ಬಿಎಂಟಿಸಿ ನೌಕರರಿಗೆ ನೀಡ್ತಿರೋ ಸ್ಯಾನಿಟೈಸರ್ ಸೇಫಾ…? ಆರ್ ಟಿಐ ಮಾಹಿತಿಯಲ್ಲಿ ಅಧಿಕಾರಿಗಳಿಂದ್ಲೇ ಅಘಾತಕಾರಿ ಸತ್ಯ ಬಯಲು..!

0

ಬೆಂಗಳೂರು: ಇದು ಬಿಎಂಟಿಸಿ ನೌಕರರನ್ನು  ಒಂದ್ ಕ್ಷಣ ಆತಂಕ ಹಾಗೂ ಅಘಾತಕ್ಕೊಳಪಡಿಸುವ  ವಿಷಯ. ಕೊರೊನಾ ವೇಳೆ  ಅವರಿಗೆ ಪೂರೈಸಲಾಗುತ್ತಿರುವ ಸ್ಯಾನಿಟೈಸರ್ಸ್ ಆರೋಗ್ಯದ ದೃಷ್ಟಿಯಿಂದ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಸೃಷ್ಟಿಸುವಂಥ ಮಾಹಿತಿಯೊಂದು ಹೊರಬಿದ್ದಿದೆ.

ಇಷ್ಟ್ ತಿಂಗಳಿಂದ ಅವರು ಬಳಸುತ್ತಿರುವ ಸ್ಯಾನಿಟೈಸರ್ಸ್ ಹೈಜೆನಿಕ್ ಆಗಿ ಇದೆಯೇ..?ಅದರಿಂದ ಯಾವುದೇ ಸೈಡ್ ಎಫೆಕ್ಟ್ ಆಗೊಲ್ವೇ..? ಖರೀದಿ ಮಾಡುವಾಗ ಸಂಸ್ಥೆಗಳಿಂದ ಕ್ವಾಲಿಟಿ ಟೆಸ್ಟ್ ರಿಪೋರ್ಟ್ ಪಡೆಯಲಿಲ್ಲವೇ..? ಸುರಕ್ಷೆಯ ದೃಢೀಕರಣ ಪತ್ರ ಪಡೆಯದ ಹೊರತಾಗ್ಯೂ ನೌಕರ ಸಿಬ್ಬಂದಿಗೆ ಹೇಗೆ ವಿತರಿಸಲಾಯ್ತು…? ಹೀಗೆ ಒಂದಷ್ಟು ಪ್ರಶ್ನೆಗಳು ಸೃಷ್ಟಿಯಾಗೊಕ್ಕೆ ಕಾರಣವೇ ಬಿಎಂಟಿಸಿ ಖುದ್ದು ಕೊಟ್ಟಿರುವ ಅಘಾತಕಾರಿ ಉತ್ತರ.

ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರ ಸಿಬ್ಬಂದಿ ಆರೋಗ್ಯದ ಬಗ್ಗೆ ಆಡಳಿತ ಮಂಡಳಿ ಕಾಳಜಿ ಸಾಕಷ್ಟು ಸನ್ನಿವೇಶದಲ್ಲಿ ಪ್ರಶ್ನೆಗೀಡಾಗಿದೆ.ಆರೋಗ್ಯ ಸುರಕ್ಷತೆಗೆ ಪೂರಕವಾದ ಸಾಮಾಗ್ರಿ,ಆರೋಗ್ಯ ತಪಾಸಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಪೂರಕವಾಗಿ ಸ್ಪಂದಿಸಿಲ್ಲ ಎನ್ನುವ ಆರೋಪ ನೌಕರರು ಹಾಗೂ ಸಾರಿಗೆ ಯೂನಿಯನ್ಸ್ ಗಳಿಂದಲೂ ಕೇಳಿಬಂದಿತ್ತು.ಈಗ ಸ್ಯಾನಿಟೈಸರ್ಸ್ ಗಳ ಗುಣಮಟ್ಟ ಹಾಗೂ ಸುರಕ್ಷತೆ ಬಗ್ಗೆಯೇ ಶಂಕೆ ವ್ಯಕ್ತವಾಗುತ್ತಿದೆ.ಶಂಕೆ ವ್ಯಕ್ತವಾಗೊಕ್ಕೆ ಕಾರಣವೇ ಆರ್ ಟಿಐ ನಲ್ಲಿ ಅಧಿಕಾರಿಗಳು ಕೊಟ್ಟಿರುವ ಉತ್ತರ.

