ಜಮೀರ್ ಗೆ “ದಿಢೀರ್ ಕೊರೊನಾ”? ಶುರುವಾಗಿದೆ ತನಿಖೆ:ಸಿಸಿಬಿ ಡ್ರಿಲ್ ತಪ್ಪಿಸಿಕೊಳ್ಳಲು ಕೊರೊನಾ “ಡ್ರಾಮಾ”ನಾ.!!.ಸೋಂಕು ದೃಢಪಡಿಸಿದವರ ವಿಚಾರಣೆಗೆ ಸಿದ್ಧತೆ…??

0

ಬೆಂಗಳೂರು:ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ-ದಾಂಧಲೆ ಪ್ರಕರಣ ಕ್ಷಣ ಕ್ಷಣಕ್ಕೂ ಒಂದೊಂದು ತಿರುವು ಪಡೆದುಕೊಳ್ತಿದೆ.ತನಿಖೆ ಗಂಭೀರತೆಯನ್ನು ಪಡೆದುಕೊಳ್ತಿದೆ.ದಾಂಧಲೆಕೋರರ ಬೆನ್ನಿಗೆ ನಿಂತವ್ರ ಪೆರೆಡ್-ಡ್ರಿಲ್ ಸಿಸಿಬಿಯಿಂದ ಜೋರಾಗೇ ನಡೆಯುತ್ತಿದೆ.ನಿರೀಕ್ಷೆ ಮಾಡದವರೆಲ್ಲಾ ಸಿಸಿಬಿ ಮುಂದೆ ಮಂಡಿಯೂರುವಂತೆ ಆಗಿದೆ.

ಇದೆಲ್ಲದರ ನಡುವೆಯೇ ಚಾಮರಾಜಪೇಟೆ ಕೈ ಶಾಸಕ ಜಮೀರ್ ಅಹಮದ್ ಖಾನ್ ಗೆ ಕೊರೊನಾ ಪಾಸಿಟಿವ್ ಬಂದಿದೆ.ಕೆಜಿಹಳ್ಳಿ-ಡಿಜೆ ಹಳ್ಳಿ ಘಟನೆಯ ತನಿಖೆ ಗಂಭೀರತೆಯ ಆಯಾಮವನ್ನು ಪಡೆದುಕೊಂಡಿರುವಾಗ್ಲೇ ಜಮೀರ್ ಗೆ ಕೊರೊನಾ ಬಂದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಜಮೀರ್   ತನಿಖೆಯ ಉರುಳಿನಿಂದ ತಪ್ಪಿಸಿಕೊಳ್ಳೊಕ್ಕೆ ಕೊರೊನಾ ಪಾಸಿಟಿವ್ ಎಂದು ವೈದ್ಯರಿಂದ ಸರ್ಟಿಫಿಕೇಟ್ ಪಡೆದಿದ್ದಾರೆನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ..

ಕೆಜಿಹಳ್ಳಿ ಗಲಭೆ ಘಟನೆ ಅಂದುಕೊಂಡಷ್ಟು ಸರಳ-ಸುಲಭವಾಗಿಲ್ಲ..ಏನೋ ಒಂದ್ ಮಾಮೂಲ್ ಘಟನೆಯಾಗಿ ಉಳಿದೋಗಬಹುದೆಂದು ಯಾರೆಲ್ಲಾ ಅಂದುಕೊಂಡಿದ್ರೋ ಅವರಿಗೆಲ್ಲಾ ಈಗ ಮೈ ಚಳಿ ಬಿಟ್ಟೋಗಿದೆ.ಯಾಕಾದ್ರೂ ಇಂತದ್ದೊಂದು ದುಸ್ಸಾಹಸಕ್ಕೆ ಕೈ ಹಾಕಿದ್ವಿಪ್ಪ ಎಂದು ಕೈ ಕೈ ಹಿಸುಕಿಕೊಳ್ತಿದ್ದಾರೆ.

