“ಬಿಎಸ್ ವೈ”ಗೆ ಹೈಕಮಾಂಡ್ ನಿಂದ ಬಿಗ್ ಶಾಕ್..!!?? ಬದಲಾಗ್ತಾರಾ ರಾಜ್ಯದ ಮುಖ್ಯಮಂತ್ರಿ..!!?? ಮೌಲ್ಯಮಾಪನ ನೆವದಲ್ಲಿ ಬದಲಾವಣೆಗೆ ಸಂಗ್ರಹಿಸಲಾಗ್ತಿದೆಯೇ ಸಚಿವರ ಅಭಿಪ್ರಾಯ.!!ಮುಂದಿನ ಮುಖ್ಯಮಂತ್ರಿ ಯಾರೆನ್ನುವುದು ಕೂಡ ಹೈಕಮಾಂಡ್ ನಿರ್ಧರಿಸಿಯಾಗಿದೆಯಾ…?

0
ಮೌಲ್ಯಮಾಪನದ ನೆವದಲ್ಲಿ ಸಚಿವರಿಂದ ಅಭಿಪ್ರಾಯ ಸಂಗ್ರಹಿಸಿ ರವಾನಿಸಲಿರುವ ಬಿ.ಎಲ್ ಸಂತೋಷ್..ಹೈಕಮಾಂಡ್ ನ ಮುಂದಿನ ಮುಖ್ಯಮಂತ್ರಿ ಆಯ್ಕೆಯೂ ಸಂತೋಷ್ ಜೀ ನೇ ಆಗಿರಬಹುದಾ..
ಮೌಲ್ಯಮಾಪನದ ನೆವದಲ್ಲಿ ಸಚಿವರಿಂದ ಅಭಿಪ್ರಾಯ ಸಂಗ್ರಹಿಸಿ ರವಾನಿಸಲಿರುವ ಬಿ.ಎಲ್ ಸಂತೋಷ್..ಹೈಕಮಾಂಡ್ ನ ಮುಂದಿನ ಮುಖ್ಯಮಂತ್ರಿ ಆಯ್ಕೆಯೂ ಸಂತೋಷ್ ಜೀ ನೇ ಆಗಿರಬಹುದಾ..
ವ್ಯಕ್ತಿನಿಷ್ಠೆ ಇದ್ದರೂ ಯಡಿಯೂರಪ್ಪ ನಾಯಕತ್ವದ ಬಗ್ಗೆ ನೆಗೆಟಿವ್ಸ್ ನ್ನೇ ಹೆಚ್ಚು ಹೇಳಿ..ಬದಲಾವಣೆಗೆ ನಾಂದಿ ಹಾಡಲಿದ್ದಾರೆ ಸಚಿವರು..ಈ ಷಡ್ಯಂತ್ರಕ್ಕೆ ಬಲಿಯಾಗಲಿದ್ದಾರಾ ಯಡಿಯೂರಪ್ಪ ೀ
ವ್ಯಕ್ತಿನಿಷ್ಠೆ ಇದ್ದರೂ ಯಡಿಯೂರಪ್ಪ ನಾಯಕತ್ವದ ಬಗ್ಗೆ ನೆಗೆಟಿವ್ಸ್ ನ್ನೇ ಹೆಚ್ಚು ಹೇಳಿ..ಬದಲಾವಣೆಗೆ ನಾಂದಿ ಹಾಡಲಿದ್ದಾರೆ ಸಚಿವರು..ಈ ಷಡ್ಯಂತ್ರಕ್ಕೆ ಬಲಿಯಾಗಲಿದ್ದಾರಾ ಯಡಿಯೂರಪ್ಪ…

