“ಮಂತ್ರಿ” ದಿವಾಳಿಯಾಗಿರೋದು ನಿಜನಾ..? -7,055 ಕೋಟಿ ಬ್ಯಾಂಕ್ ಸಾಲ ಬಾಕಿ ಇರೋದು ಸತ್ಯನಾ..?ಕಂಗಾಲಾದ ಗ್ರಾಹಕ..!ಮಂತ್ರಿ ವಿರುದ್ಧ ED-CBI ನಲ್ಲಿ ದೂರು

0
ಪ್ರತೀಕ್ ಮಂತ್ರಿ
ಪ್ರತೀಕ್ ಮಂತ್ರಿ
ಸ್ನೇಹಲ್ ಮಂತ್ರಿ
ಸ್ನೇಹಲ್ ಮಂತ್ರಿ

ಬೆಂಗಳೂರು: ಲಬೋ ಲಬೋ ಎಂದು ಬಾಯ್ ಬಡಿದುಕೊಳ್ಳೋದನ್ನು ಬಿಟ್ಟರೆ ಮಂತ್ರಿ ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಸೂರಿನಾಸೆಗೆ ಹಣ ಕಟ್ಟಿದವರಿಗೆ ಬೇರೆ ಗತ್ಯಂತರವೇ ಇಲ್ಲವಾ..?ಕಟ್ಟಡ ನಿರ್ಮಾಣ ಕ್ಷೇತ್ರದ ದಿಗ್ಗಜ ಸಂಸ್ಥೆ ಮಂತ್ರಿ ವಿರುದ್ಧ ಕೇಳಿಬರುತ್ತಿರುವ ಆರೋಪ..ದಾಖಲಾಗುತ್ತಿರುವ ದೂರುಗಳು..ಅದಕ್ಕೆ ಪುಷ್ಠಿ ನೀಡುವಂತೆ ಮಂತ್ರಿ ನಿರ್ದೇಶಕರ ಮಂಡಳಿಯಲ್ಲೇ ಆಗುತ್ತಿರುವ ದಿಢೀರ್ ಬೆಳವಣಿಗೆಗಳು ಈ ಎಲ್ಲಾ ಶಂಕೆಗಳನ್ನು ದಟ್ಟಗೊಳಿಸುತ್ತಿದೆ.ಇದರ ಮತ್ತೊಂದು ಭಾಗ ಎನ್ನುವಂತೆ ಇಂದು ಜಾರಿ ನಿರ್ದೇಶನಾಲಯ(ಇ.ಡಿ) ಹಾಗೂ ಸಿಬಿಐ(ಕೇಂದ್ರ ತನಿಖಾ ಸಂಸ್ಥೆ)ಗೆ ದೂರು ದಾಖಲಾಗಿದೆ.ಮಂತ್ರಿ ಸಂಸ್ಥೆಯ ವಿರುದ್ಧ ಕೇಳಿಬಂದಿರುವ ಬಹುದೊಡ್ಡ ಆರೋಪವಾದ ಬ್ಯಾಂಕ್ ಸಾಲದ ಸ್ಪೋಟಕ ಮಾಹಿತಿ ನೀಡುತ್ತಿದೆ ನಿಮ್ಮ  ಕನ್ನಡ ಫ್ಲಾಶ್ ನ್ಯೂಸ್.

ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮತ್ತಷ್ಟು ರಂಕುಗಳು ಬಯಲಾಗಿವೆ.ಸೂರಿನಾಸೆಗೆ ಕೋಟ್ಯಾಂತರ ಹಣ ಹೂಡಿಕೆ ಮಾಡಿದ ಜನರಿಗೆ ಉಂಡೆನಾಮ ತಿಕ್ಕಿ ವಿದೇಶಕ್ಕೆ ಪಲಾಯನಗೈಯ್ಯುವ ಪ್ಲ್ಯಾನ್ ರೆಡಿ ಮಾಡ್ತಿರುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ  ಹಣ ಸುರಿದು ಕಂಗಾಲಾದ ಸಾಕಷ್ಟು ಗ್ರಾಹಕರು ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದರು.ಮಂತ್ರಿ ವಿರುದ್ಧದ ಕಾನೂನು ಹೋರಾಟದ ಭಾಗವಾಗಿ  ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಕೂಡ ಇಡಿ ಹಾಗು ಸಿಬಿಐಗೆ ದೂರು ದಾಖಲಿಸಿ ಮಂತ್ರಿ ಸಂಸ್ಥೆಗೆ ಕಾನೂನು ಸಂಘರ್ಷವನ್ನು ಎದುರಿಸುವಂತೆ ಮಾಡಿದೆ.