ಇಂತದ್ದರ ನಡುವೆ ಪ್ರಕರಣದಲ್ಲಿ ತಪ್ಪಿತಸ್ಥರ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವ ಶಾಸಕ ಜಮೀರ್ ಗೂ ಡ್ರಿಲ್ ನ ಭಯ ಶುರುವಾಗಿರುವುದಂತೂ ಸತ್ಯ..ಇದರ ನಡುವೆಯೇ ಇ.ಡಿ ಕೂಡ ತನ್ನ ಖೆಡ್ಡಾಕ್ಕೆ ಅವರನ್ನು ಉರುಳಿಸಿಕೊಳ್ಳುವ ಸಿದ್ಧತೆ ಮಾಡಿಕೊಂಡಿದೆ.ಇಷ್ಟ್ ದಿನ ಯಾವುದಕ್ಕೂ ಹದರದೆ ಬಾಯಿಗೆ ಬಂದಂತೆ ಮಾತ್ನಾಡುತ್ತಾ ತಿರುಗುತ್ತಿದ್ದ ಜಮೀರ್ ಗೆ ಈ ಬೆಳವಣಿಗೆಗಳು ಕಂಟಕವಾಗುವ ಆತಂಕ ಸೃಷ್ಟಿಸಿರುವುದರಿಂದ ಇದೆಲ್ಲದರಿಂದ ಬಚಾವಾಗಲು ಇದ್ದಕ್ಕಿದ್ದಂತೆ ಕೊರೊನಾ ಪಾಸಿಟಿವ್ ಅಸ್ತ್ರವನ್ನು ಪ್ರಯೋಗಿಸಿದ್ರಾ..ಗೊತ್ತಿಲ್ಲ..ಆದ್ರೆ ಎಂತೆಂಥದ್ದೋ ಸಂದರ್ಭಗಳಲ್ಲಿ ಬಾರದ ಕೊರೊನಾ ಇವತ್ತು ಇದ್ದಕ್ಕಿದ್ದಂತೆ ಬಂದಿದೆ ಎಂದು ಅವರು ಪೋಸ್ಟ್ ಹಾಕಿರುವುದು ಸಾಕಷ್ಟು ಅನುಮಾನ ಸೃಷ್ಟಿಸಿದೆ.

ಪಾದರಾಯನಪುರ,ಟಿಪ್ಪುನಗರ,ಜೆಜೆಆರ್ ನಗರ,ಶಿವಾಜಿನಗರದಂಥ ಏರಿಯಾಗಳಲ್ಲಿ ಕೊರೊನಾ ತಾಂಡವವಾಡುತ್ತಿದ್ದಾಗ ಅವರೆಲ್ಲರ ಬೆನ್ನಿಗೆ ನಿಂತು ಅವರನ್ನು ಬೆಂಬಲಿಸಿ ಗುಂಪಿನ ನಡುವೆ ಇದ್ದಾಗ್ಲೇ ಜಮೀರ್ ಗೆ ಕೊರೊನಾ ಬಂದಿರಲಿಲ್ಲ..ಆಗ ಟೆಸ್ಟ್ ಮಾಡಿಸಿದಾಗ್ಲೇ ಕೊರೊನಾ ನೆಗೆಟಿವ್ ಬಂದಿತ್ತು(ಅದು ಎಷ್ಟು ಸತ್ಯವೋ ಗೊತ್ತಿಲ್ಲ..ಅವರೇ ಅಂತದ್ದೊಂದು ರಿಪೋರ್ಟ್ ರೆಡಿ ಮಾಡಿಸಿಕೊಂಡ್ರೊ ಗೊತ್ತಿಲ್ಲ..ಹೀಗೊಂದು ಮಾತು ಆಗಲೇ ಕೇಳಿಬಂದಿತ್ತು ಕೂಡ).ಹೀಗಿರುವಾಗ ಕೆಜಿಹಳ್ಳಿ-ಡಿಜೆಹಳ್ಳಿ ಪ್ರಕರಣದ ತನಿಖೆ ವೇಳೆಯೇ ಜಮೀರ್ ತಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಪೋಸ್ಟ್ ಹಾಕ್ಕೊಂಡಿರುವುದು ಸಾಕಷ್ಟು ಗುಮಾನಿ ಮೂಡಿಸಿದೆ.ತನಿಖೆ ಸ್ಟ್ರಿಕ್ಟ್ ಆಗಿ ನಡೆಯುತ್ತಿರುವಾಗ್ಲೇ ಜಮೀರ್ ಗೆ ಕೊರೊನಾ ಬರಬೇಕಾ..ಇದನ್ನೇಕೋ ನಂಬಲಾಗ್ತಿಲ್ಲ ಎಂದು ರಾಜಕೀಯ ವಲಯ ಮಾತನಾಡಿಕೊಳ್ಳುತ್ತಿದೆ.

