ಜಸ್ಟ್ ಮಿಸ್- ಫೈರಿಂಗ್ ಅಟೆಂಪ್ಟ್ ನಲ್ಲಿ ಬೆಂಗಳೂರಿನ ಕೆ.ಆರ್ ಪುರಂ ರಿಯಲ್ ಎಸ್ಟೇಟ್ ಉದ್ಯಮಿ ಬಚಾವ್..

0
ರಿಯಲ್ ಎಸ್ಟೇಟ್ ಉದ್ಯಮಿ ಬಾಬು
ರಿಯಲ್ ಎಸ್ಟೇಟ್ ಉದ್ಯಮಿ ಬಾಬು

ಬೆಂಗಳೂರು: ಜಸ್ಟ್ ಮಿಸ್ ಅಷ್ಟೇ..

ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್
ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್

ಪಾತಕಿಗಳ ಸ್ಕೆಚ್ ಸಕ್ಸೆಸ್ ಆಗಿದ್ದರೆ  ರಾಜಧಾನಿ ಬೆಂಗಳೂರಿನಲ್ಲಿ ಕೂದಲೆಳೆಯಲ್ಲಿ ಹೆಣ ಬೀಳೋದು ನಿಕ್ಕಿಯಾಗಿತ್ತು.ಹಳೆ ದ್ವೇಷದ ಹಿನ್ನಲೆಯಲ್ಲಿ ರಿಯಲ್ ಎಸ್ಟೇಟ್  ಉದ್ಯಮಿಯೊಬ್ಬರ ಹತ್ಯೆಗೆ ದುಷ್ಕರ್ಮಿಗಳು ರೂಪಿಸಿದ್ದ ಸ್ಕೆಚ್ ಮಿಸ್ ಆಗಿದೆ.ಸ್ಕೆಚ್ ಮಿಸ್ಸಾಯ್ತೆಲ್ಲ ಎನ್ನುವ ಸಿಟ್ಟಿಗೆ ಮಾಡಿದ ಹಲ್ಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಗಾಯಗೊಂಡಿದ್ದಾರೆ.ಕೆ.ಆರ್ ಪುರದ ಚನ್ನಸಂದ್ರ ನಿವಾಸಿ ಬಾಬು ಕಳೆದ ಶನಿವಾರ ರಾತ್ರಿ, ಕಿಡಿಗೇಡಿಗಳು ಹಾರಿಸಿದ ಗುಂಡಿನಿಂದ ಕೂದಲೆಳೆಯಲ್ಲಿ ಬಚಾವಾಗಿದ್ದಾರೆ. ಅದೃಷ್ಟ ಚೆನ್ನಾಗಿತ್ತು ಬದುಕುಳಿದಿದ್ದಾರೆ.ಆದರೆ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ರಿಂದ ಬಾಬು ತಲೆಗೆ ಹಾಗೂ ಕೈಗೆ ಗಾಯವಾಗಿದೆ.

ಅಂದ್ಹಾಗೆ ಕೆ.ರ್ ಪುರದ ದರ್ಗಾ ಬಳಿ ಬಾಬು ಅವರ ರಿಯಲ್ ಎಸ್ಟೇಟ್ ಕಚೇರಿ ಇದೆ. ಇದರ ಎದುರು ಸಮೋಸ ಅಂಗಡಿ ಒಂದಿತ್ತು. ಪ್ರತಿದಿನ ಸಮೋಸ ತಿನ್ನಲು ಸಾಕಷ್ಟು ಜನ ಬರುತ್ತಿದ್ದರು. ಆದರೆ ಈ ವೇಳೆ ಒಂದಷ್ಟು ಹುಡುಗರು, ಸಮೋಸಾ ಅಂಗಡಿ ಎದುರು ಅಡ್ಡಾದಿಡ್ಡಿಯಾಗಿ ವಾಹನಗಳನ್ನ ನಿಲ್ಲಿಸುತ್ತಿದ್ರು.

