ಬಿಬಿಎಂಪಿ ಆಡಳಿತಾಧಿಕಾರಿಗಾಧಿಗೆ “ವಿಜಯಭಾಸ್ಕರ್” ಅವರೇ ಬೆಸ್ಟ್…ಅವರೇ ಅಲ್ಟಿಮೇಟ್..ಅವರಷ್ಟು ಸಮರ್ಥ ಆಯ್ಕೆ ಮತ್ತೊಂದಿದೆಯೇ ….

0
ತ.ಮ ವಿಜಯಭಾಸ್ಕರ್.
ತ.ಮ ವಿಜಯಭಾಸ್ಕರ್.

ಬೆಂಗಳೂರು:ಸೆಪ್ಟೆಂಬರ್ 10ಕ್ಕೆ ಬಿಬಿಎಂಪಿ ಕೌನ್ಸಿಲ್ ನ ಕೊನೇ ಅವಧಿ ಮುಕ್ತಾಯಗೊಳ್ಳುತ್ತಿದೆ.ಅಂದೇ ಮೇಯರ್ ಹಾಗೂ ಕಾರ್ಪೊರೇಟರ್ಸ್ 5 ವರ್ಷಗಳ ಅಧಿಕಾರವಧಿಯೂ ಪೂರ್ಣಗೊಳ್ಳಲಿದೆ.ಅವತ್ತಿಂದ ಎಲ್ಲರೂ ಮಾಜಿಗಳೇ..ನೂತನ ಆಡಳಿತಾಧಿಕಾರಿಯಾಗಿ ಸರ್ಕಾರದಿಂದ ಹಿರಿಯ ಐಎಎಸ್ ನೇಮಕಗೊಳ್ಳಲಿ ದ್ದಾರೆ.ಅವರ ದರ್ಬಾರ್ ನಲ್ಲಿ ಕಮಿಷನರ್ ಸಮನ್ವಯದಲ್ಲಿ ಮತ್ತೊಂದು ಚುನಾಯಿತ ವ್ಯವಸ್ಥೆ ಬರುವವರೆಗೂ ಬಿಬಿಎಂಪಿಯಲ್ಲಿ ಅಧಿಕಾರ ನಡೆಸಲಿದ್ದಾರೆ.

ಕನ್ನಡ ಫ್ಲಾಶ್ ನ್ಯೂಸ್ ಬಿಬಿಎಂಪಿ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ನಿನ್ನೆ ತಾನೇ ವಿಸ್ತ್ರತವಾದ ವರದಿಯೊಂದನ್ನು “ಬಿಬಿಎಂಪಿ “ಬಿಗ್ ಬಾಸ್”ಗಾದಿಗೆ  ಬಿಗ್ ಫೈಟ್….ಆಡಳಿತಾಧಿಕಾರಿ ಹುದ್ದೆಗೆ “ಐಎಎಸ್” ಗಳಲ್ಲಿ ಭಾರೀ ಪೈಪೋಟಿ-ನಾಯಕ್-ಗೋಯಲ್-ಶರ್ಮಾ-ಜೈನ್-ಸಿಂಗ್ ಫೇವರೀಟ್..ಶೀರ್ಷಿಕೆಯಲ್ಲಿ ಪ್ರಕಟಿಸಿತ್ತು.ಇದರ ಮುಂದುವರೆದ ಭಾಗವೇ ಈ ವರದಿ.

