ರೈಫಲ್ ನಿಂದ ಗುಂಡು ಸಿಡಿದಿದ್ದೋ…..??ಸಿಡಿಸಿಕೊಂಡಿದ್ದೋ….!! ಹಿರಿಯ IPS ಆರ್.ಪಿ ಶರ್ಮಾ ಆತ್ಮಹತ್ಯೆ ಯತ್ನದಿಂದೆ ಸಾಕಷ್ಟು ಪ್ರಶ್ನೆಗಳು..!?

0

ಬೆಂಗಳೂರಿನಲ್ಲಿ  ಹಿರಿಯ ಐಪಿಎಸ್ ಅಧಿಕಾರಿಯೋರ್ವರ ಆತ್ಮಹತ್ಯೆ ಯತ್ನ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಆ ಅಧಿಕಾರಿ, ದುರ್ಬಲರಾಗಿದ್ದರಾ ಎನ್ನುವ ಹಿನ್ನಲೆಯಲ್ಲಿ ಒಂದಷ್ಟು ಪ್ರಶ್ನೆ ಸೃಷ್ಟಿಯಾಗಿದೆ.ಆದರೆ ಆತ್ಮಹತ್ಯೆ ಮಾಡಿಕೊಳ್ಳಲೇಬೇಕೆನ್ನುವ ನಿರ್ದಾರಕ್ಕೆ ಮನುಷ್ಯ ಬಂದ್ ಬಿಟ್ಟರೆ ಎಂತದ್ದೇ ಗುಂಡಿಗೆ ಇರುವಾತನೂ ಅಸಹಾಯಕನಾಗಿ ಸಾವಿಗೆ ಕೊರಳೊಡ್ಡಿಬಿಡುತ್ತಾನೆನ್ನುವುದು ಕೂಡ ಅಷ್ಟೇ ಕಠೋರ ಸತ್ಯ ಕೂಡ.ಕರ್ನಾಟಕ ಪೊಲೀಸ್ ಕಂಡ ಅತ್ಯಂತ ಟಫ್ ಐಪಿಎಸ್ ಆಫೀಸರ್ ಗಳಲ್ಲಿ ಒಬ್ಬರಾದ  ರಾಜ್ ವೀರ್ ಪ್ರತಾಪ್ ಶರ್ಮಾ ಅವರ ಆತ್ಮಹತ್ಯೆ ಯತ್ನವೂ ಇಂತದ್ದೇ ಶಂಕೆಗೆ ಎಡೆಮಾಡಿಕೊಟ್ಟಿದೆ.

ಪೊಲೀಸ್ ಹೌಸಿಂಗ್ ಬೋರ್ಡ್ ಕಾರ್ಪೊರೇಷನ್ ಡಿಜಿಪಿ  ಆರ್ ಪಿ ಶರ್ಮಾ  ಬೆಂಗಳೂರು ಹೊರವಲಯದಲ್ಲಿರುವ  ತಮ್ಮ ಕೊತ್ತನೂರಿನ ಮನೆಯಲ್ಲಿ ನಿನ್ನೆ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದಾರೆನ್ನೋ ಸುದ್ದಿ ವ್ಯಾಪಕವಾಗಿ ಸದ್ದು ಮಾಡಿದೆ.ರೈಫಲ್ ನ್ನು ಕ್ಲೀನ್ ಮಾಡುವಾಗ ಅಚನಕ್ಕಾಗಿ ಗುಂಡು ಸಿಡಿದಿದೆ ಎಂದು ಪ್ರಾಥಮಿಕ ಮಾಹಿತಿಗಳು ದೊರೆಯುತ್ತಿವೆ.ಆದ್ರೆ ಇಷ್ಟು ವರ್ಷಗಳ ಪೊಲೀಸ್ ಅನುಭವದಲ್ಲಿ ರಿವಾಲ್ವರ್ ನ್ನು ಕ್ಲೀನ್ ಮಾಡುವಾಗ ವಹಿಸಿದ್ದ  ಎಚ್ಚರಿಕೆಯನ್ನು ನಿನ್ನೆ ಸಂಜೆ ವಹಿಸಿರಲಿಲ್ಲವೇ ಎನ್ನುವ ಪ್ರಶ್ನೆ ಬೇರೆ ಯಾರೂ ಅಲ್ಲ ಡಿಪಾರ್ಟ್ಮೆಂಟ್ ನಲ್ಲಿರೋರೇ ಮಾಡಲು ಶುರುಮಾಡಿದ್ದಾರೆ.ಸರ್ವಿಸ್ ರಿವಾಲ್ವರ್ ನ್ನು ಕ್ಲೀನ್ ಮಾಡುವ ವೇಳೆ ಶರ್ಮಾ ಹೇಗೆ ಎಚ್ಚರ ತಪ್ಪಿದರೋ ಎನ್ನುವುದರ ಸುತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮನೆಯಿಂದ ಜೋರಾದ ಗುಂಡಿನ ಸದ್ದು ಕೇಳಿ ಅಕ್ಕಪಕ್ಕದಲ್ಲಿರುವವರು ಓಡಿ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರ್ಮಾ ಅವರ ಕೈಯಲ್ಲಿ ಸರ್ವಿಸ್ ರಿವಾಲ್ವರ್ ಇತ್ತೆನ್ನುವ ಮಾಹಿತಿಯೂ ಪೊಲೀಸರಿಗೆ ದೊರಕಿದೆ.ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಕಾರಣವೇನಿತ್ತು ಅವರಿಗೆ ಎನ್ನುವುದು ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.ಅವರನ್ನು ಕೊಲ್ಲುವ ಭಾಗವಾಗಿ ಯಾರಾದ್ರೂ ಈ ರೀತಿಯ ಸೀನ್ ಕ್ರಿಯೇಟ್ ಮಾಡುದ್ರಾ ಎನ್ನುವುದರ ಸುತ್ತವೂ ತನಿಖೆ ನಡೆಯಬೇಕಿದೆ.