ದೂರುದಾರ ರೊಲ್ಯಾಂಡ್ ಸೋನ್ಸ್
ದೂರುದಾರ ರೊಲ್ಯಾಂಡ್ ಸೋನ್ಸ್
ಸಿಬಿಐಗೆ ದಾಖಲಿಸಿರುವ ದೂರು
ಸಿಬಿಐಗೆ ದಾಖಲಿಸಿರುವ ದೂರು
ಇ.ಡಿ ಕಚೇರಿಗೆ ದಾಖಲಿಸಲಾಗಿರುವ ದೂರು
ಇ.ಡಿ ಗೆ ದಾಖಲಿಸಿರುವ ದೂರು

ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್  ಪ್ರಾಜೆಕ್ಟ್ಸ್ ಗಳು ಬಹುತೇಕ ನಿಂತೇ ಹೋಗುವ ಸ್ತಿತಿ ತಲುಪಿದವೋ..ಮಂದಗತಿಯಲ್ಲಿ ಸಾಗಲಿಕ್ಕೆ ಶುರುವಾದವೋ ಆಗಿನಿಂದ್ಲೇ ಕನ್ನಡ ಫ್ಲಾಶ್ ನ್ಯೂಸ್ ಇದಕ್ಕೆ ಕಾರಣವೇನು ಎನ್ನುವ ಬಗ್ಗೆ ಇನ್ ವೆಸ್ಟಿಗೇಷನ್ ಶುರುವಿಟ್ಟುಕೊಳ್ತು.ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ನೊಂದಿಗೆ ಸೇರಿ ಕ್ರೋಢೀಕರಿಸಿದ ದಾಖಲೆಗಳಲ್ಲಿ ಮಂತ್ರಿ ಸಂಸ್ಥೆ ಈ ಎಲ್ಲಾ ತಲೆಬೇನೆಗಳಿಂದ ತಪ್ಪಿಸಿಕೊಳ್ಳಲು ಮಾಡಿಕೊಂಡಿರಬಹುದಾದ ಪ್ಲ್ಯಾನ್ ಗಳ ಬಗ್ಗೆಯೂ ಬಲ್ಲ ಮೂಲಗಳಿಂದ ಮಾಹಿತಿ ದೊರೆಯಿತು.ಆಗಲೇ ಇದರ ಮೇಲೆ ಬೆಳಕು ಚೆಲ್ಲಲು ಪ್ರಾರಂಭಿಸಿತು.ಇದರಿಂದ ಎಚ್ಚೆತ್ತುಕೊಂಡ ಗ್ರಾಹಕರು ಇದೀಗ,  ನಮಗೆ ನಿಮ್  ಫ್ಲಾಟೂ ಬೇಡ..ಏನೂ ಬೇಡ.ನಮ್ಮ ಬೆವರಿ ಹಣವನ್ನು ಹಿಂದುರಿಗಿಸಿ ಎಂದು ಮನವಿ ಮಾಡಿಕೊಳ್ತಿದಾರೆ.ನಮ್ಮ ಹಣವನ್ನೆಲ್ಲಾ ಸೆಟ್ಲ್ ಮಾಡೋವರೆಗೂ ದೇಶಬಿಟ್ಟು ಓಡೋಗದಂತೆ ಹಿಡಿದಿಟ್ಟುಕೊಳ್ಳಿ,ಸೆಟ್ಲ್ ಆದ್ಮೇಲೆ ವಿದೇಶಕ್ಕಾದ್ರೂ ಹೋಗ್ಲಿ,ಸುಡುಗಾಡಿಗಾದ್ರೂ ಹೋಗಿ ಸಾಯ್ಲಿ ಸರ್ ಎಂದು ಪೊಲೀಸ್ರ ಮುಂದೆ ಬೇಡಿಕೊಳ್ಳುತ್ತಿದ್ದಾರೆ.

