ಹಾಸಿಗೆ ದಿಂಬಿಲ್ಲ-ಸ್ನಾನಕ್ಕೆ ಬಿಸಿನೀರಿಲ್ಲ-ಇಟಾಲಿಯನ್ ಟಾಯ್ಲೆಟ್ ಇಲ್ಲ-ಮಹಿಳಾ ಪೇದೆಗಳ ಎದುರೇ ಬೆತ್ತಲೆ ಸ್ನಾನ-ಹೇಗಿತ್ತು ಗೊತ್ತಾ ಫಸ್ಟ್ ನೈಟ್ ರಾಗಿಣಿ ಅನುಭವಿಸಿದ ರೌರವ ನರಕ….

0

ಬೆಂಗಳೂರು: ಯಾರಿಗೂ ಬೇಡ ಕಣ್ರಿ…ಇಂಥ ಅವಮಾನ..ಇಂಥಾ ರೌರವ ನರಕ ಅನುಭವಿಸೋ ಪರಿಸ್ಥಿತಿ. ಬಣ್ಣದ ಲೋಕದಲ್ಲಿ “ಜುಂ.. ಜುಂ.. ಮಾಯ” ಅಂತಾ ಮಿಂಚಿ ಮಿನುಗಿ ದಿಗ್ಗನೆದ್ದು ಕನ್ನಡ ಚಿತ್ರರಂದಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಂಡವಳು ಈ ರಾಗಿಣಿ ದ್ವಿವೇದಿ. ಸ್ಥಳೀಯ ನಾಯಕಿಯಗಿಂತ ವಿಭಿನ್ನ ಅಂಗಸೌಷ್ಟವ, ನೀಳ ಕಾಯ, ಬಿಚ್ಚು ಹೃದಯದ ರಾಗಿಣಿ  ಅತಿಶೀಘ್ರ ದಲ್ಲೇ  ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಳು ಕೂಡ.

ನಿರ್ಮಾಪಕರ ಪಾಲಿನ ಡಾರ್ಲಿಂಗ್ ಎನಿಸಿಕೊಂಡ ರಾಗಿಣಿ, ನಾಯಕಿ ಪ್ರಧಾನ ಚಿತ್ರಗಳಿಗೆ ಯಾವುದೇ ಭಯವಿಲ್ಲದೆ  ಬಂಡವಾಳ ಹಾಕುವ ಮಟ್ಟಿಗೆ  ಮಿನಿಮಮ್ ಗ್ಯಾರಂಟಿ ನಟಿ ಎನ್ನುವ ಪ್ರಖ್ಯಾತಿ ಪಡೆದಳು. ಸಿನಿಮಾದಲ್ಲಿ ಬೆಳೆದಂಗೆ ರಾಗಿಣಿಯ ದೇಹದ ಉಬ್ಬು ತಬ್ಬುಗಳು ಪ್ರಜ್ವಲಗೊಳ್ಳತೊಡಗಿದ್ವು.80 ಕೆ.ಜಿ. ತೂಕದ ಗಜಗಾಮಿನಿಯಾಗಿ ರಾಗಿಣಿ ನಡೆದದ್ದೇ ದಾರಿ ಎನ್ನುವಂತಾಯ್ತು.

ಸಾಲು ಸಾಲು ಬಾಯ್ ಫ್ರೆಂಡ್ ಗಳು, ಲೇಟ್ ನೈಟ್ ಪಾರ್ಟಿಗಳಲ್ಲಿ “ತುಪ್ಪ ಬೇಕಾ ತುಪ್ಪಾ ..”ಅಂತ ಎಲ್ಲರಿಗೂ ಯೌವ್ವನದ ಶಾಖ ತೀಡಿ ಪ್ರಚೋದನೆಗೊಳಿಸಿದ  ರಾಗಿಣಿ, ಈಗ ಡ್ರಗ್ಸ್ ವ್ಯಸನಿಯಾಗಿ ಸಿಕ್ಕಿ ಬಿದ್ದು ಸಿಸಿಬಿಯಲ್ಲಿ ಬಕ್ಕಾಬೋರಲು ಮಲಗಿ ಬಿಕ್ಕಳಿಸುತ್ತಿದ್ದಾಳೆ. ಹೇಗಿತ್ತು ಗೊತ್ತಾ ಫಸ್ಟ್ ನೈಟ್  