ಬೆಂಗಳೂರು.ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವಂಥ ವಿದ್ಯಾಮಾನಗಳು ನಡೆಯಲಾರಂಭಿ ಸಿವೆ ಎನ್ನಲಾಗ್ತಿದೆ.ಇದಕ್ಕೆ ಪುಷ್ಠಿನೀಡುತ್ತಿರುವಂತದ್ದು ಆರ್ ಎಸ್ ಎಸ್ ಮುಖಂಡ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಎಲ್.ಸಂತೋಷ್ ಜೀ ಅವರ ನಡೆ ಹಾಗೂ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು.ದಿಢೀರ್ ಶುರುವಾಗಿರುವ ಈ ಪ್ರಕ್ರಿಯೆಗೆ ಕೇವಲ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತ್ರವಲ್ಲ,ಬಿಜೆಪಿ ಸರ್ಕಾರದ ಸಚಿವ ಸಂಪುಟವೇ ಪತರುಗುಟ್ಟಿ ಹೋಗಿದೆ.ಸಂತೋಷ್ ಜೀ ಅವರ ಹೊಸ ರಾಜಕೀಯ ಚದುರಂಗದಾಟದ ಮುಖ್ಯ ಉದ್ದೇಶವೇ ಮುಖ್ಯಮಂತ್ರಿ ಬದಲಾವಣೆ ಹಾಗೂ ಆ ಬದಲಾವಣೆಗೆ ಪೂರಕವಾಗಿ ಅಭಿಪ್ರಾಯ ಸಂಗ್ರಹನಾ..? ಎನ್ನುವ ಅನುಮಾನ ಮೂಡಿಸುತ್ತದೆ.

ಕೊರೊನಾಕ್ಕೆ ತತ್ತರಿಸಿರುವ ರಾಜ್ಯದ ಜನತೆ ಸೀಮಿತ ಅವಕಾಶಗಳಲ್ಲೇ ಗಣೇಶೋತ್ಸವದಲ್ಲಿ ತೊಡಗಿದ್ದರೆ,ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ  ದಿಢೀರ್  ರಾಜಕೀಯ ವಿದ್ಯಾಮಾನಗಳು ಗರಿಗೆದರಿವೆ. ಇದಕ್ಕೆಲ್ಲಾ ಕಾರಣವಾಗಿದ್ದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ದಿಢೀರ್ ಭೇಟಿ.ಯಾರಿಗೂ ಗೊತ್ತಾಗದ ರೀತಿ ಅಚ್ಚರಿಯ ಭೇಟಿ ನೀಡಿದ ಸಂತೋಷ್ ಜೀ,ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದ್ದು ಸಾಕಷ್ಟು ಕಾರಣಕ್ಕೆ ಅಚ್ಚರಿ-ಗಾಬರಿ ಎರಡನ್ನೂ ಮೂಡಿಸಿದೆ.ಇದೆಲ್ಲದರ ಸಾರಾಂಶದ ಅನುಮಾನವೇ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾಗ್ತಾರಾ…?ಹೊಸ ಮುಖ್ಯಮಂತ್ರಿಗಳ ಅನ್ವೇಷಣೆಯ ಪ್ರಹಸನಕ್ಕೆ ಬಿಜೆಪಿ ಕೈ ಹಾಕುವ ಮನಸ್ತಿತಿಯಲ್ಲಿದೆಯಾ…?ಅದಕ್ಷ-ನಿಷ್ಪ್ರಯೋಜಕ ಸಚಿವರಿಗೆ ಕೊಕ್ ಕೊಡಲಾಗ್ತದಾ…?ಗುಂಪುಗಾರಿಕೆ ಮಾಡುವವರನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಲಾಗ್ತದಾ..?ಎನ್ನುವಂಥ ಪ್ರಶ್ನೆಗಳಾಗುಳಿದಿವೆ.

ಸಂತೋಷ್ ಜೀ ಪಕ್ಷದ ಕಚೇರಿಗೆ ಭೇಟಿ ಕೊಡುವ ವಿಚಾರ ಈ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೇಗೇ ಗೊತ್ತಿರಲಿಲ್ಲ ಎಂದ್ರೆ ಏನೋ ಸಂಥಿಂಗ್ ನಡೆಯುವುದಿದೆ ಎನ್ನುವ ಅರ್ಥ ಕಲ್ಪಿಸುತ್ತದೆಯಲ್ಲವೇ? ಅಧೀಕೃತವಲ್ಲದ ಆಂತರಿಕ ಗುಪ್ತಚರವಾದ್ರೂ ಇಂತದ್ದೊಂದು ಸುಳಿವನ್ನು ಯಡಿಯೂರಪ್ಪ  ಅವರಿಗೆ ನೀಡುವುದಕ್ಕೂ ಆಸ್ಪದ ಕೊಡದ ರೀತಿಯಲ್ಲಿ ಸಂತೋಷ್ ಜೀ ಬಂದಿದ್ದು ಹಬ್ಬದ ಖುಷಿಯಲ್ಲಿದ್ದ ಯಡಿಯೂರಪ್ಪ ಅವರನ್ನು ವಿಚಲಿತಗೊಳಿಸಿದೆ.ಚಿಂತೆಗೆ ದೂಡಿದೆ.ಅಧಿಕಾರ ಕಳೆದುಕೊಳ್ಳುತ್ತೇನಾ ಎನ್ನುವ ಆತಂಕದಿಂದ ಬಿಪಿ-ಶುಗರ್ ಲೆವಲ್ ನ್ನು ಹೆಚ್ಚಿಸಿದ್ರೂ ಆಶ್ಚರ್ಯವಿಲ್ಲ.