ನೌಕರರಿಗೆ ಪೂರೈಸಲಾಗಿರುವ ಸ್ಯಾನಿಟೈಸರ್ಸ್ ಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸುರಕ್ಷತಾ ದೃಢೀಕರಣ ಪತ್ರವನ್ನು ಸಂಬಂಧಿಸಿದ ಸಂಸ್ಥೆಗಳಿಂದ ಪಡೆಯಲಾಗಿತ್ತೇ? ಎಂದು ಬಿಎಂಟಿಸಿ 15ನೇ ಡಿಪೋ ಮ್ಯಾನೇಜರ್ ಗೆ  ಮಾಹಿತಿಯನ್ನು ಕೇಳಲಾಗಿತ್ತು.ಇದಕ್ಕೆ ಅಧಿಕಾರಿಗಳು ನೀಡಿರುವ ಉತ್ತರ ಡಿಪೋದಲ್ಲಿ ಕೆಲಸ ಮಾಡುತ್ತಿರುವ ನೂರಾರು ಡ್ರೈವರ್ಸ್-ಕಂಡಕ್ಟರ್ಸ್-ಮೆಕ್ಯಾನಿಕ್ಸ್ ಗಳಿಗೆ ಶಾಕ್ ನೀಡಿದೆ.ಆರೋಗ್ಯಕ್ಕೆ ಅವು ಹಾನಿಕರವಲ್ಲ ಎನ್ನುವುದನ್ನು ಸ್ಪಷ್ಟಪಡಿಸಿರುವುದಕ್ಕೆ ವೈದ್ಯರಿಂದ ಯಾವುದೇ ದೃಢಿಕರಣ ಪಡೆದಿಲ್ಲ ಎಂದು ಉತ್ತರ ನೀಡಿದ್ದಾರೆ.ಡಿಪೋದಲ್ಲಿ ವಿತರಿಸಲಾದ ಸ್ಯಾನಿಟೈರ್ಸ್ ಪಡೆದು ಬಳಕೆ ಮಾಡುತ್ತಿರುವ ನೌಕರ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ.ಇದು ಸಹಜ ಬಿಡಿ.

ಆದ್ರೆ ಇಲ್ಲಿ ಪ್ರಶ್ನೆ ಇರೋದು,ಕೊರೊನಾ ಸಂದರ್ಭದಲ್ಲಿ ಆರೋಗ್ಯ ಹಾಗು ಸುರಕ್ಷತೆಗೆ ಪೂರಕವಾಗಿ ಯಾವುದೇ ವಸ್ತುಗಳನ್ನು ಪೂರೈಸಿದರೂ ಅದನ್ನು ದೃಢೀಕರಿಸಿಯೇ ಪಡೆಯಬೇಕು.ವೈದ್ಯರು ಹಾಗು ತಜ್ಞರಿಂದ ದೃಢೀಕರಣ ಪತ್ರ ಪಡೆಯಬೇಕು.ಇದು ಕಾಮನ್ ಸೆನ್ಸ್.ಆದ್ರೆ ಸ್ಯಾನಿಟೈಸರ್ಸ್ ಖರೀದಿ ಮಾಡುವಾಗ ಅದು ಬಳಕೆಗೆ ಯೋಗ್ಯವೇ..ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವೇ ಎನ್ನುವುದನ್ನು ಖಚಿತಪಡಿಸಕೊಳ್ಳಬೇಕಾಗ್ತದೆ.

ಆದ್ರೆ ಡಿಪೋ 15 ರಲ್ಲಿ ವೈದ್ಯರ ಯಾವುದೇ ದೃಢೀಕರಣ ಪತ್ರ ಪಡೆಯದೆ ಸ್ಯಾನಿಟೈಸರ್ ಖರೀದಿಸಿ ನೌಕರರಿಗೆ ನೀಡಿದ್ದು ಎಷ್ಟು ಸರಿ..ಇದು ಆಡಳಿತ ಮಂಡಳಿಯಿಂದ ಆದ ಘನಘೋರ ತಪ್ಪಲ್ಲದೇ ಇನ್ನೇನು.

ಆದರೆ ಬಗ್ಗೆ ಬಿಎಂಟಿಸಿ   ಹೇಳೋದೆ ಬೇರೆ.ಯಾವುದೇ ವಸ್ತುಗಳನ್ನು ಖರೀದಿ ಸಿದ್ರೂ ಅದರ ದೃಢೀಕರಣ ಪತ್ರವನ್ನು ಸೆಂಟ್ರಲ್ ಆಫೀಸ್ ನಲ್ಲಿ ಅದಕ್ಕೆಂದೆ ಇರುವ ಇಲಾಖೆ ಸಂಬಂಧಿಸಿದವರಿಂದ ಪಡೆದುಕೊಳ್ಳುತ್ತೆ.ಮಾಹಿತಿ ಡಿಪೋ ಮ್ಯಾನೇಜರ್ಸ್ ಗಳಿಗೆ ಸಾಕಷ್ಟು ಸನ್ನಿವೇಶಗಳಲ್ಲಿ ಇರೊಲ್ಲ ಅಷ್ಟೇ..15ನೇ ಡಿಪೋ  ಮ್ಯಾನೇಜರ್ ಗು ಬಗ್ಗೆ ಮಾಹಿತಿ ಇದ್ದಂತಿಲ್ಲ.

ಆದ್ರೆ ಸ್ಯಾನಿಟೈಸರ್ಸ್ ಖರೀದಿ ವೇಳೆ ಇದೆಲ್ಲವನ್ನೂ ಆಡಳಿತ ಮಂಡಳಿ ಕನ್ಫರ್ಮ್ ಮಾಡಿಕೊಳ್ಳುತ್ತಂತೆ. ಅದೇನೇ ಆದ್ರೂ ಡಿಪೋ ಮ್ಯಾನೇಜರ್ ಕೊಟ್ಟಿರುವ ಉತ್ತರ  ನೌಕರರನ್ನು ಆತಂಕಕ್ಕೀಡುಮಾಡಿದೆ.ಪ್ರಮಾದ ಡಿಪೋಗಳಲ್ಲು ಆಗಿರುವ ಸಾಧ್ಯತೆಗಳಿವೆ.ಸತ್ಯ ಬಯಲಾಗಬೇಕಿದೆ ಅಷ್ಟೇ.. 

Spread the love
Leave A Reply

Your email address will not be published.

Flash News