ಮೇ ಬನ್ ಗಯಾ ಏಕ್ ದಿನ್ ಕಾ “ಮೇಯರ್” – ಡೆಪ್ಯುಟಿ ಮೇಯರ್  ಮೋಹನ್ ರಾಜ್ ಗೆ ಲಕ್ ಬೈ ಮೇಯರ್  ಚಾನ್ಸ್..

0

ಬೆಂಗಳೂರು…ಆ ಒಂದು ಫೋಟೋವನ್ನೇ   ಬಿಬಿಎಂಪಿ ಉಪ ಮಹಾಪೌರ ರಾಮಮೋಹನ ರಾಜು ತಮ್ಮ ಜೀವನಪರ್ಯಂತ ದೊಡ್ಡದಾಗಿ ಮನೆಯಲ್ಲಿ ಫ್ರೇಮ್ ಹಾಕಿಸಿ ಇಟ್ಟುಕೊಂಡು ದಿನಕ್ಕೊಮ್ಮೆ ಅದನ್ನು ನೋಡ್ತಾ ಬೆನ್ ಚಪ್ಪರಿಸಿಕೊಳ್ತಾರೇನೊ..ಬಿಬಿಎಂಪಿ ಕ್ಯಾಂಪಸ್ ನಲ್ಲಿ ಚರ್ಚೆಯಾಗುತ್ತಿರುವ ರೀತಿಯೇ ಹಾಗಿದೆ.

ಬಿಬಿಎಂಪಿ ಕಾರ್ಪೊರೇಟರ್ ಯಾರೇ ಆಗಲಿ ಅವರ ಮಹತ್ವಾಕಾಂಕ್ಷೆ  ಮೇಯರ್ ಆಗ್ಬೇಕೆನ್ನುವುದು..ಇದಕ್ಕಾಗಿ ಏನೆಲ್ಲಾ ಲಾಭಿ ನಡೆಯುತ್ತೆ…ಎಷ್ಟು ಪ್ರಮಾಣದ ಹಣದ ಕೊಡುಕೊಳ್ಳುವಿಕೆ ಆಗುತ್ತೆ ಎನ್ನುವುದು ಗೊತ್ತಿಲ್ಲದ ವಿಚಾರವೇನಲ್ಲ..ಎಲ್ಲಾ ಅರ್ಹತೆ ಇದ್ದಾಗ್ಯೂ ಕೆಲವರಿಗೆ ಮೇಯರ್ ಗಾಧಿ ಒಲಿಯುವುದೇ ಇಲ್ಲ.

ಮೇಯರ್  ಚೇರ್ ನಲ್ಲಿ ಕುಳಿತುಕೊಳ್ಳುವ ಅವಕಾಶ ಅವರಿಗೆ ಬಿಟ್ಟರೆ ಬೇರ್ಯಾರಿಗು ಸಾಮಾನ್ಯವಾಗಿ ಸಿಗೊಲ್ಲ…ಹ್ಞಾಂ ಕೆಲವೊಂದು ಸನ್ನಿವೇಶಗಳಲ್ಲಿ ಅದೇನಾದ್ರೂ ಸಿಕ್ರೆ ಅದು ಡೆಪ್ಯೂಟಿ ಮೇಯರ್ ಗೆ ಮಾತ್ರ..ಆದ್ರೆ ಕಳೆದ ಐದು ವರ್ಷಗಳಲ್ಲಿ ಅಂತದ್ದೊಂದು ಅವಕಾಶ ಸಿಕ್ಕಿದ್ದೂ ಕಡ್ಮೆ..ಮೇಯರ್ ಕೌನ್ಸಿಲ್ ಮೀಟಿಂಗ್ ನ ನಡುವೆ ತುರ್ತು ಕೆಲಸಕ್ಕೆ ಹೋಗಿ ಬರಬೇಕಾಗಿ ಬಂದ್ರೂ ಸಾಕಷ್ಟು ಮೇಯರ್ ಗಳು ಅದಕ್ಕೆ ಅವಕಾಶ ಕೊಡೊಲ್ಲ.ಅವಕಾಶ ಕೊಟ್ರೆ ಡೆಪ್ಯುಟಿ ಮೇಯರ್ ಆ ಸ್ಥಾನದಲ್ಲಿ ಕುತ್ಕೊಂಡ್ ಬಿಡ್ತಾರೆ.ಅದು ಬೇರೆಯವ್ರ ಅವಧಿಯಲ್ಲಿ ಆಗಿದೆಯೋ ಇಲ್ಲವೋ ಗೊತ್ತಿಲ್ಲ.ಆದ್ರೆ ನಾನು ಮೇಯರ್ ಆಗಿರುವವರೆಗೂ ಅದಕ್ಕೆ ಮಾತ್ರ ಅವಕಾಶ ಕೊಡೊಲ್ಲ ಎನ್ನುವ ಪ್ರತಿಜ್ಞೆಯಲ್ಲೇ ಬಹುತೇಕರು ಕಾರ್ಯಾವಧಿ ಮುಗಿಸಿದ್ರು..ಅವರ ಅವಧಿಯಲ್ಲಿದ್ದ ಸಾಕಷ್ಟು ಡೆಪ್ಯುಟಿ ಮೇಯರ್ಸ್,ಈ ಕಾರಣಕ್ಕೆ ಮೇಯರ್ ಗಳನ್ನು ಬೈಯ್ದುಕೊಂಡಿದ್ದೂ ಉಂಟು.

