ನಾವೇನ್ ಮನುಷ್ಯರೋ..ಮೆಷಿನ್ಸೋ..ನಮ್ಗೂ ಮನೆ-ಮಕ್ಳು-ಸಂಸಾರ ಇದೆ ಎನ್ನೋದನ್ನು ಮರೀಬೇಡಿ..ಹಿಂಗೆ ಪ್ರೆಷರ್ ಕೊಡ್ತಿದ್ರೆ ಒಂದಾ ಕೆಲಸ ಬಿಡ್ತೀವಿ..ಇಲ್ಲಾ ನಿಮ್ಮ ಹೆಸರನ್ನು ಬರೆದಿಟ್ಟು ಸೂಸೈಡ್ ಮಾಡ್ಕೋತೀವಿ.

0

ಬೆಂಗಳೂರು:”ನಾವೇನ್ ಮನುಷ್ಯರೋ..ಮೆಷಿನ್ಸೋ..ನಮ್ಗೂ ಮನೆ-ಮಕ್ಳು-ಸಂಸಾರ ಇದೆ ಎನ್ನೋದನ್ನು ಮರೀಬೇಡಿ..ಹಿಂಗೆ ಪ್ರೆಷರ್ ಕೊಡ್ತಿದ್ರೆ ಒಂದಾ ಕೆಲಸ ಬಿಡ್ತೀವಿ..ಇಲ್ಲಾ ನಿಮ್ಮ ಹೆಸರನ್ನು ಬರೆದಿಟ್ಟು ಸೂಸೈಡ್ ಮಾಡ್ಕೋತೀವಿ…”ಹೀಗೆ ಹೇಳುವ ಮನಸ್ಥಿತಿಗೆ ತಂದು ನಿಲ್ಲಿಸಿದೆ ಕೊವಿಡ್ ಡ್ಯೂಟಿಯ ಪ್ರೆಷರ್.ಟೈಮ್ ಲೆಸ್ ಡ್ಯೂಟಿ,ಟಾರ್ಗೆಟ್  ಗಳಿಂದ ಅಕ್ಷರಶಃ ನೊಂದು ಬೆಂದು ಹೋಗಿದ್ದಾರೆ ಕೊವಿಡ್ ಡ್ಯೂಟಿ ಮಾಡ್ತಿರುವ ವೈದ್ಯಕೀಯ ಹಾಗು ಅರೆ ವೈದ್ಯಕೀಯ ಸಿಬ್ಬಂದಿ.

ಹೌದ್ರಿ…..ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊವಿಡ್ ಡ್ಯೂಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ  ಪಾಡು ಯಾವ್ ಶತೃವಿಗೂ ಬೇಡ ಎನ್ಸುತ್ತೆ. ಕರೋನಾ ಕಾಲಿಟ್ಟ ದಿನದಿಂದ ಬಿಡುವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಅದೆಷ್ಟೋ ಮಂದಿ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ, ದಿನೇದ ದಿನೆ ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದಾರೆ.ಓವರ್ ಡ್ಯೂಟಿಕೊವಿಡ್ ಟೆಸ್ಟ್ ಟಾರ್ಗೆಟ್ ನಿಂದಂತೂ ಕುಗ್ಗೋಗುತ್ತಿದ್ದಾರೆನ್ನಲಾಗಿದೆ.