ಜಾರಿ ನಿರ್ದೇಶನಾಲಯ(ಇ.ಡಿ) ಹಾಗೂ ಸಿಬಿಐ ಗೆ ದೂರು ನೀಡಿರುವ  ಫ್ಯೂಚರ್  ಇಂಡಿಯಾ ಆರ್ಗನೈಸೇಷನ್ ಮಂತ್ರಿ ಸಂಸ್ಥೆಯು ಬ್ಯಾಂಕ್ ನಲ್ಲಿ ಹೌಸಿಂಗ್ ಪ್ರಾಜೆಕ್ಟ್ ಗಳಿಗೆ ಮಾಡಿಕೊಂಡ ಸಾಲದ ಪೈಕಿ ತೀರಿಸದೆ ಬಾಕಿ ಉಳಿಸಿಕೊಂಡಿರುವ ಸಾಲದ ಅಂಕಿಅಂಶಗಳನ್ನು ಕ್ರೋಢೀಕರಿಸಿದೆ.ಅದರ ಪ್ರಕಾರ ಫ್ಲಾಟ್,ವಿಲ್ಲಾ,ಅಪಾರ್ಟ್ಮೆಂಟ್ ಗಾಗಿ ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್  ಗ್ರಾಹಕರಿಂದ ಹತ್ತಿರತ್ತಿರ 1 ಸಾವಿರ ಕೋಟಿ ಹಣವನ್ನು ಸಂಗ್ರಹಿಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. .

ಮಂತ್ರಿ ಸಂಸ್ಥೆ ಹಣ ಪಡೆದ ಮೇಲೆ ನಿಗಧಿತ ಅವಧಿಯಲ್ಲಿ ಫ್ಲಾಟ್ ಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಸಂಬಂಧಪಟ್ಟವರನ್ನು ವಿಚಾರಿಸಿದರೆ ಹಣಕಾಸಿನ ಮುಗ್ಗಟ್ಟಿದೆ.ಎಲ್ಲವು ಸರಿ ಹೋಗಲಿದೆ ಎಂದು ಸಬೂಬು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.ಈ ನಡುವೆ ಬೋರ್ಡ್ ಆಫ್ ಡೈರೆಕ್ಟರ್ಸ್ ಗಳೆಲ್ಲಾ ರಾತ್ರೋರಾತ್ರಿ ಬದಲಾಗಿದ್ದಕ್ಕೂ ಸಮರ್ಪಕ ಉತ್ತರ ನೀಡಿಲ್ಲ.ಇದೆಲ್ಲವನ್ನು ಗಮನಿಸಿದ್ರೆ ಮಂತ್ರಿ ಸಂಸ್ಥೆಯವ್ರು ಕೋಟ್ಯಾಂತರ ಹಣದೊಂದಿಗೆ ದೇಶವನ್ನೇ ಬಿಟ್ಟು ಪಲಾಯನಗೈಯ್ಯುವ ಸಂಶಯ ಮೂಡಿದೆ.ಹೂಡಿಕೆದಾರರ ಹಿತರಕ್ಷಣೆ ದೃಷ್ಟಿಯಿಂದ ಮಂತ್ರಿ ಸಂಸ್ಥೆಯ ನಿರ್ದೇಶಕರ ಮೇಲೆ ಹದ್ದುಗಣ್ಣಿನ ನಿಗಾ ಇಡಬೇಕೆಂದು ಇ.ಡಿ ಹಾಗು ಸಿಬಿಐಗೆ ನೀಡಿರುವ ದೂರುಗಳಲ್ಲಿ ಆಗ್ರಹಿಸಿದ್ದಾರೆ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ನ ಅಧ್ಯಕ್ಷ ರೋಲ್ಯಾಂಡ್ ಸೋನ್ಸ್.

ಅಂದ್ಹಾಗೆ  ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಲೆಕ್ಕ ಹಾಕಿರುವಂತೆ ಮಂತ್ರಿ ಸಂಸ್ಥೆ ವಿವಿಧ  ಬ್ಯಾಂಕ್ ಗಳಿಂದ ಪಡೆದು ತೀರಿಸದೆ ಬಾಕಿ ಉಳಿಸಿಕೊಂಡಿರುವ ಮೊತ್ತವೇ ಹತ್ತಿರತ್ತಿರ 7ಸಾವಿರ ಕೋಟಿ. ಮಂತ್ರಿ ಡೆವಲಪರ್ಸ್ ಸಂಸ್ಥೆಯ ಅಧೀಕೃತ ವೆಬ್ ಸೈಟ್ ನಲ್ಲೇ ಇರುವಂತೆ  ಆಗಸ್ಟ್ 12, 2020ಕ್ಕೆ ಅನ್ವಯವಾಗುವಂತೆ ಮಂತ್ರಿ ಸಂಸ್ಥೆ 7055 ಕೋಟಿ ಸಾಲವನ್ನು ಬ್ಯಾಂಕ್ ಗಳಲ್ಲಿ ಉಳಿಸಿಕೊಂಡಿದೆಯಂತೆ. ಹಣದ ಕೊರತೆ ಇಲ್ಲದಿದ್ದರೂ ಹಣಕಾಸಿನ ಬಿಕ್ಕಟ್ಟನ್ನು ಮುಂದಿಟ್ಟು ತಮ್ಮನ್ನು ದಿವಾಳಿ ಎಂದು ಘೋಷಿಸಿಕೊಳ್ಳುವ ಸನ್ನಾಹದಲ್ಲಿ ಸಂಸ್ಥೆ ಇದು ಎನ್ನುವುದು ದೂರುದಾರ  ರೊಲ್ಯಾಂಡ್ ಸೋನ್ಸ್ ಆರೋಪ.