ಬಿಜೆಪಿ ಮೂಲಗಳ ಪ್ರಕಾರ ಸಂತೋಷ್ ಜೀ ಅವರ ಭೇಟಿಯ ಗೂಢತೆ ಗೊತ್ತಿಲ್ಲ..ಕೊರೊನಾ ಹಾಗೂ ಡಿಜೆಹಳ್ಳಿ-ಕೆಜಿಹಳ್ಳಿ ಘಟನೆಗಳ  ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದಷ್ಟೇ ಸಂತೋಷ್ ಜೀ ಭೇಟಿಯ ಉದ್ದೇಶವಾಗಿತ್ತು.ಅದನ್ನು ಅವರು ಪೂರೈಸಿ ತೆರಳಿದ್ರು ಎಂದು ಸಂತೋಷ್ ಜೀ ಭೇಟಿ ಸಂದರ್ಭಕ್ಕೆ ಸಾಕ್ಷಿಪ್ರಜ್ಞೆಯಂತಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ ಹಾಗೂ ಡಾ,ಕೆ.ಸುಧಾಕರ್ ಹೇಳಿದರಾದ್ರೂ ಸಂತೋಷ್ ಜೀ ಮಾತನಾಡಿದ ಆಫ್ ದಿ ರೆಕಾರ್ಡ್ ಮಾಹಿತಿಯೇ  ಬೇರೆ ಯಾವುದೋ ಅಘಾತಕಾರಿ-ಅಪಥ್ಯದ ಸತ್ಯವೊಂದನ್ನು ಹೇಳುವಂತಿತ್ತೆನ್ನಲಾಗ್ತಿದೆ.

ಕನ್ನಡ ಫ್ಲಾಶ್ ನ್ಯೂಸ್ ಗೆ  ಸಿಕ್ಕ ಕೆಲವು ಮಾಹಿತಿಗಳ ಪ್ರಕಾರ,ಯಡಿಯೂರಪ್ಪ ಕಾರ್ಯವೈಖರಿ ಸಮಾಧಾನ ತಂದಿಲ್ಲ..ಈ ಕಾರಣಕ್ಕೆ ಹೈಕಮಾಂಡ್ ಅವರನ್ನು ಬದಲಿಸುವ ಇರಾದೆಯಲ್ಲಿದೆ..ಅವರ ಬದಲಿಗೆ ಬೇರೊಬ್ಬರನ್ನು ತಂದು ಕೂರಿಸುವ ಆಲೋಚನೆ ಮಾಡುತ್ತಿದೆಯಂತೆ.ಆದ್ರೆ ಯಡಿಯೂರಪ್ಪ ನಂತ್ರ ಯಾರು..? ಎನ್ನುವ ಪ್ರಶ್ನೆಗೆ ಒಂದಷ್ಟು ಊಹೆ-ಚಿಂತನೆಯನ್ನಂತೂ ಮಾಡಲಾಗಿದೆ.