 ಕೊವಿಡ್ ಡ್ಯೂಟಿಯಲ್ಲಿ ನಿರತವಾಗಿರುವ ಬಿಬಿಎಂಪಿ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಮಾನಸಿಕವಾಗಿ ವಿಚಲಿತವಾಗಿದ್ದಾರೆ. ಒಂದೆಡೆ ದಿನಕ್ಕೆ 12 ಗಂಟೆ ಕೆಲಸ ಮಾಡಲೇಬೇಕೆನ್ನುವ   ಒತ್ತಡ,ಇನ್ನೊಂದೆಡೆ ದಿನಕ್ಕೆ ಇಂತಿಷ್ಟೇ ಜನರಿಗೆ ಕೊವೀಡ್ ಟೆಸ್ಟ್ ಮಾಡಲೇ ಬೇಕು ಎಂಬ ಟಾರ್ಗೆಟ್ ನಿಂದ ಬಸವಳಿದು ಹೋಗಿದ್ದಾರೆ.ತಾವೇ ಅನಾರೋಗ್ಯಕ್ಕೀಡಾದ್ರೂ ಬದುಕಿದ್ದೇವೋ..ಸತ್ತಿದ್ದೇವೋ ಎಂದು ವಿಚಾರಿಸುವ ಸೌಜನ್ಯವನ್ನೂ ಯಾರು  ತೋರುತ್ತಿಲ್ಲ.ಕೊರೊನಾ ಬಂದ್ರೂ ಅದನ್ನು ಗೌಪ್ಯವಾಗಿರಿಸಿ ಕೆಲಸ ಮಾಡಬೇಕೆನ್ನುವ ಷರತ್ತು ವಿಧಿಸಿರುವುದರಿಂದ ಕೊವಿಡ್ ಡ್ಯೂಟಿನೇ ಬೇಡ ಎಂಬ ನಿರ್ದಾರಕ್ಕೆ ಬಂದಿದ್ದಾರಂತೆ.

 ಈಗಾಗಲೇ ಕೆಲಸದ ಒತ್ತಡಕ್ಕೆ ಸಿಲುಕಿ ಸಾಕಷ್ಟು ಮಂದಿ ಪಾಲಿಕೆಯ ವೈದ್ಯಾಧಿಕಾರಿಗಳ ಆರೋಗ್ಯ ಕೂಡ ಹದಗೆಟ್ಟಿದೆ. ಕರೋನಾ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಡುವೆಯೇ ಕೆಲಸ ಮಾಡಬೇಕಾದ ದುಸ್ಥಿತಿಯನ್ನ ವೈದ್ಯಧಿಕಾರಿಗಳು ಎದುರಿಸಬೇಕಾಗಿದೆ. ವೈದ್ಯಾಧಿಕಾರಿ ಸೇರಿದಂತೆ ಹಲವು ಸಿಬ್ಬಂದಿ ಅನಾರೋಗ್ಯದ ನಡುವೆಯೇ ಕಾರ್ಯನಿರ್ವಹಿಸುತ್ತಿರುವುದು ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದರೂ ಯಂತ್ರದ ರೀತಿಯಲ್ಲಿ ವೈದ್ಯಾಧೀಕಾರಿಗಳಿಂದ ಕೆಲಸ ಮಾಡಿಸಲಾಗುತ್ತಿದೆಕಳೆದ ಕೆಲ ತಿಂಗಳಿಂದ ರಜೆ ಇಲ್ಲದೆ, ಹಬ್ಬಗಳ ಆಚರಣೆ ಇಲ್ಲದೇ ಬಿಡುವಿಲ್ಲದೇ ತೀರ ಮಾನಸಿಕ ಸಂಕಷ್ಟ ಎದುರಿಸುತ್ತಿರುವ ಹಲವು ಮಂದಿ ವೈದ್ಯರು ಹಾಗೂ ಸಿಬ್ಬಂದಿ ಕೆಲಸವನ್ನ ಬಿಡಲು ತಯಾರಾಗಿದ್ದಾರೆ.

ಕೊವಿಡ್ ಡ್ಯೂಟಿ ಪ್ರೆಷರ್ ಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಡಾ.ನಾಗೇಂದ್ರ
ಕೊವಿಡ್ ಡ್ಯೂಟಿ ಪ್ರೆಷರ್ ಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಡಾ.ನಾಗೇಂದ್ರ