ಮಂತ್ರಿ ಸಂಸ್ಥೆಯ ವಂಚನೆ ಬಗ್ಗೆ ಗ್ರಾಹಕರು ಎಚ್ಚೆತ್ತುಕೊಂಡಿರುವ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ಎನ್ನುವ ಸುದ್ದಿಯೊಂದನ್ನು ಸಾಕ್ಷ್ಯ ಸಮೇತ ಕನ್ನಡ ಫ್ಲಾಶ್ ನ್ಯೂಸ್ ನೀಡುತ್ತಿದೆ.ಮಂತ್ರಿಯದು ವಿಶ್ವಾಸಾರ್ಹ ಹೆಸರು,ಮೋಸವಾಗೊಲ್ಲ ಎಂಬ ನಂಬಿಕೆಗೆ ಇನ್ನೂ ಜೋತುಬಿದ್ದವರು ಎಚ್ಚೆತ್ತುಕೊಂಡು ಕಾನೂನಾತ್ಮಕ ಹೋರಾಟಕ್ಕೆ ಮುಂದಾದ್ರೆ ಏನಾಗಬಾರದು ಎಂದು ಗ್ರಾಹಕರು ಬೇಡಿಕೊಳ್ಳುತ್ತಿದ್ದಾರೋ ಅದೇ ಆಗೋಗೋದ್ರಲ್ಲಿ ಅನುಮಾನವೇ ಇಲ್ಲ.