ಬಿಬಿಎಂಪಿ ಆಡಳಿತಾಧಿಕಾರಿ ಹುದ್ದೆಗೆ ಈಗಾಗ್ಲೇ ದೊಡ್ಡ ಮಟ್ಟದ ಕಸರತ್ತು ಶುರುವಾಗಿದೆ. ಯಾರು ಹಿತವರು ಈ ಹುದ್ದೆಗೆ ಎನ್ನುವ ಚರ್ಚೆ ಶುರುವಾಗಿದೆ.ಯಾರನ್ನು ತಂದುಕೂರಿಸ ಬೇಕೆನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ಕಾವೇರಿವೆ.ತಮ್ಮ ಅತ್ಯಾಪ್ತ ಐಎಎಸ್ ನ್ನು ಆಡಳಿತಾಧಿಕಾರಿಯಾಗಿ ಕೂರಿಸಿ ತಮ್ಮ ಹಿತಾಸಕ್ತಿ ಈಡೇರಿಸಿಕೊಳ್ಳೊಕ್ಕೆ ತಮ್ಮದೇ ಆದ ರೀತಿಯಲ್ಲಿ ಲಾಭಿ-ಹುನ್ನಾರ ನಡೆಸುತ್ತಲೇ ಇದ್ದಾರೆ.ರಾಜಕೀಯ ಹಿತಾಸಕ್ತಿಯ ಹೊರತಾಗಿ ಆಡಳಿತಾಧಿಕಾರಿಯ ನೇಮಕ ಆಗುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ ಬಿಡಿ..

ಆಡಳಿತಾಧಿಕಾರಿ ರೇಸ್ ನಲ್ಲಿ ಸಾಕಷ್ಟು ಐಎಎಸ್ ಗಳ ಹೆಸರು ಕೇಳಿಬರುತ್ತಿರುವುದರ ನಡುವೆ ಯೇ ಮತ್ತೊಂದು ಹೊಸ ವಿಚಾರದ ಚರ್ಚೆ ಮುನ್ನಲೆಗೆ ಬಂದಿದೆ.ಅದೇ ಆಡಳಿತಾಧಿಕಾರಿ ಹುದ್ದೆಗೆ ಇವರಷ್ಟು ಸಮರ್ಥರು ಇನ್ನೊಬ್ಬರು ಬೇಕಾ..ಇವರನ್ನೇ ಆಡಳಿತಾಧಿಕಾರಿ ಹುದ್ದೆಗೆ ನಿಯೋಜಿಸಿದ್ರೆ ಅದರಷ್ಟು ಉತ್ತಮ ಆಯ್ಕೆ ಮತ್ತೊಂದಿರಲಾರದು..ಇದಕ್ಕೆ ನಿದರ್ಶನವಾಗುವಂಥ ಸಾಕಷ್ಟು ಸುಧಾರಣೆಗಳು ಪ್ರಾಕ್ಟಿಕಲ್ಲಾಗಿ ಅವರು ಆಡಳಿತಾಧಿಕಾರಿ ಯಾಗಿದ್ದ ಅವಧಿಯಲ್ಲಿ ಆಚರಣೆಗೆ ಬಂದಿದೆ.ಬಿಬಿಎಂಪಿಯ ಆಡಳಿತದ ಸುಧಾರಣೆ ಹಾಗೂ ಸಂಪನ್ಮೂಲ  ಕ್ರೋಢೀಕರಣ ಇವರ ಅವಧಿಯಲ್ಲಿ ಐತಿಹಾಸಿಕ ಸಾಧನೆ  ಮಟ್ಟಕ್ಕೇರಿದ್ದು ಎಲ್ಲವೂ ಕಣ್ ಕಟ್ಟಿದಂತಿದೆ..ಈ ಎಲ್ಲಾ ಸಾಕ್ಷ್ಯಗಳು  ಸರ್ಕಾರದ ಮುಂದಿರುವಾಗ ಇವರಿಗೇನೆ ಬಿಬಿಎಂಪಿ ಆಡಳಿತಾಧಿಕಾರಿ ಹೊಣೆ ನೀಡುವುದು ಸೂಕ್ತವಲ್ಲವೇ ಎನ್ನುವ ಚರ್ಚೆಯೊಂದು ಬಿಬಿಎಂಪಿಯಿಂದ ಶುರುವಾಗಿ ವಿಧಾಸೌಧದ ಪಡಸಾಲೆಗೆ ಮುಟ್ಟಿದೆ.

