ಬಹುಮುಖ ಪ್ರತಿಭೆಯ ಎಡನೀರು ಮಠಾಧೀಶ ಕೇಶವನಾಂದ ಶ್ರೀ ವಿಧಿವಶ

0

ಕಾಸರಗೋಡು:ಎಡನೀರು ಮಠಾಧೀಶರಾಗಿದ್ದ ಶ್ರೀ ಕೇಶವಾನಂದ ಭಾರತೀ ಶ್ರೀಗಳು ವಿಧಿವಶರಾಗಿದ್ದಾರೆ.ತಮ್ಮ 79ನೇ ವಯಸ್ಸಿನಲ್ಲಿ ವಿಧಿವಶರಾಗಿರುವ ಕೇಶವಾನಂದ ಶ್ರಿಗಳು ನಿನ್ನೆ ರಾತ್ರಿ ಪೂಜೆ ಮುಗಿಸಿ ಫಲಾಹಾರ ಸ್ವೀಕರಿಸಿದ ನಂತರ ವಿಧಿವಶರಾಗಿದ್ದಾರೆ.1960ರಿಂದಲೂ ಎಡನೀರು ಮಠದ ಉಸ್ತುವಾರಿ ವಹಿಸಿಕೊಂಡು ತಮ್ಮ ಹೆಸರು ಹಾಗೂ ಮಠಸಂಸ್ಥಾನಕ್ಕೆ ಸಣ್ಣ ಕುತ್ತು ಬಾರದ ಹಾಗೆ ನೋಡಿಕೊಂಡಿದ್ದ ಕೇಶವಾನಂದ ಶ್ರೀಗಳ ನಿಧನಕ್ಕೆ ಭಕ್ತರು ಕಂಬನಿ ಮಿಡಿದಿದ್ದಾರೆ.

ಸೆಪ್ಟೆಂಬರ್ 2 ರಂದು ಚಾತುರ್ಮಾಸವನ್ನು ಮುಗಿಸಿದ್ದ ಶ್ರೀಗಳು  ಕಳೆದ ಕೆಲ ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು ಎನ್ನಲಾಗಿದೆ.ಇಷ್ಟಾದರೂ ಯಾವುದೇ ರೀತಿಯಲ್ಲು ತಮ್ಮ ಅನಾರೋಗ್ಯವನ್ನು ಬಹಿರಂಗಪಡಿಸದ ಶ್ರೀಗಳ ಸಾವು ಅಪಾರ ನೋವು ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.ಕೊರೊನಾ ಸೋಂಕಿಗೆ ತುತ್ತಾಗಿರುವುದರಿಂದ ಶ್ರೀಗಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ,ವಿಷಾದವಿರಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೇವಲ ಮಠದ ವಿಷಯದಲ್ಲಿ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಇತರೆ ವಿಚಾರಗಳಲ್ಲೂ ಆಸಕ್ತಿ ಅವರಿಗಿತ್ತು.ಕಲೆ-ಸಾಹಿತ್ಯ-ಸಂಸ್ಕ್ರತಿ-ಶಿಕ್ಷಣ-ಪ್ರವಾಸೋದ್ಯಮದಲ್ಲೂ ಶ್ರೀಗಳಿಗೆ ಆಸಕ್ತಿ ಇತ್ತುಯಕ್ಷಗಾನದ ಮೇಲೆ ಅತೀವ ಆಸಕ್ತಿ ಇದ್ದ ಶ್ರಿಗಳು ತಾವೇ ಒಂದು ಯಕ್ಷಗಾಗ ತಂಡ ಕಟ್ಟಿದ್ದರು.ಆ ಮೂಲಕ ಸಾಕಷ್ಟು ಕಡೆ ಪ್ರದರ್ಶನವನ್ನು ಕೊಟ್ಟಿದ್ದರು.

Spread the love
Leave A Reply

Your email address will not be published.

Flash News