ಕೆಜೆ ಹಳ್ಳಿ-ಡಿ ಜೆ ಹಳ್ಳಿಯಿಂದ “ಎಸ್ಕೇಪ್” ಆದ  ಕಿರಾತಕರು ಕಣ್ಣೂರಿನಲ್ಲಿ “ಪ್ರತ್ಯಕ್ಷ”. ಮಸೀದಿಗಳಲ್ಲಿ ಆಶ್ರಯ- ಕೆಲವರಿಗೆ ಕೊರೊನಾ-ಒದ್ದೋಡಿಸುವಂತ  ಸ್ಥಳೀಯರ ಗಲಾಟೆ..

0

ಬೆಂಗಳೂರು:  ಕೆಜಿ ಹಳ್ಳಿ ಡಿಜೆಹಳ್ಳಿಯಲ್ಲಿ ಬೆಂಕಿ ಹಚ್ಚಿ ಎಸ್ಕೇಪ್ ಆದ  ಗಲಭೆಕೋರರು ಅಲ್ಲಿದ್ದಾರೆ..ಇಲ್ಲಿದ್ದಾರೆ..ಆ ಮಸೀದಿಗೆ ಹೋದ್ರು..ಆ ದರ್ಗಾದಲ್ಲಿ ನಮಾಜ್ ಸಲ್ಲಿಸಿ ಅಲ್ಲಾಹುನಲ್ಲಿ ಕ್ಷಮೆ ಕೋರಿದರು..ಹೀಗೆಲ್ಲಾ ಮಾಡಿದ ವರದಿ ಮಾದ್ಯಮಗಳಿಗೆ ಈಗ ಆ ಗಲಭೆ ಕೋರರು ಎಲ್ಲಿದ್ದಾರ..ಎಲ್ಲೆಲ್ಲಾ ಅಡ್ಡಾಡಿದ್ದಾರೆನ್ನುವುದರ ಮಾಹಿತಿ ಇದೆಯಾ…ಅಂತದ್ದೊಂದು ಸ್ಪೋಟಕ ಮಾಹಿತಿಯನ್ನು ನೀಡ್ತಿದೆ  ಕನ್ನಡ ಫ್ಲಾಶ್ ನ್ಯೂಸ್  ಕಿಡಿಗೇಡಿಗಳ ಹುಡುಕಾಟಕ್ಕೆ ಬಲೆಬೀಸಿರುವ ಪೊಲೀಸ್ರು  ಕನ್ನಡ ಫ್ಲಾಶ್ ನ್ಯೂಸ್ ನೋಡಿ ಎಚ್ಚೆತ್ತುಕೊಳ್ಳಲೇಬೇಕಿದೆ.

ಕೆಜಿಹಳ್ಳಿ-ಡಿಜೆ ಹಳ್ಳಿ ಗಲಭೆಗೆ ಕಾರಣವಾದವ್ರಲ್ಲಿ ಕೆಲವರ ಹೆಡೆಮುರಿಕಟ್ಟಿ  ಜೈಲಿಗೆ  ದಬ್ಬಿರೋ ಪೊಲೀಸ್ರ ಕೆಲಸಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು.ಆದ್ರೆ ಅಂದು  ಗಲಭೆ ಮಾಡಿ ತಲೆತಪ್ಪಿಸಿಕೊಂಡ ಪ್ರಕರಣದ ಪ್ರಮುಖ ಕಿಡಿಗೇಡಿಗಳಾದ SDPI ನ ಹದಿನೈದಕ್ಕೂ ಹೆಚ್ಚಿನ ಗಲಭೆಕೋರರು ಎಸ್ಕೇಪ್ ಆಗಿ ಎಲ್ಲೋದ್ರು ಎನ್ನೋದು ಗೊತ್ತಾಗ್ತಲೇ ಇಲ್ಲ.ಆದ್ರೆ ಹಾಗೆ ಎಸ್ಕೇಪ್ ಆದವ್ರು ಎರಡು ಕಾರುಗಳಲ್ಲಿ ರಾತೋರಾತ್ರಿ ಬೆಂಗಳೂರನ್ನು ಬಿಟ್ಟು ಮೈಸೂರಿಗೆ ತೆರಳಿ ಮೈಸೂರಿನ ಹೊರವಲಯದಲ್ಲಿ ಬೀಡುಬಿಟ್ಟು ನಂತರ ತೆರಳಿದ್ದೆಲ್ಲಿ ಗೊತ್ತಾ…ಕೇರಳಾದ ಕಣ್ಣೂರು.