ಇಷ್ಟ್ ದಿನ ಜಮೀರ್ ಗೆ ಜ್ವರ ಏಕೆ ಬರಲಿಲ್ಲ..ಡಾಕ್ಟರ್ ಬಳಿ ಏಕೆ ತೋರಿಸಿಕೊಳ್ಳಲಿಲ್ಲ..ಗಲಭೆಯ ತನಿಖೆ ಶುರುವಾಗಿ ಒಬ್ಬೊಬ್ಬರೇ ಪೊಲೀಸ್ ಡ್ರಿಲ್ ನಲ್ಲಿ ಸತ್ಯ ಬಾಯ್ಬಿಡುತ್ತಿರುವ ವೇಳೆಗೇನೆ ಅವರ ಜ್ವರ ಬರಬೇಕಿತ್ತೇ..ದಿಢೀರ್ ಜ್ವರ  ಬರೊಕ್ಕೆ ಕಾರಣವೇನು..ಯಾವಾಗ ಟೆಸ್ಟ್ ಮಾಡಿಸಿದ್ರು..ಎಲ್ಲಿ ಟೆಸ್ಟ್ ನಡೀತು..ಯಾವ್ ವೈದ್ಯರು ಅವರಿಗೆ ಕೊರೊನಾ ಇರೋದನ್ನು ದೃಢಪಡಿಸಿದ್ರೋ..ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡಲಾರಂಭಿಸಿವೆ.

ಪೊಲೀಸ್ ತನಿಖೆ ಗಂಭೀರತೆ ಪಡೆದುಕೊಳ್ಳುತ್ತಿರುವುದರ ನಡುವೆಯೇ  ಪ್ರಕರಣವನ್ನು ಸರ್ಕಾರ ಕೂಡ ಪ್ರತಿಷ್ಟೆಯ ವಿಷಯವನ್ನಾಗಿ   ಮಾಡಿಕೊಂಡಿರುವುದರಿಂದ ಜಮೀರ್ ಸಹಜವಾಗೇ ಆತಂಕಕ್ಕೆ ಈಡಾಗಿರುವ ಸಾಧ್ಯತೆಗಳಿರಬಹುದು. ಆರಂಭದಲ್ಲಿ ಏನಾದೀತು..ಕೈ ಪಕ್ಷದವ್ರು ನನ್ನ ಜೊತೆಗಿದ್ದಾರೆ.ಮುಸ್ಲಿಂ ಸಮುದಾಯ ತನ್ನ ಬೆನ್ನಿಗಿದೆ..ಏನ್ ಮಾಡಿದ್ರೂ ಜಯಿಸಿಕೊಳ್ಳಬಹುದೆಂದುಕೊಂಡಿದ್ರೇನೋ..ಆದ್ರೆ  ತಾನಂದುಕೊಂಡಷ್ಟು ಸಲೀಸಾಗಿ ಇದು ಮುಗೀತಿಲ್ಲ..ಸ್ವಲ್ಪ ಯಾಮಾರಿದ್ರೆ ತನ್ನನ್ನೂ ಡ್ರಿಲ್ ಮಾಡಬಹುದು..ಆಗ ಅಸಲೀಯತ್ತು ಹೊರಬರಬಹುದೆನ್ನುವ ಕಾರಣಕ್ಕೆ ಡ್ರಿಲ್ ನಿಂದ ತಪ್ಪಿಸಿಕೊಳ್ಳಲು ಜಮೀರ್ ಕೊರೊನಾ ಪಾಸಿಟಿವ್ ಡ್ರಾಮಾ ಸೃಷ್ಟಿಸಿದ್ದಾರಾ ಎನ್ನುವ ಅನುಮಾನ ಕೂಡ ವ್ಯಕ್ತವಾಗ್ತಿದೆ.