ಆಡಳಿತಾಧಿಕಾರಿಯಾಗಿದ್ದ ವೇಳೆ ವಿಜಯಭಾಸ್ಕರ್ ಅವರ ಕಾರ್ಯವೈಖರಿಯ ಝಲಕ್
ಆಡಳಿತಾಧಿಕಾರಿಯಾಗಿದ್ದ ವೇಳೆ ವಿಜಯಭಾಸ್ಕರ್ ಅವರ ಕಾರ್ಯವೈಖರಿಯ ಝಲಕ್
ಬಿಬಿಎಂಪಿ ಕಮಿಷನರ್ ಅವರೊಂದಿಗೆ ಅಭಿವೃದ್ದಿ ಹಾಗೂ ಹಣಕಾಸಿನ ಪುನಶ್ವೇತನಕ್ಕೆ ವಿಜಯ ಭಾಸ್ಕರ್ ಅವರು ಮಾಡಿದ ಕೆಲಸ ಅಷ್ಟಿಷ್ಟಲ್ಲ..
ಬಿಬಿಎಂಪಿ ಕಮಿಷನರ್ ಅವರೊಂದಿಗೆ ಅಭಿವೃದ್ದಿ ಹಾಗೂ ಹಣಕಾಸಿನ ಪುನಶ್ವೇತನಕ್ಕೆ ವಿಜಯ ಭಾಸ್ಕರ್ ಅವರು ಮಾಡಿದ ಕೆಲಸ ಅಷ್ಟಿಷ್ಟಲ್ಲ..

ಅಂದ್ಹಾಗೆ ಆಡಳಿತಾಧಿಕಾರಿ ಹುದ್ದೆಯ ರೇಸ್ ನಲ್ಲಿರುವ ಹಿರಿಯ ಐಎಎಸ್ ಗಳೆಲ್ಲರಿಗಿಂತ ಅನುಭವಿ-ಸಮರ್ಥ-ದಕ್ಷ-ನಿಷ್ಟಾವಂಥ ಆ ಐಎಎಸ್ ಅಧಿಕಾರಿ ಯಾರು ಗೊತ್ತಾ..ತ.ಮ ವಿಜಯಭಾಸ್ಕರ್…ಹಾಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ.ಎಲ್ಲಾ ಐಎಎಸ್ ಗಳಿಗೆ ಬಾಸ್..ಇವರನ್ನೇ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ನಿಯೋಜಿಸಬೇಕೆನ್ನುವ ಒತ್ತಾಯದ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿದೆ.ಬೇರೆಯವರನ್ನು ಹುಡುಕಿ ಪ್ರತಿಷ್ಟಾಪಿಸುವುದಕ್ಕಿಂತ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಈಗಾಗ್ಲೇ ಕೆಲಸ ಮಾಡಿ,ಗಣನೀಯ ಸುಧಾರಣೆ ತಂದ ಅನುಭವವಿರುವ ವಿಜಯ ಭಾಸ್ಕರ್ ಅವರಿಗೇನೇ ಹೆಚ್ಚುವರಿ ಹೊಣೆಗಾರಿಕೆ ಕೊಡುವುದಕ್ಕಿಂತ ಉತ್ತಮವಾದ ಆಯ್ಕೆ ಮತ್ತೊಂದಿರಲಾರದು ಎನ್ನುವ ಮಾತು ಸರ್ವೇಸಾಮಾನ್ಯವಾಗಿ ಕೇಳಿಬರುತ್ತಿದೆ.

2015ರಲ್ಲಿ ಬಿಬಿಎಂಪಿ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ನಿಯೋಜನೆಗೊಂಡವ್ರು ತ.ಮ ವಿಜಯಭಾಸ್ಕರ್.ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ವಸಮ್ಮತದ  ಆಯ್ಕೆ ಅವರು.ಸಾಕಷ್ಟು ಬೇರೆ ರೀತಿಯ ಒತ್ತಡ ಕೇಳಿಬಂದ್ರೂ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ವಿಜಯಭಾಸ್ಕರ್ ಅವರನ್ನು ಅವರ ಟ್ರ್ಯಾಕ್ ರೆಕಾರ್ಡ್ ,ಪ್ರಾಮಾಣಿಕತೆ-ದಕ್ಷತೆ ಜೊತೆಗೆ ಜೇಷ್ಠ್ಯತೆಯನ್ನು ಪರಿಗಣಿಸಿ ನಿಯೋಜನೆ ಮಾಡಿದ್ರು.