ಅಂತಿಮವಾಗಿ  ಮುಖ್ಯಮಂತ್ರಿ.. ಯಾರ್ ಆಗ್ತಾರೆ..ಅವರನ್ನು ಒಪ್ಪಿಕೊಳ್ಳಲೇಬೇಕು..ಇಲ್ಲದಿದ್ದರೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳೊಕ್ಕೆ ಕಾಯುತ್ತಿರುವ ಸಾಕಷ್ಟು ಆಕಾಂಕ್ಷಿಗಳನ್ನು ಇನ್ ಮಾಡ್ಕಂಡು..ಒಪ್ಪದವರನ್ನು,ಬಂಡಾಯ ಏಳುವವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ನಿರ್ದಾಕ್ಷಿಣ್ಯವಾಗಿ ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಶಿಕ್ಷಿಸುವಂಥ ಕಠಿಣವಾದ ಕಾರ್ಯಯೋಜನೆಯನ್ನೂ ರೂಪಿಸಿಟ್ಟುಕೊಳ್ಳಲಾಗಿದೆಯಂತೆ. ಯಡಿಯೂರಪ್ಪ  ಅವರನ್ನು ಬೆಂಬಲಿಸಿ ಗುಂಪುಗಾರಿಕೆ ಮಾಡುವ,ಸರ್ಕಾರವನ್ನು ಅಭದ್ರಗೊಳಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ರೆ ಅಂಥವ್ರನ್ನು ಯಾವ್ ರೀತಿ ಬೀದಿಪಾಲು ಮಾಡ್ಬೇಕು..ಇಲ್ಲಿ ಸಲ್ಲದವರು ಇನ್ನ್ಯಾವ ಪಕ್ಷಕ್ಕೂ ಸಲ್ಲದಂತೆ ಮಾಡೊದಕ್ಕೂ ಕೂಡ ಪ್ಲ್ಯಾನ್ ಆಫ್ ಆಕ್ಷನ್ ರೆಡಿಯಾಗಿದೆಯಂತೆ. ಹೈಕಮಾಂಡ್ ಯಾವ್ ರೀತಿಯ ನಿರ್ದಾರ ತೆಗೆದುಕೊಳ್ಳುತ್ತದೋ ಅದನ್ನು ಕೊಂಕು-ಟೀಕೆ-ತರ್ಕ ಮಾಡದೆ ಏಪಕ್ಷೀಯವಾಗಿ ಬೆಂಬಲಿಸಬೇಕು.. ಸೊಲ್ಲೆತ್ತಿದ್ರೆ ಅವರನ್ನು ಹೇಗೆ ಕಟ್ಟಿಹಾಕಬೇಕೆನ್ನುವ ನೀಲನಕ್ಷೆಯೂ ಸಿದ್ಧವಾಗಿದೆಯಂತೆ.ಶಾಸಕರ ಮುಂದೆ ಅಂತದ್ದೊಂದು ಅನಿವಾರ್ಯತೆ-ಸಂದಿಗ್ಧತೆಯನ್ನು ಸೃಷ್ಟಿಸೊಕ್ಕೆ  ಹೈಕಮಾಂಡ್ ಗ್ರೀನ್ ಸಿಗ್ನಲ್ ಕೂಡ ನೀಡಿದೆಯಂತೆ.

ಹೈಕಮಾಂಡ್ ನಿಂದ ಇಂತದ್ದೊಂದು ಗ್ರೀನ್ ಸಿಗ್ನಲ್ ಪಡೆದೇ ಸಂತೋಷ್ ಜೀ ನಿರ್ಣಾಯಕ ಹಾಗೂ ಮಹತ್ವದ  ಕಾರ್ಯಕ್ಕೆ ಕೈ ಹಾಕಿದ್ದಾರಂತೆ. ಇದರ ನೀಲನಕ್ಷೆ ಸಿದ್ಧ ಮಾಡಿಕೊಟ್ಟಿರುವುದು ರಾಜಕೀಯ ಚಾಣಕ್ಯ ಅಮಿತ್ ಶಾ. ಈ ಆಪರೇಷನ್ ಗೆ ನಂಬಿಗಸ್ಥರಾದ ಕೆಲವೇ ಕೆಲವರನ್ನು ಕೂಡಿಸಿಕೊಂಡು ಚಾಣಕ್ಯ ಅಮಿತ್ ಶಾ ಅವರ  ನಿರ್ದೇಶನದ ಮೇರೆಗೆ ಒಂದೊಂದೇ ಅಸ್ತ್ರ ಪ್ರಯೋಗಿಸಲಿದ್ದಾರಂತೆ ಸಂತೋಷ್ ಜೀ.ಇದರ ಮೊದಲ ಪ್ರಯೋಗವೇ ಸಚಿವರ ಮೌಲ್ಯಮಾಪನ ಹಾಗೂ ಅಭಿಪ್ರಾಯ ಸಂಗ್ರಹ.ಅದನ್ನು ಅಂತಿಮವಾಗಿ ಹೈಕಮಾಂಡ್ ಗೆ ರವಾನಿಸುವ ಪಕ್ಷದ ಸೈದ್ಧಾಂತಿಕ ಸಂಪ್ರದಾಯದ ನಿರ್ವಹಣೆ.

