ರಾಜಕೀಯ ಜೀವನದ “ಅಜಾತಶತ್ರೃ-ಭಾರತರತ್ನ”  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ..!-ಕೊರೊನಾಗೆ ಬಲಿಯಾದ ದೇಶದ ಮೊದಲ ಮಾಜಿ ರಾಷ್ಟ್ರಪತಿ..

0

ಭಾರತದ  ರಾಜಕೀಯ ಕಂಡ ಕೆಲವೇ ಕೆಲವು ಅಜಾತಶತೃ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ದೇಶದ 13ನೇ  ರಾಷ್ಟ್ರಪತಿ  ಪ್ರಣಬ್ ಮುಖರ್ಜಿ ಇನ್ನಿಲ್ಲ.ವಯೋಸಹಜ ಅನಾರೋಗ್ಯದಿಂದ ಬಳಲುವಾಗಲೇ  ಕೊರೊನಾಗೆ ತುತ್ತಾಗಿ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ  ಪ್ರಣಬ್ ಮುಖರ್ಜಿ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದರು.ಅವರಿಗೆ 84 ವರ್ಷ ವಯಸ್ಸಾಗಿತ್ತು.ತಂದೆಯ ಸಾವನ್ನು ಮಗ ಅಭಿಜಿತ್ ಮುಖರ್ಜಿ ಅಧೀಕೃತಗೊಳಿಸಿದ್ದಾರೆ. ಪ್ರಧಾನಿ ಹುದ್ದೆಗೆ ಎಲ್ಲಾ ರೀತಿಯ ಅರ್ಹತೆ ಹೊಂದಿದ್ದ ಹಿರಿಯ ರಾಜಕಾರಣಿ ಎಂದೇ ಅವರನ್ನು ವಿಶ್ಲೇಷಿಸಲಾಗುತ್ತಿತ್ತು.

ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಪ್ರಣಬ್ ಮುಖರ್ಜಿ ಅವರನ್ನ ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಿ, ಮೆದುಳು ಶಸ್ತ್ರ ಚಿಕಿತ್ಸೆ ಕೂಡ ನಡೆಸಲಾಗಿತ್ತು. ಈ ವೇಳೆ ಕರೋನಾ ಸೋಂಕು ಕೂಡ ಪ್ರಣಬ್ ಅವರಲ್ಲಿ ಕಂಡುಬಂದಿತ್ತು. ಮೆದುಳು ಶಸ್ತ್ರ ಚಿಕಿತ್ಸೆ ಬಳಿಕ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಫಲಕಾರಿಯಾಗದೆ ಇಂದು ಸಂಜೆ ಪ್ರಣಬ್ ಮುಖರ್ಜಿ ಇಹಲೋಕ ತ್ಯಜಿಸಿದ್ದಾರೆ.

1935 ರ ಡಿಸೆಂಬರ್ 11 ರಂದು ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯ ಮಿರಾಠಿ ಗ್ರಾಮದಲ್ಲಿ ಕಾಮದ್ ಕಿನ್ಕರ್ ಹಾಗೂ ರಾಜಲಕ್ಷ್ಮೀ ದಂಪತಿ ಪುತ್ರನಾಗಿ ಪ್ರಣಬ್ ಮುಖರ್ಜಿ  ಜನಿಸಿದರು.. ಸುರಿಯಲ್ಲಿನ ವಿದ್ಯಾಸಾಗರ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಬಳಿಕ ಕೊಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ರು. ಆ ಬಳಿಕ ಅದೇ  ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದ ವಿಷಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಎಂ.ಎ (ಇತಿಹಾಸ), ಎಂ.ಎ (ರಾಜಕೀಯ), ಎಲ್‌ಎಲ್‌ಬಿ, ಡಿ.ಲಿಟ್ ಪದವಿ ಪಡೆದ ನಂತರ ಅವರು ಕೆಲ ಕಾಲ ಶಿಕ್ಷಕ  ಹಾಗೂ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.ಪತ್ರಕರ್ತರಾಗಿಯೂ ಪ್ರಣಬ್ ಅವರು, ದೇಶಿಕ್ ದಕ್ ಎಂಬ ಪತ್ರಿಕೆಯಲ್ಲಿ ದುಡಿದಿದ್ದರು.ಇದರ ನಂತರವೇ  ಪ್ರಣಬ್ ಮುಖರ್ಜಿ   ರಾಜಕೀಯ ಜೀವನ ಆರಂಭಿಸಿದ್ದರು.1953 ರಲ್ಲಿ ಸುರ್ವಾ ಅವರೊಂದಿಗೆ ದಾಂಪ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರಣಬ್ ಅವರಿಗೆ ಶಮಿಷ್ಟಾ ಮುಖರ್ಜಿ, ಇಂದ್ರಜಿತ್ ಮುಖರ್ಜಿ , ಅಭಿಜಿತ್ ಮುಖರ್ಜಿ ಎಂಬ ಮೂವರು ಮಕ್ಕಳಿದ್ದಾರೆ.

ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ರಾಷ್ಟ್ರಪತಿ,ಪ್ರಧಾನ ಮಂತ್ರಿ,ಕೇಂದ್ರ ಸಚಿವರು,ರಾಜ್ಯಪಾಲರು,ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸಹದ್ಯೋಗಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.ಮೂರು ದಿನಗಳ ಸಂತಾಪ ಹಾಗೂ ಶೋಕಾಚರಣೆ ನಡೆಯಲಿದೆ.

ಅಜಾತ ಶತ್ರೃ ಎಂದೇ ಖ್ಯಾತಿಗಳಿಸಿದ್ದ ಪ್ರಣಬ್ ಮುಖರ್ಜಿ ಅವರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

➡️ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭ

➡️2012 ರಿಂದ 2017 ರವರೆಗೂ ಭಾರತದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದರು.

➡️2017 ರಲ್ಲಿ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಪ್ರಶಸ್ತಿ

➡️1966 ರಲ್ಲಿ ರಾಜ್ಯ ಸಭೆಗೆ ಆಯ್ಕೆ ಪ್ರಣಬ್ ಮುಖರ್ಜಿ ಆಯ್ಕೆ

➡️ಇಂದಿರಗಾಂಧಿ ಅವರ ಪರಮಾಪ್ತರಾಗಿದ್ದ ಪ್ರಣಬ್ ಮುಖರ್ಜಿ 1973 ರಲ್ಲಿ ಇಂದಿರಗಾಂಧಿ ಸಂಪುಟದಲ್ಲಿ ಸ್ಥಾನ

➡️1984 ರಲ್ಲಿ ಇಂದಿರಾಗಾಂಧಿ ಅವರ ಹತ್ಯೆಯದ ಬಳಿಕ ಪ್ರಣಬ್ ಮುಖರ್ಜಿ ತಾನೆ ಉತ್ತರಾಧಿಕಾರಿ ಎಂದು ಭಾವಿಸಿದ್ದರು.

➡️ಆದರೆ ಅದು ಸಾಧ್ಯವಾಗದೇ ಪ್ರಣಬ್ ಮುಖರ್ಜಿ ರಾಜೀವ್ ಗಾಂಧಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು.

➡️ಈ ವೇಳೆ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷ ವನ್ನ ಪ್ರಣಬ್ ಸ್ಥಾಪಿಸಿದ್ದರು.

➡️1989 ರಲ್ಲಿ ರಾಜೀವ್ ಗಾಂಧಿ ಅವರೊಂದಿಗಿನ ವೈಮನಸ್ಸು ತಿಳಿಗೊಂಡು ಕಾಂಗ್ರೆಸ್ ಜೊತೆ ತಮ್ಮ ಪಕ್ಷವನ್ನ ವಿಲೀನ ಗೊಳಿಸಿದ್ದರು.

➡️1995 ರಲ್ಲಿ ವಿದೇಶಾಂಗ ಸಚಿವರಾಗಿ ಸೇವೆ

➡️ಸೋನಿಯಾ ಗಾಂಧಿ ರಾಜಕೀಯ ಮಾರ್ಗದರ್ಶಿಯಾಗಿಯೂ ಸೇವೆ

➡️2004 ರಲ್ಲಿ ಲೋಕಸಭೆಗೆ ಪ್ರವೇಶ

➡️2004-06  ಅವಧಿಯಲ್ಲಿ ರಕ್ಷಣಾ ಸಚಿವರಗಿದ್ದರು

➡️2006-09 ರಲ್ಲಿ ವಿದೇಶಾಂಗ ಮಂತ್ರಿಯಾಗಿದ್ದರು

➡️2009-12 ರ ಅವಧಿಯಲ್ಲಿ ಹಣಕಾಸು ಮಂತ್ರಿಯಗಿದ್ದರು

➡️2007 ರಲ್ಲಿ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿ

➡️ಐದು ದಶಕಗಳ ಕಾಲ ಸಂಸತ್ ಸಂಬಂಧ ಹೊಂದಿದ್ದರು.

➡️ಕಾಂಗ್ರೆಸ್ ಪಕ್ಷದಿಂದ  1969  ರಲ್ಲಿ ರಾಜ್ಯಸಭಾ ಸದಸ್ಯರಾದರು.

➡️1975, 1981,1993,1999 ರಲ್ಲಿ ರಾಜ್ಯಸಭೆಗೆ  ಪುನರಾಯ್ಕೆ.

➡️1982 ರಿಂದ 1984 ರವರೆಗೈ ಹಣಕಾಸು ಮಂತ್ರಿಯಾಗಿ ಕಾರ್ಯನಿರ್ವಹಣೆ

Spread the love
Leave A Reply

Your email address will not be published.

Flash News