ಅಧಿಕಾರಿಗೆ ಬದ್ಧತೆ ಎನ್ನೋದು ಒಂದು ಇದ್ದರೆ ಸಾಕು,ಎಲ್ಲಿ..ಯಾವ್ ಚೇರ್ ನಲ್ಲಿ ಬೇಕಾದ್ರೂ ಕುಳಿತ್ಕೊಂಡು ಕೆಲಸ ಮಾಡಬಲ್ಲ ಎನ್ನುವುದಕ್ಕೆ ಉದಾಹರಣೆಯಂತಿದ್ದ ವಿಜಯಭಾಸ್ಕರ್
ಅಧಿಕಾರಿಗೆ ಬದ್ಧತೆ ಎನ್ನೋದು ಒಂದು ಇದ್ದರೆ ಸಾಕು,ಎಲ್ಲಿ..ಯಾವ್ ಚೇರ್ ನಲ್ಲಿ ಬೇಕಾದ್ರೂ ಕುಳಿತ್ಕೊಂಡು ಕೆಲಸ ಮಾಡಬಲ್ಲ ಎನ್ನುವುದಕ್ಕೆ ಉದಾಹರಣೆಯಂತಿದ್ದ ವಿಜಯಭಾಸ್ಕರ್

ಆಯ್ಕೆ ಮಾಡಿದಾಗ ಸಿದ್ಧರಾಮಯ್ಯ ಹೇಳಿದ್ದು ಒಂದೇ..ಬೆಂಗಳೂರಿನವರೇ ಅಲ್ಲದ ಸಿದ್ಧರಾಮಯ್ಯ ವಿಜಯ ಭಾಸ್ಕರ್ ಅವರನ್ನು ಆಯ್ಕೆ ಮಾಡಿ ಕಳುಹಿಸುವಾಗ ಹೇಳಿದ್ದು ಒಂದೇ ಒಂದು ಮಾತು.. ಎಕ್ಕ ಎದ್ದು ಹೋಗಿರುವ ಬಿಬಿಎಂಪಿ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆ ತನ್ನಿ..ಆರ್ಥಿಕ ಪುನಶ್ಚೇತನ ಕೊಡಿ ಎಂದು.ವಿಜಯಭಾಸ್ಕರ್ ಆಡಳಿತಾಧಿಕಾರಿಯಾಗಿ ನಿಯೋಜನೆಗೊಂಡು ಕಾಲಿಡುತ್ತಿದ್ದಂತೆ ಮಾಡಿದ ಮೊದಲ ಕೆಲಸವೇ ಬಿಬಿಎಂಪಿಯನ್ನು ಸಮಗ್ರವಾಗಿ ಅರ್ಥೈಸಿಕೊಂಡು ಸುಧಾರಣೆಗೆ ಪೂರಕವಾಗಿರುವ ಮಾರ್ಗಗಳತ್ತ ಗಮನವನ್ನು ಕೇಂದ್ರೀಕರಿಸಿದ್ದು.

ಆಡಳಿತಾಧಿಕಾರಿಯಾಗಿ 6 ತಿಂಗಳಲ್ಲಿ ಮಾಡಿದ್ದು ಅಪರಿಮಿತ ಸಾಧನೆ:ಆರ್ಥಿಕವಾಗಿ ದಿವಾಳಿಯಾಗಿದ್ದ ಬಿಬಿಎಂಪಿ ಆರ್ಥಿಕತೆಯಲ್ಲಿ ಪುನಶ್ವೇತನ ತರುವುದು ವಿಜಯ ಭಾಸ್ಕರ್ ಅವರಿಗಿದ್ದ ಮತ್ತೊಂದು ಸವಾಲು.ಅದಕ್ಕಾಗಿ ಏನೆಲ್ಲಾ ಮಾಡ್ಬೇಕಿತ್ತೋ ಅದಕ್ಕೆ ಕೈಗೆಟಕುವ ಮಾರ್ಗೋಪಾಯಗಳಲ್ಲಿ ಕೆಲಸ ಮಾಡಿದ್ದರಿಂದ್ಲೇ ಕೇವಲ ಒಂದಷ್ಟು ನೂರು ಕೋಟಿಗಳಿಗೆ ಸೀಮಿತವಾಗಿದ್ದ ಪಾಲಿಕೆ ಆದಾಯವನ್ನು ಸಾವಿರಾರು ಕೋಟಿಗಳಿಗೆ ತಂದು ನಿಲ್ಲಿಸಿದ್ದು ಕಡ್ಮೆ ಸಾಧನೆಯೇನಲ್ಲ..