ಸಚಿವರ ಮೌಲ್ಯಮಾಪನದ ನೆವದಲ್ಲಿ ಎಲ್ಲಾ ಸಚಿವರನ್ನು ಪ್ರತ್ಯೇಕವಾಗಿ ಕರೆಯಿಸಿ ಅವರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಲಿದ್ದಾರೆ.ಅದರ ಭಾಗವಾಗೇ ಇಂದು ಕೆಲವರನ್ನು ಕರೆಯಿಸಿಕೊಳ್ಳಲಾಯ್ತು. ಅವರ ಖಾತೆಯಲ್ಲಿನ ಪ್ರಗತಿ-ಕಾರ್ಯನಿರ್ವಹಣೆ ಮಾಹಿತಿಯನ್ನು ಪಡೆಯಲಿರುವ ಜೊತೆಗೆ ಮುಖ್ಯಮಂತ್ರಿಗಳ ಸಹಕಾರ-ಸಮನ್ವಯದ ಬಗ್ಗೆಯೂ ವಿವರ ಪಡೆಯಲಿದ್ದಾರೆ.ಇದರಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಡಲಾಗುತ್ತೆ ಎನ್ನಲಾಗುತ್ತಿರುವುದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸುವುದು ವೈಯುಕ್ತಿಕವಾಗಿ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಸೂಕ್ತನಾ ಎನ್ನುವ ಅಭಿಪ್ರಾಯ ಸಂಗ್ರಹಣೆ ಬಗ್ಗೆ.

ಸಂತೋಷ್ ಜೀ ಹಾಗೂ ಯಡಿಯೂರಪ್ಪ ಅವರ  ಸಂಬಂಧ ರಾಜಕೀಯ,ಸಿದ್ಧಾಂತ ಹಾಗೂ ವೈಯುಕ್ತಿಕವಾಗಿಯೂ  ಅಷ್ಟೇನೂ ಸರಿಯಿಲ್ಲ ಎನ್ನುವುದನ್ನು ಚೆನ್ನಾಗಿ ಅರಿತಿರುವ ಸಾಕಷ್ಟು ಸಚಿವರು ತಮ್ಮ ಸ್ಥಾನ  ಉಳಿಸಿಕೊಳ್ಳೊಕ್ಕಾಗಿಯಾದ್ರೂ ಯಡಿಯೂರಪ್ಪ ಅವರ ಬಗ್ಗೆ ನೆಗೆಟಿವ್ ಆದಂಥ ಅಭಿಪ್ರಾಯವನ್ನೇ ಹೇಳುವ ಸಾಧ್ಯತೆ ದಟ್ಟವಾಗಿದೆ.ಯಡಿಯೂರಪ್ಪ ಎಷ್ಟೇ ಸಹಾಯ-ಸಹಕಾರ ನೀಡಿದ ಹೊರತಾಗ್ಯೂ   ಅವರ  ಬಗ್ಗೆ ನೆಗೆಟಿವ್ಸ್ ಹೇಳುವುದೇ ಸೂಕ್ತ ಎನ್ನುವುದು ಕೂಡ  ಎಲ್ಲರಿಗೂ ಗೊತ್ತು..ಯಡಿಯೂರಪ್ಪ ಅವರ ಬಗ್ಗೆ ವ್ಯಕ್ತಿ ನಿಷ್ಠೆ ಹೊಂದಿರುವ ಸಾಕಷ್ಟು ಸಚಿವರಿಂದಲೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆಯೇ ಒಲವು ವ್ಯಕ್ತವಾಗುವ ಸಾಧ್ಯತೆಗಳಿವೆ.