ಕೊರೊನಾ ಪಾಸಿಟಿವ್ ಎಂದ್ರೆ ತನಿಖೆಯಿಂದ ತಪ್ಪಿಸಿಕೊಳ್ಳಬಹುದು…ತಪ್ಪಿಸಿಕೊಳೊಕ್ಕೆ ಏನೆಲ್ಲಾ ಮಾಡಬಹುದು ಎನ್ನುವುದ ಏನ್ ಮಾಡಬಹುದು ಎನ್ನುವುದನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿಯೇ ಆಲೋಚಿಸಬಹುದು..ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯಸ್ಸು ಎನ್ನುವಂತೆ ಮೊದ್ಲು ಡ್ರಿಲ್ ನಿಂದ ತಪ್ಪಿಸಿಕೊಳ್ಳೋ ದುರಾಲೋಚನೆಯಲ್ಲಿ ಜಮೀರ್ ಕೊರೊನಾ ಪಾಸಿಟಿವ್ ಅಸ್ತ್ರವನ್ನು ಪ್ರಯೋಗಿಸಿದ್ರಾ ಗೊತ್ತಾಗ್ತಿಲ್ಲ..

ಆದ್ರೆ ಜಮೀರ್ ಅಂದುಕೊಂಡಷ್ಟು ಅದು ಕೂಡ ಸಲೀಸಾಗಿಲ್ಲ.ಸರ್ಕಾರ ಹಾಗೂ ಪೊಲೀಸ್ರು ಮನಸು ಮಾಡಿದ್ರೆ ಕೊರೊನಾ ಪಾಸಿಟಿವ್ ನ ಅಸಲಿಯತ್ತನ್ನೇ ಬಯಲು ಮಾಡೋದು ಕಷ್ಟದ ಮಾತೇನಲ್ಲ..ಕೆಲವು ಮೂಲಗಳ ಪ್ರಕಾರ ದಿಢೀರ್ ಕೊರೊನಾ ಪಾಸಿಟಿವ್ ವಕ್ಕರಿಸಲು ಕಾರಣವೇನು ಎನ್ನುವುದರ ಕುರಿತು ಈಗಾಗ್ಲೇ ನೈಜತೆ ಅರಿಯುವ ಕೆಲಸ ಶುರುವಾಗಿದೆಯಂತೆ.

ಜಮೀರ್ ಗೆ ಕೊರೊನಾ ಬಂದಿದ್ದರ ಮೂಲ ಏನು..ಎಲ್ಲಿ ಟೆಸ್ಟ್ ಮಾಡಿಸಲಾಯ್ತು….ಯಾರ್ ಅದನ್ನು ಸರ್ಟಿಫೈಡ್ ಮಾಡಿದ್ರು..ವೈದ್ಯರು ಯಾರು..ಈ ಎಲ್ಲಾ ಅಂಶಗಳ ಮೇಲೆ ಸಂಬಂಧಿಸಿದವರನ್ನು ಡ್ರಿಲ್ ಮಾಡಿದ್ರೆ ಸತ್ಯಾಂಶ ಬಯಲಾಗಬಹುದು ಎನ್ನುವುದು ಸರ್ಕಾರ-ಪೊಲೀಸ್ರ ಆಲೋಚನೆ..ಅದನ್ನು ಮೀರಿಯೂ ಕೊರೊನಾ ಬಂದಿದ್ದೇ ಸತ್ಯವಾದ್ರೆ ಕ್ವಾರಂಟೈನ್ ಮುಗಿದ ಮೇಲಾದ್ರೂ ಜಮೀರ್ ತನಿಖೆಗೆ ಹಾಜರಾಗಬೇಕಾಗ್ತದೆ..ಪೊಲೀಸರಿಗೆ ಸಹಕರಿಸಬೇಕಾಗ್ತದೆ..ಸತ್ಯಾಂಶ ಆಗಲೂ ಬಯಲಾಗಬೇಕಾಗುತ್ತದಲ್ಲವೇ..ಇದು ಜಮೀರ್ ಗೂ ಗೊತ್ತು..

Spread the love
Leave A Reply

Your email address will not be published.

Flash News