ರಾ..ಗಿಣಿ…… ಅರಗಿಣಿಯಂತೆ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಗರ್ವದಿಂದ ಎದೆ ಎತ್ತಿ ನಡೆದ ಠೀವಿಯ ಗತ್ತು ಕರಗಿದೆ. ಸತತ ಏಳುಗಂಟೆಗಳ ಸಿಸಿಬಿ ಡ್ರಿಲ್ ಮುಗಿದು ರಾತ್ರಿ 10.30 ಕ್ಕೆ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಫಿಟ್ನೆಸ್ ಪರೀಕ್ಷೆ ಮಾಡಿಸಿ ಕಿದ್ವಾಯಿ ಆಸ್ಪತ್ರೆ ಪಕ್ಕದ ಮಹಿಳಾ ಕಾರಾಗೃಹದಲ್ಲಿ ಹಾಸಿಗೆ ದಿಂಬಿಲ್ಲದೇ, ಶವರ್ ಬಿಸಿನೀರು ಸ್ನಾನವಿಲ್ಲದೇ ಸಂಕಟ ಅನುಭವಿಸುತ್ತಿದ್ದಾಳೆ.

ಅಸಲು ಶೌಚಾಲಯವಿಲ್ಲದೇ ಇಬ್ಬರು ಮಹಿಳಾ ಪೊಲೀಸ್ ಮುಂದೆ ಬೆತ್ತಲೆ ತಣ್ಣೀರು ಸ್ನಾನ ಹಾಗೂ ಶೌಚಕ್ಕೆ ಹೋಗುವ ಸ್ಥಿತಿ ತಂದಿಟ್ಟುಕೊಂಡಿರುವುದು ಶೋಚನೀಯ. ಬಣ್ಣದ ಜಿಂಕೆಯಂತೆ ಕಂಗೊಳಿಸುತ್ತಿದ್ದ ರಾಗಿಣಿ ಬಣ್ಣವಿಲ್ಲದ ಮುಖವಾಡ ನೋಡಲು ರೌರವ ನರಕ. ಸತತ ಮೂರು ದಿನಗಳ ಈ ನರಕದಲ್ಲಿ ಜೀವನ ಕಳೆದು ಸಿಸಿಬಿ ಕೇಳಿದ ಎಲ್ಲಾ ಗೊಂದಲಗಳು ಹಾಗೂ ಪ್ರಶ್ನೆಗಳಿಗೆ ಗಿಣಿ ಪಾಠ ಒಪ್ಪಿಸಿ ನಂತರ 14  ದಿನಗಳ ಜುಡಿಶಿಯಲ್ ಕಸ್ಟಡಿಯಲ್ಲಿ ಕೇಂದ್ರ ಕಾರಾಗೃಹದಲ್ಲಿ ಮುದ್ದೆ ಮುರಿಯುತ್ತಾ ಕಂಬಿ ಎಣಿಸುವ ಸ್ಥಿತಿಗೆ ಸಿಲುಕಿದ್ದಾಳೆ.

 ಅಕಸ್ಮಾತ್ ಅವಕಾಶ ಸಿಕ್ಕರೆ ತಮಿಳುನಾಡಿನ ಜೂನಿಯರ್ ಅಮ್ಮ ಶಶಿಕಲಾ ಜೊತೆ ಗತಕಾಲದ ವೈಭವ ಬದುಕಿನ ಬಗ್ಗೆ ಚರ್ಚೆ ಮಾಡಬಹುದೇನೋ…ಇದಕ್ಕೆ ವಿನಾಶ ಕಾಲೇ ವಿಪರೀತ ಬುದ್ಧಿ ಅನ್ನುವ ನಾಣ್ಣುಡಿ ನಿಜವಾಗ್ತಿದೆ. ಕಾಸ್ಮೆಟಿಕ್ ಕೂಡಿಟ್ಟುಕೊಳ್ಳುವ ಜಾಗದಲ್ಲಿ ಡ್ರಗ್ಸ್ ಪ್ಯಾಕೆಟ್ ಗಳು ಗಾಂಜಾ, ಅಫೀಮು ತುಂಬಿದ ಸಿಗರೇಟುಗಳು ಸಿಕ್ಕಿ ಬಿದ್ದು ಅಮಲಿನಲ್ಲಿ ತಡಬಡಾಯಿಸುತ್ತಿರುವ ಗಿಣಿ ಪರಿಸ್ಥಿತಿಗೆ ಸ್ತ್ರೀ ಬುದ್ಧಿ ಪ್ರಳಯಾಂತಕಂ ಅನ್ನಬಹುದೇನೋ.. ರಾಗಿಣಿಯ ಬೆನ್ನಿಗೆ ಮತ್ತಷ್ಟು ಸಹ ಸಖಿಯರು ಕಂಪನಿ ನೀಡುವ ಅವಕಾಶವಿದ್ದು ಯಾವುದನ್ನು ತೆಗೆದು ಹಾಕುವ ಸಾಧ್ಯತೆಗಳಿಲ್ಲ.  

Spread the love
Leave A Reply

Your email address will not be published.

Flash News