ಯಡಿಯೂರಪ್ಪ ವಿರುದ್ದ ಕಂಪ್ಲೆಂಟ್ ಹೇಳಿದರೇನೇ ತಾನ್ ಉಳಿದುಕೊಳ್ಳೊಕ್ಕೆ ಸಾಧ್ಯ.. ಅವರ ಮೇಲಿನ  ನಿಷ್ಠೆಗಿಂತ ರಾಜಕೀಯ ಅಸ್ಥಿತ್ವವೇ ತನಗೆ ಮುಖ್ಯ  ಎನ್ನುವ ಆಲೋಚನೆಯಿಂದ ಬಹುತೇಕರು ಯಡಿಯೂರಪ್ಪ ವ್ಯಕ್ತಿ ಹಾಗೂ ರಾಜಕೀಯ ನಾಯಕನಾಗಿ ಅಷ್ಟೆ ಅಲ್ಲ,ಮುಖ್ಯಮಂತ್ರಿಯಾಗಿಯೂ ವಿಫಲರಾಗಿದ್ದಾರೆ.ಅವರಿಂದ ರಾಜ್ಯವನ್ನು ನಡೆಸಲು ಸಾಧ್ಯವಾಗ್ತಿಲ್ಲ…ಇದಕ್ಕೆ ವಯೋಸಹಜ ಮುಪ್ಪು,ಮರೆವು ಕಾರಣ ಅಲ್ಲದೇ ಪಕ್ಷಪಾತ ಮಾಡ್ತಾರೆ.ಎಲ್ಲವನ್ನೂ ನಿಭಾಯಿಸಿಕೊಂಡು ಹೋಗೋ ಮನಸ್ತಿತಿ-ತಾಳ್ಮೆ-ಸಂಯಮ-ರಾಜಕೀಯ ಚಾಕಚಕ್ಯತೆ ಅವರಿಲ್ಲವಾಗುತ್ತಿದೆ.ಇಂಥ ಸನ್ನಿವೇಶದಲ್ಲಿ ರಾಜ್ಯವನ್ನು ಉನ್ನತಿಯತ್ತ ಕೊಂಡೊಯ್ಯುವುದು ಕೂಡ ಅಸಾಧ್ಯ ಹಾಗಾಗಿ ಅವರ ಬದಲಾವಣೆಯೇ ಸೂಕ್ತ ಎನ್ನುವ ಅಭಿಪ್ರಾಯ ಹಾಗೂ ಸಲಹೆಗಳೇ ಹೆಚ್ಚು ವ್ಯಕ್ತವಾದ್ರೂ ಆಶ್ಚರ್ಯವಿಲ್ಲ ಎನ್ನಲಾಗ್ತಿದೆ.

ಯಡಿಯೂರಪ್ಪ ಅವರ ಮೇಲಿರುವ ಕುಟುಂಬ ರಾಜಕಾರಣ-ಪಕ್ಷಪಾತ ಧೋರಣೆ-ಅವ್ಯವಹಾರದಂಥ ಆರೋಪಗಳಿಂದ ಕೊತ ಕೊತ ಕುದಿಯುತ್ತಿರುವ ಸಂತೋಷ್ ಜೀಗೂ ಬೇಕಿರುವುದು ಕೂಡ ಅದೇ..ಸಚಿವರು ಕೊಟ್ಟ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಹೈಕಮಾಂಡ್ ಮುಂದೆ ಇಡಲಾಗ್ತದೆ.ಈಗಾಗ್ಲೇ ಯಡಿಯೂರಪ್ಪ ಅವರನ್ನು ಬದಲಿಸಿಯೇ ತೀರಬೇಕೆನ್ನುವ ನಿರ್ದಾರ ಮಾಡಿಕೊಂಡಿರುವ ಪಕ್ಷಕ್ಕೆ ಅದನ್ನು ಪಕ್ಷದ ಚೌಕಟ್ಟಿನಲ್ಲಿ,ಪ್ರಜಾಸತ್ತಾತ್ಮಕ ರೀತಿಯಲ್ಲೇ ಅನುಷ್ಟಾನಗೊಳಿಸಬೇಕಿರುವ ಕಾರಣಕ್ಕೆ ಸಂಪುಟ ಸಹದ್ಯೋಗಿಗಳಿಂದ ಬಂದಿರುವ ಫೀಡ್ ಬ್ಯಾಕನ್ನು ಪರಿಶೀಲಿಸಿ ಬದಲಾವಣೆಯ ನಿರ್ದಾರ ತೆಗೆದುಕೊಂಡ್ರೂ ಆಶ್ಚರ್ಯ ಪಡಬೇಕಿಲ್ಲ.

