ಟಾಯ್ಲಟ್ ನಲ್ಲಿ ಪ್ರತ್ಯಕ್ಷವಾದ ಕಾಳಿಂಗ:ಜನ ಕಂಗಾಲು ಸ್ನೇಕ್ ಪ್ರಜ್ವಲ್ ರಿಂದ ಸೆರೆ

0

ಕೊಡಗು:ಮನೆಯ ಶೌಚಾಲಯಕ್ಕೆ ನುಗ್ಗಿದ ಕಾಳಿಂಗ ಸರ್ಪ ಕೆಲ ಕಾಲ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಿಸಿತು. ಮಡಿಕೇರಿ ತಾಲ್ಲೂಕಿನ  ಬೆಟಗೇರಿಯ ಮನು ಎಂಬುವರ ಮನೆ ಶೌಚಾಲಯಕ್ಕೆ ನುಗ್ಗಿದ್ದ 9 ಅಡಿ ಉದ್ದದ ಕಾಳಿಂಗ ಸರ್ಪ  ಕಂಡು ಮನೆಯವ್ರೆಲ್ಲಾ ಗಾಬರಿಗೊಂಡರು.ತಕ್ಷಣಕ್ಕೆ ಉರಗತಜ್ಞ ಸ್ನೇಕ್  ಪ್ರಜ್ವಲ್ ಅವರನ್ನು ಕರೆಯಿಸಲಾಯಿತು. ಕೆಲವೇ ನಿಮಿಷಗಳಲ್ಲಿ ಚಾಣಾಕ್ಷತೆಯಿಂದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟ ಪ್ರಜ್ವಲ್ ಅವರ ಕೆಲಸಕ್ಕೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ರು.

 

Spread the love
Leave A Reply

Your email address will not be published.

Flash News