ಅರಣ್ಯಾಧಿಕಾರಿಗಳ ವರ್ಗಾವಣೆಗೆ  ಕಳ್ಳೆಪುರಿಯಂತೆ ಶಿಫಾರಸ್ಸು ಪತ್ರ ನೀಡಿದ ಸಭಾಧ್ಯಕ್ಷರು-ಸಚಿವರು-ಶಾಸಕರಿಗೆಲ್ಲಾ ಎದುರಾಗಿದೆ ಕಾನೂನು ಕಂಟಕ..!!

0

ಬೆಂಗಳೂರು:ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳು ತಲೆ ಹಾಕಲೇಬಾರದು.ಅದು ಆಯಾ ವಿಭಾಗದ ಮುಖ್ಯಾಧಿಕಾರಿಗಳೆ ಪರಮಾಧಿಕಾರ..ಮುಖ್ಯಮಂತ್ರಿ,ಸಚಿವ,ಶಾಸಕರು ಪ್ರಭಾವ ಬೀರಲೇಬಾರದು..ಅದು ಕಾನೂನುಬಾಹೀರ…ಹೀಗೊಂದು ತೀರ್ಪು ನೀಡಿದೆ ರಾಜ್ಯ ಹೈಕೋರ್ಟ್.ಆದ್ರೆ ನ್ಯಾಯಾಂಗದ ಬಗ್ಗೆ ಕನಿಷ್ಠ ಗೌರವವೂ ಇಲ್ಲದ ರೀತಿಯಲ್ಲಿ ವರ್ತಿಸಿದೆ ನಮ್ಮ ಆಡಳಿತಯಂತ್ರ.ಅಧಿಕಾರಿಗಳ ವರ್ಗಾವಣೆ-ಮರುನಿಯೋಜನೆಯಲ್ಲಿ ಚುನಾಯಿತ ಪ್ರತಿನಿಧಿಗಳು (ಸ್ವ ಹಿತಾಸಕ್ತಿಯೂ ಇದರಲ್ಲಿ ಅಡಗಿರಬಹುದು.?) ಶಿಫಾರಸ್ಸು ಪತ್ರ ನೀಡುವುದು..ತಮ್ಮ ಪ್ರಭಾವ ಬೀರುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.ಇದಕ್ಕೆ ಮತ್ತೊಂದು ಉದಾಹರಣೆ ಅರಣ್ಯಾಧಿಕಾರಿಗಳ ವರ್ಗಾವಣೆ ಹಾಗೂ ಅದಕ್ಕೆ ದೊಡ್ಡವರೆನಿಸಿಕೊಂಡವರು ನೀಡಿರುವ ದಂಡಿ ಶಿಫಾರಸ್ಸು ಪತ್ರಗಳು..ಈ ನ್ಯಾಯಾಂಗನಿಂದನೆ ಕಾರಣಕ್ಕೆ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರೊಕ್ಕೆ ಸಾಮಾಜಿಕ ಕಾರ್ಯಕರ್ತರು ಸನ್ನದ್ಧವಾಗಿದ್ದಾರೆ.

ಅರಣ್ಯ ಇಲಾಖೆಯ ಉಪ ಅರಣ್ಯಾಧಿಕಾರಿಗಳ(ಡಿಎಫ್ ಓ) ವರ್ಗಾವಣೆಗೆ ಸಂಬಂಧಿಸಿದಂತೆ ತಮ್ಮ ಆಪ್ತರಿಗೆ-ಪರಿಚಯಸ್ಥ ಅಧಿಕಾರಿಗಳಿಗೆ ಶಿಫಾರಸ್ಸು ಪತ್ರಗಳನ್ನು ನೀಡಿರುವ ಆರೋಪ ಚುನಾಯಿತ ಪ್ರತಿನಿಧಿಗಳ ವಿರುದ್ದ ಕೇಳಿಬಂದಿದೆ.ದಿ ಫೈಲ್ ವೆಬ್ ಸೈಟ್ ವರದಿ ಮಾಡಿರುವಂತೆ ವರ್ಗಾವಣೆಗೆ ಪೂರಕವಾಗಿ ಶಿಫಾರಸ್ಸು ಪತ್ರ ನೀಡಿರುವವರಲ್ಲಿ ವಿಧಾನಸಭೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸೇರಿದ್ದಾರಂತೆ.

ಸ್ಪೀಕರ್ ಕಾಗೇರಿ ಅವರೇ  ಅರಣ್ಯ-ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಡಿಎಫ್ ಓ ವರ್ಗಾವಣೆ ಸೇರಿದಂತೆ ಸುಮಾರು 10  ಹೆಚ್ಚು ಅಧಿಕಾರಿಗಳಿಗೆ ಅವರಿಗೆ ಬೇಕಾದ ಸ್ಥಳದಲ್ಲಿ ವರ್ಗಾವಣೆ ಮಾಡಿಕೊಡುವಂತೆ ಶಿಫಾರಸ್ಸು ಪತ್ರ ನೀಡಿದ್ದಾರಂತೆ.ಈ ಶಿಫಾರಸ್ಸಿನ ಪತ್ರಗಳೊಂದಿಗೆ ಒಟ್ಟಾರೆ ದಾಖಲೆಗಳನ್ನು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಆಗಸ್ಟ್ 17-2020 ರಂದು ರವಾನಿಸಿದ್ದಾರೆ.ಕಾನೂನು ಪಾಲಿಸಿ ಎಲ್ಲರಿಗೂ ಮಾದರಿಯಾಗ್ಬೇಕಿದ್ದ ವಿಧಾನಸಭಾಧ್ಯಕ್ಷರೇ ತಮ್ಮಾಪ್ತರಿಗೆ ಶಿಫಾರಸ್ಸು ಪತ್ರ ನೀಡಿರುವುದು ವಿಧಾನಸಭೆ ಪಡಸಾಲೆಯಲ್ಲಿ ದೊಡ್ಡಮಟ್ಟದ ಚರ್ಚೆಯನ್ನು ಹುಟ್ಟಾಕಿದೆ.

