ಆಗಸ್ಟ್ 24 ರಿಂದ ಕೆ.ಆರ್ ಮಾರ್ಕೆಟ್ “ರೀ” ಓಪನ್..! ಸತ್ರೂ..ಬದುಕಿದ್ರೂ..ಮಾರ್ಕೆಟ್ ನಲ್ಲೇ ಎನ್ತಿರೋರಿಗೆ ವ್ಯಾಪಾರಕ್ಕೆ ಸಿಗುತ್ತಾ ಗ್ರೀನ್ ಸಿಗ್ನಲ್…?

0

ಬೆಂಗಳೂರು:ಲಾಕ್ ಡೌನ್ ನಿಂದಾಗಿ ಬೀದಿಗೆ ಬಿದ್ದಿರುವ ತಮ್ಮನ್ನು ವಿಚಾರಿಸುವ ಗೋಜಿಗೂ ಯಾರೂ ಹೋಗಿಲ್ಲಬದುಕಿದ್ದೇ ವೋ..ಸತ್ತಿದ್ದೇವೋ..ನಿಮ್ಮ ಜೀವನ ಹೇಗೆ ಸಾಗುತ್ತಿದೆ ಎಂದು ಸೌಜನ್ಯಕ್ಕೂ ಯಾರೂ ಕೇಳಿಲ್ಲಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳೇ ಇಲ್ಲವಾಗಿದೆ..ವ್ಯಾಪಾರ ಮಾಡಿಯೇ ಮತ್ತೆ ಜೀವನ ಆರಂಭಿಸ್ಬೇಕು.ಹಾಗಾಗಿ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಇದೇ ತಿಂಗಳ 24 ರಂದು ಬೃಹತ್ ಪ್ರತಿಭಟನೆಯನ್ನು ವ್ಯಾಪಾರಿಗಳು ಇಟ್ಕೊಂಡಿದ್ದಾರೆ.ಇದರ ನೇತೃತ್ವವನ್ನು ರಾಜ್ಯ ರೈತ ಸಂಘ,ವಂದೇ ಮಾತರಂ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದೆ.

ಕೆ.ಆರ್ ಮಾರ್ಕೆಟ್ ಎಂದ್ರೆ ಅದು ರಾಜಧಾನಿ ಬೆಂಗಳೂರಿನ ಪ್ರಮುಖ ಲ್ಯಾಂಡ್.ಎಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ಕುಟುಂಬಗಳ ಜೀವನಾಧಾರದ ಮೂಲವೂ ಹೌದು..ಹೂವುಹಣ್ಣುತರಕಾರಿಯಿಂದ ಹಿಡಿದು ಎಲ್ಲಾ ರೀತಿಯ ವಸ್ತುಗಳ ವ್ಯಾಪಾರವಹಿವಾಟು ನಡೆಯುವ ಪ್ರಮುಖ ವಾಣಿಜ್ಯ ಕೇಂದ್ರ.ಆದ್ರೆ ಕೊರೊನಾ ವಕ್ಕರಿಸಿದಾಗಿನಿಂದ ಕೆ.ಆರ್ ಮಾರ್ಕೆಟ್ ಅನಿರ್ಧಿಷ್ಟಾವಧಿಗೆ ಬಂದ್ ಆಗಿದೆ.ಬಂದ್ ಆದಾಗಿನಿಂದ ವ್ಯಾಪಾರಸ್ಥರ ಜೀವನ ದುಸ್ತರವಾಗಿದೆ.ವ್ಯಾಪಾರವನ್ನು ಬಿಟ್ಟರೆ ಬೇರೆ ಯಾವ ಕೆಲಸವನ್ನೂ ಮಾಡಿ ಅಭ್ಯಾಸವಿಲ್ಲದ ಇವರಿಗೆ ಬೇರೆಡೆ ವ್ಯಾಪಾರ ಮಾಡ್ಲಿಕ್ಕೂ ಮಾಫಿಯಾಗಳು ಅವಕಾಶ ಮಾಡಿಕೊಡ್ತಿಲ್ಲ.ಹಾಗಾಗಿ ಸಾಕಷ್ಟು ವ್ಯಾಪಾರಸ್ಥರು ಕೆಲಸವನ್ನೇ ಬಿಟ್ಟು ಮನೆಯಲ್ಲುಳಿದಿದ್ದಾರೆ.