SDPI ನ ಫ್ಯಾಕ್ಟರಿ ಎಂದೇ ಕರೆಯಿಸಿಕೊಳ್ಳುತ್ತೆ ಕೇರಳಾ..ಅಲ್ಲಿ ತನ್ನ ಕಾರ್ಯಚಟುವಟಿಕೆ ಹಾಗು ಜಾಲವನ್ನು ವ್ಯಾಪಿಸಿದೆ ಎಸ್ ಡಿಪಿಐ.ಇಲ್ಲಿಂದ ಕೇರಳಾದ ಕಣ್ಣೂರಿನ SDPI ಘಟಕದ ಜೊತೆಗೆ  ಸಂಪರ್ಕ ಸಾಧಿಸಿದ್ದಾರೆ.ಆಶ್ರಯದ ಭರವಸೆ ಸಿಕ್ಕ ನಂತರ ಅಲ್ಲಿಗೆ ತೆರಳಿ  ಇದೀಗ  ಕಣ್ಣೂರು ಜಿಲ್ಲೆಯ ತಲಶೆರಿಯ ಹತ್ತಿರದ ಪಾನೂರಿನಲ್ಲಿ ಮಸೀದಿಗಳಲ್ಲಿ ತಲೆಮರೆಸಿಕೊಂಡಿದ್ದಾರೆನ್ನುವ ಮಾಹಿತಿ  ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಗಂಭೀರ ವಿಚಾರ ಏನ್ ಗೊತ್ತಾ… ಇಲ್ಲಿಂದ ಹೋದ ಹದಿನೈದು  ಜನರ ಪೈಕಿ ಐದು ಜನಕ್ಕೆ ಕೊರೊನಾ ಪಾಸಿಟಿವ್ ವಕ್ಕರಿಸಿದ್ದು ಅವರೊಳಗೆ ಮಸೀದಿಯೊಳಗೆ ಕ್ವಾರಂಟೈನ್ ಗೊಳಪಡಿಸಲಾಗಿದೆಯಂತೆ.ಇದಕ್ಕೆ ಸ್ಥಳೀಯರೇ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರಂತೆ.ಏಕೆಂದರೆ ಈ  ಪಾಣೂರು ಬಹುತೇಕ ಕೊರೊನಾ ಇಲ್ಲದ ಸಂರಕ್ಷಿತ ಪ್ರದೇಶವಾಗಿದ್ದು ಈ ದುರುಳರಿಂದ ಇದೀಗ ಪಾಣೂರು  ಮಸೀದಿಗಳಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರಂತೆ. ಪಾಣೂರಿನ ಜನತೆ ಕೈ ಕೈ ಹಿಸುಕಿಕೊಳ್ಳುತ್ತಾ ಬೆಂಗಳೂರಿನ ಗಲಭೆಕೋರರಿಗೆ ಹಿಡಿಶಾಪ ಹಾಕುತ್ತಿದ್ದರಂತೆ. ಕನ್ನಡ ಫ್ಲಾಶ್ ನ್ಯೂಸ್   ವರದಿ ನೋಡಾದ ಮೇಲಾದ್ರೂ ಬೆಂಗಳೂರು ಪೋಲಿಸರು ಈ ದುರುಳರ ಹೆಡೆಮುರಿ ಕಟ್ಟಿ   ತಂದು ಜೈಲಿಗೆ   ದಬ್ಬುತ್ತಾರಾ..ಕಾದು ನೋಡಬೇಕಿದೆ.

Spread the love
Leave A Reply

Your email address will not be published.

Flash News