ಭೂಕಬಳಿಕೆ ಸುಳಿಯಲ್ಲಿ”ಕೈ” ಕಾರ್ಪೊರೇಟರ್ ಝಾಕೀರ್..! “ಡಿಜೆಹಳ್ಳಿ” ಗಲಭೆಗೆ ತತ್ತರಿಸಿದ್ದ ಅಬ್ದುಲ್ ರಕೀಬ್ ಗೆ ಉರುಳಾಗುತ್ತಾ ಭೂ ಕಬಳಿಕೆ..?

0
ಎನ್.ಆರ್ ರಮೇಶ್
ಮಾಜಿ ಕಾರ್ಪೊರೇಟರ್ ಎನ್.ಆರ್ ರಮೇಶ್
ಪುಲಕೇಶಿನಗರ ವಾರ್ಡ್ "ಕೈ" ಕಾರ್ಪೊರೇಟರ್ ಅಬ್ದುಲ್ ರಕೀಬ್ ಝಾಕಿರ್
ಪುಲಕೇಶಿನಗರ ವಾರ್ಡ್ “ಕೈ” ಕಾರ್ಪೊರೇಟರ್ ಅಬ್ದುಲ್ ರಕೀಬ್ ಝಾಕಿರ್

ಬೆಂಗಳೂರು:ಕೈ ಕಾರ್ಪೊರೇಟರ್  ಝಾಕೀರ್ ಸ್ತಿತಿ ಬೆಂಕಿಯಿಂದ ಬಾಣಲೆಗೆ ಎನ್ನುವಂತಾಗಿದೆ.ಇನ್ನೇನು ಒಂದ್ ಕಷ್ಟದಿಂದ ತಾತ್ಕಾಲಿಕವಾಗಿಯಾದ್ರೂ ಬಿಡುಗಡೆ ಸಿಗ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಮತ್ತೊಂದು ಆಪಾದನೆ ಅವರ ಬೆನ್ ಬಿದ್ದಿದೆ.ಝಾಕೀರ್ ಕನಲಿ ಹೋಗಿದ್ದಾರೆ.

ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಕ್ಕಾಗದೆ  ಒದ್ದಾಡುತ್ತಿರುವ ಪುಲಕೇಶಿನಗರ ವಾರ್ಡ್ ಕೈ ಕಾರ್ಪೊರೇಟರ್ ಅಬ್ದುಲ್ ರಕೀಬ್ ಝಾಕಿರ್ ಗೆ ಈಗ ಭೂ ಕಂಟಕ ಎದುರಾಗಿದೆ.ಅವರ ವಿರುದ್ದ ಕೇಳಿಬಂದಿರೋ ಆರೋಪ  ಅಂತಿಂಥದ್ದಲ್ಲ,ಬಿಬಿಎಂಪಿಯ ಬಹುಮೂಲ್ಯ ಸ್ವತ್ತುಗಳನ್ನೇ ಕಬಳಿಸಿರುವ ಆಪಾದನೆ.ಅಂದ್ಹಾಗೆ ಇದರ ಮಾರುಕಟ್ಟೆ  ಮೌಲ್ಯ  ಎಷ್ಟು ಗೊತ್ತಾ ಬರೋಬ್ಬರಿ 18 ಕೋಟಿ.

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಪುಲಕೇಶಿನಗರ ವಾರ್ಡ್ ವ್ಯಾಪ್ತಿಯ ಫ್ರೇಜರ್ ಟೌನ್ ಬಡಾವಣೆಯ ಹೇನ್ಸ್ ರಸ್ತೆ ಹಾಗೂ ಬಂಬೂ ಬಜಾರ್ ರಸ್ತೆಯಲ್ಲಿರುವ ಬಿಬಿಎಂಪಿ ಸ್ವತ್ತುಗಳನ್ನು ಝಾಕೀರ್ ಜಬರ್ ದಸ್ತ್ ಮಾಡಿ ಕಬಳಿಸಿಕೊಂಡಿದ್ದಾರೆ ಎನ್ನೋದು ಮಾಜಿ ಕಾರ್ಪೊರೇಟರ್ ಎನ್.ಆರ್ ರಮೇಶ್ ಆರೋಪ.

ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ  ಕಾರ್ಪೊರೇಟರ್ ಪಾಂಡ್ಯನ್  ಅವರಿಗೆ 50 ವರ್ಷಗಳ ಗುತ್ತಿಗೆಗೆ ನೀಡಲಾಗಿದ್ದ  ಹೇನ್ಸ್ ಬಡಾವಣೆಯ 1750 ಚದರ ಅಡಿ ವಿಸ್ತೀರ್ಣದ  25/2-1 ಸಂಖ್ಯೆಯ ಸ್ವತ್ತು ಕಾಂಗ್ರೆಸ್ ಮುಖಂಡ ರಾಮಾಂಜಲು ನಾಯ್ಡು ಅವರಿಗೆ 1999 ರಲ್ಲಿ ನೀಡಲಾಗಿದ್ದ 2,760 ಚ. ಅಡಿ ವಿಸ್ತೀರ್ಣದ 25/1 ಸಂಖ್ಯೆಯ ಸ್ವತ್ತುಗಳನ್ನು ಕಾರ್ಪೊರೇಟರ್ ರಕೀಬ್  ಝಾಕೀರ್ ಹಾಗೂ ಪಟಾಲಂ ಕಬಳಿಸಿ ಅಲ್ಲಿ ವಸತಿ ಸಂಕೀರ್ಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಹೊರಟಿದೆ ಎನ್ನೋದು ರಮೇಶ್ ಆಪಾದನೆ.

1971-74 ರ ಅವಧಿಯಲ್ಲಿ ಬೆಂಗಳೂರು ಸಿಟಿ ಕಾರ್ಪೋರೇಷನ್ ನ  ಡಿವಿಜನ್(ಈಗಿವ ವಾರ್ಡ್ ಗಳನ್ನು ಡಿವಿಜನ್ ಎನ್ನಲಾಗ್ತಿತ್ತು)  34 ರ  ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದ ಪಾಂಡ್ಯನ್ ಅವರ ಧರ್ಮಪತ್ನಿ ಶ್ರೀಮತಿ. ಬೇಬಿಯಮ್ಮ ಅವರಿಗೆ 1983-84 ರಲ್ಲಿ ಫ್ರೇಜರ್ ಟೌನ್ ಬಡಾವಣೆಯ ಹೇನ್ಸ್ ರಸ್ತೆಯಲ್ಲಿರುವ 1750 ಚ. ಅಡಿ ವಿಸ್ತೀರ್ಣದ ಸ್ವತ್ತಿನ ಸಂಖ್ಯೆ – 25/2-1 ಅನ್ನು 50 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು.ಆದರೆ ಬೆಂಗಳೂರು ಮಹಾನಗರ ಪಾಲಿಕೆಯ  ಪೂರ್ವ ವಲಯ  ಜಂಟಿ ಆಯುಕ್ತರಾಗಿದ್ದ ನಿವೃತ್ತ IAS ಅಧಿಕಾರಿ ಜಯರಾಂ, 11/04/2005 ರಂದು  ಆಯುಕ್ತರ ಗಮನಕ್ಕೂ ತರದೆ ಹಾಗೂ  ಅನುಮತಿಯನ್ನೂ ಪಡೆಯದೇ  ಕಾನೂನು ಬಾಹಿರವಾಗಿ “ಮಾರಾಟದ ಕ್ರಯ ಪತ್ರ”ಮಾಡಿಕೊಟ್ಟಿದ್ದರು.

ನಿವೃತ್ತ IAS ಅಧಿಕಾರಿ ಜಯರಾಂ.
ನಿವೃತ್ತ IAS ಅಧಿಕಾರಿ ಜಯರಾಂ.
 ಝಾಕೀರ್ ಕಬಳಿಸಿ ನಿರ್ಮಿಸುತ್ತಿದ್ದಾರೆನ್ನಲಾದ ಬೃಹತ್ ಕಟ್ಟಡ
ಝಾಕೀರ್ ಕಬಳಿಸಿ ನಿರ್ಮಿಸುತ್ತಿದ್ದಾರೆನ್ನಲಾದ ಬೃಹತ್ ಕಟ್ಟಡ

13/02/2006 ರಂದು ಬೇಬಿಯಮ್ಮ ತಮ್ಮ ಮಗಳು ವಾಣಿ ಅವರಿಗೆ “ದಾನ ಪತ್ರ” ದ ಮೂಲಕ ಸದರಿ ಸ್ವತ್ತಿನ ಹಕ್ಕನ್ನು ವರ್ಗಾಯಿಸಿದ್ದರು. ವಾಣಿ ಅವರಿಂದ K. ತಾಜ್ ಹಾಗೂ   M. ಅಕ್ರಮುಲ್ಲಾ ಎಂಬುವವರಿಗೆ ಸ್ವತ್ತನ್ನು ಮಾರಾಟ ಮಾಡಲಾಗಿದೆ.ಈ ಕ್ರಯಪತ್ರದಲ್ಲಿ ಸದರಿ ಸ್ವತ್ತಿನ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ 03 ಪ್ರತ್ಯೇಕ ಪಾಲಿಕೆ ಸ್ವತ್ತುಗಳು ಇವೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ.07 ಕೋಟಿ ರೂಪಾಯಿಗಳಿಗೂ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ 1750 ಚ. ಅಡಿ ವಿಸ್ತೀರ್ಣದ, ಕಬಳಿಸಲ್ಪಟ್ಟಿರುವ ಪಾಲಿಕೆ ಸ್ವತ್ತಿನಲ್ಲಿ ನಿಯಮಬಾಹಿರವಾಗಿ ತಳ ಮಹಡಿ ಸೇರಿದಂತೆ 07 ಅಂತಸ್ತುಗಳ ವಸತಿ ಸಂಕೀರ್ಣ ನಿರ್ಮಿಸಲಾಗುತ್ತಿದೆ ಎನ್ನೋದು ರಮೇಶ್ ಆರೋಪ.

