ಸಚಿವ ಸವದಿ ಅವ್ರೇ..ಎಲ್ಲೋಯ್ತು ನೀವೇ ಘೋಷಿಸಿದ ಪರಿಹಾರ-ಪರಿಹಾರ ಸಿಗದೆ ಸುಸ್ತಾದ ಬಿಎಂಟಿಸಿ ನೌಕರ ಕುಟುಂಬದವ್ರ ಬವಣೆ ನಿಮಗೇನ್ ಗೊತ್ತು..?

0

ಬೆಂಗಳೂರು:ಕರೋನಾ ವೈರಸ್ ದೇಶದೆಲ್ಲಡೆ ಈವೆರೆಗೂ ರಣಕೇಕೆ ಹಾಲುತ್ತಿದೆ. ಅದೆಷ್ಟೋ ಕುಟುಂಬಗಳು ಕರೋನಾಗೆ ಸಿಲುಕಿ ನರಕಯಾತನೆ ಅನುಭವಿಸುತ್ತಿವೆ. ದೇಶದಲ್ಲಿ ಕರೋನಾ ಹೊಡೆತಕ್ಕೆ ಸಿಲುಕಿ ಸಾಕಷ್ಟು ಮಂದಿ ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಇದಕ್ಕೆ ಬಿಎಂಟಿಸಿ ಸಿಬ್ಬಂದಿ ಕೂಡ ಹೊರತಾಗಿಲ್ಲ…

ಹೌದು, ಕಳೆದ ಕೆಲ ತಿಂಗಳಲ್ಲಿ ಕರೋನಾಗೆ ಬಿಎಂಟಿಸಿ ಸಿಬ್ಬಂದಿ ಕೂಡ ಬಲಿಯಾಗಿದ್ದಾರೆ. ಈವರೆಗೂ ಕರೋನಾ ವೈರಸ್ ನಿಂದ ಬಿಎಂಟಿಸಿಯ ಎಂಟು ಸಿಬ್ಬಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕರೋನಾ ಕಾಲಿಟ್ಟ ದಿನದಿಂದ ಪ್ರಾಣವನ್ನೂ ಲೆಕ್ಕಿಸದೇ ಈ ಎಂಟು ಮಂದಿ ಕರೋನಾ ವಾರಿಯರ್‍ಸ್ ಆಗಿ ಕಾರ್ಯ ನಿರ್ವಹಿಸಿದ್ರು..

ಒಂದು ವೇಳೆ ಎಲ್ಲರಂತೆ ಕರೋನಾ ಟೈಮ್ ನಲ್ಲಿ ಮನೆಯಲ್ಲಿ ಕುಳಿತುಕೊಂಡಿದ್ರೆ ಬಹುಶಃ ಇವರೆಲ್ಲ ಬದುಕುಳಿಯುತ್ತಿದ್ರೋ ಏನೋ..ಆದ್ರೆ ಇವರು ಕಾಯಕವೇ ಕೈಲಾಸ ಎಂಬ ಮಾತನ್ನ ನಂಬಿ ಕರೋನಾ ನಡುವೆಯೂ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸಿದ್ರು. ಆದ್ರೆ ಕರೋನಾ ವೈರಸ್ ಇವರನ್ನ ಆವರಿಸಿ ಕೊನೆಗೆ ಪ್ರಾಣವನ್ನೂ ಕಸಿದುಕೊಳ್ತು.

ಕರೋನಾದಿಂದ ಸಾವನಪ್ಪಿದ ಬಿಎಂಟಿಸಿಯ ಎಲ್ಲಾ ಸಿಬ್ಬಂದಿ ಬಡ ಹಾಗೂ ಮಧ್ಯಮ ವರ್ಗದವರು. ಕೆಲಸಕ್ಕೆ ಹೋದ್ರೆ ಮಾತ್ರ ಇವರ ಕುಟುಂಬ ನಿರ್ವಹಣೆ ಸುಗಮವಾಗಿ ಸಾಗುತ್ತಿತ್ತು. ಆದ್ರೆ ಕುಟುಂಬದ ಆಧಾರ ಸ್ತಂಭವನ್ನ ಕಳೆದುಕೊಂಡು ಇವರ ಕುಟುಂಬ ಈಗ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ.. ಎಲ್ಲಾ ಅಂದು ಕೊಂಡಂತೆ ಆಗಿದ್ರೆ ಇಷ್ಟೋತ್ತಿಗಾಗಲೇ ಬಿಎಂಟಿಸಿಯಲ್ಲಿ ಕರೋನಾದಿಂದ ಸಾವನಪ್ಪಿದ ಸಿಬ್ಬಂದಿ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಧನ ಸೇರಬೇಕಿತ್ತು. ಆದ್ರೆ ಹಲವು ದಿನಗಳು ಕಳೆದ್ರೂ ಸಂತ್ರಸ್ತ ಕುಟುಂಬಗಳಿಗೆ ಈವರೆಗೂ ಒಂದು ರೂಪಾಯಿ ಪರಿಹಾರ ಸಿಗದೆ ಇರುವುದು ಶೋಚನೀಯ ಸಂಗತಿ…

ಅಂದಹಾಗೆ, ರಾಜ್ಯದ ಸಾರಿಗೆ ಸಿಬ್ಬಂದಿಯನ್ನ ಸರ್ಕಾರ ಕರೋನಾ ವಾರಿಯರ್‍ಸ್ ಅಂತ ಘೋಷಿಸಿದೆ. ಇವರು ಸೋಂಕಿನಿಂದ ಸಾವಪ್ಪಿದ್ರೆ 30 ಲಕ್ಷ ಪರಿಹಾರ ನೀಡುವುದಾಗಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಘೋಷಿಸಿದ್ದರು. ಸಾರಿಗೆ ಸಚಿವರು ಈ ಮಾತನ್ನ ಹೇಳಿ ಈಗಾಗಲೇ ನಾಲ್ಕು ತಿಂಗಳು ಕಳೆದಿವೆ. ಸಂತ್ರಸ್ಥ ಕುಟುಂಬದ ಸದಸ್ಯರು ಇವರೆಗೂ ಸಾಕಷ್ಟು ಬಾರಿ ಪರಿಹಾರದದ ಧನಕ್ಕಾಗಿ ಕಚೇರಿಗೆ ಅಲೆದಾಡಿದ್ದಾರೆ.ಆದ್ರೆ ಈತನಕ ಇವರಿಗೆ ನ್ಯಾಯ ಸಿಕ್ಕಿಲ್ಲ… ಅಧಿಕಾರಿಗಳ ಅಸಡ್ಡೆ ತನಇದಕ್ಕೆಲ್ಲಾ ಕಾರಣ ಅಂತ ಹೇಳಲಾಗುತ್ತಿದೆ.

Spread the love
Leave A Reply

Your email address will not be published.

Flash News