ಮಂತ್ರಿ ಡೆವಲಪರ್ಸ್ ಲಿಮಿಟೆಡ್ ಬ್ಯಾಂಕ್ ನಲ್ಲಿ ತೀರಿಸದೆ ಉಳಿಸಿಕೊಂಡಿರುವ ಸಾಲದ ಮೊತ್ತದ ವಿವರ

ಬ್ಯಾಂಕ್ ಹೆಸರು                                                      ಸಾಲದ ಮೊತ್ತ

ಎಸ್ ಟಿಸಿಐ ಫೈನಾನ್ಸ್ ಲಿಮಿಟೆಡ್                            130 ಕೋಟಿ

ಐಎಲ್ ಅಂಡ್ ಎಫ್ ಎಸ್ ಟ್ರಸ್ಟ್ ಕಂಪೆನಿ ಲಿ.            145 ಕೋಟಿ

ಅಲಹಾಬಾದ್ ಬ್ಯಾಂಕ್                                          112 ಕೋಟಿ

ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿ.               378.5 ಕೋಟಿ

ಕ್ಯಾಟಲೀಸ್ಟ್  ಟ್ರಸ್ಟ್ ಶಿಪ್ ಲಿ.                                     250 ಕೋಟಿ

ಇಂಡಿಯಾ ಬುಲ್ಸ್ ಕಮರ್ ಶೀಯಲ್ ಕ್ರೇಡಿಟ್ಸ್ ಲಿ.    310 ಕೋಟಿ

ಆದಿತ್ಯ ಬಿಲಾ೵ ಫೈನಾನ್ಸ್ ಲಿ.                                 45 ಕೋಟಿ

ಗ್ಸ್ಯಾಡರ್ ಫೈನಾನ್ಸ್                                               93 ಕೋಟಿ

ಎಫ್ ಎಸ್ ಟ್ರಸ್ಟ್ ಕಂಪನಿ ಲಿ.                                60 ಕೋಟಿ

ಹೀರೋ ಫಿನ್ ಕಾಪ್೵                                         13.9 ಕೋಟಿ

ಪಿರಮಲ್ ಟ್ರಸ್ಟ್ ಶಿಪ್ ಸವಿ೵ಸಸ್ ಪ್ರೈ. ಲಿ.            650 ಕೋಟಿ

ಎಸ್. ಬ್ಯಾಂಕ್ ಲಿಮಿಟೆಡ್                                35.8 ಕೋಟಿ

ಐ.ಡಿ.ಬಿ.ಐ. ಟ್ರಸ್ಟ್ ಶಿಪ್ ಸವೀ೵ಸಸ್ ಲಿಮಿಟೆಡ್   120 ಕೋಟಿ

ಕೆನರ ಬ್ಯಾಂಕ್                                                 467 ಕೋಟಿ

ಇಂಡಿಯ ಬುಲ್ಸ್ ಕಮರ್ಷಿಯಲ್  ಕ್ರೇಡಿಟ್ ಲಿಮಿಡೆಡ್  125 ಕೋಟಿ

ಎಸ್ ಬ್ಯಾಂಕ್ ಲಿಮಿಟೆಡ್                                       60 ಕೋಟಿ

ಗ್ಸ್ಯಾಡರ್ ಫೈನಾನ್ಸ್                                              93 ಕೋಟಿ

ಐ ಎಲ್ ಮತ್ತು ಎಫ್ ಎಸ್ ಟ್ರಸ್ಟ್ ಕಂಪನಿ ಲಿಮಿಟೆಡ್  400 ಕೋಟಿ

ಎಸ್. ಬ್ಯಾಂಕ್ ಲಿಮಿಟೆಡ್                                 118 ಕೋಟಿ

ಅಲಹಾಬಾದ್ ಬ್ಯಾಂಕ್                                   112 ಕೋಟಿ

ಆ್ಯಕ್ಸಿಸ್ ಟ್ರಸ್ಟ್ ಸವಿ೵ಸಸ್ ಲಿಮಿಟೆಡ್               131.5 ಕೋಟಿ

ವಿಸ್ಟ್ರಾ ಐ.ಟಿ.ಸಿ.ಎಲ್. ಇಂಡಿಯ ಲಿಮಿಟೆಡ್      95 ಕೋಟಿ

ವಿಸ್ಟ್ರಾ ಐ.ಟಿ.ಸಿ.ಎಲ್. ಇಂಡಿಯ ಲಿಮಿಟೆಡ್     95 ಕೋಟಿ

ಕ್ಯಾಟಲೀಸ್ಟ್ ಟ್ರಸ್ಟ್ ಶಿಪ್ ಲಿಮಿಟೆಡ್                 250 ಕೋಟಿ

ಕ್ಯಾಟಲೀಸ್ಟ್ ಟ್ರಸ್ಟ್ ಶಿಪ್ ಲಿಮಿಟೆಡ್                 250 ಕೋಟಿ

ಕೆನರಾ  ಬ್ಯಾಂಕ್                                            230 ಕೋಟಿ

ಕೆನರಾ  ಬ್ಯಾಂಕ್                                             1404 ಕೋಟಿ

ವಿಸ್ಟ್ರಾ ಐ.ಟಿ.ಸಿ.ಎಲ್. ಇಂಡಿಯ ಲಿಮಿಟೆಡ್             260 ಕೋಟಿ

ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್    621.4 ಕೋಟಿ

ಹೀಗೆ ಸಾಲ ತೆಗೆದುಕೊಂಡ ಬಹುತೇಕ ಬ್ಯಾಂಕ್ ಗಳಲ್ಲಿ  ಕೆಲ  ವರ್ಷಗಳಿಂದಿತ್ತೀಚೆಗೆ ಹಣವನ್ನೇ ಪಾವತಿಸದೆ ಸುಸ್ತಿದಾರ ಆಗಿದೆ ಮಂತ್ರಿ ಸಂಸ್ಥೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಪ್ರಭಾವಿಯಾಗಿರುವ ಸಂಸ್ಥೆ ವಿರುದ್ಧ ದಾಖಲಾಗಿರುವ ದೂರುಗಳ ಹಿನ್ನಲೆಯಲ್ಲಿ ತನಿಖೆ ನಡೆಯುತ್ತಾ ಕಾದುನೋಡಬೇಕಿದೆ.

 

Spread the love
Leave A Reply

Your email address will not be published.

Flash News