ಇದೆಲ್ಲದರ ನಡುವೆ ಮೇಯರ್ ಚೇರ್ ನಲ್ಲಿ ಕುತ್ಕೊಂಡು ಸಭೆ ನಡೆಸುವ  ಅವಕಾಶ ಅಪರೂಪಕ್ಕೆ ಎನ್ನುವಂತೆ ಇಂದು ಡೆಪ್ಯುಟಿ ಮೇಯರ್ ಮೋಹನ್ ರಾಜು ಅವರಿಗೆ ಸಿಕ್ಕೇಬಿಡ್ತು ನೋಡಿ,ಮೇಯರ್ ಗೌತಮ್ ಕುಮಾರ್ ಯಾವುದೋ ತುರ್ತು ಕೆಲಸಕ್ಕೆ ಹೋದ ಗ್ಯಾಪ್ ನಲ್ಲಿ ಮೋಹನ್ ರಾಜ್ ಮೇಯರ್ ಖುರ್ಚಿಯಲ್ಲಿ ಕುತ್ಕೊಂಡು ಸಭೆ ನಡೆಸಿದ್ರು.ವೀಡಿಯೋ ಕಾನ್ಫರೆನ್ಸ್ ನಲ್ಲಿ ಸಭೆ ನಡೆಯಿತೆನ್ನುವುದು ಸೆಕೆಂಡ್ರಿ.. ಮೋಹನ್ ರಾಜ್ ನಡೆಸಿದ ಸಭೆ ಕೆಲವೇ ನಿಮಿಷಗಳಲ್ಲಿ ಕೆಲ ಕಾರಣಗಳಿಗೆ ಬರ್ಕಾಸ್ತೆನ್ನುವುದು ನಂತರದ ಮಾತಾದ್ರು ಕೂಡ   ಸಭೆ ನಡೆಸಿದ್ದು ಬಿಬಿಎಂಪಿ ಕೌನ್ಸಿಲ್ ಪ್ರೋಸಿಡಿಂಗ್ ನಲ್ಲಿ ದಾಖಲಾಯ್ತು.