5 ವರ್ಷಗಳ ಅವಧಿಯನ್ನು ಪೂರೈಸ್ಲಿಕ್ಕೆ ನಿಮಗೆ  ಅವಕಾಶವಿಲ್ಲ..ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ಬರುವಂತೆ ಮಾಡಿದ್ದೀರಿ…ಆ ಗೌರವ-ಕೃತಜ್ಞತೆಗೋಸ್ಕರ  ಅನ್ಯಾಯವಾಗಬಾರದೆನ್ನುವ ಕಾರಣಕ್ಕೆ ಒಂದಷ್ಟು ಅವಧಿಗೆ ಸಿಎಂಗಾಧಿಯಲ್ಲಿ ಕೂರಿಸಲಾಗುವುದು..ನಂತ್ರ ಬದಲಾವಣೆ ಅನಿವಾರ್ಯ ಎನ್ನುವ ಮಾತನ್ನು ಆರಂಭದಲ್ಲೇ  ಯಡಿಯೂರಪ್ಪ ಅವರಿಗೆ ಪಕ್ಷ ಹೇಳಿತ್ತು.ಆ ಕಾಲ ಈಗ ಬಂದಿದೆ ಎಂದು ಹೇಳಿ ಅವರನ್ನು ಮುಖ್ಯಮಂತ್ರಿಗಾಧಿಯಿಂದ ಕೆಳಗಿಳಿಸಿ ಹೊಸ ಜವಾಬ್ದಾರಿಯನ್ನು ನೀಡುವ ವ್ಯವಸ್ಥೆ ಹೈಕಮಾಂಡ್ ಮಾಡಿಕೊಂಡಿದೆ ಎನ್ನಲಾಗ್ತಿದೆ.ಬೆಳವಣಿಗೆಗಳು ಕೂಡ ಅದೇ ಅನುಮಾನವನ್ನು ಬಲಗೊಳಿಸುತ್ತವೆ..ಮುಖ್ಯಮಂತ್ರಿಯಂತೂ ಬದಲಾಗುವ ಪರ್ವಕಾಲ ಬಂದಿದೆ..ಆದ್ರೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದಕ್ಕಂತೂ ಸಧ್ಯಕ್ಕೆ ಉತ್ತರವಿಲ್ಲ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಂದ ದಿಢೀರ್ ಮುಖ್ಯಮಂತ್ರಿಯಾದಂತೆ ಸಂತೋಷ್ ಜೀ ಅವ್ರೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾದರೂ ಆಶ್ಚರ್ಯವಿಲ್ಲ..ಏಕೆಂದ್ರೆ ಸಂತೋಷ್ ಜೀ ಆಯ್ಕೆಯನ್ನು ಬಹಿರಂಗವಾಗಿ ಪ್ರಶ್ನಿಸುವವರು..ವಿರೋಧಿಸುವವರು  (ಅಂತರಂಗದೊಳಗೆ ಕೋಪಾಗ್ನಿ ಹತ್ತಿ ಉರಿಯುತ್ತಿದ್ದರೂ) ಯಾರೂ ಇಲ್ಲ.ಕನಸಿನಲ್ಲೂ ಹಾಗೆ ಮಾಡುವ ಧ್ಯರ್ಯ ಯಾರೂ ತೋರಲಿಕ್ಕಿಲ್ಲ.ಸಂತೋಷ್ ಜೀನೇ ಅತ್ಯುತ್ತಮ ಆಯ್ಕೆ ಎಂದು ಹೈಕಮಾಂಡೇ ಬಯಸಿರುವಾಗ  ಅಂತದ್ದೊಂದು ಆಯ್ಕೆ ನಡುದ್ರೂ ಆಶ್ಚರ್ಯಪಡಬೇಕಿಲ್ಲ..ಒಟ್ಟಿನಲ್ಲಿ ಮುಖ್ಯಮಂತ್ರಿ ಚೇರ್ ಅಲುಗಾಡುತ್ತಿರುವುದಂತೂ ಸತ್ಯಾ….ಸತ್ಯಾ..ಸತ್ಯಾ..ಅಷ್ಟೇ..

Spread the love
Leave A Reply

Your email address will not be published.

Flash News