ಸಿಇಟಿ ಫಲಿತಾಂಶ ಪ್ರಕಟ: ಇಂಜಿನಿಯರಿಂಗ್ ನಲ್ಲಿ ಬೆಂಗಳೂರಿನ ರಕ್ಷಿತಾ – ಬಿಎಸ್ಸಿ ಕೃಷಿ-ವರುಣ್ ಗೌಡ-,ಪಶು ವೈದ್ಯಕೀಯ-ಸಾಯಿ ವಿವೇಕ್ ಪ್ರಥಮ RANK

0
ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ್ ನಾರಾಯಣ್

ಬೆಂಗಳೂರು:ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ 2020ರ  ಫಲಿತಾಂಶ ಪ್ರಕಟವಾಗಿದೆ. ಜುಲೈ 30 ರಿಂದ ಆಗಸ್ಟ್ 1 ರ ವರೆಗೂ ನಡೆಸಿದ್ದ ಪರೀಕ್ಷೆಯ ಫಲಿತಾಂಶವನ್ನ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಪ್ರಕಟಿಸಿದರು.

ಬೆಂಗಳೂರಿನ ಆರ್ ವಿ ಕಾಲೇಜಿನ ರಕ್ಷಿತಗಾ ಈ ಬಾರಿ ಇಂಜಿನಿಯರಿಂಗ್ ನಲ್ಲಿ ಮೊದಲ  RANK ಲಭಿಸಿದೆ. ವರುಣ್ ಗೌಡ ಹಾಗೂ ಸಾಯಿ ವಿವೇಕ್  ಕ್ರಮವಾಗಿ ಬಿಎಸ್ಸಿ ಕೃಷಿ, ಮತ್ತು ಪಶು ವೈದ್ಯಕೀಯದಲ್ಲಿ ಪ್ರಥಮ RANK ಪಡೆದಿದ್ದಾರೆ.ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ  1,94,419  ವಿದ್ಯಾರ್ಥಿಗಳು ಅರ್ಜಿಸಲ್ಲಿಸಿದ್ದರು. ಈ ಪೈಕಿ 1,75,349 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 1,53,470  ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಕೋಸ್  ಪ್ರವೇಶಕ್ಕೆ RANK ನೀಡಲಾಗಿದೆ.ಇನ್ನು ಕೃಷಿ ಕೋಸ್  ನ  1,27,627 ವಿದ್ಯಾರ್ಥಿಗಳಿಗೆ , ವೆಟರ್ನರಿ ಕೋಸ್ ನ  1, 29,666 RANK ಯೋಗ ಮತ್ತು ನ್ಯಾಚುರೋಪತಿ 1,29,611, ಮತ್ತು ಬಿ ಫಾಮ್  ಡಿ ಫಾಮ್  1,55,552  ವಿದ್ಯಾರ್ಥಿಗಳಿಗೆ RANK ನೀಡಲಾಗಿದೆ.

ಕರೋನಾ ಹಿನ್ನೆಲೆಯಲ್ಲಿ ಈ ಬಾರಿ ತಡವಾಗಿ ಸಿಇಟಿ ಪರೀಕ್ಷೆ ನಡೆಸಲಾಯ್ತು. ಜುಲೈ 30 ರಿಂದ ಆಗಸ್ಟ್ 1 ರ ವರೆಗೂ 127   ಸ್ಥಳದಲ್ಲಿ, 497 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.   ಈ ವೇಳೆ  ಹಲವು ಸವಾಲುಗಳನ್ನ ಎದುರಿಸಬೇಕಾಯ್ತು. 63 ಕರೋನಾ ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆದಿದ್ರು. ಅವರು ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಎಲ್ಲಾ ಸವಾಲುಗಳನ್ನ ಎದುರಿಸಿ ಈಗ ಫಲಿತಾಂಶ ಪ್ರಕಟಿಸಿದ್ದೇವೆ. ವಿಶೇಷ ಏನೆಂದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಇಟಿ ಪರೀಕ್ಷೆಯ ನಡೆದ 21  ದಿನಗಳಲ್ಲೇ ಫಲಿತಾಂಶ ನೀಡಲಾಗಿದೆ ಎಂದರು ಅಶ್ವತ್ಥ್ ನಾರಾಯಣ್.ಇನ್ನು  ಈ ಸಲ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಕೌನ್ಸಲಿಂಗ್ ನಡೆಯಲಿದ್ದು, ವಿದ್ಯಾರ್ಥಿಗಳು ಆಲ್ ಲೈನ್ ನಲ್ಲಿ ದಾಖಲಾತಿ ಅಪ್ಲೋಡ್ ಮಾಡಬೇಕು. ಸೆಪ್ಟೆಂಬರ್ 2 ರಿಂದ ದಾಖಲಾತಿ ಸಲ್ಲಿಕೆ ಪ್ರಕ್ರಿಯೆ ಮತ್ತು ಕೌನ್ಸಲಿಂಗ್ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.ಮೊದಲ RANK ಖುಷಿ ತಂದಿದೆ: ಜಯಕಿರಣದ ಜೊತೆ ಮಾತನಾಡಿದ  ಎಂ.ರಕ್ಷಿತಾ ,ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ  RANK ಪಡೆದಿರುವುದು ಖುಷಿ ತಂದಿದೆ. ಶ್ರಮ, ಡೆಡಿಕೇಷನ್ ನಿಂದ ಮೊದಲ RANK  ಪಡೆದಿದ್ದೇನೆ,, ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ. ಇಂಜಿನಿಯರಿಂಗ್ ನಲ್ಲಿ ಮೊದಲ  RANK ಪಡೆದಿರುವುದು ನಮ್ಮ ಕುಟುಂಬದ ಸಂತಸವನ್ನು ಹೆಚ್ಚಿಸಿದೆ ಎಂದರು.