ಇನ್ನು ಕಾಂಗ್ರೆಸ್ ಮುಖಂಡ V. ರಾಮಾಂಜಲು ನಾಯ್ಡು ರವರಿಗೆ   99 ವರ್ಷಗಳ ಗುತ್ತಿಗೆಗೆ ಅಂದಿನ “ಬೆಂಗಳೂರು ನಗರ ಸಭೆ ನೀಡಿದ್ದ ಕಾರ್ಪೊರೇಟರ್ ಪಾಂಡ್ಯನ್ ಅವರಿಗೆ ನೀಡಲಾಗಿದ್ದ ಸ್ವತ್ತಿನ ಸಂಖ್ಯೆಯನ್ನು ದಿಢೀರನೆ #25/1 ಎಂದು ಬದಲಾಯಿಸಿ, ಅಜೀಮ್ ಖಾನ್ ಎಂಬುವವರಿಗೆ  ಮಾರಾಟ ಮಾಡಲಾಗಿತ್ತು.

ಅಜೀಂ ಖಾನ್ ರ ಈ ಪ್ರಾಪರ್ಟಿಯನ್ನು ಅವರ ಧರ್ಮಪತ್ನಿ ಮುಮ್ತಾಜ್ ಬೇಗಂ,ನಂತರ ಮಕ್ಕಳಾದ ಎ. ಮಸೂದ್ ಖಾನ್, ಎ. ಮಕ್ಸೂದ್ ಖಾನ್, ಎ. ಮಹಮೂದ್ ಖಾನ್ ಮತ್ತು ರುಕ್ಸಾನಾ ಕೌಸರ್ ಎಂಬುವವರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು. 27/01/2018 ರಂದು “ಖಾತಾ” ಮಾಡಿಕೊಟ್ಟಿದ್ದರು.ಈ ಸ್ವತ್ತಿನ  ಷಡ್ಯೂಲ್ ನಲ್ಲೂ  ಪಶ್ಚಿಮ-ದಕ್ಷಿಣ ಭಾಗದಲ್ಲಿ ಪಾಲಿಕೆ ಸ್ವತ್ತುಗಳಿರೋದು ದೃಡಪಟ್ಟಿದೆ.

ಇವತ್ತಿಗೆ 18 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವ ಈ ಸ್ವತ್ತುಗಳನ್ನು ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕೀರ್ ಮತ್ತು ಅವರ ಪಾಲುದಾರರು ಬೇನಾಮಿ ಹೆಸರಿನಲ್ಲಿ ಕಬಳಿಸಿ, ಬೃಹತ್ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ.ಪಾಲಿಕೆಯ ಸ್ವತ್ತುಳನ್ನು ಒಟ್ಟುಗೂಡಿಸಿ A. ಮಸೂದ್ ಖಾನ್ ಮತ್ತವರ ಕುಟುಂಬಸ್ಥರ ಹೆಸರಿಗೆ Amalgamation of Khatha ಮಾಡಿಕೊಂಡಿದ್ದಾರೆ.

ಇದಕ್ಕೆ  ಪುಲಿಕೇಶಿನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆನ್ನುವ ರಮೇಶ್ ಆರೋಪಕ್ಕೆ ಕಾರ್ಪೊರೇಟರ್ ಝಾಕೀರ್ ಒಂದಿಂಚು ಭೂಮಿ ಕಬಳಿಸಿದ್ರೆ ಎಂಥಾ ಶಿಕ್ಷೆ ಬೇಕಾದ್ರೂ ಅನುಭವಿಸ್ಲಿಕ್ಕೆ ಸಿದ್ಧ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಹಾಗೂ ಬಿಎಂಟಿಎಫ್ ನಲ್ಲೂ ದೂರು ದಾಖಲಾಗಿದೆ.ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಪ್ರಕರಣದಲ್ಲಿ ಈಗಾಗ್ಲೇ  ಆಪಾದಿತ ಸ್ಥಾನದಲ್ಲಿ ನಿಂತಿರುವ ಝಾಕೀರ್ ಗೆ ಈ ಪ್ರಕರಣ ಮತ್ತಷ್ಟು ಸಂಕಷ್ಟ ತಂದೊಡ್ಡಿರುವುದಂತೂ ಸತ್ಯ.ಮತ್ತೊಂದು ಕಾನೂನು ಹೋರಾಟಕ್ಕೆ ಅಣಿಯಾಗ್ಬೇಕಾಗಿ ಬಂದಿದೆ ಝಾಕೀರ್.

Spread the love
Leave A Reply

Your email address will not be published.

Flash News