ಉತ್ತರ ಪ್ರದೇಶ ಮೂಲದ ಅವರು 1987 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಶರ್ಮಾ, ಹಿರಿಯ ಐಎಎಸ್ ಅಧಿಕಾರಿ ನಾಗಲಾಂಬಿಕಾ ದೇವಿ ಅವರೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ ಆರ್.ಪಿ ಶರ್ಮಾ ಅವರಿಗೆ ಸಾಂಸಾರಿಕವಾಗಿ ಆತ್ಮಹತ್ಯೆಗೆ ಯತ್ನಿಸುವಂಥ ಸಮಸ್ಯೆಗಳಿರಲಿಲ್ಲ ಎನ್ನಲಾಗಿದೆ.ಗಂಡ ಹೆಂಡತಿ ಅನ್ಯೋನ್ಯವಾಗೇ ಇದ್ದರೆನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.ಆದ್ರೆ ಆರ್.ಪಿ ಶರ್ಮಾ ಅವರಿಗೆ ಇದ್ದಿದ್ದು ಒಂದೇ ಕೊರಗು  ಇಲಾಖೆಯಲ್ಲಿ ತಮ್ಮ ಜೇಷ್ಠ್ಯತೆ ಹಾಗೂ ಸಾಮರ್ಥ್ಯವನ್ನು ಪರಿಗಣಿಸುತ್ತಿಲ್ಲ..ಆಯಕಟ್ಟಿನ ಸ್ಥಳಗಳಲ್ಲಿ ಕೆಲಸ ಮಾಡಲಿಕ್ಕೆ ಅವಕಾಶ ಕೊಡದೆ ಕೆಲಸವೇ ಇಲ್ಲದ ವಿಭಾಗಗಳಲ್ಲಿ ಕೆಲಸ ಮಾಡುವಂತೆ ತಿಳಿಸಲಾಗ್ತಿದೆ ಎನ್ನುವುದು ಅವರಿಗೆ ಇದ್ದ ಬೇಸರದ ಸಂಗತಿ.ಈ ನೋವನ್ನು ಅವರು  ತಮ್ಮ ಸಹವರ್ತಿಗಳೊಂದಿಗು ಹಂಚಿಕೊಂಡಿದ್ದರೆನ್ನಲಾಗಿದೆ.ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ಮಹಾನಿರ್ದೇಶಕ ಸ್ಥಾನಕ್ಕೆ ಬೇಕಾದ ಎಲ್ಲಾ ಅರ್ಹತೆ ಇದ್ದಾಗ್ಯೂ ತನಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎನ್ನುವ ಬೇಸರ-ಆಕ್ರೋಶ ಆತ್ಮಹತ್ಯೆಗೆ ಯತ್ನಿಸುವಂತೆ ಮಾಡ್ತಾ..ಈ ನಿಟ್ಟಿನಲ್ಲು ತನಿಖೆ ಮುಂದುವರೆಯಲಿದೆ.

