿದ್ರಿಂದ ಸಾಲಗಾರರು ನಿತ್ಯ ಮನೆಗೆ ಬಂದು ಗಲಾಟೆ ಮಾಡಲಾರಂಭಿಸಿದ್ರು.ಅವರ ಕಿರುಕುಳ ಹೆಚ್ಚಾಗಿದ್ರಿಂದ ಅವಮಾನ ತಾಳದೆ ಆತ್ಮಹತ್ಯೆಮಾಡಿಕೊಂಡಿದ್ದಾರೆ.

ಇವರ ಸಾವಿಗೆ  ಕರ್ನಾಟಕ ಜಿಮ್ ಓನರ್ ಮತ್ತು ಫಿಟ್ನೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಎ.ವಿ.ರವಿ ತೀವ್ರ ಸಂತಾಪ ಸೂಚಿಸಿದ್ದಾರೆ.  ಕೊರೋನಾ ಸೃಷ್ಟಿಸಿದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಸುನಿಲ್ ಕುಟುಂಬಕ್ಕೆ ತಮ್ಮ ಸಹಾಯ ಅಸ್ತವನ್ನು ನೀಡಬೇಕಾಗಿ ವಿನಂತಿಸಿಕೊಂಡಿದ್ದಾರೆ. ಸುನೀಲ್ ಕುಟುಂಬಕ್ಕೆ ನೆರವಾಗ ಬಯಸುವವರು ಕೆಳಕಂಡ ಬ್ಯಾಂಕ್ ಅಕೌಂಟ್ ಗೆ ಹಣ ಸಂದಾಯ ಮಾಡುವಂತೆ ರವಿ ಮನವಿ ಮಾಡಿದ್ದಾರೆ

 

Bank acc: 38330409595

IFSC : SBIN0041020

G.pay : +9182770 03167 

Spread the love
Leave A Reply

Your email address will not be published.

Flash News