ಅವರಿವರು ಕೊಟ್ಟ ಅಷ್ಟಿಷ್ಟು ಸಹಾಯಧನದಿನಸಿ,ಉಳಿತಾಯ ಮಾಡಿಟ್ಟ ಹಣದಲ್ಲಿ ಇಷ್ಟ್ ದಿನ ಜೀವನ ನಡೆಸಿದ್ದಾಯ್ತು..ಈಗ ಉಳಿಸಿದ್ದೆಲ್ಲಾ ಖರ್ಚು ಆಗಿದೆ.ಅವರಿವರ  ಬಳಿ ಕೇಳಿ ಪಡೆದುಕೊಂಡಿದ್ದಾಗಿದೆ.ಮತ್ತೆ ನೆರವು ಕೇಳೊಕ್ಕೆ ಮುಖ ಇಲ್ಲವಾಗಿದೆ.ವ್ಯಾಪಾರ ಮಾಡಿಯೇ ಜೀವನ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ ತಮ್ಮ ಜೀವನ ನಿರ್ವಹಣೆಗೆ ವ್ಯಾಪಾರ ಆರಂಬಿಸಬೇಕಿದೆ.ಹಾಗಾಗಿ ಎಲ್ಲಾ ವ್ಯಾಪಾರಿಗಳು ಒಗ್ಗೂಡಿದ್ದು ಯಾರೇನೇ ಹೇಳಿದ್ರೂ..ಹೇಗೆ ತಡುದ್ರೂ 24 ರಿಂದ ವ್ಯಾಪಾರ ಆರಂಭಿಸಿಯೇ ತೀರಲು ಸಂಕಲ್ಪ ಮಾಡಿದ್ದಾರೆ.ಅವರ ಬೆನ್ನಿಗೆ ರೈತ ಸಂಘದ  ಕೆ.ಆರ್ ಮಾರ್ಕೆಟ್ ಘಟಕ ಹಾಗೂ ವಂದೇಮಾತರಂ ಸಂಘಟನೆಗಳ ಒಕ್ಕೂಟ ನಿಲ್ಲಲು ನಿರ್ಧರಿಸಿವೆ ಎಂದು ಶಿವಕುಮಾರ್ ನಾಯ್ಕ ತಿಳಿಸಿದ್ದಾರೆ.

ಮಾರ್ಕೆಟ್ ಗಳು ಆರಂಭದಿಂದ ಕೊರೊನಾ ಸಾಂಕ್ರಾಮಿಕತೆ ಹೆಚ್ಚುತ್ತೆನ್ನುವ ಮಾತನ್ನು ಬಿಬಿಎಂಪಿ ಹೇಳ್ತಿದೆ.ಆದ್ರೆ ಇವತ್ತಿನ ದಿನಗಳಲ್ಲಿ ಎಲ್ಲಾ ರೀತಿಯ ಉದ್ಯಮಗಳು ಆರಂಭವಾಗಿವೆ.ಜನ ಕೂಡ ಕೊರೊನಾ ಭಯವಿಲ್ಲದೆ ಅಡ್ಡಾಡುತ್ತಿದ್ದಾರೆ.ಎಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿದೆ.ಮಾಸ್ಕ್ ಧರಿಸಿದ್ರೆ ಸಾಕು ಕೊರೊನಾದಿಂದ ಬಚಾವಾಗಬಹುದೆಂಬ ಭಾವನೆ ಜನರಲ್ಲಿ ಬಂದ್ಹೋಗಿದೆ.ಜನ ದಟ್ಟಣೆ ಎಲ್ಲೆಲ್ಲೂ ಕಾಣುತ್ತಿದೆ.ಎಲ್ಲರಿಗೂ ರಿಯಾಯ್ತಿ ಕೊಟ್ಟಿರುವಾಗ ವ್ಯಾಪಾರಿಗಳಿಗೂ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಿ ಎನ್ನುತ್ತಾರೆ ಶಿವಕುಮಾರ ನಾಯ್ಕ.

