“ಕ್ಷಮಿಸಿ ಬಿಡು ಕಂದಾ..ನನ್ನ ಕೈಯಾರೆ ನಿನ್ನನ್ನು ಕೊಲ್ಲುತ್ತಿದ್ದೇನೆ….ಈ ಕೆಟ್ಗ ಪ್ರಪಂಚವೇ ಬೇಡ ನಮಗೆ.. ನಾನೂ ನಿನ್ನನ್ನು ಹಿಂಬಾಲಿಸ್ತೇನೆ”

0

ಚಿಕ್ಕಾಬಳ್ಳಾಪುರ: ಹೀಗೆಂದಿರಬಹುದೇ ಆ ತಾಯಿ,..ತಾನೇ ಹೆತ್ತ ಮಗನನ್ನು ಕೊಂದು ಆತನ  ಶವವನ್ನು ಅಪ್ಪಿಕೊಂಡು ಹೀಗೆಲ್ಲಾ ಅತ್ತಿರಬಹುದೇ..

ನಿಜಕ್ಕೂ ಕರುಳು ಕತ್ತರಿಸುತ್ತೆ ಕಣ್ರಿ ಈ ಸಾವು..ತಾಯಿ ಮಾಡಿದ್ದು ಕ್ರೌರ್ಯದ ಪರಮಾವಧಿ ಎನಿಸುತ್ತೆ..ಆದ್ರೆ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇಟ್ಟುಕೊಂಡು ಜನ್ಮ ಕೊಟ್ಟ ಯಾವ್ ತಾಯಿನೂ ಕರುಳ ಕುಡಿಯನ್ನು ಕೊಲ್ಲೊಕ್ಕೆ ಇಷ್ಟಪಡ್ತಾಳೆ ಹೇಳಿ..ಈ ಪ್ರಕರಣವೂ ಹಾಗೇ ಇದೆ..ಮಾನಸಿಕ ಅಸ್ವಸ್ಥ ಮಗ ಬೆಳುದ್ರೆ ಆತನನ್ನು ಸಮಾಜ ನಡೆಸಿಕೊಳ್ಳುವ ರೀತಿಗೆ ಹೆದರಿ ಮನೆಯಲ್ಲಿನ ತೊಟ್ಟಿಯಲ್ಲಿ ಮುಳುಗಿಸಿ..ಮುಳುಗಿಸಿ ಕೊಂಡಿದ್ದಾಳೆ..

ಅಮ್ಮಾ…ಅಮ್ಮಾ..ಬೊಬ್ಬಿಡುತ್ತಲೇ ಸತ್ತ ಮಗನ ಸಾವನ್ನು ಆ ತಾಯಿ ಹೇಗೆ ಅರಗಿಸಿಕೊಂಡಿರ್ಬೇಕು..ತನ್ನ ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸ್ತಿದ್ದ ಆ ತಾಯಿಯೇ ಮಗನನ್ನು ಕೊಲ್ಲುವುದೆಂದ್ರೆ ಆಕೆ ಎಷ್ಟು ಮಾನಸಿಕವಾಗಿ ವಿಚಲಿತಗೊಂಡಿರ್ಬೇಕು…ಊಹಿಸಿ ನೋಡಿ..ಒಂದ್ ಕ್ಷಣ ಮಾತೇ ಹೊರಡಿಸಿದೆ ಮೌನದಲ್ಲೇ ನಮ್ಮನ್ನು ಇರಿಸಿಬಿಡುವಂಥ ಸ್ಟೋರಿ ಇದು..

ಮಗ ಮಾನಸಿಕ ಅಸ್ವಸ್ಥ..ಆತ ಬೆಳೆದರೆ ಆತನನ್ನು ಸಮಾಜ ತುಂಬಾ ತುಚ್ಛವಾಗಿ ನಡೆಸಿಕೊಳ್ಳುತ್ತೆ.ಅದನ್ನು ನೋಡೊಕ್ಕೆ ನನ್ನಿಂದಾಗುವುದಿಲ್ಲ..ಹಾಗಾಗಿ ಈ ಕೆಟ್ಟ ಜಗತ್ತು ನಿನಗೂ ಬೇಡ..ನೀನಿಲ್ಲದ ಸುಃಖ ಸಂತೋಷ ನನಗೂ ಬೇಡ ಎಂದು ಕಣ್ಣೀರಿಡುತ್ತಾ ಹೆತ್ತ ಮಗನನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ..ಮುಳುಗಿಸಿ ಕೊಂದಿದ್ದಾಳೆ.ಮಗನಿಗೇ ಬೇಡವಾದ ಜಗತ್ತು ನನಗೇಕೆಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.ಇಡೀ ಚಿಕ್ಕಬಳ್ಳಾಪುರ ಜಿಲ್ಲೆ ಅಮ್ಮ-ಮಗನ ಸಾವಿಗೆ ಕಣ್ಣೀರಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ಇಂತದ್ದೊಂದು ಮನಕಲಕುವ ಘಟನೆ ನಡೆದಿದೆ. ಶೋಭಾ  ಎಂಬ ಮಹಿಳೆ ತನ್ನ ಏಳು ವರ್ಷದ ಮಾನಸಿಕ ಅಸ್ವಸ್ಥ ಮಗ  ವಿಶಾಲ್ ನನ್ನು ಕೊಂದು ನಂತರ ತಾನೂ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

.ಹುಟ್ಟಿನಿಂದಲೆ ಬುದ್ದಿ ಮಾಂದ್ಯನಾಗಿದ್ದ ಮಗ ವಿಶಾಲ್ ಗ ಸಾಕಷ್ಟು ಚಿಕಿತ್ಸೆ ಕೊಡಿಸಿದ್ರೂ ತನ್ನ ಮಗ ಎಲ್ಲ ಮಕ್ಕಳಂತೆ ಆಟ ಪಾಠಗಳಿರಲಿ ಊಟ, ತಿಂಡಿ ಮತ್ತು ದೈನಂದಿನ ಕರ್ಮಗಳನ್ನು ಮಾಡಿ ಕೊಳ್ಳಲು ಆಗುತ್ತಿಲ್ಲಾ ಎಂದು ನೊಂದುಕೊಂಡಿದ್ದಳು .ಕೊನೆಗೆ ಎಂಥಾ ನಿರ್ದಾರ ಕೈಗೊಂಡ್ರು ಎಂದ್ರೆ,  ಹೆತ್ತ ಮಗನನ್ನೇ  ಮನೆಯ ನೀರಿನ ಸಂಪಿನಲ್ಲಿ ಮುಳುಗಿಸಿ ಕೊಂದಿದ್ದಾಳೆ.

ಕಣ್ಣೆದುರು ತನ್ನ ಕೈಯಿಂದ್ಲೇ ಕೊಲೆಯಾದ ಮಗುವಿನ ಶವವನ್ನು ಅಪ್ಪಿಕೊಂಡು ಸಾವನ್ನಪ್ಪಿದ್ದಾಳೆ.ಮಗನೇ ಇಲ್ಲದ ಮೇಲೆ ತಾನ್ ಬದುಕೇನ್ ಪ್ರಯೋಜನ ಎಂದು  ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ…. ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ….ಅಮ್ಮ-ಮಗನ ಸಾವಿಗೆ ಚಿಕ್ಕಾಬಳ್ಳಾಪುರಕ್ಕೆ ಚಿಕ್ಕಾಬಳ್ಳಾಪುರವೇ ಕಂಬನಿ ಮಿಡಿದಿದೆ.

Spread the love
Leave A Reply

Your email address will not be published.

Flash News