ಇದಿಷ್ಟೇ ಅಲ್ಲ, ಡಿಎಫ್ ಓಗಳ ವರ್ಗಾವಣೆಗೆ ಪೂರಕವಾಗಿ ಸರ್ಕಾರದ ಅನೇಕ ಸಚಿವರು ಹಾಗೂ ಶಾಸಕ ಮಹಾನುಭಾವರು ಶಿಫಾರಸ್ಸು ಪತ್ರ ನೀಡುವ ಮೂಲಕ ಕಾನೂನಾತ್ಮಕ ತೊಡಕಿಗೆ ಸಿಕ್ಕಾಕೊಂಡಿದ್ದಾರೆ.ಅದರಲ್ಲಿ  ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,ರಮೇಶ್ ಜಾರಕಿಹೊಳಿ,ಕೋಟ ಶ್ರೀನಿವಾಸ ಪೂಜಾರಿ,ಮುರುಗೇಶ್ ನಿರಾಣಿ, ಸುಭಾಷ್ ಗುತ್ತೇದಾರ್,ಆರಗ ಜ್ಞಾನೇಂದ್ರ, ರಾಮಪ್ಪ ಲಮಾಣಿ,ಎಂಪಿ ರೇಣುಕಾಚಾರ್ಯ ಕೂಡ ಇದ್ದಾರೆ.

ಕಳ್ಳೆಪುರಿಯಂತೆ ಶಿಫಾರಸ್ಸು ಪತ್ರಗಳನ್ನು ನೀಡುವ ಮೂಲಕ  ಸಚಿವರು ಹಾಗೂ ಶಾಸಕರು ಯಾವುದೇ ರೀತಿಯಲ್ಲೂ ಅಧಿಕಾರಿಗಳ ವರ್ಗಾವಣೆ ಸಂಬಂಧಿಸಿದಂತೆ ಮದ್ಯಪ್ರವೇಶಿಸಬಾರದು,ಹಸ್ತಕ್ಷೇಪ ಮಾಡಬಾರದು ಎಂದು ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.

ಕೋರ್ಟ್ ಯಾವ್ ಪ್ರಕರಣದಲ್ಲಿ..ಹೀಗೆಂದು ಆದೇಶಿಸಿತ್ತು ಗೊತ್ತಾ..?:ಎಂಜಿನಿಯರ್ ವಾಸು ಎನ್ನುವವರು 2019ರಲ್ಲಿ ಬಿಬಿಎಂಪಿ ವರ್ಗಾವಣೆಗೆ ಮುಖ್ಯಮಂತ್ರಿ.ಸಚಿರುವ ಹಾಗೂ ಶಾಸಕರು ತಮಗೆ ಬೇಕಾದವ್ರಿಗೆ ವರ್ಗಾವಣೆ ಪತ್ರ ನೀಡುವ ಮೂಲಕ ರಾಜಕೀಯ ಪ್ರಭಾವ ಬಳಸುತ್ತಿದ್ದಾರೆ.ಇದಕ್ಕೆ ಬ್ರೇಕ್ ಹಾಕಬೇಕೆಂದು ಅರ್ಜಿಯೊಂದನ್ನು ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಕೃಷ್ಣ ಮೂರ್ತಿ ದೀಕ್ಷಿತ್ ಅವರು ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಆಯುಕ್ತರ ವಿವೇಚನಾಯುತ ಅಧಿಕಾರ.ಅದನ್ನು ಅವರೇ ಮಾಡಬೇಕು..ಇದರಲ್ಲಿ ಯಾವುದೇ ಒತ್ತಡಗಳಿಗೂ ಅವರು ಒಳಗಾಗಬಾರದು.ಈ ವಿಷಯದಲ್ಲಿ ಯಾರೂ ಶಿಫಾರಸ್ಸು ಮಾಡಬಾರದು..ಹಾಗೇ ಮಾಡಿದ್ರೆ ಅದು ಕಾನೂನುಬಾಹೀರವಾಗುತ್ತೆ ಎಂದು ಸ್ಪಷ್ಟವಾಗಿ ಆದೇಶಿಸಿದ್ದರು.ಆದರೆ ಉಪ ಅರಣ್ಯಾಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಸಭಾಧ್ಯಕ್ಷರು ಸೇರಿದಂತೆ ಸಚಿವರು ಹಾಗೂ ಶಾಸಕರು ಮಾಡಿದ್ದು ಅಕ್ಷಮ್ಯವಲ್ಲದೇ ಇನ್ನೇನು..ಇದರ ಬಗ್ಗೆ ಕಾನೂನಾತ್ಮಕ ಹೋರಾಟಕ್ಕೆ ವೇದಿಕೆ ಕೂಡ ಸೃಷ್ಟಿಯಾಗ್ತಿದೆ.

Spread the love
Leave A Reply

Your email address will not be published.

Flash News