ಸಿಇಟಿ 2020 ರ ಟಾಪ್ 3 RANK  ಪಡೆದವರ ವಿವರ:

ಇಂಜಿನಿಯರಿಂಗ್

-ರಕ್ಷಿತ್ ಎಂ.ಆರ್ ವಿ ಕಾಲೇಜು,ಬೆಂಗಳೂರು

-ಶುಭನ್ ಆರ್. ಶ್ರೀ ಚೈತನ್ಯ ಇ ಟೆಕ್ನೋ ಶಾಲೆ, ಬೆಂಗಳೂರು

-ಎಂ.ಶಶಾಂಕ್ ಬಾಲಾಜಿ, ಹುಬ್ಬಳ್ಳಿಯ ಬೇಸ್ ಪಿಯು ಕಾಲೇಜು

 

ಬಿಎಸ್ಸಿ ಕೃಷಿ

-ವರುಣ್ ಗೌಡ, ಎ ಬಿ, ಎಕ್ಸ್ ಪಟ್  ಕಾಲೇಜು ಮಂಗಳೂರು

-ಸಂಜಾನಾ ಕೆ. ಮಂಗಳೂರು ಬೇಸ್ ಪಿಯು ಕಾಲೇಜು

-ಲೋಕೇಶ್ ವಿ ಜೋಗಿ,ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು

 

ಪಶು ವೈದ್ಯಕೀಯ

-ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ ಬೆಂಗಳೂರು

-ಆರ್ಯನ್ ಮಹಾಲಿಂಗಪ್ಪ ಚನ್ನಾಳ್, ಪ್ರಗತಿ ಪಬ್ಲಿಕ್ ಸೆಕೆಂಡರಿ ಶಾಲೆ, ಕೋಟ

-ಸಂಜಾನಾ ಕೆ. ಮಂಗಳೂರು ಬೇಸ್ ಪಿಯು ಕಾಲೇಜು

 

ಬಿಫಾರ್ಮ ಡಿ ಫಾರ್ಮ

-ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ ಬೆಂಗಳೂರು

-ಸಂದೀಪನ್ ನಸ್ಕನ್ , ಹೊರಾನಾಡ ಕನ್ನಡಿಗ

-ಪವನ್ ಎಸ್ ಗೌಡ, ನಾರಾಯಣ ಪಿಯು ಕಾಲೇಜು ಬೆಂಗಳೂರು

 

ಯೋಗ ವಿಜ್ಞಾನ ಮತ್ತು ನ್ಯಾಚುರೋಪತಿ

-ಪಿಪಿ. ಅರ್ನವ್ ಅಯ್ಯಪ್ಪ, ಆಳ್ವಾಸ್ ಪಿಯು ಕಾಲೇಜು ಮೂಡಬಿದರೆ, ದಕ್ಷಿಣ ಕನ್ನಡ

-ಕೆ.ಸಂಜನಾ ಬೇಸ್ ಪಿಯು ಕಾಲೇಜು, ಮೈಸೂರು

-ಪಿ.ಸಾಯಿ ವಿವೇಕ್- ನಾರಾಯಣ ಈ ಟೆಕ್ನೋ ಸ್ಕೂಲ್ , ಬೆಂಗಳೂರು 

Spread the love
Leave A Reply

Your email address will not be published.

Flash News