ಹಾಗೆಯೇ  ಆಡಳಿತಾದಿಕಾರಿಯಾಗಿ ಕೆಲಸ ಮಾಡಿದ ಆ  6 ತಿಂಗಳಲ್ಲಿ ಒಂದೇ ಒಂದು ದಿನವೂ ತಪ್ಪದೆ ಬೆಳ್ಳಂಬೆಳಗ್ಗೆ ಮಸ್ಟರಿಂಗ್ ಸೆಂಟರ್ ಗೆ ತೆರಳಿ ಅಲ್ಲಿನ ಸ್ತಿತಿಗತಿ ಅವಲೋಕಿಸಿ ಗಮನೀಯ ಸುಧಾರಣೆ ತಂದಿದ್ದು ಕಡ್ಮೆ ಮಾತಲ್ಲ.(ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಆರಂಭಶೂರತ್ವ ಎನ್ನುವಂತೆ ವಿಸಿಟ್ ಮಾಡೋದನ್ನು ಬಿಟ್ಟರೆ ಯಾವುದೇ ಮೇಯರ್-ಕಮಿಷನರ್  ಈವರೆಗು ಇಂತದ್ದೊಂದು ಕೆಲಸವನ್ನು ನಿರಂತರವಾಗಿ ಮಾಡಿಯೇ ಇಲ್ಲ.) ಇನ್ನು ತೆರಿಗೆ ಸಂಗ್ರಹಣೆಯಲ್ಲಿ ವಿಜಯ ಭಾಸ್ಕರ್ ಅವರು  ಕ್ರಾಂತಿಯನ್ನೇ ಮಾಡಿದ್ರು.ಎಲ್ಲೆಲ್ಲೋ ಪೋಲಾಗುತ್ತಿದ್ದ ತೆರಿಗೆಯನ್ನು ಬಿಬಿಎಂಪಿ ಬೊಕ್ಕಸ ಸೇರುವಂತೆ ಮಾಡಿದ್ದಷ್ಟೇ ಅಲ್ಲ,ಸರಿಯಾದ ರೀತಿಯ ಸದ್ಭಳಕೆಗೆ ಅದನ್ನು ವಿನಿಯೋಗಿಸಿದಂತದ್ದು ಕಡಿಮೆ ಸಾಧನೆಯೇನಲ್ಲ.

ಕೆಲಸ ಮಾಡಿದ 6 ತಿಂಗಳಲ್ಲಿ ಒಂದೇ ಒಂದು ದಿನವೂ ಕಚೇರಿಯಲ್ಲೇ ಕುಳಿತುಕೊಂಡು ದರ್ಬಾರ್ ಮಾಡಿದ ಉದಾಹರಣೆಗಳೇ ಇರಲಿಲ್ಲ.ಬೆಳಗ್ಗೆ ಆಗುತ್ತಿದ್ದಂತೆ ವಾರ್ಡ್ ಗಳ ಮಸ್ಟರಿಂಗ್ ಸೆಂಟರ್ ನಲ್ಲಿ ಹಾಜರಾಗಿ ಪರಿಶೀಲನೆ ನಡೆಸುತ್ತಿದ್ದ ವಿಜಯಭಾಸ್ಕರ್.
ಆಡಳಿತಾಧಿಕಾರಿಯಾಗಿ ಕೆಲಸ ಮಾಡಿದ 6 ತಿಂಗಳಲ್ಲಿ ಒಂದೇ ಒಂದು ದಿನವೂ ಕಚೇರಿಯಲ್ಲೇ ಕುಳಿತುಕೊಂಡು ದರ್ಬಾರ್ ಮಾಡಿದ ಉದಾಹರಣೆಗಳೇ ಇರಲಿಲ್ಲ.ಬೆಳಗ್ಗೆ ಆಗುತ್ತಿದ್ದಂತೆ ವಾರ್ಡ್ ಗಳ ಮಸ್ಟರಿಂಗ್ ಸೆಂಟರ್ ನಲ್ಲಿ ಹಾಜರಾಗಿ ಪರಿಶೀಲನೆ ನಡೆಸುತ್ತಿದ್ದ ವಿಜಯಭಾಸ್ಕರ್.