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಹೋರಾಟವನ್ನು ಬೆಂಬಲಿಸಿದ್ದಾರೆ.ಎಲ್ಲರಿಗೂ ಕೊಟ್ಟಿರುವ ರಿಯಾಯ್ತಿಯನ್ನು ಕೃಷಿಯಾಧಾರಿತ ವ್ಯಾಪಾರಕ್ಕು ನೀಡಬೇಕು.ತಾನು ಬೆಳೆದ ಬೆಳೆಗೆ ಮಾರುಕಟ್ಟೆ ಇದ್ದುದ್ದೇ ಕೆ.ಆರ್ ಮಾರ್ಕೆಟ್.ಆದ್ರೆ ಮಾರ್ಕೆಟ್ ಸ್ಟಾಪ್ ಆದಾಗಿನಿಂದ್ಲೂ ರೈತರು ಪಡುತ್ತಿರುವ ಬವಣೆ ಬಿಬಿಎಂಪಿಗೆ ಗೊತ್ತಿಲ್ಲ ಎಂದೇನಿಲ್ಲ.ಮಾರ್ಕೆಟ್ ಓಪನ್ ಆಗ್ಬಿಟ್ರೆ ಕೊರೊನಾ ಹೆಚ್ಚುತ್ತೆನ್ನುವ ನೆವವನ್ನು ಮುಂದಿಟ್ಟುಕೊಂಡು ನಾಟಕವಾಡುತ್ತಿದೆ.ಒಂದಷ್ಟು ಸುರಕ್ಷತಾ ಕ್ರಮಗಳನ್ನು  ಕೈಗೊಂಡು ವ್ಯಾಪಾರಿಗಳಿಗೆ ಷರತ್ತು ವಿಧಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವುದರಿಂದ ಯಾವುದೇ ಸಮಸ್ಯೆಯಿಲ್ಲ..ಇದನ್ನು ಮಾಡೋದ್ ಬಿಟ್ಟು ಮಾರ್ಕೆಟ್ ಕ್ಲೋಸ್ ಮಾಡಿ,ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವುದನ್ನು ರೈತ ಸಂಘ ಸಹಿಸೊಲ್ಲ.24 ಪ್ರತಿಭಟನೆಗೆ ರೈತ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದು  ತಿಳಿಸಿದ್ದಾರೆ.

ಆದ್ರೆ ಬಿಬಿಎಂಪಿ ಮಾರ್ಕೆಟ್ ನಲ್ಲಿ ವ್ಯಾಪಾರ ಪುನಾರಂಭಿಸುವ ಬಗ್ಗೆ ಯಾವುದೇ ರೀತಿಯ ನಿರ್ದಾರವನ್ನು ಕೈಗೊಂಡಿಲ್ಲ.ರಾಜ್ಯ ಸರ್ಕಾರದಿಂದ ಸೂಚನೆ ಸಿಗುವವರೆಗೂ ಮಾರುಕಟ್ಟೆಯನ್ನು ಓಪನ್ ಮಾಡೊಕ್ಕೆ ಅವಕಾಶ ನೀಡೊಕ್ಕಾಗೊಲ್ಲ..ಇವ್ರು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ.ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಲಾಗುತ್ತೆ.ಸರ್ಕಾರಕ್ಕೂ ವ್ಯಾಪಾರಸ್ಥರ ಸಮಸ್ಯೆ-ಅಹವಾಲುಗಳ ಬಗ್ಗೆ ಗಮನ ಸೆಳೆಯಲಾಗುವುದು ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.ಅದೇನೇ ಇರಲಿ,ಕೆ.ಆರ್ ಮಾರುಕಟ್ಟೆ ವ್ಯಾಪಾರಿಗಳು ಆಗಸ್ಟ್ 24 ರಿಂದ ವ್ಯಾಪಾರ ಆರಂಭಿಸಿಯೇ ತೀರುವ ನಿರ್ದಾರ ಮಾಡಿದ್ದಾರೆ.ಆದ್ರೆ ಇದಕ್ಕೆ ಬಿಬಿಎಂಪಿ ಮಣಿಯುತ್ತೋ..ಅಥ್ವಾ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತೋ ಗೊತ್ತಾಗ್ತಿಲ್ಲ.  

Spread the love
Leave A Reply

Your email address will not be published.

Flash News