ನಮ್ಮ ಕುಟುಂಬಸ್ಥರೊಂದಿಗೆ ಸಮಯ ಕಳೆದು ಎಷ್ಟೋ ದಿನಗಳು ಆಗಿವೆ. ಬಿಬಿಎಂಪಿ ನಿಜಕ್ಕೂ ನಮ್ಮ ಆರೋಗ್ಯದ ಜೊತೆ ಆಟವಾಡುತ್ತಿದ್ಯಾ ಎಂಬ ಪ್ರಶ್ನೆ ಮೂಡುತ್ತಿದೆ. ನಾವು ಕೂಡ ಮನುಷ್ಯರು, ನಮಗೂ ಮನೆ ಮನೆ ಇದೆ. ಕುಟುಂಬ ಇದೆ. ಆದರೆ ಇದ್ಯಾವುದನ್ನು ಲೆಕ್ಕಿಸದೆ ಬಿಬಿಎಂಪಿ ನಮ್ಮನ್ನ ಅತ್ಯಂತ ಹೀನ ರೀತಿಯಲ್ಲಿ  ನಡೆಸಿಕೊಳ್ಳುತ್ತಿದೆ. ಆದಷ್ಟು ಬೇಗ ನಮ್ಮ ಸಮಸ್ಯೆಗಳನ್ನು ಕೂಡ ಪಾಲಿಕೆಯ ಅಧಿಕಾರಿಗಳು ಅರ್ಥಮಾಡಿಕೊಳ್ಳಲಿಎನ್ನುತ್ತಾರೆ  ಓರ್ವ ಬಿಬಿಎಂಪಿ ಸ್ಟಾಫ್ ನರ್ಸ್.

 ಬಿಬಿಎಂಪಿ ನಮ್ಮನ್ನು ಏನಂತಾ ತಿಳಿದುಕೊಂಡಿದ್ಯೋ ಗೊತ್ತಿಲ್ಲ, ಸಾಕಷ್ಟು ಮಾನಸಿಕ ಹಿಂಸೆ ನೀಡಿ ನಮ್ಮಿಂದ ಕೆಲಸವನ್ನ ಮಾಡಿಸಲಾಗುತ್ತಿದೆ. ನಿರ್ದಿಷ್ಟ ಸಮಯಕ್ಕೆ ಊಟ ಇಲ್ಲದೇ ನಿದ್ದೆ ಇಲ್ಲದೇ ನಮ್ಮ ಆರೋಗ್ಯ ಹದಗೆಟ್ಟಿದೆ. ನಾವು ಕೂಡ ಆನಾರೋಗ್ಯಕ್ಕೆ ತುತ್ತಾಗಿದ್ದೇವೆ. ಆದರೆ ಬಿಬಿಎಂಪಿ ಮಾತ್ರ ಇದ್ಯಾವುದಕ್ಕು ತಲೆ ಕೆಡಿಸಿಕೊಳ್ಳುತ್ತಿಲ್ಲಎಂದು ತಮ್ಮ ನೋವನ್ನ ತೋಡಿಕೊಂಡರು ಪಾಲಿಕೆಯ ಲ್ಯಾಬ್ ಟೆಕ್ನಿಷಿಯನ್.

 ಕಳೆದವಾರ ಮೈಸೂರಿನಲ್ಲಿ ತಾಲೂಕು ವೈದ್ಯಾಧಿಕಾರಿ ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ರು. ಬಿಬಿಎಂಪಿಯಲ್ಲಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಕೂಡ ಮುಂದಿನ ದಿನಗಳಲ್ಲಿ ಇದೇ ಆತ್ಮಹತ್ಯೆ ಹಾದಿ ಹಿಡಿದ್ರು ಅಚ್ಚರಿ ಏನಿಲ್ಲ. ಇನ್ನಾದ್ರೂ ಬಿಬಿಎಂಪಿ ವೈದ್ಯಾಧಿಕಾರಿಗಳ ಸಮಸ್ಯೆ ಅರಿತು, ಅವರಿಗೆ ಸಮರ್ಪಕವಾಗಿ ರಜೆ ನೀಡಿ, ಕೆಲಸದ ಬಾರವನ್ನ ಕಡಿಮೆ ಮಾಡಲಿ..ಇಲ್ಲವಾದಲ್ಲಿ ಮೈಸೂರಿನಲ್ಲಿ ಆದ ದುರಂತ ಬಿಬಿಎಂಪಿಯಲ್ಲೂ ಮರುಕಳಿಸೋದ್ರಲ್ಲಿ ಅನುಮಾನವೇ ಇಲ್ಲ.

 

Spread the love
Leave A Reply

Your email address will not be published.

Flash News