ಬಿಎಂಟಿಎಫ್ ನಲ್ಲಿದ್ದಾಗ ಅವರು ಮಾಡಿದ ಕೆಲಸವನ್ನು ಈ ಹೊತ್ತಿನವರೆಗು ಯಾವೊಬ್ಬ ಐಪಿಎಸ್ ಕೂಡ ಮಾಡಲು ಸಾಧ್ಯವಾಗಿಲ್ಲ.ಕಾವೇರಿ ಎಂಪೋರಿಯಂ ಅಧ್ಯಕ್ಷರಾಗಿದ್ದಾಗಲೂ ಹಗರಣವನ್ನು ಹೊರಗಾಕಿದ್ದರು.ಇಷ್ಟೆಲ್ಲಾ ಆದ್ರೂ ತನ್ನನ್ನು ಪರಿಗಣಿಸಲಾಗುತ್ತಿಲ್ಲ ಎನ್ನುವ ಬೇಸರ ಅವರಲ್ಲಿ ಇದ್ದುದ್ದು ಸಹಜ.ಆದ್ರೆ ಇದನ್ನೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಮಾಡಿಕೊಂಡ್ರು ಎಂದು ನಂಬೊಕ್ಕೆ ಸಾಧ್ಯವಿಲ್ಲ ಎನ್ನಲಾಗ್ತಿದೆ.ಹಾಗಾದ್ರೆ ಆತ್ಮಹತ್ಯೆ ಯತ್ನಕ್ಕೆ ನಿಜವಾದ ಕಾರಣವೇನು..ವೈಯುಕ್ತಿಕವಾಗಿ ಅವರಿಗೆ ಬೇರೆ ಸಮಸ್ಯೆಗಳಿದ್ದವೆ ಎನ್ನುವುದರ ಸುತ್ತಲೂ ಪೊಲೀಸ್ ತನಿಖೆ ನಡೆಯಬೇಕಿದೆ.

ಇದೆಲ್ಲಕ್ಕಿಂತ ಪ್ರಮುಖವಾಗಿ ಶರ್ಮಾ ಅವರನ್ನು ಕ್ಯಾನ್ಸರ್ ಮಹಾಮಾರಿ ಕಿತ್ತು ತಿನ್ನುತ್ತೆನ್ನುವ ಸಂಗತಿ ತುಂಬಾ ಜನರಿಗೆ ಗೊತ್ತಿಲ್ಲ..ಕ್ಯಾನ್ಸರ್ ಗೆ ತುತ್ತಾದ ದಿನದಿಂದ್ಲೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶರ್ಮಾ ಕೆಲಸಕ್ಕೂ ಸರಿಯಾಗಿ ಬರುತ್ತಿರಲಿಲ್ಲ.ಸೇವೆಗೆ ಸರಿಯಾಗಿ ನ್ಯಾಯ ಸಲ್ಲಿಸದಿರುವುದರ ಬಗ್ಗೆಯೂ ಬೇಸರವಿತ್ತು.ಆರೋಗ್ಯವೇ ಸರಿ ಇಲ್ಲ ಎಂದ್ಮೇಲೆ ಬದುಕಿದ್ದೇನು ಪ್ರಯೋಜನ ಎಂದು ಜಿಗುಪ್ಸೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ರಾ..ಅದು ಗೊತ್ತಾಗ್ತಿಲ್ಲ.ಹೀಗೆ ಪ್ರಶ್ನೆಗಳು ಸಾಕಷ್ಟಿವೆ.ಅದೆಲ್ಲಕ್ಕೂ ತನಿಖೆಯೊಂದೇ ಉತ್ತರ ಕೊಡಬಲ್ಲದು. ಇದನ್ನೆಲ್ಲಾ ಹೊರತುಪಡಿಸಿದ್ರೆ ಶರ್ಮಾ ಅವರ ಆರೋಗ್ಯಸ್ಥಿತಿ ಗಂಭೀರವಾಗಿದ್ದು ಹೆಬ್ಬಾಳದ  ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಶಾನ್ಯ ವಲಯ  ಡಿಸಿಪಿ ಭೀಮಾಶಂಕರ ಗುಳೇದ್‌  ನೇತೃತ್ವದಲ್ಲಿ ತನಿಖೆ ನಡೆಯಲಿದೆ.

Spread the love
Leave A Reply

Your email address will not be published.

Flash News