ಸಿದ್ಧರಾಮಯ್ಯರಂತೆ ಯಡಿಯೂರಪ್ಪ ನಿರ್ದಾರ ತೆಗೆದುಕೊಳ್ಳೊಕ್ಕಾಗುತ್ತಾ..? ರಾಜ್ಯದ ಮುಖ್ಯಮಂತ್ರಿಯಾಗಿ ರಾಜಧಾನಿ ಬೆಂಗಳೂರಿನ ಅಭಿವೃದ್ದಿಯನ್ನು ನಿರ್ದರಿಸುವಂಥ ಬಿಬಿಎಂಪಿಗೆ ಆಡಳಿತಾಧಿಕಾರಿ ನಿಯೋಜಿಸುವಲ್ಲಿ ದಕ್ಷ-ಪ್ರಾಮಾಣಿಕ-ಶುದ್ಧಹಸ್ತ ವಿಜಯ ಭಾಸ್ಕರ್ ಅವರನ್ನು ನಿಯೋಜಿಸುವಲ್ಲಿ ಸಿದ್ಧರಾಮಯ್ಯ ತೆಗೆದುಕೊಂಡ ನಿರ್ದಾರವನ್ನು ಹಾಲಿ ಸಿಎಂ ಯಡಿಯೂರಪ್ಪ ತೆಗೆದುಕೊಳ್ಳೊಕ್ಕೆ ಸಾಧ್ಯವಾಗುತ್ತಾ..

ಬೆಂಗಳೂರು ಟಾಸ್ಕ್ ಪೋರ್ಸ್ ಮುಖ್ಯಸ್ಥರೂ ಇವರೇ..ಅಂದ್ಹಾಗೆ BWSSB,BBMP,BDA,ಬೆಸ್ಕಾಂ,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೀಗೆ ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ಟಾಸ್ಕ್ ಪೋರ್ಸ್ ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರೇ ಮುಖ್ಯಸ್ಥರಾಗಿರುತ್ತಾರೆ.ಇವುಗಳ ನಡುವೆ ಸಮನ್ವಯದ ಕೊರತೆ ಇರುವುದು ಎಲ್ಲರಿಗು ಗೊತ್ತಿರುವ ಸಂಗತಿ.

10 ದಿನಕ್ಕೊಮ್ಮೆ ಕೋ ಆರ್ಡಿನೇಷನ್ ಕಮಿಟಿ ಮೀಟಿಂಗ್ ಮಾಡಿ ಸಮಸ್ಯೆ ಬಗೆಹರಿಸುತ್ತಾ ಬಂದಿರುವ ವಿಜಯ ಭಾಸ್ಕರ್ ಅವರಿಗೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡುವುದು ದೊಡ್ಡ ವಿಷಯವೇನಲ್ಲ.ಈಗಾಗ್ಲೇ ಆಡಳಿತಾಧಿಕಾರಿಯಾಗಿ ಕೆಲಸ ಮಾಡಿ ಅನುಭವ ಇರುವ ವಿಜಯ ಭಾಸ್ಕರ್ ಅವರಿಗೆ ಆಡಳಿತಾಧಿಕಾರಿ ಜವಾಬ್ದಾರಿ ನಿರ್ವಹಿಸುವುದು ಕಷ್ಟವೇನಲ್ಲ.. ಸರ್ಕಾರ ಮನಸು ಮಾಡಬೇಕಷ್ಟೇ..ಡಿಸೆಂಬರ್ ವೇಳೆಗೆ ನಿವೃತ್ತವಾಗುತ್ತಿರುವ ವಿಜಯಭಾಸ್ಕರ್ ಅವರನ್ನು ಮನವೊಲಿಸಿದ್ರೆ ಅವರು ಇಂತದ್ದೊಂದು ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಳ್ಳೊಕ್ಕೆ ನಿರಾಕರಿಸುವುದಿಲ್ಲವೇನೋ ಎಂದೆನಿಸುತ್ತೆ..

