ನಾಳೆ ನಿತ್ಯಾನಂದ C/O ಕೈಲಾಸದ ನೂತನ ನೋಟು-ಕರೆನ್ಸಿ ಬಿಡುಗಡೆ….

0

ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಭಾರತ ಬಿಟ್ಟು ಪರಾರಿಯಾಗಿ ಹಲವು ದಿನಗಳು ಕಳೆದಿವೆ. ಈ ಹೊತ್ತಲ್ಲೇ ಕಳೆದ ಎರಡ್ಮೂರು ದಿನಗಳ ಹಿಂದೆ ಅಜ್ಞಾತ ಸ್ಥಳವೊಂದರಿಂದ ವಿಡಿಯೋ ಒಂದನ್ನ ಬಿಡುಗಡೆ ಮಾಡಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದ. ದಕ್ಷಿಣ ಅಮೇರಿಕಾದ ದ್ವೀಪದಲ್ಲಿ ತನ್ನದೇ ಆದ ದೇಶ ಸ್ಥಾಪನೆಯ ಯೋಜನೆ ಹಾಕಿಕೊಂಡಿರುವ ನಿತ್ಯಾನಂದ ತನ್ನ ದೇಶದ ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್ ಸ್ಥಾಪಿಸುವುದಾಗಿಯೂ ಹೇಳಿದ್ದಾನೆ.

ಗಣೇಶ ಚತುರ್ಥಿಯ ದಿನ ಕೈಲಾಶ್ ದೇಶದ ನೋಟು ಬಿಡುಗಡೆ ಯಾಗಲಿದೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆಯಲ್ಲದೇ,ನಿತ್ಯಾನಂದನ ಕೈಲಾಶ್ ದೇಶದ ಕರೆನ್ಸಿಯ ವಿನ್ಯಾಸ ಹಾಗೂ ಹೆಸರು ಹೇಗಿರಲಿದೆ ಅನ್ನೂ ಕುತೂಹಲ ಹಲವರಲ್ಲಿ ಮೂಡಿದೆ.ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿ ಕೈಲಾಶ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ವಿಶ್ವದಾದ್ಯಂತ ಇರುವ ತನ್ನ ಭಕ್ತರಿಂದ ಸಂಗ್ರಹಿಸಿದ ಹಣವನ್ನು ಈ ಬ್ಯಾಂಕ್ ನಲ್ಲಿ ಇಡಲಾಗುತ್ತದೆ, ಕೈಲಾಶ ದೇಶದ ಅಭಿವೃದ್ದಿಗಾಗಿ ಈ ಹಣ ಬಳಸಲಾಗುತ್ತದೆ ಎಂದು ಕೂಡ ಹೇಳಿದ್ದ.

ಅಮೇರಿಕಾದ ಈಕ್ವೇಡಾರ್ ಸಮೀಪ ದ್ವೀಪವೊಂದನ್ನು ಖರೀದಿಸಿರುವ ನಿತ್ಯಾನಂದ ಅದಕ್ಕೆ “ಕೈಲಾಶ್” ಅಂತ ನಾಮಕರಣ ಮಾಡಿದ್ದಾನೆ. ಈ ದೇಶದ ರಾಷ್ಟ್ರೀಯ ಹೂ ಕಮಲ, ಆಲ ರಾಷ್ಟ್ರೀಯ ಮರವಾಗಿದ್ದು, ವೃಷಭ ರಾಷ್ಟ್ರ ಧ್ವಜವಾಗಿದೆ.ಹಾಗೆಯೇ ನಂದಿ ರಾಷ್ಟ್ರಿಯ ಪ್ರಾಣಿಯಾಗಿದ್ದು, ಶರಬಂ ಪಕ್ಷಿ ಕೈಲಾಶ ದೇಸ ರಾಷ್ಟ್ರೀಯ ಪಕ್ಷಿಯಾಗಿದೆ. ಇಂಗ್ಲೀಷ್, ತಮಿಳು, ಸಂಸ್ಕೃತ ಕೈಲಾಶ ದೇಶದ ಅಧಿಕೃತ ಭಾಷೆಗಳು ಅಂತ ಹೇಳಲಾಗುತ್ತಿದೆ.ಈ ನಡುವೆ ನಿತ್ಯಾನಂದನ ವಿರುದ್ಧ ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಆತನ ಪತ್ತೆಗೆ ಈಗಾಗಲೇ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. 

Spread the love
Leave A Reply

Your email address will not be published.

Flash News