ಇದರಿಂದ ಬಾಬು ಅವರು ತಮ್ಮ ವಾಹನವನ್ನ ಪಾರ್ಕ್  ಮಾಡಲು ತೊಂದರೆ ಆಗ್ತಿತ್ತು. ಇದೇ ವಿಚಾರವಾಗಿ  ಕೆಲ ಹುಡುಗರಿಗೆ ಬಾಬು  ವಾರ್ನಿಂಗ್ ಮಾಡಿದ್ರು. ಬಾಬು ಹಾಗೂ ಹುಡುಗರ ನಡುವೆ ಮಾತಿನ ಚಕಮಕಿ ನಡೆದು ಈ ವಿಚಾರ ಪೊಲೀಸ್ ಠಾಣೆವರೆಗೂ ಹೋಗಿತ್ತು. ಅಂತಿಮವಾಗಿ ಸಮೋಸ ಅಂಡಿ ಬಂದ್ ಮಾಡಲಾಗಿತ್ತು.ಇದು ಕಿಡಿಗೇಡಿಗಳು ಕೆಂಡಾಮಂಡಲವಾಗಲು ಕಾರಣವಾಗಿತ್ತಲ್ಲದೇ,ಪ್ರತೀಕಾರಕ್ಕೆ ಸಂದರ್ಭ ಕಾಯುತ್ತಿದ್ದರು.

ಇದಕ್ಕಾಗಿ ಸ್ಕೆಚ್ ರೂಪಿಸಿ ಶನಿವಾರ ರಾತ್ರಿ 9.3೦ರ ವೇಳೆಗೆ ಹೆಲ್ಮೇಟ್ ಧರಿಸಿದ ಬಂದು ಬಾಬು ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಬಾಬು ಅವರ ಮೇಲೆ  ಎರಡು ಸುತ್ತು ಗನ್ ಫೈರ್ ಮಾಡಿದ್ದಾರೆ. ಬಾಬು ಕೂಡಲೇ ಆಫೀಸಿನಿಂದ ಹೊರಗೆ ಓಡುತ್ತಿದ್ದಂತೆ ಲಾಂಗ್ ಬೀಸಿದ್ದಾರೆ.ಅದೃಷ್ಟವಶಾತ್ ಒಂದು ಗುಂಡು ಮಿಸ್ ಆಗಿ ಮತ್ತೊಂದು ಗುಂಡು ಬಾಬು ಅವರ ಕೈಗೆ ತಗುಲಿದೆ. ಅಲ್ಲದೇ ಅವರ ಕೈಗೆ ಹಾಗೂ ತಲೆಗೆ ಪೆಟ್ಟಾಗಿದೆ. ಅಲ್ಲದೇ ಬಾಬು ಅವರ ಕಚೇರಿಯನ್ನ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ಕೆ.ಆರ್ ಪುರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಬು ಅವರ ಕಚೇರಿ ಸುತ್ತಮುತ್ತ ಇರುವ ಸಿಸಿಟಿವಿ ಪುಟೇಜ್ ಗಳನ್ನ ಸಂಗ್ರಹಿಸಿದರು. ದುಷ್ಕರ್ಮಿಗಳ ಸುಳಿವು ದೊರೆತಿದ್ದು ಶೀಘ್ರದಲ್ಲೇ ಅವರನ್ನ ಬಂಧಿಸಲಾಗುವುದು ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದರು. ಯಾವುದೇ ಭಯವಿಲ್ಲದೆ ದುಷ್ಕರ್ಮಿಗಳು ನಡೆಸಿದ ದಾಳಿಗೆ ಕೆ.ಆರ್ ಪುರಂ ಜನ ಬೆಚ್ಚಿಬಿದ್ದಿದ್ದಾರೆ.

Spread the love
Leave A Reply

Your email address will not be published.

Flash News