ಮೋಹನ್ ರಾಜ್ ಮೇಯರ್ ಚೇರ್ ಮೇಲೆ ಕೂತಾಗ ಅವರ ಗಮನ ಸಭೆ ಮೇಲಿರದೆ ಅಲ್ಲಿದ್ದ ಮೀಡಿ ಯಾಗಳ ಫೋಟೋಗ್ರಾಫರ್ಸ್-ವೀಡಿಯೋಗ್ರಾಫರ್ಸ್ ಗಳತ್ತಲೇ ಕೇಂದ್ರೀಕೃತವಾಗಿತ್ತು. ಇದೊಂದು ಅಪರೂಪದ ಸನ್ನಿವೇಶವಾಗಿದ್ರಿಂದ ಸಹಜವಾಗೇ ಎಲ್ಲರೂ ಈ ಸಂದರ್ಭವನ್ನು ಚಿತ್ರೀಕರಿಸಿದ್ರು.ಅಚ್ಚರಿಯಾಗುವಂಥ ವಿಷಯ ಏನ್ ಗೊತ್ತಾ, ಸಭೆ ಮುಗಿಯುತ್ತಿದ್ದಂತೆ ಹೊರಬಂದ ಮೋಹನ್ ರಾಜ್ ತಮ್ಮ ಆಪ್ತ ಸಹಾಯಕರಿಗೆ ಛಾಯಾಗ್ರಾಹಕರನ್ನು ಸಂಪರ್ಕಿಸಿ ಫೋಟೋ-ವೀಡಿಯೋಗಳನ್ನು ಸಂಪರ್ಕಿಸಿ ಅವರಿಂದ ಫೋಟೋ-ವೀಡಿಯೋ ಕಲೆಕ್ಟ್ ಮಾಡ್ಕೊಂಡು ತಮಗೆ ತಲುಪಿಸುವಂತೆ ಆದೇಶಿಸಿದ್ರಂತೆ. ಪ್ರಚಾರದ ಹುಚ್ಚು ಮೋಹನ್ ರಾಜ್ ಅವರಿಗೆ ಎಷ್ಟರ ಮಟ್ಟಿಗೆ ಇದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಮತ್ತೊಂದ್ ಬೇಕಾ..

ಒಟ್ಟಿನಲ್ಲಿ ಬಿಬಿಎಂಪಿಯ ಐದು ವರ್ಷಗಳ ಕಾರ್ಪೊರೇಟರ್ ಅವಧಿ ಮುಗಿಯೊಕ್ಕೆ ಇನ್ನು ಕೇವಲ 12 ದಿನ ಬಾಕಿ ಇರುವಾಗ ಮೇಯರ್ ಅವರು ಖುರ್ಚಿ ಬಿಟ್ಟು ಹೋಗೋದನ್ನೇ ಕಾಯುತ್ತಿದ್ದ ಉಪಮೇಯರ್ ಮೋಹನ್ ರಾಜ್ ಅವರು ಮೇಯರ್ ಖುರ್ಚಿಯಲ್ಲಿ ಕುತ್ಕೊಂಡು ಕೆಲ ಕ್ಷಣ ಮೇಯರ್ ಹುದ್ದೆಯನ್ನು ಎಂಜಾಯ್ ಮಾಡುವ ಮೂಲಕ ಬಹುತೇಕ ಡೆಪ್ಯುಟಿ ಮೇಯರ್ಸ್ ಗೆ ಸಿಗದ ಅವಕಾಶವನ್ನು ಗಿಟ್ಟಿಸಿಕೊಂಡಿದ್ದು ಇತರರ ದೃಷ್ಟಿಯಲ್ಲಿ ಏನೂ ಅಲ್ಲದೇ ಇರಬಹುದು,ಆದ್ರೆ ಮೋಹನ್ ರಾಜ್ ಬದುಕು ಹಾಗು ರಾಜಕೀಯ ಜೀವನದಲ್ಲಿ ಮಹತ್ಸಾಧನೆಯೇ ಸರಿ…ಇದನ್ನೇ ಮೋಹನ್ ರಾಜ್ ಜೀವನ ಪರ್ಯಂತ ಕ್ಯಾರಿ ಓವರ್ ಮಾಡ್ಕೊಂಡು ಬೆನ್ ತಟ್ಟಿಕೊಳ್ಳದೆ ಇರೊಲ್ಲ ಎನ್ನುತ್ತಾರೆ ಅವರನ್ನು ತೀರಾ ಹತ್ತಿರದಿಂದ ಕಂಡ ಬೊಮ್ಮನಹಳ್ಳಿ ವಾರ್ಡ್ ಜನರು.

Spread the love
Leave A Reply

Your email address will not be published.

Flash News