ಬಹುತೇಕ ಭ್ರಷ್ಟರ ಆಡಳಿತದಿಂದ್ಲೇ ತುಂಬೋಗುವ ಬಿಬಿಎಂಪಿಗೆ  ಲಕ್ಷ್ಮಣ್ ರಾವ್ ಅವರಂಥ ಆಡಳಿತಾಧಿಕಾರಿಗಳು ಬಂದು ಈ ಹಿಂದೆ ವ್ಯವಸ್ಥೆಯನ್ನೇ ಬದಲಿಸುವಂಥ ಕೆಲಸ ಮಾಡುತ್ತಿದ್ದರು.ಅವರ ಸಾಲಿಗೆ ಸೇರುವ ಮತ್ತೋರ್ವ ಅಧಿಕಾರಿಯಾಗಿ ವಿಜಯಭಾಸ್ಕರ್ ಸೇರೋಗಿದ್ದಾರೆ.ಇಂಥವರೇ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಬಂದ್ರೆ ಮತ್ತೊಂದಷ್ಟು ಸುಧಾರಣೆ-ಅಭಿವೃದ್ಧಿ ಹಾಗೂ ಕ್ರಾಂತಿಕಾರಿ ಬದಲಾವಣೆಯನ್ನು ನಿರೀಕ್ಷಿಸಬಹುದು.

ಆದರೆ ಸರ್ಕಾರದ ನಿಲುವು-ಆಲೋಚನೆ-ಧೋರಣೆ-ಚಿಂತನೆಗಳು ಏನಿವೆಯೋ ಯಾರಿಗೆ ಗೊತ್ತು…ಸಿದ್ಧರಾಮಯ್ಯರಂಥ ಮುಖ್ಯಮಂತ್ರಿ ತೆಗೆದುಕೊಂಡ ಬೋಲ್ಡ್ ಹಾಗೂ ಪ್ರಾಮಾಣಿಕವಾದ ನಿರ್ದಾರವನ್ನು ತೆಗೆದುಕೊಳ್ಳುವಷ್ಟು ಸ್ವಾತಂತ್ರ್ಯ ಹಾಗೂ ದಿಟ್ಟತನ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪರಿಗಿರಬೇಕಲ್ಲ..ಆ ವಿಷಯದಲ್ಲಿ ಅವರಷ್ಟು  ಮುಕ್ತರಾಗಿರಬೇಕಲ್ಲ.. ಪ್ರಶ್ನೆ ಇರೋದೇ ಅದು..ಆದ್ರೆ ವಿಜಯ ಭಾಸ್ಕರ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ಕೊಡೋದ್ರಿಂದ ಲಾಭ ಹಾಗೂ ಒಳ್ಳೆಯ ಹೆಸರು ಬರೋದು ಸರ್ಕಾರಕ್ಕೇನೆ ಎನ್ನುವುದನ್ನು ಮತ್ತೆ ಮತ್ತೆ ಒತ್ತಿ ಹೇಳೊಕ್ಕೆ ಇಚ್ಛಿಸುತ್ತೆ ಕನ್ನಡ ಫ್ಲಾಶ್ ನ್ಯೂಸ್..

Spread the love
Leave A Reply

Your email address will not be published.

Flash News